ನಿಮ್ಮನ್ನು ಮುಜುಗರದಿಂದ ತಪ್ಪಿಸಲು ವಾಟ್ಸ್ಆ್ಯಪ್ ಹೊಸ ಫೀಚರ್
"ಆ್ಯಕ್ಸಿಡೆಂಟಲ್ ಡಿಲೀಟ್' ಫೀಚರ್ ಮೂಲಕ ಸಂದೇಶ ಡಿಲೀಟ್ ಮಾಡುವ ಅವಕಾಶ
Team Udayavani, Dec 20, 2022, 8:00 AM IST
ನವದೆಹಲಿ: ಇಂಥದ್ದೊಂದು ಸನ್ನಿವೇಶ ನೀವೆಲ್ಲರೂ ಎದುರಿಸಿರುತ್ತೀರಿ- ತಪ್ಪಾಗಿ ಯಾರಿಗೋ ಕಳುಹಿಸುವ ಸಂದೇಶವನ್ನು ಮತ್ಯಾವುದೋ ವಾಟ್ಸ್ಆ್ಯಪ್ ಗ್ರೂಪ್ಗೆ ಕಳುಹಿಸುತ್ತೀರಿ. ಗೊತ್ತಾದ ಕೂಡಲೇ ಅದನ್ನು ಡಿಲೀಟ್ ಮಾಡುವ ಭರದಲ್ಲಿ, “ಡಿಲೀಟ್ ಫಾರ್ ಎವ್ರಿವನ್’ ಆಯ್ಕೆ ಒತ್ತುವ ಬದಲು, “ಡಿಲೀಟ್ ಫಾರ್ ಮಿ’ ಎಂದು ಒತ್ತುತ್ತೀರಿ. ಈಗ ಆ ಗ್ರೂಪ್ನಲ್ಲಿ ನೀವು ಕಳುಹಿಸಿದ ಸಂದೇಶ ನಿಮಗೊಬ್ಬರಿಗೆ ಕಾಣಿಸುವುದಿಲ್ಲ.
ಆದರೆ, ಉಳಿದವರೆಲ್ಲರಿಗೂ ಅದು ಕಾಣಿಸುತ್ತದೆ. ಆಗ ನೀವು ಮುಜುಗರಕ್ಕೊಳಗಾಗುತ್ತೀರಿ. ಏನು ಮಾಡುವುದೆಂದು ತೋಚುವುದಿಲ್ಲ.
ಈ ಸಮಸ್ಯೆಗೆ ಈಗ ವಾಟ್ಸ್ಆ್ಯಪ್ ಕಂಪನಿ ಪರಿಹಾರ ಕಂಡುಕೊಂಡಿದೆ. ನಿಮಗಾಗುವ ಮುಜುಗರ ತಪ್ಪಿಸಲೆಂದೇ ಹೊಸ ಫೀಚರ್ವೊಂದನ್ನು ಪರಿಚಯಿಸಿದೆ. ಅದರಂತೆ, ನೀವು ಮೆಸೇಜ್ ಡಿಲೀಟ್ ಮಾಡಿದ ಕೂಡಲೇ ನಿಮಗೆ ತಪ್ಪು ಸರಿಪಡಿಸಲು “5 ಸೆಕೆಂಡು’ಗಳ ಕಾಲಾವಕಾಶ ಸಿಗಲಿದೆ. ಮೆಸೇಜ್ ಡಿಲೀಟ್ ಆದ ಜಾಗದಲ್ಲೇ ಒಂದು ಪುಟ್ಟ ಡೈಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ. ಅದರಲ್ಲಿ “ಅನ್ಡೂ'(UNDO) ಎಂಬ ಬಟನ್ ಕಾಣಿಸಿಕೊಳ್ಳುತ್ತದೆ.
ಆ ಬಟನ್ ಕ್ಲಿಕ್ ಮಾಡಿದ ಕೂಡಲೇ, ನೀವು ಆಗಷ್ಟೇ ಡಿಲೀಟ್ ಮಾಡಿದ್ದ ಸಂದೇಶ ಮತ್ತೆ ನಿಮ್ಮ ಕಣ್ಣೆದುರಿಗೆ ಬರುತ್ತದೆ. ಆಗ ನೀವು ಹಿಂದಿನಂತೆ ತಪ್ಪು ಮಾಡದೇ “ಡಿಲೀಟ್ ಫಾರ್ ಎವ್ರಿವನ್’ ಎಂಬ ಆಯ್ಕೆ ಕ್ಲಿಕ್ ಮಾಡಬಹುದು. ನಂತರ ಆ ಗ್ರೂಪ್ನಲ್ಲಿರುವ ಎಲ್ಲರಿಗೂ ಸಂದೇಶ ಡಿಲೀಟ್ ಆಗುತ್ತದೆ. ಈ ಹೊಸ ಫೀಚರ್ಗೆ ವಾಟ್ಸ್ಆ್ಯಪ್ “ಆ್ಯಕ್ಸಿಡೆಂಟಲ್ ಡಿಲೀಟ್’ ಎಂದು ಹೆಸರಿಟ್ಟಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
History TV18ನಲ್ಲಿ ವಿಶ್ವದ ಮೊದಲ ಬ್ರೈಲ್ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ
HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ
Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ
MUST WATCH
ಹೊಸ ಸೇರ್ಪಡೆ
Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
IPL; ಮೆಕ್ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ