107 ವರ್ಷ ಪೂರ್ಣಗೊಳಿಸಿದ ಪಂಜಾಬ್‌ ಮೇಲ್‌

89 ವರ್ಷ ಮುಗಿಸಿದ ಸಂಭ್ರಮದಲ್ಲಿ ಡೆಕ್ಕನ್‌ ಕ್ವೀನ್‌

Team Udayavani, Jun 2, 2019, 12:24 PM IST

1-bgt.

ಮುಂಬಯಿ: ದೇಶದ ಅತ್ಯಂತ ದೂರದ ಹಳೆ ರೈಲುಗಳಲ್ಲಿ ಒಂದಾದ ಪಂಜಾಬ್‌ ಮೇಲ್‌ ರೈಲು ಶನಿವಾರದಂದು 107 ವರ್ಷಗಳನ್ನು ಪೂರ್ಣಗೊಳಿಸಿದೆ. ಅಷ್ಟೇ ಅಲ್ಲದೆ, ಜೂನ್‌ 1 ಮುಂಬಯಿ ಮತ್ತು ಪುಣೆ ನಗರಗಳನ್ನು ಸಂಪರ್ಕಿಸುವ ಡೆಕ್ಕನ್‌ ಕ್ವೀನ್‌ ಎಕ್ಸ್‌ಪ್ರೆಸ್‌ ರೈಲಿಗೂ ಹುಟ್ಟುಹಬ್ಬವಾಗಿದೆ. ಈ ಜನಪ್ರಿಯ ರೈಲು ಶನಿವಾರ ತನ್ನ 89 ವರ್ಷಗಳ ಕಾರ್ಯಾಚರಣೆಯನ್ನು ಪೂರ್ಣಗೊಳಿಸಿದೆ.

1912ರ ಜೂ.1ರಂದು ಉಗಿ ಎಂಜಿನ್‌ ಮೂಲಕ ಪ್ರಥಮ ಬಾರಿಗೆ ಮುಂಬಯಿಯಿಂದ ಪೇಶಾವರ (ಈಗ ಪಾಕಿಸ್ತಾನದಲ್ಲಿದೆ) ನಡುವೆ ಸೇವೆಯನ್ನು ಪ್ರಾರಂಭಿಸಿದ ಪಂಜಾಬ್‌ ಮೇಲ್‌ ರೈಲನ್ನು ಆಗ ಪಂಜಾಬ್‌ ಲಿಮಿಟೆಡ್‌ ಎಂದು ಕರೆಯಲಾಗುತ್ತಿತ್ತು. ಆರಂಭದಲ್ಲಿ ಕೇವಲ ಪ್ರಾಥಮಿಕ ಶ್ರೇಣಿಯ ಸೇವೆಯನ್ನು ನೀಡುತ್ತಿದ್ದ ಈ ರೈಲು ಶೀಘ್ರದಲ್ಲೇ ದ್ವಿತೀಯ ದರ್ಜೆಯ ಸೇವೆಯನ್ನು ನೀಡಲು ಆರಂಭಿಸಿತು. 1930ರ ದಶಕದ ಮಧ್ಯಭಾಗದಲ್ಲಿ ಪಂಜಾಬ್‌ ಮೇಲ್‌ನಲ್ಲಿ ತೃತೀಯ ದರ್ಜೆಯ ಬೋಗಿಗಳು ಕಾಣಲು ಪ್ರಾರಂಭಿಸಿದವು. 1945ರಲ್ಲಿ ಇದು ಹವಾನಿಯಂತ್ರಿತ ಬೋಗಿಯನ್ನು ಪಡೆದುಕೊಂಡಿತು.

ಪ್ರಸ್ತುತ ಇದು ವಿದ್ಯುತ್‌ ಶಕ್ತಿಯ ಮೇಲೆ ಓಡುತ್ತಿದೆ. ವಿಭಜನೆಗೆ ಮೊದಲು ಈ ರೈಲು ಮುಂಬಯಿಯ ಬÇÉಾರ್ಡ್‌ ಪಿಯರ್‌ ಮೋಲ್‌ ನಿಲ್ದಾಣದಿಂದ 2,496 ಕಿ.ಮೀ. ದೂರದಲ್ಲಿರುವ ಪೇಶಾವರಕ್ಕೆ ಕ್ರಮಿಸಲು 47 ಗಂಟೆಗಳ ಸಮಯವನ್ನು ತೆಗೆದುಕೊಳ್ಳುತ್ತಿತ್ತು ಎಂದು ಮಧ್ಯ ರೈಲ್ವೇಯ ಮುಖ್ಯ ಜನಸಂಪರ್ಕಾಧಿಕಾರಿ ಸುನೀಲ್‌ ಉದಾಸಿ ಹೇಳಿದ್ದಾರೆ. ಇದನ್ನು ಬ್ರಿಟಿಷ್‌ ಭಾರತದ ಅತಿವೇಗದ ರೈಲು ಎಂದು ಕರೆಯಲಾಗುತ್ತಿತ್ತು. ಇದೀಗ ಈ ರೈಲಿನ ಉತ್ತರ ದಿಕ್ಕಿನ ಪ್ರಯಾಣವು ಫಿರೋಜ್‌ಪುರ ಕಂಟೋನ್ಮೆಂಟ್‌ನಲ್ಲಿÉ ಕೊನೆ ಗೊಳ್ಳುತ್ತದೆ. 1,930 ಕಿ.ಮೀ.ಗಳ ಈ ಅಂತರವನ್ನು ಕ್ರಮಿಸಲು ರೈಲು 34 ಗಂಟೆ ಮತ್ತು 15 ನಿಮಿಷಗಳ ಸಮಯವನ್ನು ತೆಗೆದುಕೊಳ್ಳುತ್ತಿದೆ.

ಆರು ಬೋಗಿಗಳು
ಬ್ರಿಟಿಷರ ಕಾಲದಲ್ಲಿ ಪಂಜಾಬ್‌ ಮೇಲ್‌ ರೈಲು ಆರು ಬೋಗಿಗಳನ್ನು ಒಳಗೊಂಡಿತ್ತು. ಈ ಪೈಕಿ ಮೂರು ಬೋಗಿಗಳನ್ನು ಪ್ರಯಾಣಿಕರಿಗೆ ಹಾಗೂ ಇತರ ಮೂರು ಬೋಗಿಗಳನ್ನು ಅಂಚೆ ಸರಕು ಮತ್ತು ಮೇಲ್‌ಗ‌ಳಿಗೆ ಮೀಸಲಿರಿಸಲಾಗಿತ್ತು. ಮೂರು ಪ್ರಯಾಣಿಕ ಬೋಗಿಗಳು ಕೇವಲ 96 ವ್ಯಕ್ತಿಗಳ ಸಾಮರ್ಥ್ಯವನ್ನು ಹೊಂದಿದ್ದವು ಎಂದು ರೈಲ್ವೇ ಅಧಿಕಾರಿ ಉದಾಸಿ ಅವರು ಹೇಳಿದ್ದಾರೆ.
ಅಷ್ಟೇ ಅಲ್ಲದೆ, ರೈಲಿನಲ್ಲಿ ಸ್ನಾನಗೃಹಗಳು, ರೆಸ್ಟೊರೆಂಟ್‌ ಹಾಗೂ ಬ್ರಿಟಿಷ್‌ ಪ್ರಯಾಣಿಕರ ಸೊತ್ತು ಮತ್ತು ಸೇವಕರಿಗಾಗಿ ಪ್ರತ್ಯೇಕ ಕಂಪಾರ್ಟ್‌ ಮೆಂಟ್‌ ಇದ್ದವು ಎಂದಿದ್ದಾರೆ.
ಡೆಕ್ಕನ್‌ ಕ್ವೀನ್‌ ರೈಲು 1930ರ ಜೂನ್‌ 1ರಂದು ಗ್ರೇಟ್‌ ಇಂಡಿಯನ್‌ ಪೆನಿನ್ಸುಲಾ ರೈಲ್ವೇ (ಈಗಿನ ಮಧ್ಯ ರೈಲ್ವೇ)ಯಿಂದ ಪರಿಚಯಿಸಲ್ಪಟ್ಟಿತು.

ಟಾಪ್ ನ್ಯೂಸ್

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.