Udayavni Special

ಬದಲಾದ ಶಿಕ್ಷಣ ವ್ಯವಸ್ಥೆ ಮತ್ತು ಯುವ ಭಾರತ


Team Udayavani, Aug 15, 2020, 10:30 AM IST

indian education

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಯಾವುದೇ ಕ್ಷೇತ್ರವಾದರೂ ಕಾಲಕ್ಕೆ ತಕ್ಕಂತೆ ತನ್ನನ್ನು ತಾನು ಬದಲಾವಣೆಗೆ ತೆರೆದು ಕೊಳ್ಳುತ್ತಿರಬೇಕು.

ಹೊಸತನವನ್ನು ಅಳವಡಿಸಿಕೊಳ್ಳುವಷ್ಟು ಉದಾರವಾಗಿರಬೇಕು. ತನ್ನಲ್ಲಿನ ಲೋಪದೋಷಗಳನ್ನು ಸರಿಪಡಿಸಿಕೊಳ್ಳುವಷ್ಟು ಪ್ರಾಮಾಣಿಕರಾಗಿರಬೇಕು.

ಆಗ ಮಾತ್ರ ಸತ್ವಪೂರ್ಣವಾಗಿರಲು ಸಾಧ್ಯ. ಈ ಮಾತು ಎಲ್ಲ ಕ್ಷೇತ್ರಗಳಿಗೂ ಅನ್ವಯಿಸುತ್ತದೆಯಾದರೂ ಶಿಕ್ಷಣ ವ್ಯವಸ್ಥೆಗೆ ಈ ಬದಲಾವಣೆಗಳು ಹೆಚ್ಚು ಆವಶ್ಯಕ.

ಈ ನಿಟ್ಟಿನಲ್ಲಿ ನಮ್ಮ ದೇಶದ ಶಿಕ್ಷಣ ವ್ಯವಸ್ಥೆ ಹಲವು ದಶಕಗಳ ಬಳಿಕವಾದರೂ ಬದಲಾವಣೆಗೆ ಮೈಯೊಡ್ಡಿರುವುದು, ಈ ಕಾಲದ ಆವಶ್ಯಕತೆ ಹಾಗೂ ಅನಿವಾರ್ಯಕ್ಕೆ ತಕ್ಕಂತೆ ಹೆಜ್ಜೆ ಇಡುವ ಮನಸ್ಸು ಮಾಡಿರುವುದು ಸಮಾಧಾನಕರ ಸಂಗತಿ.

ಶಿಕ್ಷಣ ಎಂದರೇನು? ಶಿಕ್ಷಣ ಹೇಗಿರಬೇಕು? ಶಿಕ್ಷಣದ ಮೂಲ ಉದ್ದೇಶವೇನು… ಇತ್ಯಾದಿ ಪ್ರಶ್ನೆಗಳನ್ನು ನಮ್ಮ ಮುಂದಿರಿಸಿಕೊಂಡು ಕೂತರೆ ಒಂದಷ್ಟು ಗೊಂದಲಗಳು ಹುಟ್ಟಿಕೊಳ್ಳುತ್ತವೆ. ವಿಪರ್ಯಾಸವೆಂದರೆ ಆ ಗೊಂದಲಗಳ ನಡುವೆಯೇ ಹಲವು ತಲೆಮಾರುಗಳು ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿವೆ! ಶಿಕ್ಷಣದ ಉದ್ದೇಶ ಅಂಕಗಳ ಹಿಂದೆ ಓಡುವುದು, ಆಸಕ್ತಿಗಿಂತ ಹೆಚ್ಚು ಒತ್ತನ್ನು ಅಂಕಪಟ್ಟಿಗೆ ನೀಡುವುದು, ಪರೀಕ್ಷೆಯೆಂದರೆ ಯುದ್ಧವೆಂಬಂತೆಯೂ, ಅದರಲ್ಲಿ ಅನುತ್ತೀರ್ಣರಾದರೆ ಬದುಕೇ ಮುಗಿದು ಹೋಯಿತೆಂಬ ಭ್ರಮೆಯನ್ನು ಹುಟ್ಟುಹಾಕುವುದು, ಮಕ್ಕಳ ಆಸಕ್ತಿಗಿಂತ ಪೋಷಕರ ಆಸಕ್ತಿಯ ವಿಷಯವೇ ಕಲಿಕೆಯ ಮುಖ್ಯ ವಸ್ತುವಾಗುವುದು. ಹೀಗೆ ಸುಮಾರು ಒತ್ತಡಗಳ ನಡುವೆಯೇ ಯುವ ಮನಸ್ಸುಗಳು ಸಿಲುಕಿ ಕೊಂಡಿರುವುದು ಅನೇಕ ವರ್ಷಗಳಿಂದ ಕಂಡು ಬರುತ್ತಿವೆ.

ಪ್ರತಿವರ್ಷ ಶಿಕ್ಷಣವನ್ನು ಪೂರೈಸಿ ಹೊರ ಬರುವ ಒಂದು ದೊಡ್ಡ ಸಮೂಹಕ್ಕೆ ಸ್ವಾವಲಂಬಿಯಾಗಿ ಮುಂದಡಿ ಇಡುವಷ್ಟು ಧೈರ್ಯ ತುಂಬುವಲ್ಲಿ ಈಗಿನ ಶಿಕ್ಷಣ ವ್ಯವಸ್ಥೆ ಸಫ‌ಲವಾಗಿದೆಯೇ? ಈ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೋದರೆ ಅದರ ಸಾಧಕ ಭಾದಕದ ಒಂದು ಸಾಧಾರಣ ಚಿತ್ರಣವಾದರೂ ಸಿಗಬಹುದು.

ದೇಶದ ಯುವ ಸಮುದಾಯವನ್ನು ಕೇವಲ ಅಂಕಪಟ್ಟಿ ಆಧಾರಿತ ಶಿಕ್ಷಣಕ್ಕೆ ಮೀಸಲಾಗಿಸುವುದಕ್ಕಿಂತ ಅವರ ಆಸಕ್ತಿಯ ಕ್ಷೇತ್ರದಲ್ಲಿ ಮುಂದುವರಿಯಲು ಆವಶ್ಯಕತೆ ಇರುವ ಮಾಹಿತಿ ಆಧಾರಿತ ಶಿಕ್ಷಣ ನೀಡಿದರೆ ಸಹಜವಾಗಿಯೇ ಓದು ಮುಗಿಸುವಷ್ಟರಲ್ಲಿ ಅವರ ಆತ್ಮವಿಶ್ವಾಸ ಹಾಗೂ ಕೆಲಸದೆಡೆಗಿನ ಅನುಭವ ವೃದ್ಧಿಸುತ್ತದೆ. ಓಡುತ್ತಿರುವ ಕಾಲಘಟ್ಟದಲ್ಲಿ ಈ ಮಾದರಿಯ ಶಿಕ್ಷಣ ಮಾತ್ರ ಯುವ ಜನತೆಯಲ್ಲಿ ಶಕ್ತಿ ತುಂಬಬಲ್ಲದು. ಜತೆಗೆ ಪದವಿ ಶಿಕ್ಷಣದಲ್ಲೂ ಮಹತ್ತರ ಬದಲಾವಣೆ ತರಲು ನಿರ್ಧರಿಸಿರುವುದು ಕೂಡ ಅತ್ಯಂತ ಪ್ರಬುದ್ಧ ತೀರ್ಮಾನ ಎಂದೆನ್ನಿಸುತ್ತದೆ.

ಆದರೆ ಈ ನೂತನ ಶಿಕ್ಷಣ ನೀತಿಯೇ ಇನ್ನು ಮುಂದಿನ ಐದಾರು ದಶಕಗಳಲ್ಲಿ ಮುಂದುವರಿದು ಮತ್ತೆ ನಿಂತ ನೀರಿನಂತಾಗದಿರಲಿ. ಆಡಳಿತ ವರ್ಗವು ಪ್ರತಿ ವರ್ಷ ವರ್ಷವೂ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಒತ್ತು ಕೊಡುವ ಮೂಲಕ ಶಿಕ್ಷಣವು ಸದಾ ಹೊಸತನದತ್ತ ಹೊರಳಲು ಅವಕಾಶ ಕಲ್ಪಿಸಿಕೊಡಲಿ ಎಂಬುದಷ್ಟೇ ಈ ಹೊತ್ತಿನ ಆಶಯ.

ಒಂದುವೇಳೆ, ಈಗ ಘೋಷಿಸಲಾಗಿರುವ ನೂತನ ಶಿಕ್ಷಣ ನೀತಿ ಈ ಮೇಲಿನ ಬಹುತೇಕ ಸಮಸ್ಯೆಗಳಿಗೆ ಪರಿಹಾರವಾಗುವಲ್ಲಿ ಸಫ‌ಲವಾದರೆ ಅದು ಕೇವಲ ಶಿಕ್ಷಣ ಕ್ಷೇತ್ರದ ನಿಯಮಗಳ ಮೇಲಷ್ಟೇ ಅಲ್ಲದೆ, ಇಡೀ ವ್ಯವಸ್ಥೆಯ ಮೇಲೆಯೇ ಧನಾತ್ಮಕ ಪರಿಣಾಮ ಬೀರಲಿದೆ. ಎಳೆಯ ಮಕ್ಕಳಿಗೆ ಮಾತೃಭಾಷಾ ಶಿಕ್ಷಣವೇ ಸೂಕ್ತ ಎಂಬಲ್ಲಿಂದ ಇದುವರೆಗೂ ರೂಢಿಸಿಕೊಂಡು ಬಂದಿದ್ದ ಅನೇಕ ಪದ್ಧತಿಗಳನ್ನು ಮಾರ್ಪಾಡು ಮಾಡುವಲ್ಲಿ ಹೊಸ ಶಿಕ್ಷಣ ನೀತಿ ಪರಿಣಾಮ ಕಾರಿಯಾಗಬಹುದು. ಕೌಶಲಾಧಾರಿತ ಶಿಕ್ಷಣದ ಆವಶ್ಯಕತೆಯ ಕೂಗು ಅಲ್ಲಲ್ಲಿ ಕೇಳಿ ಬರುತ್ತಿದ್ದ ಹೊತ್ತಿನಲ್ಲಿ ಇಡೀ ದೇಶವೇ ಅದನ್ನು ಅಳವಡಿಸಿಕೊಳ್ಳುವಂತೆ ಮಾಡಲು ಹೊರಟಿರುವುದು ಅತ್ಯಂತ ಸ್ವಾಗತಾರ್ಹ.

 ಸ್ಕಂದ ಆಗುಂಬೆ, ಎಸ್‌ಡಿಎಂ ಕಾಲೇಜು, ಉಜಿರೆ

 

 

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

anurag-kashyap

ಲೈಂಗಿಕ ದೌರ್ಜನ್ಯ ಆರೋಪ: ಅನುರಾಗ್ ಕಶ್ಯಪ್ ವಿರುದ್ಧ ದೂರು ದಾಖಲಿಸಿದ ಬಾಲಿವುಡ್ ನಟಿ

7 ಲಕ್ಷ ಮಂದಿಗೆ ಸೋನು ನೆರವು; ಟ್ರೋಲ್‌ ಮಂದಿಗೆ ಬಾಲಿವುಡ್‌ ನಟ ತಿರುಗೇಟು

7 ಲಕ್ಷ ಮಂದಿಗೆ ಸೋನು ನೆರವು; ಟ್ರೋಲ್‌ ಮಂದಿಗೆ ಬಾಲಿವುಡ್‌ ನಟ ತಿರುಗೇಟು

ಅಭಿಮತ: ಬಂಧ ಮುಕ್ತವಾಗಲಿದೆ ಕೃಷಿ ಕ್ಷೇತ್ರ ಮುರಿಯಲಿದೆ ಏಜೆಂಟರ ಏಕಸ್ವಾಮ್ಯ!

ಅಭಿಮತ: ಬಂಧ ಮುಕ್ತವಾಗಲಿದೆ ಕೃಷಿ ಕ್ಷೇತ್ರ ಮುರಿಯಲಿದೆ ಏಜೆಂಟರ ಏಕಸ್ವಾಮ್ಯ!

ಚೀನ ವಾಯು ಪಿತೂರಿ; ಎಲ್‌ಎಸಿಯಲ್ಲಿ 3 ವರ್ಷಗಳಿಂದ ವಾಯುಪಡೆ ಚಟುವಟಿಕೆ

ಚೀನ ವಾಯು ಪಿತೂರಿ; ಎಲ್‌ಎಸಿಯಲ್ಲಿ 3 ವರ್ಷಗಳಿಂದ ವಾಯುಪಡೆ ಚಟುವಟಿಕೆ

ವಿಶ್ವಸಂಸ್ಥೆಗಿದೆ ವಿಶ್ವಾಸದ ಕೊರತೆ

ವಿಶ್ವಸಂಸ್ಥೆಗಿದೆ ವಿಶ್ವಾಸದ ಕೊರತೆ

ಗುಮಾಸ್ತನಿಗೆ 12 ಕೋಟಿ ರೂ. ಲಾಟರಿ!

ಗುಮಾಸ್ತನಿಗೆ 12 ಕೋಟಿ ರೂ. ಲಾಟರಿ!

ರಾಜ್ಯಸಭೆಯಲ್ಲಿ 7 ಮಸೂದೆ ಅಂಗೀಕಾರ

ರಾಜ್ಯಸಭೆಯಲ್ಲಿ 7 ಮಸೂದೆ ಅಂಗೀಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

blog

ಭಾವಾಂತರಂಗದಲ್ಲಿ ಅಲ್ಲೋಲ-ಕಲ್ಲೋಲ

wilmaaaaa

ಅಂಗವೈಕಲ್ಯ ಮೆಟ್ಟಿನಿಂತ ಚಿನ್ನದ ಹುಡುಗಿ ವಿಲ್ಮಾ

grama samskruthi 1.jpg

ಉತ್ತರ ಕರ್ನಾಟಕದ ವಿಶಿಷ್ಟ ಆಚರಣೆ ಜೋಕುಮಾರ ಹಬ್ಬ

taj

ಐತಿಹಾಸಿಕ ಆಗ್ರಾದಲ್ಲಿ ನಮ್ಮದೊಂದು ಅಗ್ರ ದಿನ

Dipresssion

ಆತ್ಮಹತ್ಯೆಯ ನಿರ್ಧಾರದ ಬದಲು ಆತ್ಮವಿಶ್ವಾಸವಿರಲಿ

MUST WATCH

udayavani youtube

District Excise Department seized Millions worth of Marijuana | Udayavani

udayavani youtube

Hospet : Tungabhadra Dam Gates Are Opened | TB Dam | Udayavani

udayavani youtube

ಸುರತ್ಕಲ್ ಕಳ್ಳತನ ಪ್ರಕರಣ: ಕೇರಳದ ಇಬ್ಬರು ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಿದ ಪೊಲೀಸರು

udayavani youtube

Manipal: Multi-storey building in danger | inspection by DC Jagadeesh

udayavani youtube

ಗೇರು ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆಹೊಸ ಸೇರ್ಪಡೆ

anurag-kashyap

ಲೈಂಗಿಕ ದೌರ್ಜನ್ಯ ಆರೋಪ: ಅನುರಾಗ್ ಕಶ್ಯಪ್ ವಿರುದ್ಧ ದೂರು ದಾಖಲಿಸಿದ ಬಾಲಿವುಡ್ ನಟಿ

7 ಲಕ್ಷ ಮಂದಿಗೆ ಸೋನು ನೆರವು; ಟ್ರೋಲ್‌ ಮಂದಿಗೆ ಬಾಲಿವುಡ್‌ ನಟ ತಿರುಗೇಟು

7 ಲಕ್ಷ ಮಂದಿಗೆ ಸೋನು ನೆರವು; ಟ್ರೋಲ್‌ ಮಂದಿಗೆ ಬಾಲಿವುಡ್‌ ನಟ ತಿರುಗೇಟು

ಅಭಿಮತ: ಬಂಧ ಮುಕ್ತವಾಗಲಿದೆ ಕೃಷಿ ಕ್ಷೇತ್ರ ಮುರಿಯಲಿದೆ ಏಜೆಂಟರ ಏಕಸ್ವಾಮ್ಯ!

ಅಭಿಮತ: ಬಂಧ ಮುಕ್ತವಾಗಲಿದೆ ಕೃಷಿ ಕ್ಷೇತ್ರ ಮುರಿಯಲಿದೆ ಏಜೆಂಟರ ಏಕಸ್ವಾಮ್ಯ!

ಚೀನ ವಾಯು ಪಿತೂರಿ; ಎಲ್‌ಎಸಿಯಲ್ಲಿ 3 ವರ್ಷಗಳಿಂದ ವಾಯುಪಡೆ ಚಟುವಟಿಕೆ

ಚೀನ ವಾಯು ಪಿತೂರಿ; ಎಲ್‌ಎಸಿಯಲ್ಲಿ 3 ವರ್ಷಗಳಿಂದ ವಾಯುಪಡೆ ಚಟುವಟಿಕೆ

ವಿಶ್ವಸಂಸ್ಥೆಗಿದೆ ವಿಶ್ವಾಸದ ಕೊರತೆ

ವಿಶ್ವಸಂಸ್ಥೆಗಿದೆ ವಿಶ್ವಾಸದ ಕೊರತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.