ಕೈ ತಟ್ಟಿ ನೆಲ ಬಿಟ್ಟು ಕುಣಿದ ಆ ಖುಷಿ

Team Udayavani, Jun 7, 2021, 12:00 PM IST

ಕೈ ತಟ್ಟಿ  ನೆಲ ಬಿಟ್ಟು ಕುಣಿದ ಆ ಖುಷಿ

ಮಳೆ ಎಂದ ಕೂಡಲೇ ಮನಸ್ಸು ಬಾಲ್ಯದತ್ತ ಜಾರುತ್ತದೆ. ಮಳೆ ನೋಡಿನ ತತ್‌ಕ್ಷಣ  ಮಳೆಯಲ್ಲಿ ಹೆಜ್ಜೆ ಹಾಕೋಣ….ಮೈ ಮನದ ಪುಳಕ ಹೆಚ್ಚಿಸೋಣ…. ಮತ್ತೆ ಮಕ್ಕಳಾಗೋಣ ಎನಿಸುತ್ತದೆ.

ಮಳೆ ಹನಿಗಳು ನೆಲಕ್ಕೆ ಬಿದ್ದ ಕ್ಷಣ ಬಾಲ್ಯದ ನೂರಾರು ನೆನಪುಗಳು ಕಣ್ಣೆದುರು ಬರುತ್ತವೆ. ಚಿಕ್ಕವರಿದ್ದಾಗ ಮಳೆ ನೀರನ್ನು ತದೇಕ ಚಿತ್ತದಿಂದ ಗಮನಿಸುತ್ತಿದ್ದೆವು. ಅದರಲ್ಲೂ ನೀಲಿ ಬಾನಲ್ಲಿ ನೀರು ತುಂಬಿದ್ದಾದರೂ ಹೇಗೆ? ಎನ್ನುವ ಪ್ರಶ್ನೆ ನಮ್ಮನ್ನು ಕಾಡುತ್ತಿತ್ತು. ಅಷ್ಟೊಂದು ನೀರು ಸಂಗ್ರಹಿಸಲು ಅಲ್ಲಿ ಕೆರೆ, ನದಿಗಳು ಇರಬಹುದೇ.. ಹೀಗೆ ಪ್ರಶ್ನೆಗಳ ಸರಮಾಲೆ ಬೆಳೆದು ಅದಕ್ಕೆ ಉತ್ತರವನ್ನು ನಮ್ಮ ವಿಜ್ಞಾನದ ಶಿಕ್ಷಕರಿಂದ ಉತ್ತರ ಪಡೆಯುತ್ತಿದ್ದೆವು. ಮನೆಯಲ್ಲಿ ಅಪ್ಪ- ಅಮ್ಮ ಇಲ್ಲ ಅಂದರೆ ಮುಗ್ಧ ಮನಸಿಗೆ ಹಬ್ಬವಿದ್ದಂತೆ. ಮಳೇಲಿ ನೆನೆಯೋದು, ನಿಂತ ನೀರಲ್ಲಿ ಕುಣಿದು ನೀರನ್ನ ಚಿಮ್ಮಿಸೋದು, ಒಬ್ಬರ ಮೇಲೊಬ್ಬರು ಮಳೆ ನೀರನ್ನು ಎರಚುವುದು ನೆನೆಯುತ್ತಿದ್ದರೆ ದಿನ ಸಾಲದು.

ಹರಿಯುವ ಮಳೆ ನೀರಲ್ಲಿ ಕಾಗದದ ದೋಣಿ ಮಾಡಿ ಆ ದೋಣೀಲಿ ಹೆಸರನ್ನು ಗೀಚಿ ಬರೆದು ನೀರಲ್ಲಿ ತೇಲಿ ಬಿಟ್ಟು, ಕೈ ತಟ್ಟಿ ನೆಲ ಬಿಟ್ಟು ಕುಣಿದ ಆ ಖುಷಿಗೆ ಎಲ್ಲೆ ಇಲ್ಲ. ಬಾಲ್ಯದ ಆ ಹಸಿ ನಿಶ್ಕಲ್ಮಶ ಪುಟ್ಟ ಮನಸು ಹಾಗೇ ಅಲ್ವ. ಮಗುವಿನಂತ ಮನಸಿಗೆ, ಗುಬ್ಬಚ್ಚಿಯಂತ ಖುಷಿ ಸಾಕು. ಮಳೆಯಲ್ಲಿ ನಿಂತ ಕೆಸರೊಂದಿಗೆ ಆಟವಾಡಿ ಕಾಲು ನಂಜು ಆದಾಗ ಅಮ್ಮನಿಂದ ಬೈಗುಳ ಕೇಳುವಾಗ ಮಳೆರಾಯನ ಮೇಲೆ ಕೆಲವೊಮ್ಮೆ ಕೋಪ ಬಂದದ್ದು ಇದೆ. ಆದರೆ ಅದು ಕ್ಷಣ ಮಾತ್ರವಾಗಿತ್ತು ಮತ್ತೆ ಮೊಡದ ಮರೆಯಲ್ಲಿ ಮೇಘರಾಜ ಬರುವನೆಂದು ಸೂಚನೆ ಸಿಕ್ಕಿದ್ದೇ ತಡ ಮತ್ತೆ ಮೇಘರಾಜನೊಂದಿಗೆ ನಾವೆಲ್ಲ ಸಂಧಾನ ಮಾಡಿಕೊಳ್ಳುತ್ತಿದ್ದೆವು. ಒಮ್ಮೊಮ್ಮೆ ಅತಿಯಾಗಿ ಮಳೆ ಬಂದು ಶಾಲೆಗೆ ರಜೆ ಘೋಷಿಸಿದಾಗ ಖುಷಿ ಪಟ್ಟಿದ್ದು ಇದೆ. ಆದರೆ ಪ್ರಕೃತಿ ಹಾನಿ ಕಂಡಾಗ ಮನಸ್ಸಿಗೆ ಬೇಸರವೂ ಆಗುತ್ತಿತ್ತು. ಮಳೆಯೊಂದು ಪ್ರಕೃತಿಯ ವಿಸ್ಮಯವೂ ಹೌದು, ಅದೇ ರೀತಿ ಪ್ರಕೃತಿಯ ಜೀವಾಳವೂ ಹೌದು. ಈ ಬಾರಿ ಆಕ್ಸಿಜನ್‌ ಅಭಿಯಾನ ಎಲ್ಲೆಡೆ ನಡೆಯುತ್ತಿದ್ದು ಮಳೆ ಬರುವ ಮುನ್ನ ಸಸಿ ನೆಟ್ಟು ಬೆಳೆಸಿ ನಮ್ಮ ಸುತ್ತಮುತ್ತ ಪ್ರದೇಶದಲ್ಲಿ ಹಸುರು ರಂಗನ್ನು ಕಂಪಿಸೋಣ.

ಗಿರೀಶ ಜೆ.

ತುಮಕೂರು ವಿವಿ

ಟಾಪ್ ನ್ಯೂಸ್

ಮಲ್ಯ ನ್ಯಾಯಾಂಗ ನಿಂದನೆ: ಜ.18ಕ್ಕೆ ಸುಪ್ರೀಂಕೋರ್ಟ್‌ ತೀರ್ಪು

ಮಲ್ಯ ನ್ಯಾಯಾಂಗ ನಿಂದನೆ: ಜ.18ಕ್ಕೆ ಸುಪ್ರೀಂಕೋರ್ಟ್‌ ತೀರ್ಪು

ಸಲಿಂಗಕಾಮಿ ವಿವಾಹ: ವಿಚಾರಣೆಯ ನೇರ ಪ್ರಸಾರಕ್ಕೆ ಮನವಿ

ಸಲಿಂಗಕಾಮಿ ವಿವಾಹ: ವಿಚಾರಣೆಯ ನೇರ ಪ್ರಸಾರಕ್ಕೆ ಮನವಿ

ಪದ್ಮಶ್ರೀ ಸಿರಿವೆನ್ನೆಲ ಸೀತಾರಾಮ ಶಾಸ್ತ್ರಿ ನಿಧನ

ಪದ್ಮಶ್ರೀ ಸಿರಿವೆನ್ನೆಲ ಸೀತಾರಾಮ ಶಾಸ್ತ್ರಿ ನಿಧನ

ಬಿಹಾರ ವಿಧಾನಸಭೆಯಲ್ಲಿ ಮದ್ಯದ ಬಾಟಲಿ!

ಬಿಹಾರ ವಿಧಾನಸಭೆಯಲ್ಲಿ ಮದ್ಯದ ಬಾಟಲಿ!

ಅಯೋಧ್ಯೆ ತೀರ್ಪು ಧರ್ಮಾಧಾರಿತವಲ್ಲ: ಮಾಜಿ ಸಿಜೆಐ ಗೊಗೋಯ್!

ಅಯೋಧ್ಯೆ ತೀರ್ಪು ಧರ್ಮಾಧಾರಿತವಲ್ಲ: ಮಾಜಿ ಸಿಜೆಐ ಗೊಗೋಯ್!

ಅಪ್ಪ ಅರ್ಥವಾದರೂ ಮಗನ ನಡೆ ಅರ್ಥವಾಗುತ್ತಿಲ್ಲ: ಶಂಕರ್‌

ಅಪ್ಪ ಅರ್ಥವಾದರೂ ಮಗನ ನಡೆ ಅರ್ಥವಾಗುತ್ತಿಲ್ಲ: ಶಂಕರ್‌

ಭ್ರಷ್ಟಾಚಾರ ಪ್ರಕರಣ: ವಿಚಾರಣೆಗೆ ಹಾಜರಾದ ಅನಿಲ್‌ ದೇಶ್‌ಮುಖ್‌

ಭ್ರಷ್ಟಾಚಾರ ಪ್ರಕರಣ: ವಿಚಾರಣೆಗೆ ಹಾಜರಾದ ಅನಿಲ್‌ ದೇಶ್‌ಮುಖ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇಂದು ನಾ ಕಂಡ ಜೋಗತಿ

ಜೋಗತಿಗೆ ಗುರು, ಮಾರ್ಗದರ್ಶಕಿ, ದಿಕ್ಕು-ದೆಸೆಯಾಗಿ ಸಿಕ್ಕವರೆ ಕಾಳವ್ವ : ನಾ ಕಂಡ ಜೋಗತಿ

fgdtryy

ಸುತ್ತಿಗೆ ತಲೆ ಹುಳು ಬಗ್ಗೆ ನಿಮಗೆ ತಿಳಿದಿದೆಯೆ ?

hyuty6t

ಸಂಗೀತವೆಂಬ ದೀಪದಲ್ಲಿ ಬೆಳಗುತ್ತಿರುವ ‘ಉಜ್ವಲ’

ನೆರಳಿನಂತೆ ಹಿಂಬಾಲಿಸುವ ನೆನಪುಗಳು….

ನೆರಳಿನಂತೆ ಹಿಂಬಾಲಿಸುವ ನೆನಪುಗಳು….

ಕಣ್ಣೆದುರಿಗೆ ಬರುವ ಅಚ್ಚಳಿಯದ ನೆನಪುಗಳು

ಕಣ್ಣೆದುರಿಗೆ ಬರುವ ಅಚ್ಚಳಿಯದ ನೆನಪುಗಳು

MUST WATCH

udayavani youtube

ಕಾಪು ಪರಿಸರದಲ್ಲಿ ಗಾಳಿ, ಗುಡುಗು, ಮಿಂಚು ಸಹಿತ ಭಾರೀ ಮಳೆ

udayavani youtube

ದನಗಳ್ಳರನ್ನು ಹಿಡಿಯಲು ಹೋದವರ ಮೇಲೆ ವಾಹನ ಚಲಾಯಿಸಿ ಹಲ್ಲೆ: ಇಬ್ಬರಿಗೆ ಗಂಭೀರ ಗಾಯ

udayavani youtube

ಸುಟ್ಟಗಾಯ ಸಂರ್ಪೂಣ ನಿವಾರಣೆ ಆಗಲು ಈ ನಾಟಿ ವೈದ್ಯರ ಬಳಿ ಇದೆ ಔಷಧಿ.

udayavani youtube

ಕಸ್ತೂರಿರಂಗನ್ ಸಮೀಕ್ಷೆ ಅವೈಜ್ಞಾನಿಕ !?

udayavani youtube

ಭಾರತದಲ್ಲಿ ವ್ಯಾಸಂಗ ಮಾಡಿದ್ದನಂತೆ ಈ ತಾಲಿಬಾನ್‌ ವಕ್ತಾರ!

ಹೊಸ ಸೇರ್ಪಡೆ

ಮಲ್ಯ ನ್ಯಾಯಾಂಗ ನಿಂದನೆ: ಜ.18ಕ್ಕೆ ಸುಪ್ರೀಂಕೋರ್ಟ್‌ ತೀರ್ಪು

ಮಲ್ಯ ನ್ಯಾಯಾಂಗ ನಿಂದನೆ: ಜ.18ಕ್ಕೆ ಸುಪ್ರೀಂಕೋರ್ಟ್‌ ತೀರ್ಪು

ಸಲಿಂಗಕಾಮಿ ವಿವಾಹ: ವಿಚಾರಣೆಯ ನೇರ ಪ್ರಸಾರಕ್ಕೆ ಮನವಿ

ಸಲಿಂಗಕಾಮಿ ವಿವಾಹ: ವಿಚಾರಣೆಯ ನೇರ ಪ್ರಸಾರಕ್ಕೆ ಮನವಿ

ಪದ್ಮಶ್ರೀ ಸಿರಿವೆನ್ನೆಲ ಸೀತಾರಾಮ ಶಾಸ್ತ್ರಿ ನಿಧನ

ಪದ್ಮಶ್ರೀ ಸಿರಿವೆನ್ನೆಲ ಸೀತಾರಾಮ ಶಾಸ್ತ್ರಿ ನಿಧನ

ಬಿಹಾರ ವಿಧಾನಸಭೆಯಲ್ಲಿ ಮದ್ಯದ ಬಾಟಲಿ!

ಬಿಹಾರ ವಿಧಾನಸಭೆಯಲ್ಲಿ ಮದ್ಯದ ಬಾಟಲಿ!

ಅಯೋಧ್ಯೆ ತೀರ್ಪು ಧರ್ಮಾಧಾರಿತವಲ್ಲ: ಮಾಜಿ ಸಿಜೆಐ ಗೊಗೋಯ್!

ಅಯೋಧ್ಯೆ ತೀರ್ಪು ಧರ್ಮಾಧಾರಿತವಲ್ಲ: ಮಾಜಿ ಸಿಜೆಐ ಗೊಗೋಯ್!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.