UV Fusion: ಅನಂತ ನೆನಪುಗಳು; ಎಸ್ತರ್‌ ಅನಂತಮೂರ್ತಿ


Team Udayavani, Sep 4, 2023, 3:54 PM IST

15-uv-fusion

ಅಕ್ಕರೆಯ ಹಿರಿಜೀವ ಎಸ್ತರ್‌ ಅನಂತಮೂರ್ತಿ ಅವರನ್ನು ಅನಂತ ನೆನಪುಗಳೊಂದಿಗೆ ಆಲನಹಳ್ಳಿಯಲ್ಲಿರು ಅವರ ತೋಟದಲ್ಲಿ ಭೇಟಿಯಾಗಲು ನನಗೆ ಅವಕಾಶ ದೊರೆತದ್ದೇ ಸುದಿನ ಎಂದು ಹೇಳಬಹುದು. ಎಂಭತ್ತರ ವಯಸ್ಸಿನಲ್ಲೂ ಅವರ ಜೀವನೋತ್ಸಾಹ, ಚೈತನ್ಯವನ್ನು ಕಂಡು ನಾನು ಬೆರಗಾದೆ.

ಅನಂತಮೂರ್ತಿಯವರ ಆತ್ಮಕಥೆ “ಸುರಗಿ’ ಓದಿದಾಗಿನಿಂದಲೂ ನನದೊಂದು ಕುತೂಹಲ. ಅನಂತಮೂರ್ತಿಯವರ ಮಡದಿಯಾಗಿ ಎಸ್ತರ್‌ ಅವರು ಹೇಗಿದ್ದರು ಎಂದು. ಅವರೊಂದಿಗಿನ ಒಡನಾಟದಲ್ಲಿ, ಒಡನಾಡಿಯಾಗಿ ಬೆರೆತ ಕ್ಷಣಗಳನ್ನು ತಿಳಿಯಬೇಕೆಂಬ ಆಸೆ. ಆ ನಿಟ್ಟಿನಲ್ಲಿ ನಿಮ್ಮೊಂದಿಗೆ ಮಾತನಾಡಬಹುದ ಎಂದು ಕೇಳಿದ ಕೂಡಲೇ “ಅಯ್ಯೋ ಅದಕ್ಕೇನು  ಮಾತನಾಡು’ ಎಂದು ಅವರು ನಗೆ ಬೀರಿದರು. ನನಗೆ ಒಂದಷ್ಟು ಧೈರ್ಯ ತುಂಬಿತು ಆ ನಗು.

ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇದ್ದೆ ಇರುತ್ತಾಳೆ ಎಂಬ ಲೋಕ ಪ್ರಸಿದ್ಧ ಮಾತಿಗೆ ನಿಮ್ಮ ಅಭಿಪ್ರಾಯವೇನು ಎಂದು ಕೇಳಿದಾಗ ಅವರ ಹಸನ್ಮುಖವೇ ಉತ್ತರ.

ಅನಂತಮೂರ್ತಿಯವರ ಬರವಣಿಗೆ ಕುರಿತು ಮಾತನಾಡುತ್ತಾ ನಾನು ಇಂತಹ ಒಬ್ಬ ಜೀನಿಯಸ್‌ ಪ್ರಸಿದ್ಧ ವ್ಯಕ್ತಿಯ ಹೆಂಡತಿಯಾಗಿದ್ದೇನೆ ಎಂಬುದು ಅವರಿದ್ದಾಗ ಗೊತ್ತಾಗಲೇ ಇಲ್ಲ. ಕೆಲವೊಮ್ಮೆ ಅವರ ಪುಸ್ತಕಗಳ ಮೊದಲ ಓದುಗಳು ನಾನೇ ಆಗಿರುತ್ತಿದ್ದೆ ಎಂದು ನೆನಪಿನಾಳಕ್ಕೆ ಜಾರಿದರು ಎಸ್ತರ್‌.

ಅವರು ಓದು ಬರಹಗಳಲ್ಲಿ ಎಷ್ಟು ಮಗ್ನರಾಗಿರುತ್ತಿದ್ದರೆಂದರೆ ಎಂದು ಹೇಳುತ್ತಾ ಒಂದು ಘಟನೆಯನ್ನು ನೆನಪಿಸಿದರು. ಮನೆಯಲ್ಲಿ ಏನೋ ಗೊಂದಲ ವಿದ್ದದ್ದಕ್ಕಾಗಿ ಅನಂತಮೂರ್ತಿಯವರು ಒಂದು ವಾರ ಮನೆ ಬಿಟ್ಟು ಎಲ್ಲರನ್ನೂ ಗಾಬರಿಯಾಗುವಂತೆ ಮಾಡಿದ್ದರಂತೆ. ಎಲ್ಲ ಕಡೆ ಹುಡುಕಿ ಕಂಗಾಲಾದ ಮೇಲೆ ಒಂದು ವಾರದ ಅನಂತರ ಭಾರತೀಪುರ ಕಾದಂಬರಿಯನ್ನು ರಚಿಸಿ ಮನೆಗೆ ತೆರಳಿದ್ದರಂತೆ.

ಅನಂತಮೂರ್ತಿಯವರು ಮತ್ತು ಅವರ ನಿಲುವಿನ ಬಗಗೆ ಹೇಳುತ್ತಾ ಅನಂತಮೂರ್ತಿಯವರು ನೇರ ವ್ಯಕ್ತಿತ್ವದವರಾಗಿದ್ದರು. ಅವರು ಪರಂಪರೆಯನ್ನು ಧಿಕ್ಕರಿಸುವ ಮನೋಧರ್ಮದವರಾಗಿರಲಿಲ್ಲ. ಎಲ್ಲ ಹಬ್ಬಗಳನ್ನು ನಾವು ಮನೆಮಂದಿ ಬಹಳ ಸಂತೋಷವಾಗಿ ಆಚರಿಸುತ್ತಿದ್ದೇವು ಎಂದ ಅವರು, ಪತಿಯ ಕೊನೆಯ ದಿನಗಳನ್ನು ನೆನೆಯುತ್ತಾ ಉತ್ಕಟ ಜೀವನ ಪ್ರೀತಿ ಹೊಂದಿದ್ದ ಅವರು ಒಂಟಿಯಾಗಲು ಎಂದಿಗೂ ಭಯಪಟ್ಟವರಲ್ಲ ಆಪರೇಷನ್‌ ಥಿಯೇಟರ್‌ ಪ್ರವೇಶಿಸುವಾಗಲೂ ಅವರ ಕಿರುನಗೆ ಈಗಲೂ ಕಣ್ಣ ಮುಂದಿದೆ ಎಂದು ಹೇಳಿ 2014 ಆಗಸ್ಟ್‌ 22ಸಂಜೆ 6.30ಕ್ಕೆ ಅವರು ತಮ್ಮೊಂದಿಗೆ ಬಾಹ್ಯವಾಗಿ ಇಲ್ಲವಾದದ್ದನ್ನು ನೆನೆದು ಕ್ಷಣಕಾಲ ಎಸ್ತರ್‌ ದುಃಖೀತರಾದರು.

ಅನಂತಮೂರ್ತಿಯವರ ಅಪೇಕ್ಷೆಯಂತೆ ಆಲನಹಳ್ಳಿ ತೋಟದ ಬಿಲ್ವಪತ್ರೆ ಗಿಡದ ಬುಡಕ್ಕೆ ಅವರ ಚಿತಾಭಸ್ಮವನ್ನು ಹಾಕಲಾಯಿತು ಎಂದು ಹೇಳುತ್ತಾ ಗಿಡ ಮರವಾದದ್ದನ್ನು ನೋಡುತ್ತಾ ನಿಟ್ಟುಸಿರು ಬಿಟ್ಟು ಮೌನವಾದರು. ಎಲ್ಲರನ್ನೂ ಬೆನ್ನುತಟ್ಟಿ ಮಾತನಾಡಿಸುವ ಅವರ ವರ್ಚಸ್ಸು ಎಂದಿಗೂ ಮಸುಕಾದದ್ದೇ ಇಲ್ಲ ಎಂದವರ ಮಾತುಗಳಲ್ಲಿ ಗಂಡನ ಬಗ್ಗೆ ಇದ್ದ ಹೆಮ್ಮೆ ಕಾಣಿಸುತ್ತಿತ್ತು.

ಅನಂತಮೂರ್ತಿ ಅವರ ಓದು ಬರಹದ ನಿರಂತರ ಧ್ಯಾನಗಳಿಗೆ, ಸಾಹಿತ್ಯ ಕೃಷಿಗೆ, ತೊಂದರೆಯಾಗದಂತೆ ಕುಟುಂಬವನ್ನು ಮುನ್ನಡೆಸಿ, ಅವರ ಜೀವನ ಪ್ರೀತಿಯ ಚೇತನದ ಒಂದು ಭಾಗವಾಗಿ ಸದಾ ಏಳು ಬೀಳುಗಳಲ್ಲಿ ಅವರೊಡನಿದ್ದು,  ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಎಂಬ ಮಾತಿಗೆ ನಿದರ್ಶನದಂತಿರುವ ಎಸ್ತರ್‌ ಅವರಿಗೆ ಪ್ರೀತಿಯ ಶರಣು.

-ಲಾವಣ್ಯ ಎನ್‌.

ಮೈಸೂರು

ಟಾಪ್ ನ್ಯೂಸ್

rahul gandhi

Fix date ; ಪ್ರಧಾನಿ ಮೋದಿ ಜತೆ ಬಹಿರಂಗ ಚರ್ಚೆಗೆ ಸಿದ್ಧ: ರಾಹುಲ್‌ ಗಾಂಧಿ

Kharge 2

5 ವರ್ಷಗಳ‌ಲ್ಲಿ ಭಾರತವು ಜಗತ್ತಿನ ಉತ್ಪಾದನ ಕೇಂದ್ರ: ಖರ್ಗೆ ಭರವಸೆ

EC

ಮತದಾನ ಮುಗಿದ ದಿನವೇ ಮಾಹಿತಿ ನೀಡಿ:ಆಯೋಗಕ್ಕೆ ಆಗ್ರಹ

court

Banned ಇಂಡಿಯನ್‌ ಮುಜಾಹಿದೀನ್‌ ಸಹ ಸಂಸ್ಥಾಪಕನಿಗೆ ಜಾಮೀನು

Rain ಗುಡುಗು-ಸಿಡಿಲು ಮಳೆ; ಓರ್ವ ಸಾವು, ಇಬ್ಬರಿಗೆ ಗಾಯ

Rain ಗುಡುಗು-ಸಿಡಿಲು ಮಳೆ; ಓರ್ವ ಸಾವು, ಇಬ್ಬರಿಗೆ ಗಾಯ; ಏಕಾಏಕಿ ವರ್ಷಧಾರೆ, ಹಲವು ಕಡೆ ಹಾನಿ

rain

Delhi; ಬಿರುಗಾಳಿ ಸಹಿತ ಮಳೆಗೆ ರಾಜಧಾನಿ  ತತ್ತರ

ವಾರಾಂತ್ಯ, ಸರಣಿ ರಜೆ: ಧಾರ್ಮಿಕ ಕ್ಷೇತ್ರ,ಪ್ರವಾಸಿ ತಾಣಗಳಲ್ಲಿ ಜನಜಂಗುಳಿ

ವಾರಾಂತ್ಯ, ಸರಣಿ ರಜೆ: ಧಾರ್ಮಿಕ ಕ್ಷೇತ್ರ,ಪ್ರವಾಸಿ ತಾಣಗಳಲ್ಲಿ ಜನಜಂಗುಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

16-uv-fusion

Conductor’s Humanity: ಮಾನವೀಯತೆ ಮೆರೆದ ಬಸ್‌ ಕಂಡಕ್ಟರ್‌

15-uv-fusion

Bus Conductor: ಕಂಡಕ್ಟರ್‌ ಎಂಬ ರಿಮೋಟ್‌ ಕಂಟ್ರೋಲರ್‌

14-uv-fusion

Mother Nature: ಪ್ರಕೃತಿ ಮಾತೆಯೇ ನೀ ಏಕೆ ಮೌನವಾಗಿರುವೆ ?

13-uv-fusion

UV Fusion: ಇಂದೇಕೆ ಎಂಬ ಮಂದತ್ವ!

8-uv-fusion

UV Fusion: ಸಮಯಪ್ರಜ್ಞೆಯಿಂದ ಬದುಕಿದ ಬಡಜೀವ!

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

rahul gandhi

Fix date ; ಪ್ರಧಾನಿ ಮೋದಿ ಜತೆ ಬಹಿರಂಗ ಚರ್ಚೆಗೆ ಸಿದ್ಧ: ರಾಹುಲ್‌ ಗಾಂಧಿ

vimana

Pakistan: ಬಾಲಕನ ಶವವನ್ನು ಬಿಟ್ಟೇ ಹಾರಿದ ವಿಮಾನ!

Kharge 2

5 ವರ್ಷಗಳ‌ಲ್ಲಿ ಭಾರತವು ಜಗತ್ತಿನ ಉತ್ಪಾದನ ಕೇಂದ್ರ: ಖರ್ಗೆ ಭರವಸೆ

EC

ಮತದಾನ ಮುಗಿದ ದಿನವೇ ಮಾಹಿತಿ ನೀಡಿ:ಆಯೋಗಕ್ಕೆ ಆಗ್ರಹ

1-wewqwqe

ಸನಾತನ ಸಂಸ್ಥೆ ಉಗ್ರ ಸಂಘಟನೆ: ಕಾಂಗ್ರೆಸ್‌ ನಾಯಕ ಚವಾಣ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.