ಇಶಾನ್ -ಅನನ್ಯಾ ಪಾಂಡೆ ಅಭಿನಯದ ‘ಖಾಲಿ-ಪೀಲಿ’ ಟೀಸರ್ ಔಟ್
Team Udayavani, Aug 24, 2020, 3:50 PM IST
ಇಶಾನ್ ಖಟ್ಟರ್ ಮತ್ತು ಅನನ್ಯಾ ಪಾಂಡೆ ಅಭಿನಯದ ‘ಖಾಲಿ-ಪೀಲಿ’ ಚಿತ್ರದ ಟೀಸರ್ ಬಿಡುಗಡೆಯಾಗಿದೆ.
ನಿರ್ದೇಶಕ ಮಕ್ಬೂಲ್ ಖಾನ್ ಅವರ ಈ ರೊಮ್ಯಾಂಟಿಕ್-ಆಕ್ಷನ್ ಚಿತ್ರದಲ್ಲಿ ಇಶಾನ್ ಅವರನ್ನು ಟ್ಯಾಕ್ಸಿ ಡ್ರೈವರ್ ಆಗಿ ಕಾಣಬಹುದು.
ಕಥಾ ನಾಯಕಿ ಅನನ್ಯಾ ತನ್ನ ಟ್ಯಾಕ್ಸಿಯಲ್ಲಿ ಕುಳಿತಾಗ ಮಧ್ಯರಾತ್ರಿಯಲ್ಲಿ ಅವರ ಜೀವನದಲ್ಲಿ ನಡೆಯುವ ಬದಲಾವಣೆಗಳು ಕಥಾವಸ್ತುವಾಗಿದೆ.
ಈ ಆಕ್ಷನ್ ಪ್ಯಾಕ್ಡ್ ಮಸಾಲಾ ಚಿತ್ರದ ಟೀಸರ್‌ನಲ್ಲಿ ಇಶಾನ್ ಮತ್ತು ಅನನ್ಯಾ ಅವರು ಪೊಲೀಸರು ಮತ್ತು ಸಾರ್ವಜನಿಕರಿಂದ ಓಡಿಹೋಗುವುದನ್ನು ಕಾಣಬಹುದು.
ಹಿಮಾಂಶು ಕಿಶನ್ ಮೆಹ್ರಾ, ಅಲಿ ಅಬ್ಟಾಸ್ ಜಾಫರ್ ಮತ್ತು ಝೀ ಸ್ಟುಡಿಯೋಸ್ ಈ ಚಿತ್ರವನ್ನು ನಿರ್ಮಿಸಿದೆ. ಆದರೆ ಈ ಚಿತ್ರದ ಬಿಡುಗಡೆಯ ದಿನಾಂಕವನ್ನು ಇನ್ನೂ ಘೋಷಿಸಲಾಗಿಲ್ಲ. ಈ ಚಿತ್ರವನ್ನು ಒಟಿಟಿ ಪ್ಲಾಟ್‌ಫಾರ್ಮ್ನಲ್ಲಿ ಬಿಡುಗಡೆ ಮಾಡುವ ಕುರಿತು ಇತ್ತೀಚೆಗೆ ಮಾಹಿತಿಯೊಂದು ಹರಿದಾಡುತ್ತಿತ್ತು.
ಈ ಮೊದಲು ಬಿಡುಗಡೆಯ ದಿನಾಂಕವನ್ನು ಕಳೆದ ಜೂನ್ 12ರಂದು ಬಿಡುಗಡೆ ಮಾಡಬೇಕಾಗಿತ್ತು. ಆದರೆ ಲಾಕ್‌ಡೌನ್ ಕಾರಣ ಇದು ಸಾಧ್ಯವಾಗಿರಲಿಲ್ಲ. ವರದಿಗಳ ಪ್ರಕಾರ, ಚಿತ್ರದ ಶೂಟಿಂಗ್ ಈ ತಿಂಗಳ ಅಂತ್ಯದ ವೇಳೆಗೆ ಪೂರ್ಣಗೊಳ್ಳಲಿದ್ದು, ಮುಂದಿನ ಕೆಲವು ತಿಂಗಳುಗಳಲ್ಲಿ ಶೀಘ್ರ ಪೋಸ್ಟ್ ಪ್ರೊಡಕ್ಷನ್ ಪೂರ್ಣವಾಗಲಿದೆ. ಮಧ್ಯರಾತ್ರಿಯಲ್ಲಿ ಭೇಟಿಯಾಗುವ ಹುಡುಗ ಮತ್ತು ಹುಡುಗಿಯ ಕುರಿತಾಗಿ ಈ ಚಿತ್ರದ ಕಥೆ ಹೆಣೆಯಲ್ಪಟ್ಟಿದೆ.
ಚಿತ್ರದಲ್ಲಿ ಇಶಾನ್ ಮತ್ತು ಅನನ್ಯಾ ಇಬ್ಬರೂ ತಪೋರಿ ಶೈಲಿಯೊಂದಿಗೆ ಚಿತ್ರಿಸಲಿದ್ದಾರೆ. ಜೈದೀಪ್ ಅಹ್ಲಾವತ್ ಮುಖ್ಯ ಖಳನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ.
ನಿರ್ದೇಶಕ ಮಕ್ಬೂಲ್ ಖಾನ್ ಅವರ ಈ ಚಿತ್ರದಲ್ಲಿ ಆಕ್ಷನ್ ಮತ್ತು ಮಸಾಲೆಗಳು ಸಾಕಷ್ಟು ಕಾಣುತ್ತಿವೆ. ಈ ಚಿತ್ರದಲ್ಲಿ ಇಶಾನ್ ಮತ್ತು ಅನನಾ ಜೋಡಿಯು ಚೆನ್ನಾಗಿ ಮೂಡಿ ಬಂದಿದೆ. ಚಿತ್ರದಲ್ಲಿ ಇಶಾನ್ ಜತೆಗೆ, ಅನನ್ಯಾ ಕೂಡ ಆಕ್ಷನ್ ಮೋಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಅನನ್ಯಾ ಪಾಂಡೆ ಮತ್ತು ಇಶಾನ್ ಖಟ್ಟರ್ ಇಬ್ಬರು ಜತೆಯಾಗಿ ನಟಿಸುತ್ತಿರುವ ಬಾಲಿವುಡ್‌ನಲ್ಲಿನ ಮೂರನೇ ಚಿತ್ರ ಇದಾಗಿದೆ. ಮತ್ತಷ್ಟು ಕುತೂಹಲ ತಣಿಸಲು ಟ್ರೈಲರ್‌ಗೆ ಕಾಯಲೇಬೇಕು.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444