ಬಾಲ್ಯದ ಸ್ವಾತಂತ್ರ್ಯ ದಿನಾಚರಣೆ ಮೆಲುಕು; ಕೇಸರಿ, ಬಿಳಿ, ಹಸಿರು ರಿಬ್ಬನ್‌…

Team Udayavani, Aug 15, 2020, 6:00 AM IST

Ribbon

ಸ್ವಾತಂತ್ರ್ಯ ದಿನಾಚರಣೆ ಎಂದರೆ ಬಾಲ್ಯದ ದಿನಗಳಲ್ಲಿ ದೊಡ್ಡ ಸಡಗರ.

ಆ ದಿನಕ್ಕೆ ದೊಡ್ಡ ಹಬ್ಬ. ಆಗಸ್ಟ್‌ ಬಂತೆಂದರೆ ಸಾಕು ನಮ್ಮ ತಯಾರಿ ಜೋರು, ಸ್ವಾತಂತ್ರ್ಯ ದಿನಾಚರಣೆ ದಿನ ಮೈದಾನದಲ್ಲಿ ಗುಂಪು ನೃತ್ಯಮಾಡಲು ಪ್ರತಿ ತರಗತಿಗೆ ಹೋಗಿ ವಿದ್ಯಾರ್ಥಿಗಳನ್ನು ಸೇರಿಸಿ ದೇಶಭಕ್ತಿ ಗೀತೆಗೆ ಹೆಜ್ಜೆ ಹಾಕಲು ತರಬೇತಿ ಪ್ರಾರಂಭ.

ಮಧ್ಯಾಹ್ನ ಆಗುವುದೇ ಕಾಯುತ್ತಾ, ಟೀಚರ್‌ ಸ್ವಾತಂತ್ರ್ಯ ದಿನಾಚರಣೆಗೆ ಡಾನ್ಸ್‌ ಪ್ರಾಕ್ಟಿಸ್‌ ಮಾಡಬೇಕು ಎಂದು ಮಧ್ಯಾಹ್ನದ ತರಗತಿಗಳಿಗೆ ರಜೆ ಘೋಷಿಸಿ ಹಾಡಿಗೆ ಹೆಜ್ಜೆ ಹಾಕುವುದು.

ಒಂದು ವಾರ ಶಾಲೆಯ ಪ್ರತಿ ಮೂಲೆಯಲ್ಲೂ ದೇಶಭಕ್ತಿಯ ಹಾಡು, ವಿದ್ಯಾರ್ಥಿಗಳ ಹೆಜ್ಜೆಯ ಕುಣಿತವೇ ಕಾಣುವುದು. ಆಗಸ್ಟ್‌ ಪ್ರಾರಂಭದಿಂದ 14ರ ವರೆಗೆ ತರಗತಿಗಳಲ್ಲಿ ಎಲ್ಲರದ್ದೂ ಹಾಜರಾತಿ.

ಆಗಸ್ಟ್‌ 13ರ ವರೆಗೆ ತರಗತಿಗಳಲ್ಲಿ ನೃತ್ಯ ತರಬೇತಿಯಾದರೆ, ಇನ್ನು ಮೈದಾನದಲ್ಲಿ ಎನ್‌ಸಿಸಿಯವರ ಪೆರೇಡ್‌ ಪ್ರಾಕ್ಟೀಸ್‌ ಮಾಡುತ್ತಿದ್ದರೆ ಎನ್ನೆಸೆಸ್‌ ಅವರು ತಾಳಬದ್ಧವಾಗಿ ಬ್ಯಾಂಡ್‌ ಟ್ರಂಪೆಟ್‌ ಬಾರಿಸುವ ಶಬ್ಧ, ದೇಶಭಕ್ತಿಗೀತೆ ಹಾಡುವ ಗುಂಪಿನ ಸುಶ್ರಾವ್ಯ ಸಂಗೀತ ಕಿವಿಗೆ ಇಂಪು ನೀಡುತ್ತಿತ್ತು.

ಇನ್ನು ಶಾಲೆಯನ್ನು ಸ್ವಚ#ಗೊಳಿಸಿ ರಂಗೋಲಿಹಾಕಿ ಧ್ವಜ ಸ್ಥಂಭ ಸಿದ್ಧಮಾಡಲು ಎಲ್ಲರೂ ತಾ ಮುಂದೆ ನಾವು ಮುಂದೆ ಎನ್ನುತ್ತಿದ್ದರು. ಶಾಲೆ ಪೂರ್ತಿ ಧ್ವಜದಿಂದ, ಪರ್ಪರೆ ಇಂದ ಅಲಂಕಾರ ಮಾಡಲು ವಿಪರೀತ ಖುಷಿ. ಹೂವುಪಕಳೆ ಹಾಕಿ ಧ್ವಜ ಕಟ್ಟುವುದೇ ಎಲ್ಲಿಲ್ಲದ ಆನಂದ.
ಪ್ರತಿ ದಿನ ಬೆಳಗ್ಗೆ ಕಷ್ಟ ಪಟ್ಟು ಏಳುವ ನಾವು. ಸ್ವಾತಂತ್ರ್ಯ ದಿನಾಚರಣೆಯಂದು ಯಾರೂ ಎಬ್ಬಿಸದೇ ಬೇಗ ಎದ್ದು ಬಿಳಿ ಯುನಿಫಾರ್ಮ್ ಧರಿಸಿ. ಕೆಸರಿ, ಬಿಳಿ, ಹಸಿರು ರಿಬ್ಬನ್‌ ಕಟ್ಟಿಕೊಂಡು, ಧ್ವಜ ಹಿಡಿದು ಕೊಂಡು ಶಾಲೆಗೆ ಓಡುತ್ತಿದ್ದೇವು. ಧ್ವಜಾರೋಹಣ ಆದೊಡನೆ ಬ್ಯಾಂಡಿನೊಂದಿಗೆ ರಾಷ್ಟ್ರಗೀತೆ ಹಾಡುವಾಗ ಎಲ್ಲರ ಧ್ವನಿಯೂ ತಾರಕಕ್ಕೇರುತ್ತಿತ್ತು. ಧ್ವಜ ಬಾನಂಗಳದಲ್ಲಿ ಹಾರಾಡುವುದನ್ನು ನೋಡುತ್ತಾ ಹಾಡುವ ಅನುಭವ ಅತೀತ.

ಅನಂತರ ಸಿಹಿಹಂಚುವ ಕಾರ್ಯಕ್ರಮದಲ್ಲಂತೂ ಜಗಳವೇ ನಡೆಯುತ್ತಿತ್ತು. ನನಗೆ ಸಿಹಿತಿನಿಸು ಒಂದು ಬಂತು, ಅವಳಿಗೆ ಎರಡು ದೊರೆಯಿತು., ಅವನು ಎಲ್ಲವನ್ನೂ ತಿಂದ ಇಂತ ಚಾಡಿಗಳು ಆಗ ಯುದ್ಧವಾಗಿ ಕಂಡು ಈಗ ನಗುಮೂಡಿಸುತ್ತದೆ. ಎಲ್ಲರೂ ಸಿಹಿ ತಿಂದ ಅನಂತರ ಮೈದಾನದತ್ತ ಎಲ್ಲರ ನಡುಗೆ ಅಲ್ಲಿ ಈಡಿ ಊರಿನ ಎಲ್ಲ ಶಾಲೆ, ಕಾಲೇಜು ಮಕ್ಕಳು ಬಂದು ಸೇರಿರುತ್ತಾರೆ. ಅಲ್ಲಿ ಧ್ವಜಾರೋಹಣ ಆಗುವುದರೊಳಗೆ ಎಲ್ಲರೂ ಅಲ್ಲಿ ಸೇರಲು ಓಡೊಡಿ ರಭಸದಿಂದ ಹೋಗುತ್ತಿದ್ದೇವು.

ಅಲ್ಲಿ ಎಲ್ಲ ವಿಧ್ಯಾರ್ಥಿಗಳ ಪರೇಡ್‌ ಮತ್ತು ನೃತ್ಯ. ಎಲ್ಲ ಶಾಲಾ ಕಾಲೇಜು ಮಕ್ಕಳೆದುರು ದೊಡ್ಡ ಮೈದಾನದ ಮಧ್ಯ ನೃತ್ಯ, ಪರೇಡ್‌ ಮಾಡುವುದೇ ದೊಡ್ಡ ಹೆಮ್ಮೆ. ಒಂದು ವಾರದಿಂದ ಕುತೂಹಲ ಭರಿತರಾಗಿ ತರಬೇತಿ ಪಡೆದ ನೃತ್ಯವನ್ನು ಮಾಡುವಾಗ ಸುತ್ತುವರೆದ ಜನರ ಚಪ್ಪಾಳೆಯ ಶಬ್ದ ಅತ್ಯಮೂಲ್ಯ. ಅನಂತರ ಪರೇಡ್‌ ಮಾಡುವ ಸ್ಪರ್ಧೆಯಲ್ಲಿ ನಮ್ಮ ಶಾಲೆಯೇ ಮೊದಲ ಪ್ರಶಸ್ತಿ ಪಡೆಯಲೆಂದು ಕುತೂಹಲ ಭರಿತರಾಗಿ ನೋಡುವ ದೃಶ್ಯ ಅಗಣಿತ. ಅಂತಹ ವರ್ಣನಾತೀತ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದ ಬಾಲ್ಯದ ಅನುಭವ ಚಿರಸ್ಮರಣೀಯ.

-ಮಹಿಮಾ ಭಟ್,‌ ಧಾರವಾಡ ವಿಶ್ವವಿದ್ಯಾನಿಲಯ

ಟಾಪ್ ನ್ಯೂಸ್

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.