UV Fusion: ಪ್ರೀತಿ ಎಂಬ ಸುಂದರ ಬಂಧ


Team Udayavani, Jan 7, 2024, 8:00 AM IST

22-uv-fusion

ಕಾಲವೇ ಹಾಗೆ ಅಪರಿಚಿತರನ್ನು ಪರಿಚಿತರನ್ನಾಗಿ ಮಾಡಿ ಬಿಡುತ್ತದೆ. ಹಾಗೆಯೇ ಪರಿಚಿತರನ್ನು ಅಪರಿಚಿತರನ್ನಾಗಿ ಮಾಡಿಬಿಡುತ್ತದೆ. ಒಬ್ಬರ ನಡುವೆ ಅದೆಷ್ಟೇ ಪ್ರೀತಿ, ಕಾಳಜಿ ಇದ್ದರೂ ಆ ಅತಿಯಾದ ಪ್ರೀತಿಯೇ ಬದುಕಿನಿಂದ ಅವರನ್ನು ದೂರ ಮಾಡಿ ಬಿಡುತ್ತೆ ಅಲ್ವಾ..?

ಒಮ್ಮೊಮ್ಮೆ ಪರಿಚಯವೇ ಇಲ್ಲದ ವ್ಯಕ್ತಿ, ಬಯಸದೆ ಸಿಕ್ಕ ಪ್ರೀತಿ ಎರಡೂ ಊಹೆಗೂ ಮೀರಿದ ಬಂಧವನ್ನು ಕಟ್ಟಿಕೊಡುತ್ತದೆ. ಅಂತೆಯೇ ನನ್ನ ಬದುಕಲ್ಲೂ ಅಪರಿಚಿತ ವ್ಯಕ್ತಿಗಳಿಂದ ಆಕಾಶದಷ್ಟು, ಯಾವತ್ತೂ ಎಣಿಸದ ಪ್ರೀತಿ ಸಿಕ್ಕಿತು. ಮೊದಲು ನಾನೂ ನನ್ನ ಬದುಕಲ್ಲಿ ಪ್ರೀತಿಗೆ ಜಾಗವೇ ಇಲ್ಲ, ನನಗದು ಸೂಕ್ತವೇ ಅಲ್ಲ ಅಂದುಕೊಂಡಿದ್ದಾರೆ. ಆದರೆ ಅಂದು ಜಂಗಮವಾಣಿಗೆ ಬಂದು ಬಿದ್ದ ಒಂದು ಸಂದೇಶ ಎಲ್ಲವನ್ನೂ ಬದಲಿಸಿತು!

ನನಗೆ ಆ ಸಂದೇಶವನ್ನು ಓದೋ ಆಸಕ್ತಿಗಿಂತ ಜಂಗಮವಾಣಿಯಿಂದಲೇ ದೂರವಿದ್ದು ಬಿಡೋಣ ಅನ್ನುವಷ್ಟು ನಿರಾಸಕ್ತಿ ನನ್ನ ಮನಸ್ಸನ್ನು ಆವರಿಸಿಕೊಂಡಿತ್ತು. ಆದರೆ ದೈವಿಚ್ಛೆಯೋ ಏನೋ ಗೊತ್ತಿಲ್ಲ ಆ ಸಂದೇಶದ ಜೊತೆಗೆ ಆ ವ್ಯಕ್ತಿ ನನ್ನ ಮನಸ್ಸಿನ ಕದವನ್ನು ತಟ್ಟಿದ್ದರು. ಆ ಸಂದೇಶದಲ್ಲಿ ವಿಷಯ ಏನಿಲ್ಲವಾದರೂ ಆ ವ್ಯಕ್ತಿ ಮಾತ್ರ ನನ್ನ ಜೀವನದಲ್ಲಿ ಎಲ್ಲವೂ ಆದರು.

ಪ್ರತಿಯೊಬ್ಬರ ಜೀವನದಲ್ಲೂ ಈ ಸಂಗತಿ ಸಾಮಾನ್ಯವೇ. ಆದರೆ ನನ್ನ ಜೀವನದಲ್ಲಿ ವ್ಯಕ್ತಿಯಲ್ಲ, ವ್ಯಕ್ತಿಗಳ ಪ್ರವೇಶವಾದದ್ದು ಅರಗಿಸಿಕೊಳ್ಳಲಾಗದ ಸತ್ಯ. ಒಬ್ರು ಪ್ರೀತಿಯಿಂದಲೇ ಎಲ್ಲವನ್ನೂ ಗೆಲ್ಲಲು ಸಾಧ್ಯ ಎಂದರೆ, ಇನ್ನೊಬ್ರು ಮುಖದಲ್ಲಿರೋ ನಗುವೇ ಎಲ್ಲದಕ್ಕೂ ಪರಿಹಾರ ಅಂತಾರೆ.

ನನಗಂತೂ ಒಮ್ಮೆ ದಿಗ್ಬ›ಮೆಯಾಯಿತು. ಗುಲಾಬಿ ಹೂವಿನ ಗಿಡದಲ್ಲಿ ಮುಳ್ಳಿದ್ದರೂ ಹೂವಿನ ಅಂದದಿಂದಲೇ ಪರರ ಮನಸ್ಸನ್ನು ಗೆಲ್ಲುತ್ತದೆ. ಹಾಗೆಯೇ ನನಗೆ ಸಿಕ್ಕ ವ್ಯಕ್ತಿಗಳೂ ಚಹರೆಯಲ್ಲಿರೋ ನಗುವಿನಿಂದ ನನ್ನ ಮನಸ್ಸಿನ ನೋವನ್ನು ಮರೆಮಾಚಿಸಿಬಿಡುತ್ತಿದ್ದರು. ತಾಯಿಯಂತೆ ಅಕ್ಕರೆ ತೋರಿ, ಅಪ್ಪನಂತೆ ಗದರಿ, ಅಣ್ಣನಂತೆ ಮುದ್ದಾಡಿ ಮನಸ್ಸು ತುಂಬಾ ಸಿಹಿಯೇ ಹಂಚುತ್ತಿದ್ದರು. ನಾನಂತೂ ಆ ಮನಸ್ಸುಗಳ ಮಧ್ಯೆ ಖುಷಿಯಲ್ಲೇ ಬಂಧಿಯಾಗಿಬಿಟ್ಟಿದ್ದೆ.

ಬದುಕೇ ಹಾಗೆ ಅಲ್ವಾ? ಯಾವುದು, ಯಾವಾಗ, ಯಾರಿಗೆ ಸಿಗಬೇಕೋ ಅದು ಆ ಸೂಕ್ತ ಸಮಯಕ್ಕೆ ಸಿಗೋದು. ಬೇಕು ಬೇಡಗಳ ಮಧ್ಯೆ ಊಹಿಸದ ಪ್ರೀತಿ ಸಿಕ್ಕಾಗ ಯಾವ ಮನುಜ ಬೇಡ ಅನ್ನುತ್ತಾನೆ ಹೇಳಿ? ಹಾಗೆಯೇ ನಾನು ಕೂಡ ಸಿಕ್ಕ ಕಾಳಜಿಯ ಹೊದಿಕೆಯನ್ನು ಸರಿಸಲೇ ಇಲ್ಲ. ಇಷ್ಟೆಲ್ಲಾ ಹೇಳಿ ಇದರ ರೂವಾರಿಗಳನ್ನೇ ಪರಿಚಯ ಮಾಡದೇ ಹೋದರೆ ತಪ್ಪಾಗಬಹುದು ಅಲ್ವಾ?

ಬೆನ್ನ ತುಂಬಾ ಜವಾಬ್ದಾರಿ ಹೊತ್ತು, ಕಣ್ಣು ತುಂಬಾ ಕನಸು ಹೊತ್ತು, ಕಷ್ಟ ಸುಖದಲ್ಲಿ ಭಾಗಿಯಾಗಿ ಜೊತೆಯಲ್ಲೇ ನಿಂತ ಗೆಳೆಯ- ಅವನೊಬ್ಬನೇ ನಿಶಾಂತ್‌. ಮುಖ ತುಂಬಾ ನಗುವ ಚೆಲ್ಲಿ, ನಿಷ್ಕಲ್ಮಶ ಮನಸ್ಸಿಂದ ಕಾಳಜಿ ತೋರಿ, ಮುಗ್ಧತೆಯಿಂದಲೇ ಪ್ರೀತಿ ಹಂಚುವಾಕೆ ನನ್ನ ನಲ್ಮೆಯ ಅಕ್ಕ ನಿಶ್ಮಿತಾ.

ಪರಿಚಯದ ಆರಂಭ ತಿಳಿದಿಲ್ಲ, ಅಂತ್ಯದ ಹಾದಿಯೇ ಇಲ್ಲ. ಆದರೆ ಬಯಸದೆ ಸಿಕ್ಕ ಪ್ರೀತಿ ಮಾತ್ರ ವರ್ಣನೆಗೂ ಮೀರಿದ್ದು. ಅನಿರೀಕ್ಷಿತ ಸಂಬಂಧಗಳೇ ಹಾಗೆ ಎಲ್ಲವನ್ನು ಒಗ್ಗೂಡಿಸಿ ಚೆಂದದ ಬದುಕ ಕಟ್ಟುತ್ತವೆ. ಪ್ರೀತಿ ಅಂದರೆ ಮೋಸವಲ್ಲ ಬದಲಾಗಿ ಸಂಬಂಧದ ನಡುವಿರೋ ನಂಬಿಕೆಯಷ್ಟೇ, ಅಲ್ಲವೇ?

ಅರ್ಚನಾ

ವಿವಿ ಮಂಗಳೂರು

ಟಾಪ್ ನ್ಯೂಸ್

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾಣೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

9-uv-fusion

Importance: ಅನ್ನದ ಒಂದು ಅಗುಳಿನ ಮಹತ್ವ …

8-uv-fusion

UV Fusion: ಅತಿಯಾದ ಒಲವು ಒಳಿತಲ್ಲ

7-uv-fusion

UV Fusion: ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರಿಲಿ ಕೊಡೆ ಹಿಡಿದ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewq-ewq

Yadgir; ಮೇ.1 ರಂದು ಕಾಂಗ್ರೆಸ್ ನಾಯಕರ ಸಮಾಗಮ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.