Women: ನಿನಗೆ ಬೇರೆ ಹೆಸರು ಬೇಕೆ


Team Udayavani, Mar 21, 2024, 3:45 PM IST

12-uv-fusion

“ಯತ್ರ ನಾರ್ಯಸ್ತು ಪೂಜ್ಯಂತೆ ತತ್ರ ರಮಂತೆ ದೇವತಾಃ’ ಎಲ್ಲಿ ಹೆಣ್ಣನ್ನು ಗೌರವಿಸುತ್ತಾರೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ. ಸ್ತ್ರೀ ಎಂಬ ಪದವು ಸಂಸ್ಕೃತದಿಂದ ಬಂದಿದೆ. ಹೆಣ್ಣು, ನಾರಿ, ಚಾರಿಣಿ, ಧರಿತ್ರಿ, ಭೂಮಿ ಇನ್ನೂ ಹಲವು ನಾಮಗಳಲ್ಲಿ ಕರೆಸಿಕೊಳ್ಳುತ್ತಾಳೆ. ಸ್ತ್ರೀ ಸೃಷ್ಟಿಯ ಮೂಲ ನದಿಗಳ ಮೂಲ ದೇವತೆಗಳ ಸ್ವರೂಪ ಮತ್ತು ಸೃಷ್ಟಿಯ ಜನನಿ ಎಂದು ಹೋಲಿಕೆ ಮಾಡಲಾಗಿದೆ. ಕವಿಗಳು ಕವಿತೆ ಕವನ ಸಾಲುಗಳಲ್ಲಿ ಹೆಣ್ಣಿನ ವರ್ಣನೆಮಾಡಲಾಗಿದೆ.

ಸ್ತ್ರೀ ಸಹನೆ, ಮಮತೆ, ಕರುಣೆ, ವಾತ್ಸಲ್ಯ, ಆರೈಕೆ, ತ್ಯಾಗ, ಸತ್ಕಾರ, ತಾಳ್ಮೆ, ಪ್ರೀತಿ ಮತ್ತು ಸಾಂತ್ವನ ಹುಟ್ಟಿನ ಜತೆಗೆ ಮೇಲೈಸಿಕೊಂಡು ಬರುವವಳು.

ಡಾ| ಜಿ.ಎಸ್‌. ಶಿವರುದ್ರಪ್ಪ ಅವರ ಕವನದ ಸಾಲುಗಳಲ್ಲಿ ಅದೆಷ್ಟು ಚಂದದ ವರ್ಣನೆ ಸ್ತ್ರೀ ಪದಕ್ಕೆ ಗರಿಮೆ ತಂದು ಕೊಟ್ಟಿದೆ ಅಂದರೆ ತಪ್ಪಾಗಲಾರದು!

ಆಕಾಶದ ನೀಲಿಯಲ್ಲಿ

ಚಂದ್ರ ತಾರೆ ತೊಟ್ಟಿಲಲ್ಲಿ

ಬೆಳಕನಿಟ್ಟು ತೂಗಿದಾಕೆ

ನಿನಗೆ ಬೇರೆ ಹೆಸರು ಬೇಕೆ

ಸ್ತ್ರೀ ಅಂದರೆ ಅಷ್ಟೇ ಸಾಕೆ

ಸ್ತ್ರೀ ಅಂದರೆ ಅಷ್ಟೇ ಸಾಕೆ? ಹೆಣ್ಣು ಗಂಡಸಿನ ಸುತ್ತ ಜೀವಿಸುತ್ತಾಳೆ. ಅಮ್ಮನಾಗಿ, ಮಗಳಾಗಿ, ಅಕ್ಕನಾಗಿ, ತಂಗಿಯಾಗಿ, ಸ್ನೇಹಿತೆಯಾಗಿ, ಸ್ವೋದ್ಯೋಗಿಯಾಗಿ  ಮನ-ಮನೆಗಳಲ್ಲಿ ದೀಪ ಹಚ್ಚಿ, ಹಸಿವಿಗೆ ಅನ್ನ ಉಣಿಸಿ ಜೀವ ತುಂಬುತ್ತಾಳೆ. ಆದರೂ ಅವಳಿಗೆ ಅತ್ಯಾಚಾರಗಳಂತಹ ಶೋಷಣೆ, ದೌರ್ಜನ್ಯ ಮತ್ತು ದಬ್ಟಾಳಿಕೆ ತಪ್ಪಿದ್ದಲ್ಲ! ವರ್ಷದಿಂದ ವರ್ಷಕ್ಕೆ ಮಹಿಳೆಯರ ದೌರ್ಜನ್ಯ ಹೆಚ್ಚಾಗುತ್ತಿರುವುದು ವಿಷಾದನೀಯ. ಹೆಣ್ಣಿನ ಸಬಲೀಕರಣವಾಗಬೇಕು, ಗೌರವ ಸಿಗಬೇಕು ಮತ್ತು ಸ್ಥಾನ ಮಾನಗಳು ಸಿಗಬೇಕು. ಹೆಣ್ಣು ಅಡಿಗೆ ಮನೆಗೆ ಅಷ್ಟೇ ಸೀಮಿತವಾಗಿಲ್ಲ.

ಅವಳು ಗಂಡಸಿನ ಸಮಾನವಾಗಿ ಸ್ವಾತಂತ್ರಳಾಗಿ ಹೋರಾಡುವ ಹಕ್ಕು ಸಿಗಬೇಕು. ಬರೀ ಹೆಸರಿಗಷ್ಟೇ ಹೆಣ್ಣಿನ ಸಬಲೀಕರಣವಾದರೆ ಸಾಲದು ಜತೆಗೆ  ಶೋಷಣೆ, ದೌರ್ಜನ್ಯ ಅತ್ಯಾಚಾರಗಳು ಕ್ಷೀಣಿಸಬೇಕು. ಕಾಮುಕ ಕಣ್ಣುಗಳಿಂದ ನೋಡುವ ವಿಕೃತ ಗಂಡಸಿನ ಕುಲಕ್ಕೆ ಅರ್ಥವಾಗಬೇಕು. ಹೆತ್ತ ತಾಯಿ ಹೆಣ್ಣು, ಜೀವ ಕೊಟ್ಟು ಹಾಲು ಉಣಿಸಿದವಳು ಹೆಣ್ಣು ಅವಳನ್ನು ಗೌರವದಿಂದ ಕಂಡರೆ ದೇವತೆಗಳ ಮನಸ್ಸನ್ನು ಪ್ರಸನ್ನಗೊಳಿಸಿದಂತೆ.

ಹೆಣ್ಣೆಂದರೆ ಅವಳೆದೆಯ ನೋವ ಬಚ್ಚಿಟ್ಟು ನಗುವ ಒಡವೆಯ ಧರಿಸಿ ಸುತ್ತ ಇರುವವರ ನಗಿಸುವಳು! ಅವಳನ್ನು ಗೌರವಿಸಿ ಅರ್ಥ ಮಾಡಿಕೊಳ್ಳುವ ಬಯಕೆ ಅಷ್ಟೇ ಬಯಸುವಳು ಬೇರೇನೂ ಬಯಸದವಳು ಹೆಣ್ಣು.

ಉಸಿರು ಕೊಟ್ಟು ಜೀವ ಕೊಡುವ ಅಮೃತಬಳ್ಳಿ ಹೆಣ್ಣು. ಹೆಣ್ಣನ್ನು ಗೌರವಿಸಿ ನಿಮ್ಮ ಮನೆ ಮಗಳಂತೆ ಅವಳ ರಕ್ಷಣೆಯ ಹೊಣೆ ಹೊತ್ತು ಕಾಪಾಡಿ ಎಂದಷ್ಟೇ ಬೇಡಿಕೊಳ್ಳುವಳು ಹೆಣ್ಣು.

-ವಾಣಿ

ಮೈಸೂರು

ಟಾಪ್ ನ್ಯೂಸ್

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.