ಲವರ್​ ಬಾಯ್ ಆದ “ಅಮರ್’: ಬ್ಯೂಟಿಫುಲ್ ಟ್ರೈಲರ್ ವೀಕ್ಷಿಸಿ

ರೆಬೆಲ್‌ಸ್ಟಾರ್‌ ಅಂಬರೀಶ್‌ ಪುತ್ರ ಅಭಿಷೇಕ್‌ ನಾಯಕರಾಗಿ ನಟಿಸುತ್ತಿರುವ “ಅಮರ್‌’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಲವರ್​ ಬಾಯ್​ ಆಗಿ ಯಂಗ್ ರೆಬೆಲ್ ಸ್ಟಾರ್ ಮಿಂಚಿದ್ದಾರೆ. ಅಲ್ಲದೇ 2ನಿಮಿಷ 9ಸೆಕೆಂಡ್‍ಗಳು ಇರುವ ಈ ಟ್ರೈಲರ್​ನಲ್ಲಿ ಅಭಿಷೇಕ್ ಹಾಗೂ ತಾನ್ಯಾಹೋಪ್ ನಡುವಿನ ಪ್ರೀತಿಯ ಪಯಣದ ಆರಂಭ ಹಾಗೂ ಆ ಮನಸ್ಸುಗಳ ನಡುವಿನ ಪ್ರೀತಿಯ ಹುಟ್ಟಿನ ದೃಶ್ಯಗಳನ್ನು ತೋರಿಸಲಾಗಿದ್ದು, ಇದೊಂದು ಪಕ್ಕಾ ಲವ್ ಸ್ಟೋರಿ ಎನ್ನುವುದು ತಿಳಿಯುತ್ತದೆ. ವಿಶೇಷವಾಗಿ ಈ ಚಿತ್ರದಲ್ಲಿ ಅಂಬರೀಶ್ ಅಭಿನಯದ “ಒಲವಿನ ಉಡುಗೊರೆ’ ಸಿನಿಮಾದ ಹಾಡನ್ನೂ ಬಳಸಿಕೊಳ್ಳಲಾಗಿದ್ದು, ಜತೆಗೆ ಸ್ಯಾಂಡಲ್‍ವುಡ್‍ನ ಡಿ-ಬಾಸ್ ಚಾಲೆಂಜಿಂಗ್ ಸ್ಟಾರ್​ ದರ್ಶನ್​ ಸಹ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಸಂದೇಶ್‌ ಕಂಬೈನ್ಸ್‌ ಮೂಲಕ ಸಂದೇಶ್‌ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ನಾಗಶೇಖರ್‌ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಚಿತ್ರದ ಹಾಡುಗಳಿಗೆ ಅರ್ಜುನ್‌ ಜನ್ಯ ಸಂಗೀತ ಸಂಯೋಜನೆಯಿದ್ದು, ಸತ್ಯ ಹೆಗಡೆ ಛಾಯಾಗ್ರಹಣ, ಜೊ.ನಿ ಹರ್ಷ ಸಂಕಲನ ಕಾರ್ಯವಿದೆ. ಚಿತ್ರದ ಹಾಡುಗಳಿಗೆ ಧನಂಜಯ್‌, ಇಮ್ರಾನ್‌, ಕಲೈ ನೃತ್ಯ ಸಂಯೋಜನೆಯಿದ್ದು, ರವಿವರ್ಮ, ಥ್ರಿಲ್ಲರ್‌ ಮಂಜು, ಅಂಬು ಅರಿವು ಸಾಹಸ ನಿರ್ದೇಶನವಿದೆ. ಅಭಿಷೇಕ್‌ಗೆ ನಾಯಕಿಯಾಗಿ ತಾನ್ಯಾ ಹೋಪ್‌ ಜೋಡಿಯಾಗಿದ್ದು, ಉಳಿದಂತೆ ಸುಧಾರಾಣಿ, ದೇವರಾಜ್‌, ದೀಪಕ್‌ ಶೆಟ್ಟಿ, ಅರುಣ್‌ ಸಾಗರ್‌, ಚಿಕ್ಕಣ್ಣ, ಸಾಧುಕೋಕಿಲ, ನಿರೂಪ್‌ ಭಂಡಾರಿ ಮುಂತಾದ ಕಲಾವಿದರ ತಾರಾಗಣವಿದೆ. ಚಿತ್ರದ ಬ್ಯೂಟಿಫುಲ್ ಟ್ರೈಲರ್ ವೀಕ್ಷಿಸಿ.


Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.

ಹೊಸ ಸೇರ್ಪಡೆ

  • ರಾಯಚೂರು: ಪಡಿತರ ಚೀಟಿ ದುರ್ಬಳಕೆ ತಡೆಗೆ ಮುಂದಾಗಿರುವ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಸಾಕಷ್ಟು ಸವಾಲುಗಳು ಎದುರಾಗಿದ್ದು, ಗ್ರಾಹಕರಿಂದ ಅಸಹಕಾರ ಹೆಚ್ಚಾಗಿದೆ. ಈವರೆಗೆ...

  • ಹೈದರಾಬಾದ್: ಇಲ್ಲಿನ ರಾಚಕೊಂಡ ಪೊಲೀಸರು ಸುಮಾರು 8,900 ಕೆಜಿಯಷ್ಟು ಸ್ಪೋಟಕ ಸಾಮಾಗ್ರಿಗಳನ್ನು ವಶಕ್ಕೆ ಪಡೆದಿದ್ದು, ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಶನಿವಾರ...

  • ವಿಜಯಪುರ: ನಾಗರಿಕತೆಯೇ ಕಲ್ಪನಾತೀತ ಎನ್ನುವ ಕಾಲಘಟ್ಟದಲ್ಲಿ ನಾಗರಿಕತೆಯ ಕಲ್ಪನೆ ನೀಡಿ ಪವಿತ್ರ ರಾಮಾಯಣ ಮಹಾಕಾವ್ಯ ರಚಿಸಿದ ಮಹಾನ್‌ ಜ್ಞಾನಿ ಮಹರ್ಷಿ ವಾಲ್ಮೀಕಿ....

  • ಬಸವಕಲ್ಯಾಣ: 18ನೇ ಕಲ್ಯಾಣ ಪರ್ವ ನಿಮಿತ್ತ ರವಿವಾರ ನಡೆದ ಬಸವಣ್ಣನವರ ಭಾವಚಿತ್ರ ಹಾಗೂ ವಚನ ಸಾಹಿತ್ಯ ಮೆರವಣಿಗೆಗೆ ಚಪ್ಪಲಿ ಪ್ರದರ್ಶನ ಮಾಡಿರುವುದನ್ನು ರಾಷ್ಟ್ರೀಯ...

  • „ಶಶಿಧರ್‌ ಶೇಷಗಿರಿ ಮಾಯಕೊಂಡ: ಸತತ 4-5 ವರ್ಷಗಳಿಂದ ಮಳೆಯಿಲ್ಲದೆ, ತೀವ್ರ ಅಂತರ್ಜಲ ಕುಸಿತದಿಂದ ನಲುಗಿ ಹೋಗಿದ್ದ ಮಾಯಕೊಂಡ ಮತ್ತು ಆನಗೋಡು ಹೋಬಳಿಯಲ್ಲಿ ಕಳೆದ...