ಶಿಕ್ಷಕನಿಗೆ ಗೌರವ ತೋರಿ ಪ್ರಯಾಣಿಕರನ್ನು ಭಾವುಕರಾಗಿಸಿದ ಪೈಲಟ್
Team Udayavani, Nov 30, 2018, 10:23 AM IST
ಬೆಳೆದು ಎಷ್ಟೇ ದೊಡ್ಡವರಾಗಿದ್ದರೂ ತಮ್ಮ ಶಿಕ್ಷಕರನ್ನು ಅಚಾನಕ್ ಆಗಿ ಭೇಟಿ ಮಾಡುವ ಸಂದರ್ಭ ಯಾರಿಗಾದರೂ ವಿಶೇಷವಾಗಿರುತ್ತದೆ. ಟರ್ಕಿಶ್ ಏರ್ಲೈನ್ಸ್ ನಲ್ಲಿ ವಿದ್ಯಾರ್ಥಿ ಹಲವಾರು ವರ್ಷಗಳ ನಂತರ ತನ್ನ ಶಿಕ್ಷಕನನ್ನು ಸಂಧಿಸುವ ಮನ ಮಿಡಿಯುವ ಸನ್ನಿವೇಶ ನಡೆದಿದೆ. ವಿಮಾನದ ಪೈಲಟ್ಗೆ ತನ್ನ ಶಿಕ್ಷಕ ಇದೇ ವಿಮಾನದಲ್ಲಿ ಪ್ರಯಾಣಿಸುತ್ತಿರುವುದು ತಿಳಿಯಿತು. ಅವರು ಕಾಕ್ಪಿಟ್ನಿಂದಲೇ ತಮ್ಮ ಶಿಕ್ಷಕನಿಗೆ ಶುಭಾಶಯ ಘೋಷಿಸಿದ್ದಾರೆ. ಬಳಿಕ ವಿಮಾನದ ಸಿಬ್ಬಂದಿ ಹೂಗುಚ್ಛದೊಂದಿಗೆ ಬಂದು ಅವರಿಗೆ ಶುಭಾಶಯ ಹೇಳಿ ಗೌರವ ಸೂಚಕವಾಗಿ ಅವರ ಕೈಗೆ ಮುತ್ತಿಕ್ಕಿದ್ದಾರೆ. ಬಳಿಕ ಪೈಲಟ್ ಬಂದು ತಮ್ಮ ಗುರುಗಳನ್ನು ಆಲಿಂಗಿಸಿಕೊಂಡಿದ್ದಾರೆ. ಶಿಕ್ಷಕ ಸಂತೋಷದಿಂದ ಕಣ್ಣೀರಾದರೆ, ಪ್ರಯಾಣಿಕರು ಈ ಹೃದಯಸ್ಪರ್ಶಿ ದೃಶ್ಯ ನೋಡಿ ಭಾವುಕರಾಗಿ ಕಣ್ಣೀರಿಟ್ಟರು.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್
Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್
Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್ ಕೋಡ್ ಅಂಟಿಸಿದ್ದ ಉದ್ಯಮಿ ಸೆರೆ