ಚಾಲಕನ ಅವಿವೇಕಕ್ಕೆ ಬೂದಿಯಾದ ಸಾಮಗ್ರಿ
Team Udayavani, Dec 1, 2018, 5:53 AM IST
ಸೇದಿದ ಸಿಗರೇಟನ್ನು ಬಿಸಾಡುವ ಮುನ್ನ ಎಚ್ಚರ ವಹಿಸ ಬೇಕೆಂಬುದಕ್ಕೆ ಚೀನಾದ ಪ್ರಸಂಗವೊಂದು ಸಾಕ್ಷಿಯಾಗಿದೆ. ಝಾಂಗ್ಝೌ ಎಂಬ ಊರಿನ ಹೊರವಲಯದ ಹೆದ್ದಾರಿ ಯಲ್ಲಿ ಟ್ರಕ್ ಚಲಾಯಿಸಿಕೊಂಡು ಹೋಗುತ್ತಿದ್ದ ವು ಎಂಬಾತ ತಾನು ಸೇದುತ್ತಿದ್ದ ಸಿಗರೇಟನ್ನು ಸೇದಿ ಮುಗಿದ ಮೇಲೆ ಆಚೆ ಬಿಸಾಕಿದ್ದಾನೆ. ಅದು ಗಾಳಿಗೆ ರೊಯ್ಯನೆ ಬಂದು ಟ್ರಕ್ ಹಿಂಬದಿಯಲ್ಲಿದ್ದ ಸಾಮಗ್ರಿಗಳ ಲೋಡ್ ಮೇಲೆ ಬಿದ್ದಿದೆ. ಗಾಳಿಯಿಂದಾಗಿ ಅದರ ಕಿಡಿಗಳು ದೊಡ್ಡದಾಗಿ ಕೊನೆಗೆ ಬೆಂಕಿಯೇ ಹೊತ್ತಿಕೊಂಡಿದೆ! ಸ್ವಲ್ಪ ದೂರ ಸಾಗಿದ ನಂತರ ವುಗೆ ಇದರ ಅರಿವಾಗಿ ಟ್ರಕ್ ನಿಲ್ಲಿಸಿದ್ದಾನೆ. ಸ್ಥಳೀ ಯರ ಸಹಾಯದಿಂದ ಬೆಂಕಿ ನಂದಿಸಿದ್ದಾನಾದರೂ ಆತ ಸಾಗಿಸುತ್ತಿದ್ದ ಸಾಮಗ್ರಿಗಳು ಭಸ್ಮವಾಗಿವೆ.