ಅಮೆರಿಕದಲ್ಲಿ ಇಲಿಗಳ ಕೆಫೆ ಆರಂಭ!
Team Udayavani, May 25, 2017, 7:56 AM IST
ಜನರು ಇಲಿಗಳನ್ನು ಮನೆಯಲ್ಲಿ ಸಾಕಲು ಆರಂಭಿಸಿದ್ದು ಎಲ್ಲರಿಗೂ ತಿಳಿದೇ ಇದೆ. ಬೆಕ್ಕು, ನಾಯಿಗಳಿಗಾಗಿ ಕೆಫೆಗಳು ತೆರೆದ ಬಳಿಕ ಇಲಿಗಳಿಗಾಗಿ ಕೆಫೆಗಳು ಆರಂಭವಾಗದಿದ್ದರೆ ಹೇಗೆ? ಸಾಕು ಇಲಿಗಳಿಗಾಗಿಯೇ ಅಮೆರಿಕದ ಸ್ಯಾನ್ ಜೋಸ್ನಲ್ಲಿ ಕೆಫೆ ಆರಂಭವಾಗಿದೆ. ಇಲ್ಲಿ ಇಲಿಗಳಿಗಾಗಿಯೇ ವಿಶೇಷ ಸ್ವಾದದ ಕಾಫಿ, ಪೇಸ್ಟ್ರೀಗಳನ್ನು ಈ ಕೆಫೆ ತಯಾರಿಸುತ್ತದೆ. ಜೊತೆಗೆ ಕೆಫೆಯಲ್ಲೂ ಸಾಕಷ್ಟು ಇಲಿಗಳೂ ಇರುತ್ತವೆ.
ಇಲಿಗಳು ಇಲ್ಲಿಯ ವಿಶೇಷ ತಿನಿಸುಗಳನ್ನು ತಿಂದ ಬಳಿಕ ಕೆಫೆಯ ಇಲಿಗಳ ಜೊತೆಗೆ ಹೊರಗೆ ಸುತ್ತಾಡಬಹುದು. ಒಂದು ಇಲಿಗೆ ಕೆಫೆಯಲ್ಲಿ ಪಡೆಯುವ ಶುಲ್ಕ 49 ಡಾಲರ್ಗಳು. ಹಾದಿಬೀದಿಯಲ್ಲೆಲ್ಲಾ ಸಿಕ್ಕ ಇಲಿಗಳನ್ನು ಕೆಫೆಗೆ ಕರೆತರುವಂತಿಲ್ಲ ಎಂದು ಕೆಫೆ ಮಾಲೀಕರು ಹೇಳಿದ್ದಾರೆ