ಕತ್ತಿಯ ಅಂಚಿನಿಂದ ಕಾಡಿಗೆ ಹಾಕುವ ಹುಡುಗಿ ವೈರಲ್: Watch
Team Udayavani, Mar 11, 2017, 3:50 AM IST
ಅಪಾಯಕಾರಿ ಸಾಹಸಗಳನ್ನು ಪ್ರದರ್ಶಿಸಲು ಮಹಿಳೆಯರಿಗೆ ಸಾಧ್ಯವಿಲ್ಲ ಅದರಲ್ಲೂ ಭಾರತೀಯ ಮಹಿಳೆಯರಿಗೆ ಸಾಹಸವೆಲ್ಲಾ ಆಗಿ ಬರುವುದಿಲ್ಲ ಎಂಬ ಅಭಿಪ್ರಾಯ ನಿಮ್ಮಲ್ಲಿ ಇದ್ದರೆ ಅದನ್ನು ಬದಲಿಸಿಕೊಳ್ಳಿ. ರಾಜಸ್ಥಾನದ ಅನಾಮಿಕ ಕೊಠಾರಿ ಎಂಬ 14ರ ಪೋರಿ, ಹರಿತವಾದ ಚಾಕುವನ್ನು ಮಂಡಿ ಮಧ್ಯೆ ಇರಿಸಿ ಕಣ್ಣಿಗೆ ಕಾಡಿಗೆ ಹಚ್ಚಿಕೊಳ್ಳುತ್ತಾಳೆ.
ಇಷ್ಟೇ ಅಲ್ಲ ಮೈ ಜುಂ ಎನ್ನುವಂಥ ಅನೇಕ ಸಾಹಸವನ್ನು ಆಕೆ ಪ್ರದರ್ಶಿಸುತ್ತಾಳೆ. ಕೇವಲ 2 ವರ್ಷಗಳಿಂದೀಚೆಗೆ ಯೋಗ ಕಲಿಕೆ ಆರಂಭಿಸಿರುವ ಈಕೆ ಯೋಗದ ವಿವಿಧ ಭಂಗಿಗಳಲ್ಲಿ ಏನಾದರೊಂದು ಸಾಹಸ ಪ್ರದರ್ಶನಮಾಡುತ್ತಾಳೆ. ಇಂಡಿಯಾಸ್ ಗಾಟ್ ಟ್ಯಾಲೆಂಟ್ ಶೋನಲ್ಲಿ ಕಾಡಿಗೆ ಹಾಕುವ ಸಾಹಸ ಪ್ರದರ್ಶಿಸಿದ್ದಾಳೆ.