ನಮ್ಮ ನಿರ್ಧಾರಗಳ ಮೂಲ ತರ್ಕದಲ್ಲಿ ಇರು ವುದು ಉತ್ತಮ, ಭಾವನೆಗಳಲ್ಲಿ ಅಲ್ಲ.

- ಕೋಟ್ಸ್‌ ಗಾರ್ಡನ್‌

ನೋಡ್ತಾ ಇರಿ, ಮ್ಯಾಚ್‌ ಸೋಲಲಾರಂಭಿಸಿದ ತಕ್ಷಣ ಬಾಂಗ್ಲಾದೇಶಿಯರು ಮಾಸ್ಕ್ ಹಾಕಿಕೊಂಡು, ತಮ್ಮ ಸೋಲಿನ ಹೊಣೆಯನ್ನು ವಾಯುಮಾಲಿನ್ಯದ ಮೇಲೆ ಹಾಕುತ್ತಾರೆ!

- ಜಮಾಲ್‌ ಕಿಂಗ್‌ ಸಿಂಗ್‌

ನಾನು ಪತ್ರಿಕೋದ್ಯಮ ತ್ಯಜಿಸಿದ್ದೇಕೆ ಎಂದರೆ ನನ್ನ ಮನಸ್ಸು ಹಾಳಾಗುತ್ತಿತ್ತು ಅದಕ್ಕೆ ನಾನು ಸಿಗರೇಟ್‌ ಬಿಟ್ಟಿದ್ದೇಕೆ ಎಂದರೆ, ಅದು ನನ್ನ ಆರೋಗ್ಯ ಹಾಳು ಮಾಡುತ್ತಿತ್ತು ಅದಕ್ಕೆ. ನಾನು ದೆಹಲಿ ತೊರೆದಿದ್ದೇಕೆ ಎಂದರೆ, ಅದು ನನ್ನ ಆರೋಗ್ಯ ಮತ್ತು ಮನಸ್ಸು ಎರಡನ್ನೂ ಹಾಳು ಮಾಡುತ್ತಿತ್ತು ಅದಕ್ಕೆ.

- ರಾಜೇಶ್‌ ಮೊಹಾಪಾತ್ರಾ

ನಾನು ಆಂಧ್ರ ಪ್ರದೇಶದಿಂದ ಬಂದವನು. ಆದರೆ ಕರ್ನಾಟಕದಲ್ಲಿ ನೆಲೆಸಿದ್ದೇನೆ. ನಾನೂ ಕನ್ನಡಿಗನೆಂದು ಹೆಮ್ಮೆಯಿಂದ ಹೇಳಿ ಕೊಳ್ಳುತ್ತೇನೆ. ರಾಜ್ಯೋತ್ಸವದ ಶುಭಾಷಯಗಳು.

- ಎನ್‌. ಸೀನು

ಕನ್ನಡದ ಹುಡುಗನೊಬ್ಬನ ಪ್ರಶ್ನೆಗೆ 'ಮೂವತ್ತು ಕಣಪ್ಪ' ಎಂದು ನಾನು ಉತ್ತರಿಸಿದೆ.. ಅವನು ಅವರಮ್ಮನ ಕಡೆಗೆ ತಿರುಗಿ ಏನು ಹಂಗಂದ್ರೆ ಎನ್ನು ವಂತೆ ನೋಡಿದ. ಅವನಮ್ಮ "ಥರ್ಟಿ' ಎಂದು ಹೇಳಿದರು. ಇಂಗ್ಲಿಷ್‌ ಕಲಿಸಿ, ಆದರೆ ಕನ್ನಡವನ್ನು ಅಳಿಸುವ ಮಟ್ಟಕ್ಕೆ ಬೇಡ.

- ಮಲ್ಲಿಕಾರ್ಜುನ ಬಿ

ಇವತ್ತು ದೆಹಲಿಯಲ್ಲಿ ನೀವು ಇದ್ದರೆ ಸಿಗರೇಟು ಸೇದುವವರು ಅಥವಾ ಸೇದದೇ ಇರುವವರೇ ಆಗಲಿ, ಇವತ್ತು 12 ಸಿಗರೇಟುಗಳನ್ನು ಪರೋಕ್ಷವಾಗಿ ಸೇದಿದ ಅನುಭವ ಖಚಿತ.

- ಪ್ರವೀಣ್‌ ಕಸ್ವಾನ್‌

ಜಮ್ಮು-ಕಾಶ್ಮೀರಕ್ಕೆ ಇಂದಿನಿಂದ ಶಾಪ ವಿಮೋಚನೆ! ಹಿಂದಿನ ಯಾವ ಸರ್ಕಾರಕ್ಕೂ ಸಾಧ್ಯವಾಗದಂಥ ಸಾಧನೆ ಮಾಡಿದ ಮೋದಿ ಆ್ಯಂಡ್‌ ಟೀಮ್‌ಗೆ ಹ್ಯಾಟ್ಸ್‌ ಆಫ್!

- ಹಾರ್ದಿಕ್‌ ಸುನೈನ್‌

ಮನುಷ್ಯ ಕಲ್ಲಿನಂತಲ್ಲ, ನೀರಿನಂತೆ ಇರಬೇಕು. ಬದಲಾವಣೆಗೆ, ಹೊಸತನಕ್ಕೆ ಸದಾ ತೆರೆದುಕೊಳ್ಳಬೇಕು.

- ರಾಬಿನ್‌ ಶರ್ಮಾ

ಯಾವ ವಿಷಯದಲ್ಲಿ ಯಾರಿಗೆ ಏನೂ ಗೊತ್ತಿರುವುದಿಲ್ಲವೋ, ಅಂಥವರು ಟ್ವಿಟರ್‌ನಲ್ಲಿ ಮಾತ್ರ ಆ ವಿಚಾರದ ಪರಿಣಿತರಂತೆ ವರ್ತಿಸುತ್ತಾರೆ.

- ಸಾರ್ಟೆಡ್‌ ಚಾವೋಸ್‌

ರಾಜ್ಯದ ಮತದಾರರು ಜಾತಿ ಬಿಟ್ಟು ಯೋಚನೆ ಮಾಡುತ್ತಿದ್ದಾರೆ, ಲಿಂಗಾಯತರು ಯಡಿಯೂರಪ್ಪನವರಿಂದ, ಒಕ್ಕಲಿಗರು ಜೆಡಿಎಸ್‌ ಪಕ್ಷದಿಂದ ದೂರವಾಗುತ್ತಿದ್ದಾರೆ ಎಂಬ ಗೆಳೆಯರ ಮಾತಿಗೆ ನಾನು ಸಹಮತ ಸೂಚಿಸಿದ್ದು ನಿಜ. ಜನ ಜಾತ್ಯತೀತರಾಗುತ್ತಿದ್ದಾರೆ ಎಂದು ಹೇಳಿದ್ದರಲ್ಲಿ ಏನು ತಪ್ಪಿದೆ?

- ಸಿದ್ದರಾಮಯ್ಯ

ಸಿದ್ದರಾಮಯ್ಯನವರೇ, ಜನ ಜಾತ್ಯತೀತರಾಗುತ್ತಿದ್ದಾರೆ ಅಂದರೆ ಒಳ್ಳೇದು. ಆದರೆ ಅಹಿಂದ ಹೆಸರಲ್ಲಿ ಸಮಾಜವನ್ನ ಒಡೆಯೊದು ಸರೀನಾ?

- ಬಾಲಾಜೈಹಿಂದ್‌

ನನ್ನದೊಂದು ಪ್ರಶ್ನೆ. ಉಚಿತ ಇಂಟರ್ನೆಟ್‌ ಸಂಪರ್ಕವು ಭಾರತದ ಉತ್ಪಾದಕತೆಯನ್ನು ಹೆಚ್ಚಿಸಿದೆಯೋ, ತಗ್ಗಿಸಿದೆಯೋ?

- ಶಮಿಕಾ ರವಿ

ನನಗೆ ಯಾವ ಪ್ರಶ್ನೆ ಬೇಕಿದ್ದರೂ ಕೇಳಿ. ಸಾಧ್ಯವಾದರೆ, "ಯಾಕೆ' ಎಂದು ಆರಂಭವಾಗುವ ಪ್ರಶ್ನೆಗಳನ್ನೇ ಕೇಳಿ ಪ್ಲೀಸ್‌.

- ಗಬ್ಬರ್‌

ಈ ಜಗತ್ತಿನಲ್ಲಿ ಅತ್ಯಂತ ಸುಂದರವಾದದ್ದೆಂದರೆ, ಮಗುವೊಂದರ ಮುಗುಳ್ನಗು. ಎರಡನೆಯ ಸುಂದರ ವಿಷಯವೆಂದರೆ, ಆ ಮುಗುಳ್ನಗುವಿಗೆ ನೀವೇ ಕಾರಣ ಎಂದು ಗೊತ್ತಾಗುವುದು.

- ವಾಲಾ ಅಪ್ಜರ್

ಜನ ಮಳಿಗೆಗಳಿಂದ ಚಿನ್ನ ಏಕೆ ಖರೀದಿಸುತ್ತಿಲ್ಲ ಗೊತ್ತಾ? ಆರ್‌ಬಿಐ ಚಿನ್ನ ಮಾರಾಟ ಮಾಡುತ್ತಿದೆ. ಜನ ನೇರವಾಗಿ ಆರ್‌ಬಿಐನಿಂದಲೇ ಚಿನ್ನ ಖರೀದಿಸುತ್ತಿದ್ದಾರೆ.

- ಅನ್ಶಾ ಶರ್ಮಾ

ಬಿಜೆಪಿಯು ಹರ್ಯಾಣದಲ್ಲಿ ಅಧಿಕಾರಕ್ಕೆ ಮತ್ತೆ ಬರಲು ಸಫ‌ಲವಾಗಿರಬಹುದು. ಆದರೆ, ಮೋದಿ ಹೆಸರಲ್ಲೇ ಚುನಾವಣೆ ಗೆಲ್ಲಬಹುದು ಎಂಬ ರಾಜ್ಯ ಬಿಜೆಪಿ ನಾಯಕರ ಭ್ರಮೆಯನ್ನು ಈ ಫ‌ಲಿತಾಂಶ ಒಡೆದುಹಾಕಿದೆ.

- ದಿವ್ಯಾಂಶು ತೇಜ್‌

ನೀವೇನನ್ನಾದರೂ ಅತ್ಯಂತ ಉತ್ಕಟವಾಗಿ ಬಯಸಿದರೆ ಅದನ್ನುಒದಗಿಸಲು ಇಡೀ ವಿಶ್ವವೇ ಒಂದಾಗಿ ನಿಲ್ಲುತ್ತದೆ.

- ಪೌಲೋ ಕೋಲ್ಹೋ

ಬುದ್ಧನಿಂದ ಗಾಂಧಿವರೆಗೂ "ಏಷ್ಯಾದ ಬೆಳಕು' ಪ್ರಪಂಚಕ್ಕೆ ಸರಿಯಾದ ದಾರಿ ತೋರುತ್ತಲೇ ಇದೆ. ಇದು ಶಾಂತಿ, ಸಹಬಾಳ್ವೆ ಮತ್ತು ಸಮೃದ್ಧಿಯೆಡೆಗಿನ ನಮ್ಮ ದಾರಿಯನ್ನು ಬೆಳಗುತ್ತಲೇ ಇರುತ್ತದೆ.

- ರಾಮನಾಥ ಕೋವಿಂದ್‌, ರಾಷ್ಟ್ರಪತಿ

ದೀಪಾವಳಿ ಹಬ್ಬದ ಸಮಯದಲ್ಲಿ ಎಲ್ಲರೂ ಆಭರಣ, ಬಟ್ಟೆ ಖರೀದಿಸುತ್ತಿದ್ದರೆ, ಹರ್ಯಾಣದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಎಂಎಲ್‌ ಎಗಳನ್ನು ಖರೀದಿಸಲು ಪೈಪೋಟಿಗೆ ಬಿದ್ದಿವೆ.

- ಪನ್‌ಸ್ಟರ್‌

ಪ್ರತಿ ದಿನವೂ ಹೊಸತನ್ನು ಕಲಿಯಿರಿ. ಅನುಭವವೇ ಮನುಷ್ಯನನ್ನು ಸುಂದರವಾಗಿ ರೂಪಿಸುತ್ತದ್ದೆ

- ಟ್ರೂಕೋಟ್ಸ್‌

ಕಾಂಗ್ರೆಸ್‌ ನಾಯಕರಾದ ಡಿ.ಕೆ. ಶಿವಕುಮಾರ್‌ರವರಿಗೆ ಜಾಮೀನು ದೊರಕಿರುವುದು ತಿಳಿದು ಸಂತೋಷವಾಯಿತು. ಆದಷ್ಟು ಬೇಗ ಅವರು ಆರೋಪ ಮುಕ್ತರಾಗಿ ಪಕ್ಷದ ಬಲವರ್ಧನೆಗೆ ತೊಡಗಿಸಿಕೊಳ್ಳಲೆಂದು ಆಶಿಸುತ್ತೇನೆ.

- ಎಸ್‌.ಆರ್‌. ಪಾಟೀಲ್‌

ಕಷ್ಟಗಳ ಹಾದಿಯಲ್ಲಿ ಸಾಗದ ವ್ಯಕ್ತಿ ಉತ್ತಮ ಮನುಷ್ಯನಾಗಿ ರೂಪುಗೊಳ್ಳಲಾರ.

- ಜೆನ್‌ ಸೇ

ಹರ್ಯಾಣದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗುತ್ತದೆ ಎಂದು ಯಾವುದೋ ಸಮೀಕ್ಷೆ ಹೇಳಿದೆಯಂತೆ. ಇದನ್ನು ನೋಡಿ ಟಿವಿ ವೀಕ್ಷಕರು ಮತ್ತು ಬಿಜೆಪಿಗಿಂತಲೂ ಹೆಚ್ಚು ಕಾಂಗ್ರೆಸ್‌ಗೆ ಶಾಕ್‌ ಆಗಿದೆ!

- ಆಕಾಶ್‌ ಬ್ಯಾನರ್ಜಿ

ಭಾರತ ಕ್ರಿಕೆಟ್‌ ತಂಡದ ಪ್ರದರ್ಶನವನ್ನು ನೋಡಿದರೆ, 90ರ ದಶಕದ ಆಸ್ಟ್ರೇಲಿಯನ್‌ ತಂಡ ನೆನಪಾಗುತ್ತದೆ.

- ಅನಿರ್ಬಾನ್‌ ಚೌಧರಿ

ಹೃದಯವೆಂಬುದು ಭಾವನೆಗಳ ದಾಸ. ಅದರ ಮಾತಿಗೆ ತರ್ಕದ ಆಧಾರ ಕಡಿಮೆಯೇ.

- ರಾಬಿನ್‌ ಶರ್ಮಾ

ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ವರ್ಸಸ್‌ ಮುಖ್ಯಮಂತ್ರಿ ಎಂಬ ಸ್ಥಿತಿ ಇದೆಯೇ? ಜಾಧವಪುರ ವಿವಿಯಲ್ಲಿ ಇತ್ತೀಚೆಗೆ ನಡೆದ ಗಲಭೆ ಪ್ರಕರಣದಲ್ಲಿ ವಿವರಣೆ ಕೇಳಿದ್ದರು. ಅದೇನೇ ಇದ್ದರೂ ಇಂಥ ಬೆಳವಣಿಗೆ ಒಳ್ಳೆಯದಲ್ಲ.

- ಆನಂದ್‌

ಚಕ್ರವ್ಯೂಹದಿಂದ ಬೇಕಿದ್ದರೂ ತಪ್ಪಿಸಿಕೊಳ್ಳಬಹುದು. ಆದರೆ ಸೋಷಿಯಲ್‌ ಮೀಡಿಯಾದಿಂದ ತಪ್ಪಿಸಿಕೊಳ್ಳುವುದಕ್ಕೆ ಯಾರಿಗೂ ಸಾಧ್ಯವಿಲ್ಲ.

- ರುಸ್ತುಂಗುಂ

ಯಾರು ಮೌನಕ್ಕೆ ಶರಣಾಗಿದ್ದಾರೋ, ಅವರ ಇತಿಹಾಸವನ್ನು ಕಾಲವೇ ಬರೆಯಲಿದೆ.

- ಅಶುತೋಷ್‌

ಕಂಡಿರುವ ಕನಸಿಗೂ ನಡೆಯುತ್ತಿರುವ ಹಾದಿಗೂ ಸಂಬಂಧವೇ ಇಲ್ಲ.

- ಪ್ರಿಯದರ್ಶಿನಿ ಗೌಡ

ಅಮೆರಿಕದಲ್ಲಿ ಪ್ರತಿ ದಿನವೂ ಒಂದೇ ರೀತಿ ಇರುತ್ತದೆ. ಮೊದಲು ಶ್ವೇತಭವನ ಸುಳ್ಳು ಹೇಳುತ್ತದೆ, ನಂತರ ಆ ಸುಳ್ಳಿನ ಕುರಿತು ಆಕಸ್ಮಿಕವಾಗಿ ಸತ್ಯ ಹೇಳುತ್ತದೆ. ಬಳಿಕ, ಸತ್ಯ ಹೇಳಿದ್ದರ ಬಗ್ಗೆಯೇ ಸುಳ್ಳು ಹೇಳುತ್ತದೆ.

- ಮಿಡಲ್‌ ಏಜ್‌ ರಯಟ್‌

ನಿಮ್ಮಲ್ಲಿ ಬಲಿಷ್ಠರು ಯಾರು ಗೊತ್ತೇ? ಯಾರು ಸಿಟ್ಟನ್ನು ನಿಯಂತ್ರಿಸಲು ಬಲ್ಲರೋ ಅವರೇ ಬಲಿಷ್ಠರು.

- ಆರ್ಯನ್‌ ಶ್ರೀವಾಸ್ತವ್

ಭಾರತ ರತ್ನ ಪ್ರಶಸ್ತಿಗೆ ಸಾವರ್ಕರ್‌ ಅರ್ಹರು ಎನ್ನುವುದರಲ್ಲಿ ಸಂಶಯವಿಲ್ಲ. ಆದರೆ ಬಿಜೆಪಿ ಇದನ್ನು ಚುನಾ ವಣೆ ಪ್ರಣಾಳಿಕೆಯಲ್ಲಿ ಬಳಸಿಕೊಂಡಿದ್ದು ಖಂಡಿತಾ ತಪ್ಪು. ಇದು ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡುತ್ತಿದೆ

- ಕುನಾಲ್‌ ಚುಮ್ಡಾ

ಸಾಹಸವೆನ್ನುವುದು ಅಪಾಯಕಾರಿಯಾಗಿರಬಹುದು, ಆದರೆ ತಾಟ ಸ್ಥ್ಯವು ಮಾರಕವಾದದ್ದು!

- ಪೌಲೋ ಕೋಲ್ಹೋ

ನೀವು ಏನಾದರೂ ಖರೀದಿಸಿ ತರುತ್ತೀರಿ. ಅದರ ಬೆಲೆ ಎಷ್ಟು ಎಂದು ಅಮ್ಮ ಕೇಳಿದಾಗ ನೈಜ ಬೆಲೆಗಿಂತ ಕಡಿಮೆ ಬೆಲೆ ಹೇಳಿದ್ದೀರಿ ಎಂದಾದರೆ, ಅಮ್ಮನ ಮನಸ್ಸಿಗೆ ಶಾಂತಿ ತರುವ ಉದ್ದೇಶ ನಿಮ್ಮದಾಗಿರುತ್ತದೆಯೇ ವಿನಾ ಬೇರೇನೂ ಆಗಿರುವುದಿಲ

- ಸೋನಲ್‌ ಕಾಲ್ರಾ

ಅಸೌಖ್ಯವೆನ್ನುವುದು ನಿಮ್ಮ ಮಿತ್ರನಾಗಲಿ. ಅಸೌಖ್ಯದಿಂದ ದೂರ ಓಡದಿರಿ. ಕಂಫ‌ರ್ಟ್‌ನಿಂದ ದೂರ ಓಡಿ.

- ಜೋ ರೋಗನ್‌

ಅಮಿತ್‌ ಶಾ ಮಗನಿಗೆ ಬಿಸಿಸಿಐಯಲ್ಲೇನು ಕೆಲಸ? ಇದು ಕುಟುಂಬ ರಾಜಕಾರಣವಲ್ಲವೇನು?

- ಜೂಲಿಯನ್ಚೌಧ್ರಿ

ನನ್ನ ಬದುಕಿನ ದೊಡ್ಡ ಗೊಂದಲವಿದು: ಏನಾದರೂ ರುಚಿಯಾಗಿರುವುದನ್ನು ತಿನ್ನಬೇಕು ಅನಿಸುತ್ತಿದೆ. ಆದರೆ, ಏನೂಂತ ಗೊತ್ತಾಗುತ್ತಿಲ್ಲ.

- ಗಬ್ಬರ್‌

ಮೋದಿ ಏನು ಮಾಡು ತ್ತಾರೋ ಅದ ನ್ನೆಲ್ಲ ವಿರೋಧಿಸುವ ಎಡಪಂಥೀಯರು, ಈಗ ಬೀಚ್‌ ಗೆ ಹೋಗಿ ಅಲ್ಲಿ ಪ್ಲಾಸ್ಟಿಕ್‌ ಎಸೆದು ಬಂದರೂ ಅಚ್ಚರಿಯಿಲ್ಲ!

- ಟ್ರಾಲ್‌ ಲಾಲಾ

ಭಾರತೀಯ ಕ್ರಿಕೆಟ್‌ ತಂಡ ಯುವಕರಿಂದ ಕಂಗೊಳಿಸುತ್ತಿದೆ, ಈಗ ಗಂಗೂಲಿ ಪ್ರವೇಶದಿಂದಾಗಿ, ಬೃಹತ್‌ ಯುವ ಪಡೆಯೇ ತಯಾರಾಗುವುದು ಖಚಿತ.

- ಜಿಗ್ನೇಶ್‌ ಸಾರ್ದಾ

ಜಗತ್ತಿನಲ್ಲಿ ಎರಡು ಬಗೆಯ ಜನ ಇರುತ್ತಾರೆ. ಸ್ವೀಕರಿಸುವವನ ಮತ್ತು ಕೊಡುವವನು. ಸ್ವೀಕರಿಸುವವನು ಚೆನ್ನಾಗಿ ತಿನ್ನಬಹುದು. ಆದರೆ, ಕೊಡುವವನು ಚೆನ್ನಾಗಿ ನಿದ್ರಿಸುತ್ತಾನೆ.

- ಜಯ್‌ ಶೆಟ್ಟಿ

ಹಿಂದೊಮ್ಮೆ ಡಚ್‌ ಪ್ರಧಾನಿ, ತಾವು ಚೆಲ್ಲಿದ್ದ ಕಾಫಿಯನ್ನು ತಾವೇ ಒರೆಸಿದ್ದನ್ನು ಜನ ಬಹುವಾಗಿ ಮೆಚ್ಚಿಕೊಂಡಿದ್ದರು. ಆದರೆ, ಅಂಥದ್ದೇ ಕೆಲಸವನ್ನು ನಮ್ಮ ಪ್ರಧಾನಿ ಮೋದಿ ಮಾಡಿದಾಗ ನಟನೆ ಎನ್ನುತ್ತಿದ್ದಾರೆ. ಇದನ್ನು ನೋಡಿದರೆ ನಗು ಬರುತ್ತೆ

- ಸೋನಲ್‌ ಕಾರ್ಲಾ

ವಿಶ್ವ ಬ್ಯಾಂಕ್‌ ಭಾರತದ ಬೆಳವಣಿಗೆ ಅಂದಾಜನ್ನು ಶೇ.6ಕ್ಕೆ ನಿಲ್ಲಿಸಿದೆ. ಕಾರಣ ಅದು ಅ.2ರಂದು ಭಾರತದ ಬಾಕ್ಸ್‌ ಆಫೀಸ್ ಗಳಿಕೆಯನ್ನು ಗಣನೆಗೆ ತೆಗೆದುಕೊಂಡಿಲ್ಲ.

- ಪನ್‌ಸ್ಟರ್‌

ಬೆಳೆಯುತ್ತಿರುವ ಚೀನಾ-ನೇಪಾಳ ಸಂಬಂಧವು ಭಾರತಕ್ಕೆ ಚಿಂತೆಯ ವಿಷಯವಾಗಲೇಬೇಕು. ನೇಪಾಳ ಮತ್ತು ಚೀನಾದ ಕಮ್ಯುನಿಸ್ಟ್‌ ಸರ್ಕಾರ ಆ ಹಿಂದೂರಾಷ್ಟ್ರವನ್ನು ನಾಶ ಮಾಡದೇ ಇರವು.

- ತನ್ಮಯ್‌ ಇರವಂತಿಗ್‌

ನಿಮ್ಮ ಟ್ವೀಟ್‌ಗೆ ಸಾಕಷ್ಟು ಪ್ರತಿಕ್ರಿಯೆಗಳು ಬರುತ್ತಿಲ್ಲ ಎಂದರೆ ಏನು ಮಾಡಬೇಕು? ಟ್ವೀಟ್‌ನಲ್ಲಿ ಸ್ಪೆಲ್ಲಿಂಗ್‌ ಮಿಸ್ಟೇಕ್‌ ಮಾಡಬೇಕು.

- ಪನ್‌ಸ್ಟರ್‌

ಕಾಂಗ್ರೆಸ್‌ ನಾಯಕರ ಮೇಲೆ ಐಟಿ, ಇ.ಡಿ ದಾಳಿ ನಡೆಸುವ ಮೂಲಕ ಅವರಲ್ಲಿ ಭಯ ಹುಟ್ಟಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂಬುದು ಕಾಂಗ್ರೆಸ್‌ ನಾಯಕರ ಆರೋಪ. ಅಂದರೆ, ಹಣ ಲೂಟಿ ಮಾಡುವಾಗ ಇಷ್ಟು ದಿನ ಕಾಂಗ್ರೆಸ್‌ ನಾಯಕರಿಗೆ ಭಯವೇ ಇರಲಿಲ್ಲ ಎಂದಾಯ್ತು.

- ದೇವಿಕಾ ಪೂಜಾರ್‌

ಆರ್‌ಎಸ್‌ಎಸ್‌ ವ್ಯಕ್ತಿಯ ಗರ್ಭಿಣಿ ಹೆಂಡತಿ, ಮಗುವನ್ನು ಬರ್ಬರವಾಗಿ ಹತ್ಯೆಗೈಯಲಾಗಿದೆ. ಈ ಕುರಿತು ರಾಜಕೀಯ ವಾದಗಳೇನಾದರೂ ಇರಲಿ. ಈ ಸಾವಿಗೆ ನ್ಯಾಯ ಒದಗಿಸುವುದು ಪ.ಬಂ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಕರ್ತವ್ಯ. ನೀವು ರಾಜ್ಯದ ಎಲ್ಲರ ಮುಖ್ಯಮಂತ್ರಿ.

- ಅಪರ್ಣಾ ಸೇನ್‌

ಬಿಎಸ್‌ ಎನ್‌ಎಲ್‌ ದುಸ್ಥಿತಿಗೆ ಕೇಂದ್ರ ಸರ್ಕಾರವನ್ನು ದೂರುವುದು ಮೂರ್ಖತನ. ಮೊದಲು ಗ್ರಾಹಕರೊಂದಿಗೆ ಹೇಗೆ ನಡೆದುಕೊಳ್ಳಬೇಕು ಎನ್ನುವುದನ್ನು ಈ ಸಂಸ್ಥೆ ಕಲಿಯಲಿ.

- ಅನಿರ್ಬಾನ್‌ ಚೌಧರಿ

ನಮ್ಮ ದೇಶದಲ್ಲಿ ಕೆಲಸ ಆಗಬೇಕೆಂದರೆ, ನೀವು ಕನಿಷ್ಠ ಎರಡು ಅಲರ್ಟ್‌ಗಳನ್ನು ಕಳುಹಿಸಲೇಬೇಕು. ಅವೆಂದರೆ, 1. ಇಮೇಲ್‌ ಕಳುಹಿಸುವುದು. 2. ನಾನು ಇಮೇಲ್‌ ಕಳುಹಿಸಿದ್ದೇನೆ ಎಂದು ಆತನಿಗೆ ಕರೆ ಮಾಡಿ ತಿಳಿಸುವುದು.

- ಗಬ್ಬರ್‌

ಅದ್ಯಾವಾಗಿಂದ ಆಯುಧ ಪೂಜೆ "ನಾಟಕ' ಆಯಿತು? ಬಿಜೆಪಿ ಯನ್ನು ಏನಕೇನ ವಿರೋಧಿಸಲೇಬೇಕೆಂಬ ಚಟವೇ ಕಾಂಗ್ರೆಸ್‌ ನಾಯಕರಿಂದ ಇಂಥ ಮಾತುಗಳನ್ನಾಡಿಸುತ್ತಿದೆ.

- ನವೀನ್‌ ಬೂಂಬಕ್‌

ಹಿಂದೂ ಧರ್ಮವನ್ನು, ಆಚರಣೆಗಳನ್ನು ಹೀಗೆ ನಿರಂತರವಾಗಿ ಕಡೆಗಣಿಸುತ್ತಾ ಬಂದಿದ್ದರಿಂದಲೇ ಇಂದು ಕಾಂಗ್ರೆಸ್‌ ದೇಶದಲ್ಲಿ ಇಷ್ಟು ದುಸ್ಥಿತಿ ಎದುರಿಸುತ್ತಿದೆ.

- ಟ್ವೇಕನ್ ಫರ್ಮ್

ಕಂಫ‌ರ್ಟ್‌ಜೋನ್‌ ನಿಂದ ಎದ್ದು ಹೊರಬಂದಾಗಲೇ ಮನು ಷ್ಯನಿಗೆ ತನ್ನ ಬೆಳವಣಿಗೆಯ ಸಾಧ್ಯತೆಗಳು ಗೋಚರಿಸುತ್ತವೆ.

- ಅಂಕಲ್ಹಾಟ್ಸ್

ರಫೇಲ್‌ ಯುದ್ಧ ವಿಮಾನವು ಚೀನಾ- ಪಾಕಿಸ್ತಾನ ಮತ್ತು ಭಾರತದಲ್ಲಿನ ಕೆಲವರ ನಿದ್ದೆಗೆಡಿಸಲಿರುವುದಂತೂ ಸುಳ್ಳಲ್ಲ.

- ಚಿರಾಗ್‌ ಪಿ

ಅವಕಾಶ ಎದುರಾದಾಗ ಅದರಿಂದ ದೂರ ಓಡದಿರಿ. ಅವಕಾಶದ ಒಡಲಲ್ಲಿ ಸವಾಲುಗಳಿರುತ್ತವೆ. ಸವಾಲುಗಳು ನಿಮ್ಮ ಬದುಕನ್ನು ಬದಲಿಸುತ್ತವೆ.

- ರಾಬಿನ್‌ ಶರ್ಮಾ

ಪ್ರತಿಯೊಬ್ಬ ಅಮೆರಿಕನ್‌ಗೂ ಪ್ರಜಾಪ್ರಭುತ್ವವನ್ನು ಬೆಂಬಲಿಸಿ ಧ್ವನಿ ಎತ್ತುವ ಮತ್ತು ಹಾಂಕಾಂಗ್‌ನ ಮಾನವ ಹಕ್ಕುಗಳ ಪರವಾಗಿ ಮಾತನಾಡುವ ಹಕ್ಕಿದೆ.

- ಹಿಲರಿ ಕ್ಲಿಂಟನ್‌

ಅಂತರ್ಜಾಲದಲ್ಲಿ ನಾವು ವ್ಯಯಿಸುವ ಸಮಯದಲ್ಲಿ ಅರ್ಧದಷ್ಟಾದರೂ ಸಮಯವನ್ನು ಆತ್ಮಾವಲೋಕನಕ್ಕೆ ಮೀಸಲಿಟ್ಟರೆ, ಬದುಕು ಸುಂದರವಾಗುತ್ತದೆ.

- ರಾಬಿನ್‌ ಶರ್ಮಾ

ವಯನಾಡ್‌ನ‌ ಪ್ರತಿಭಟನಾಕಾರರಿಗೆ ಕಾಡಿಗಿಂತಲೂ ಕಳ್ಳಸಾಗಣೆಯ ಮೇಲೆಯೇ ಹೆಚ್ಚು ಕಾಳಜಿ ಇದ್ದಂತಿದೆ!

- ಎವಿಡಿ ಸೋನಾ

ಬಾಂಬೆ ಹೈಕೋರ್ಟ್‌ ತೀರ್ಪು ಬಂದ ಕ್ಷಣಮಾತ್ರದಲ್ಲಿ ರಾತ್ರಿ ಎಂದೂ ಲೆಕ್ಕಿಸದೇ ಅಧಿಕಾರಿಗಳು ಮರಗಳನ್ನು ಕಡಿಯಲು ಶುರುಮಾಡಿದರು. ಅವರು ಇದೇ ಅವಸರವನ್ನು ಭ್ರಷ್ಟಾಚಾರ, ಅಪರಾಧ ತಡೆಗಟ್ಟಲು ತೋರಿದ್ದರೆ ಚೆನ್ನಾಗಿರುತ್ತಿತ್ತು.

- ಸರ್‌ ಕ್ರೀಕ್‌

ಬೊಕ್ಕಸದಲ್ಲಿ ಹಣವಿದ್ದರೂ ರಾಜ್ಯ ಸರ್ಕಾರ ಎರಡು ತಿಂಗಳುಗಳಿಂದ ನೆರೆ ಸಂತ್ರಸ್ತರನ್ನು ಮರೆತಿದ್ದು ನಮ್ಮ ದುರಂತ. ಈಗಲಾದರೂ ಎಚ್ಚೆತ್ತುಕೊಳ್ಳಲಿ.

- ಎಚ್‌.ಡಿ.ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿ

ಕೇಂದ್ರ ಸರ್ಕಾರವು 1200 ಕೋಟಿ ರೂ. ಮುಂಗಡವಾಗಿ ಎನ್‌ಡಿಆರ್‌ಎಫ್ನಡಿ ಬಿಡುಗಡೆ ಮಾಡಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ಅವರಿಗೆ ರಾಜ್ಯದ ಜನತೆ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ.

- ಬಿ.ಎಸ್‌.ಯಡಿಯೂರಪ್ಪ , ಮುಖ್ಯಮಂತ್ರಿ

ಜೀವನದಲ್ಲಿ ಪಾಸಿಟಿವ್‌ ಆಗಿ ಇರುವುದು ಹೇಗೆ? ವಿವಾಹಿತರಿಂದ ದೂರ ಉಳಿಯುವ ಮೂಲಕ.

- ಪನ್‌ಸ್ಟರ್‌

ಒಳ್ಳೆಯ ಉದ್ದೇಶಕ್ಕೆ ವಿವಿಧ ರೀತಿಯಲ್ಲಿ ಕಾರ್ಯ ಮಾಡುತ್ತಿರುವವರ ನಡುವೆ ವಿರಸ ಒಳಿತಲ್ಲ.

- ನಿಮ್ಮ ಸುರೇಶ್‌ ಕುಮಾರ್‌

ನಾವೇ ಕಟ್ಟಿದ ತೆರಿಗೆ ಹಣವನ್ನು ಕರ್ನಾಟಕ ಪ್ರವಾಹಕ್ಕೆ ಪರಿಹಾರವಾಗಿ ಪಡೆಯಲು ಪ್ರತಿಭಟನೆ ಮಾಡಬೇಕಾ?

- ಗಡ್ಡಪ

ಪಾಕಿಸ್ತಾನವು ತಾಲಿಬಾನ್‌ "ನಾಯಕ'ರನ್ನು ಸ್ವಾಗತಿಸಿದ್ದು ನೋಡಿದರೆ, ವಿಶ್ವಕಪ್‌ ಗೆದ್ದು ಬಂದ ತಂಡವನ್ನು ಸ್ವಾಗತಿಸಿದಂತೆ ಭಾಸವಾಗುತ್ತಿದೆ.

- ನೈಲಾ ಇನಾಯತ್

ಮೊದಲಿನಿಂದಲೂ ಎಲ್ಲಾ ಕೇಂದ್ರ ಸರ್ಕಾರಗಳೂ ದಕ್ಷಿಣ ಭಾರತದ ವಿಷಯದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಾ ಬಂದಿವೆ. ನೆರೆ ಪರಿಹಾರದ ವಿಷಯದಲ್ಲಿ ಕೇಂದ್ರ ತೋರಿಸುತ್ತಿರುವ ಅಸಡ್ಡೆ ಇದಕ್ಕೊಂದು ಉದಾಹರಣೆ.

- ರವಿ. ಕೆ.ಎನ್‌.

ಬದುಕಿನಲ್ಲಿ ಎದುರಾಗುವ ಎಲ್ಲಾ ಅಡ್ಡಿಗಳೂ ನಿಮ್ಮನ್ನು ಮತ್ತಷ್ಟು ಬಲಿಷ್ಠಗೊಳಿಸುವುದಕ್ಕಾಗಿಯೇ ಬಂದಿರುತ್ತವೆ.

- ಲೈಫ್ ಕೋಟ್ಸ್‌

ಅ.2ರ ದಿನ ಮಾತ್ರ ಮಹಾತ್ಮ ಗಾಂಧಿ ಅವರ ನೆನಪು ಮಾಡಿಕೊಳ್ಳುವುದು ಬೇಡ. ಅವರು ಹೇಳಿಕೊಟ್ಟ ತತ್ವಗಳಲ್ಲಿ ಕೆಲವನ್ನಾದರೂ ಪಾಲನೆ ಮಾಡೋಣ. ಈ ಮೂಲಕ ಅವರ ಕನಸಿನ ಭಾರತ ನಿರ್ಮಿಸೋಣ.

- ಗೌರಿಶಂಕರ ಗೌಡ್‌

ನಾನು ಹಣಕಾಸು ಮಂತ್ರಿಯಾದ ಎಲ್ಲಾ ಸಂದರ್ಭಗಳಲ್ಲಿ ತೆರಿಗೆ ಸುಧಾರಣೆ ಆಗಿದೆ. ಕಾರಣ ಅದಕ್ಕೆ ಬೇಕಾದ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದ್ದೆ. ಬಡವರು ಬಳಸುವ ಅಕ್ಕಿ, ರಾಗಿ, ಗೋಧಿ, ಬಟ್ಟೆ ಸೇರಿದಂತೆ ಅಗತ್ಯ ವಸ್ತುಗಳಿಗೆ ತೆರಿಗೆಯಿಂದ ವಿನಾಯಿತಿ ಕೊಡಿಸಿ, ಶ್ರೀಮಂತರು ಬಳಸುವ ಉತ್ಪನ್ನಗಳಿಗೆ ಅಗತ್ಯಕ್ಕೆ ತಕ್ಕಂತೆ ತೆರಿಗೆ ಹಾಕುವಂತಾಗಬೇಕು.

- ಸಿದ್ದರಾಮಯ್ಯ

ಕಹಿ ಮನಸ್ಸೆಂದಿಗೂ ಸಿಹಿ ಜೀವನವನ್ನು ಕೊಡುವುದಿಲ್ಲ.

- ಪೌಲೋ ಕೋಲ್ಹೋ

ನಗರವಾಸಿಗಳ ಬದುಕಲ್ಲಿ ಆಗುವ ದೊಡ್ಡ ಬಿಕ್ಕಟ್ಟಿನ ಸ್ಥಿತಿ ಯಾವುದು ಗೊತ್ತಾ? ಲಿವಿಂಗ್‌ರೂಂನೊಳಗೆ ಪಾರಿವಾಳವೊಂದು ಎಂಟ್ರಿ ಆಗೋದು.

- ಗಬ್ಬರ್‌

ತಮ್ಮ ಸ್ವಾರ್ಥದ ರಾಜಕಾರಣದಲ್ಲಿ ಬಳ್ಳಾರಿಯನ್ನು ಇಬ್ಭಾಗ ಮಾಡಲು ಹೊರಟಿದ್ದಾರೆ. ದಯಮಾಡಿ ವಿಜಯನಗರ ಜಿಲ್ಲೆ ರಚಿಸಬಾರದೆಂದು ವಿನಂತಿಸಿಕೊಳ್ಳುತ್ತೇನೆ.

- ಭಾರ್ಗವ್‌ ಆರ್‌

ಆತ್ಮಾವಲೋಕನವು ಮನೆಯನ್ನು ಸ್ವತ್ಛಗೊಳಿಸುವುದಕ್ಕೆ ಸಮ. ಅದೇನೂ ಸೌಖ್ಯದ ಕೆಲಸವಲ್ಲ.

- ರಾಚಾರ್‌

ಏನ್ಮಾಡ್ಲಿ? ನಾನು ನನ್ನ ಕೀಬೋರ್ಡ್‌ ಅನ್ನು ಉಜ್ಜಿದಾಗಲೆಲ್ಲ, ಟ್ವೀಟ್‌ ತನ್ನಿಂತಾನೇ ಹೊರಬರುತ್ತಿರುತ್ತದೆ.

- ಲೈಫ್

ನೀವು ಹೇಳುವ ವಿಚಾರಗಳನ್ನು ಕೇಳಿಸಿಕೊಳ್ಳುವ ಆಸಕ್ತಿಯೇ ಇಲ್ಲದ ವ್ಯಕ್ತಿಯೊಡನೆ ನೀವು ಮಾತಿಗಿಳಿಯುತ್ತೀರ ಎಂದರೆ ನಿಮ್ಮ ತಾಳ್ಮೆ ಪರೀಕ್ಷಿಸಲು ಅದಕ್ಕಿಂತ ಬೇರೆ ಉತ್ತಮ ಮಾರ್ಗವಿಲ್ಲ.

- ರಾಫ್ಲ್ ಇಂಡಿಯನ್‌

ಬಿಹಾರ ರಾಜಧಾನಿ ಪಾಟ್ನಾದಲ್ಲಿ ಆಸ್ಪತ್ರೆಗಳಿಗೆ ನೀರು ನುಗ್ಗಿದೆ. ರಾಜ್ಯ ಸರ್ಕಾರ ಪರಿಸ್ಥಿತಿ ಎದುರಿಸಲು ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುವುದು ಸ್ಪಷ್ಟ.

- ಸಾಕ್ಷಿ ಜೋಶಿ

ಪಾಕಿಸ್ತಾನದ ಪ್ರಕಾರ, ಒಸಾಮ, ಹಫೀಜ್ , ಮಸೂದ್‌ ಅಜರ್‌ ಉಗ್ರರಲ್ಲ. ಅವರೆಲ್ಲ ಶ್ವೇತವಸ್ತ್ರ ಧರಿಸಿ ಸುಂದರ ಹಾಡುಗಳನ್ನು ಹಾಡುವ ಸಂತರು. ಜೆಇಎಂ, ಲಷ್ಕರ್‌, ಅಲ್‌ ಖೈದಾಗಳು ಉಗ್ರ ಸಂಘಟನೆಗಳಲ್ಲ, ಶಾಂತಿಯ ಪ್ರೊಫೆಸರ್‌ಗಳನ್ನು ತಯಾರಿಸುವ ಕೌಶಲ್ಯಾಭಿವೃದ್ಧಿ ಕೇಂದ್ರಗಳು!

- ಆನಂದ್‌

ಯಾವುದೇ ಸಂಬಂಧವನ್ನೂ ಇಲ್ಲವಾಗಿಸಬಲ್ಲ ಅತಿದೊಡ್ಡ ಹತ್ಯೆಕೋರನೆಂದರೆ "ಅಹಂ'.

- ಕ್ರೇಜಿಸಿಮ್‌

ವಿಶ್ವಸಂಸ್ಥೆಯ ಗಮನ ಸೆಳೆಯಲು ಇಮ್ರಾನ್‌ ಖಾನ್‌ ಭಾರತದ ಪ್ರತಿಪಕ್ಷಗಳ ಹೇಳಿಕೆಗಳನ್ನು ಉಲ್ಲೇಖೀಸುತ್ತಾರೆ. ಭಾರತದ ಗಮನ ಸೆಳೆಯಲು ಇಲ್ಲಿನ ಪ್ರತಿಪಕ್ಷಗಳು ಇಮ್ರಾನ್‌ ಖಾನ್‌ ಹೇಳಿಕೆಯನ್ನು ಉಲ್ಲೇಖೀಸುತ್ತವೆ!

- ಪ್ರಿಯಾಂಕಾ ಚತುರ್ವೇದಿ

17 ವಿಧಾನಸಭಾ ಕ್ಷೇತ್ರಗಳನ್ನು 17 ಹೊಣೆಗೇಡಿ ಭ್ರಷ್ಟರಿಗೆ ಮಾರಾಟ ಮಾಡಲಾಗಿದೆಯೇ? ಅವರು ಸ್ಪರ್ಧಿಸಲು ಆಗುವುದಿಲ್ಲ ಎಂತ ಚುನಾವಣೆಯನ್ನೇ ಮುಂದೂಡುವುದೇ?

- ಕೃಷಿಕ್‌ ಎ.ವಿ.

ನಾವು ನಡೆಸುವ ಎಲ್ಲಾ ಸಂಭಾಷಣೆಗಳು, ಪಡೆಯುವ ಅನುಭವಗಳು ಮತ್ತು ಓದುವ ಪುಸ್ತಕಗಳು ನಮ್ಮನ್ನು ರೂಪಿಸುತ್ತವೆ. ಹಾಗಾಗಿ ಈ ಮೂರರಿಂದ ವಂಚಿತರಾಗಬೇಡಿ.

- ರಾಬಿನ್‌ ಶರ್ಮ

ಪ್ರತಿಯೊಂದು ಪ್ರತಿಕೂಲತೆ, ಪ್ರತಿ ವೈಫ‌ಲ್ಯ, ಪ್ರತಿ ನೋವು ಕೂಡ ಮುಂದೊಂದು ದಿನ ಅದರಷ್ಟೇ ಸಮಾನ ಅಥವಾ ಹೆಚ್ಚಿನ ಅನುಕೂಲತೆಯನ್ನು ಒದಗಿಸುತ್ತದೆ.

- ಇನ್‌ಸ್ಪಿರೇಷನ್‌

ಎನ್‌ಡಿಎ ಸರಕಾರವು ರಾಬರ್ಟ್‌ ವಾದ್ರಾರನ್ನು ಮುಖ್ಯ ಆರ್ಥಿಕ ಹಾಗೂ ಹೂಡಿಕೆ ಸಲಹೆಗಾರರನ್ನಾಗಿ ನೇಮಿಸಬೇಕು. ಅಲ್ಪಾವಧಿಯಲ್ಲಿ ಹಣವನ್ನು ದ್ವಿಗುಣಗೊಳಿಸುವುದು ಹೇಗೆಂದು ವಾದ್ರಾಗೆ ಗೊತ್ತು.

- ಅನೂಪ್‌ ಕುಮಾರ್‌

ಪಾಕ್‌ ಭಾರತದ ಮೇಲೆ ಡ್ರೋಣ್‌ ಸಮರ ಸಾರುತ್ತಿದೆ, ಅದನ್ನು ಡ್ರೌನ್ (ಮುಳುಗಿಸು) ಮಾಡಲೇಬೇಕಿದೆ.

- ಮನೋಜ್‌ ಪಂಡಿತ್‌

ಆಲಸ್ಯದ ಮೂಲದಲ್ಲಿ ಕೀಳರಿಮೆ, ಹಿಂಜರಿಕೆ ದಟ್ಟವಾಗಿ ಇರುತ್ತದೆ.

- ಬ್ರೇನೀ ಕೋಟ್‌

ಬದುಕಿನ ಓಟದಲ್ಲಿ ಹಿಂದೆ ಏನನ್ನು ಬಿಟ್ಟು ಬಂದಿದ್ದೇವೆ ಎನ್ನುವುದನ್ನು ಮಾತ್ರ ಮರೆಯಬಾರದು.

- ಲೈಫ್ ಕೋಟ್ಸ್‌

ನಿರ್ಮಲಾ ಸೀತಾರಾಮನ್‌ರಿಗೆ ಮೋದಿ: ಟ್ಯಾಕ್ಸ್‌ ವಿಷಯವನ್ನು ನೀವು ನೋಡಿಕೊಳ್ಳಿ, ನಾನು ಟೆಕ್ಸಾಸ್‌ ನೋಡಿಕೊಳ್ಳುತ್ತೇನೆ.

- ರಮೇಶ್‌ ಶ್ರೀವಾತ್ಸವ

ಅಮಿತಾಭ್‌ ಅವರಿಗೆ ಎಂದೋ ದಾದಾ ಸಾಹೇಬ್‌ ಫಾಲ್ಕೆ ಗೌರವ ಸಿಗಬೇಕಿತ್ತು. ತಡವಾದರೂ ಅರ್ಹ ವ್ಯಕ್ತಿಗೇ ಈ ಪುರಸ್ಕಾರ ಸಿಕ್ಕಿರುವುದು ಸಂತೋಷ ಮೂಡಿಸಿದೆ.

- ಶ್ರೇಯಾ ಘೋಷಾಲ್‌

ಕರ್ನಾಟಕ ಕಂಡಷ್ಟು ರೆಸಾರ್ಟ್‌ ಡ್ರಾಮಾಗಳನ್ನು ಬೇರಾವ ರಾಜ್ಯವೂ ಕಂಡಿರಲಿಕ್ಕಿಲ್ಲ. ಕಳೆದೊಂದು ದಶಕದಲ್ಲಿ ಇಂಥ 14-15 ಘಟನೆಗಳು ನಡೆದಿವೆ. ಇಂದು ರಾಜ್ಯ ರಾಜಕೀಯದಾಟವು 4 ಭಿನ್ನ ರೆಸಾರ್ಟ್‌ಗಳಲ್ಲಿ ನಡೆಯುತ್ತಿದೆ. ರಾಜ್ಯದ ಜನ ಆತ್ಮವಿಮರ್ಶೆ ಮಾಡಿಕೊಳ್ಳಬೇಕಾದ ಸಮಯವಿದು.

- ಪೂಜಾ ಪ್ರಸನ್ನ

ನಮ್ಮ ರಾಜ್ಯದಲ್ಲಿ ಹೊಸ ಲಾಭದಾಯಕ ವ್ಯವಹಾರ ಮಾಡಲು ಅವಕಾಶವಿದೆ. ಅದೇನೆಂದರೆ, ದುಡ್ಡು ಜಾಸ್ತಿ ಇರುವವರು ಸಾಧ್ಯವಾದಷ್ಟು ಶಾಸಕರನ್ನು ಕೊಂಡು ಇಟ್ಟುಕೊಳ್ಳವುದು. ಇನ್ನೊಂದು ಪಕ್ಷದಿಂದ ಬೇಡಿಕೆ ಬಂದಾಗ ಒಳ್ಳೆ ಬೆಲೆಗೆ ಮಾರುವುದು.

- ಶ್ರೀಪತಿ ಗೋಗಡಿ

ಜ್ಯೋತಿರಾದಿತ್ಯ ಸಿಂದಿಯಾ ಮತ್ತು ಮಿಲಿಂದ್‌ ದೇವೊರಾ ತಮ್ಮ ರಾಜೀನಾಮೆಯನ್ನು ರಾಹುಲ್‌ಗಾಂಧಿಗೆ ಸಲ್ಲಿಸಿದ್ದಾರೆ. ಈಗಾಗಲೇ ರಾಜೀನಾಮೆ ಸಲ್ಲಿಸಿರುವಂಥ ವ್ಯಕ್ತಿಯೊಬ್ಬರಿಗೆ ರಾಜೀನಾಮೆ ಸಲ್ಲಿಸುವುದನ್ನು ಎಲ್ಲಾದರೂ ನೋಡಿದ್ದೀರಾ?

- ಶಾಜಿಯಾ ಇಲ್ಮಿ

ಶಾಸಕರು, ಸಚಿವರೆಲ್ಲ ಈಗ ಜನರ ಪ್ರತಿನಿಧಿಗಳಾಗಿ ಉಳಿದಿಲ್ಲ. ಬದಲಿಗೆ, ಭಾರತದ ಚುನಾವಣಾ ಮಾರುಕಟ್ಟೆಯಲ್ಲಿನ ಸರಕುಗಳಾಗಿದ್ದಾರೆ.

- ನಿರ್ಜರಿ ಸಿನ್ಹಾ

ರಾಜ್ಯದಲ್ಲಿ ನಾಯಕರು ಅಧಿಕಾರಕ್ಕಾಗಿ ಮತ್ತು ಸಚಿವಗಿರಿಗಾಗಿ ಹೊಡೆದಾಡುತ್ತಿದ್ದರೆ, ಇತ್ತ ನಾವು ಅಭಿವೃದ್ಧಿ ಮತ್ತು ಪ್ರಗತಿಗಾಗಿ ಕಾಯುತ್ತಲೇ ಇದ್ದೇವೆ. ●-ನಂದಿನಿ ಬಿ

- ನಂದಿನಿ ಬಿ

ಹೊಸ ಸೇರ್ಪಡೆ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

s suresh kumar

Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ

13

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ಅರ್ಜಿ ನಿರಾಕರಿಸಿದ ನ್ಯಾಯಾಲಯ

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.