Viral: ಮೆಡಿಕಲ್ಗೆ ಹೋಗುವಾಗ ಲಾಟರಿ ಖರೀದಿ; ನಾಲ್ಕೇ ಗಂಟೆಯಲ್ಲಿ 2.50 ಕೋಟಿ ಗೆದ್ದ ವೃದ್ಧ!
Team Udayavani, Nov 8, 2023, 9:34 AM IST
ಚಂಡಿಗಢ: ಮದ್ದು ತರಲೆಂದು ಮೆಡಿಕಲ್ ಶಾಪ್ ಗೆ ಹೋದ ವೃದ್ಧನೊಬ್ಬ ಅದೇ ದಾರಿಯಲ್ಲಿದ್ದ ಲಾಟರಿ ಟಿಕೆಟ್ ನ್ನು ಖರೀದಿಸಿ 2.50 ಕೋಟಿ ರೂ.ವಿನ ಬಂಪರ್ ಗೆದ್ದಿದ್ದಾರೆ.
ಪಂಜಾಬ್ನ ಹೋಶಿಯಾರ್ಪುರದ ಮೂಲದ ಶೀತಲ್ ಸಿಂಗ್ ಲಾಟರಿ ಗೆದ್ದಿರುವ ವೃದ್ಧ. ಮಹಿಲ್ಪುರ ನಿವಾಸಿಯಾಗಿರುವ ಶೀತಲ್ ಸಿಂಗ್ ಇತ್ತೀಚೆಗೆ ಕುಟುಂಬದ ಸದಸ್ಯರೊಬ್ಬರಿಗೆ ಮದ್ದು ತರಲು ಮೆಡಿಕಲ್ ಶಾಪ್ ಗೆ ತೆರಳಿದ್ದರು. ಇದೇ ವೇಳೆ ಮಾರ್ಗದಲ್ಲಿ ದೀಪಾವಳಿ ಬಂಪರ್ ಲಾಟರಿ ಟಿಕೆಟ್ ನ್ನು ಶೀತಲ್ ಖರೀದಿಸಿದ್ದಾರೆ.
ಲಾಟರಿ ಖರೀದಿಸಿ ಮನೆಗೆ ಬಂದ ಸುಮಾರು ನಾಲ್ಕು ಗಂಟೆಗಳ ನಂತರ ಲಾಟರಿ ಕುರಿತು ಕರೆ ಬಂದಿದ್ದು, ಶೀತಲ್ ಅವರು 2.5 ಕೋಟಿ ಗೆದ್ದಿರುವುದಾಗಿ ಲಾಟರಿ ಅವರು ಹೇಳಿದ್ದಾರೆ.
ಇದನ್ನೂ ಓದಿ: Swarna Mudra sweet: ಈ ಸ್ವೀಟ್ನ ಒಂದು ಕೆಜಿಯ ಬೆಲೆ 21 ಸಾವಿರ; ಏನಿದರ ವಿಶೇಷ?
ಲಾಟರಿಯಲ್ಲಿ 2.50 ಕೋಟಿ ಗೆದ್ದಿರುವ ಅವರು, ಲಾಟರಿಯಲ್ಲಿ ಗೆದ್ದ ಮೊತ್ತವನ್ನು ಹೇಗೆ ಬಳಸಬೇಕೆಂದು ಅವರು ಮತ್ತು ಅವರ ಕುಟುಂಬ ನಿರ್ಧರಿಸುತ್ತದೆ ಎಂದು ಸಿಂಗ್ ಹೇಳಿದ್ದಾರೆ.
ರೈತನಾಗಿರುವ ಶೀತಲ್ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಮಕ್ಕಳಿಬ್ಬರೂ ಮದುವೆಯಾಗಿದ್ದಾರೆ.
ಲಾಟರಿ ಸ್ಟಾಲ್ನ ಮಾಲೀಕರು ಕಳೆದ 15 ವರ್ಷಗಳಿಂದ ಇದೇ ಉದ್ಯೋಗದಲ್ಲಿದ್ದು, ಮೂರನೇ ಬಾರಿಗೆ ಗ್ರಾಹಕರೊಬ್ಬರಿಗೆ ಕೋಟಿಗಟ್ಟಲೆ ಹಣದ ಲಾಟರಿ ಬಂದಿದೆ ಎಂದು ಅವರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
W.Bengal; ಮುಸ್ಲಿಂ ಮುನಿಸಿಗೆ ಮಂದಿರಕ್ಕೆ ಬಾರದ ಮಮತಾ: ಅಮಿತ್ ಶಾ
1500 for women: ಆಂಧ್ರದಲ್ಲಿ ಕರ್ನಾಟಕ ಮಾದರಿ ಎನ್ಡಿಎ ಗ್ಯಾರಂಟಿ
Election; ಮೊಹಬ್ಬತ್ ಕೀ ದುಕಾನ್ನಲ್ಲಿ ಫೇಕ್ ವೀಡಿಯೋಗಳು ಮಾರಾಟ: ಮೋದಿ
Supreme Court; ಪತಂಜಲಿ ಆಯ್ತು, ಈಗ ಐಎಂಎ ವಿರುದ್ಧ ಸುಪ್ರೀಂ ಕೋರ್ಟ್ ಗರಂ
Kolkatta; ಸಂಪತ್ತು ಹಂಚಿಕೆ ಮಾಡುತ್ತೇವೆ: ಉ.ಪ್ರ.ಸಿಎಂ ಯೋಗಿ ಘೋಷಣೆ