UP: ವಧು ಮತ್ತು ಆಕೆಯ ತಾಯಿಯ ವರ್ತನೆಗೆ ಬೇಸತ್ತು ಮದುವೆಯನ್ನೇ ರದ್ದು ಮಾಡಿದ ವರ; ಆದದ್ದೇನು?
Team Udayavani, Jul 3, 2023, 2:48 PM IST
ಲಕ್ನೋ: ವಧು ಹಾಗೂ ವಧುವಿನ ತಾಯಿಯ ಒಂದು ವರ್ತನೆಯಿಂದ ವರನೊಬ್ಬ ಮದುವೆಯನ್ನೇ ರದ್ದು ಮಾಡಿರುವ ಘಟನೆ ಉತ್ತರ ಪ್ರದೇಶದ ಉತ್ತರ ಪ್ರದೇಶದ ಸಂಭಾಲ್ ನಲ್ಲಿ ನಡೆದಿರುವುದು ವರದಿಯಾಗಿದೆ.
ಮದುವೆ ಮಂಟಪಕ್ಕೆ ಬರುವ ವೇಳೆ ವಧುವಿನ ಕುಟುಂಬಸ್ಥರು ಮೊದಲು ವರ ಹಾಗೂ ಅವರ ಕುಟುಂಬದವರನ್ನು ಆತ್ಮೀಯವಾಗಿ ಸ್ವಾಗತವನ್ನು ಕೋರಿದ್ದಾರೆ. ಆದರೆ ಇದಾದ ಸ್ವಲ್ಪ ಸಮಯದ ಬಳಿಕ ಸಂತಸದ ಘಳಿಗೆಯಲ್ಲಿ ವಧುವಿನ ತಾಯಿ ಸಿಗರೇಟ್ ಸೇದಿದ್ದಾರೆ. ಎಲ್ಲರ ಮುಂದೆ ಸಿಗರೇಟ್ ಸೇದುತ್ತಾ ಅಮಲೇರಿದ ಸ್ಥಿತಿಯಲ್ಲಿದ್ದಂತೆ ಸಿಗರೇಟ್ ನ ಹೊಗೆಯನ್ನು ಅತಿಥಿಗಳ ಮುಖದ ಮೇಲೆಯೇ ಊದಿ ನೃತ್ಯ ಮಾಡಿದ್ದಾರೆ. ಇತ್ತ ವೇದಿಕೆಯಲ್ಲಿದ್ದ ವಧು ಕೂಡ ಮನೆಯವರ ಸಂಭ್ರಮದಲ್ಲಿ ಭಾಗಿಯಾಗಿ ಅತಿಥಿಗಳಿಗೆ ಫ್ಲೈಯಿಂಗ್ ಕಿಸ್ ಗಳನ್ನು ನೀಡಿದ್ದಾರೆ.
ಇದನ್ನೂ ಓದಿ: “ಬನ್ನಿ ನನ್ನ ಕಥಾ ಪ್ರಪಂಚಕ್ಕೆ..”; ಕಥೆ ಹೇಳಲು ಹೊರಟ ರಕ್ಷಿತ್ ಶೆಟ್ಟಿ: ಏನಿದು ಹೊಸ ಸರಣಿ
ಇದು ವೇದಿಕೆ ಮೇಲಿದ್ದ ವರನಿಗೆ ಇರಿಸುಮುರಿಸು ಉಂಟಾಗುವಂತೆ ಮಾಡಿದೆ. ಇನ್ನೇನು ಮದುವೆ ಬೇರೆ ಶಾಸ್ತ್ರಗಳು ಆರಂಭವಾಗಬೇಕೆನ್ನುವಾಗಲೇ ವರ ತನಗೆ ಈ ಮದುವೆ ಬೇಡವೆಂದಿದ್ದಾನೆ.
“ನನ್ನ ಮಗ ಮದುವೆಗೆ ನಿರಾಕರಿಸಿರುವುದಕ್ಕೆ ವಧು ಮತ್ತು ಆಕೆಯ ತಾಯಿ ತೋರಿದ ಹೊಲಸು ವರ್ತನೆಯೇ ಕಾರಣ” ಎಂದು ವರನ ತಂದೆ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ