ವಯಸ್ಸು 97…ಇನ್ನೂ ಬತ್ತದ ಉತ್ಸಾಹ; ತುಳು ಲಿಪಿ ತಜ್ಞ ಈ ಅಜ್ಜಯ್ಯ


Team Udayavani, Sep 13, 2020, 10:48 AM IST

Krishna-Bhat-600×300.jpg

ಇವರಿಗೀಗ ಆಸುಪಾಸು 97ರ ವಯಸ್ಸು, ಆದರೆ ಇವರ ದೈನಂದಿನ ಚಟುವಟಿಕೆಗಳನ್ನು ಕಂಡ ಯಾರಿಗಾದರೂ ಇವರ ನಿಜವಾದ ವಯಸ್ಸನ್ನು ನಂಬುವುದಕ್ಕೆ ಖಂಡಿತವಾಗಿಯೂ ಕಷ್ಟವಾಗಬಹುದು. ಈ ವಯಸ್ಸಿನಲ್ಲಿಯೂ ಕೃಷ್ಣ ಭಟ್ಟರದ್ದು ಲವಲವಿಕೆಯಿಂದ ಕೂಡಿದ ಜೀವನ ಶೈಲಿ. ತಮ್ಮ ದಿನನಿತ್ಯದ ಚಟುವಟಿಗೆಗಳಲ್ಲಿ, ಕೃಷಿ ಕಾರ್ಯ, ಬರವಣಿಗೆ, ಅಧ್ಯಯನ, ನಿತ್ಯಪೂಜಾಕಾರ್ಯ, ಮನೆಗೆ ಬಂದ ಅತಿಥಿಗಳೊಡನೆ ಮಾತು-ಕತೆ… ಹೀಗೆ ಸಾಗುತ್ತದೆ.

ತುಳು ಲಿಪಿ ತಜ್ಞ ಈ ಅಜ್ಜಯ್ಯ!

ಬಹುತೇಕರಿಗೆ ಅರಿವಿರುವಂತೆ ಮಾಧ್ವಪರಂಪರೆಗೆ ಸೇರಿದ ಹಳೆಯ ಮನೆತನಗಳಲ್ಲಿ ತುಳು ಲಿಪಿ ಮತ್ತು ಭಾಷಾ ಜ್ಞಾನ ಸಾಮಾನ್ಯವಾಗಿತ್ತು. ಇದಕ್ಕೆ ಕಾರಣ ಮಾಧ್ವ ಪರಂಪರೆಯ ಮೂಲಪುರುಷ ಮಧ್ವಾಚಾರ್ಯರ ಮೂಲ ತುಳುನಾಡಿನ ಪಾಜಕ ಕ್ಷೇತ್ರ. ಮತ್ತು ಆಚಾರ್ಯ ಮಧ್ವರು ತಾವು ಪ್ರಚುರಪಡಿಸಿದ ತತ್ವವಾದ ಅಪೂರ್ವ ರಹಸ್ಯ, ದೇವಗುಹ್ಯ ಪ್ರಮೇಯಗಳನ್ನೆಲ್ಲಾ ತಮ್ಮ ಶಿಷ್ಯರ ಮೂಲಕ ತುಳುಲಿಪಿಯಲ್ಲೇ ಬರೆಯಿಸಿಟ್ಟಿದ್ದರು, ಇನ್ನು ವಾದಿರಾಜ ಶ್ರೀಗಳು ರಚಿಸಿರುವ ಕೃಷ್ಣಾಷ್ಟಕ, ಲಕ್ಷ್ಮೀ ಶೋಭಾನೆ, ತುಳಸೀ ಸಂಕೀರ್ತನೆಯ ಪದ್ಯಗಳೂ ಸಹ ತಾಳೆ ಮರದ ಗರಿಗಳಲ್ಲಿ ತುಳು ಲಿಪಿಯಲ್ಲೇ ಬರೆಯಲ್ಪಟ್ಟದ್ದಾಗಿದೆ. ಇನ್ನು ಉಡುಪಿಯ ಅಷ್ಟಮಠಾಧೀಶರಲ್ಲಿ ಹೆಚ್ಚಿನವರು ಇಂದಿಗೂ ಸಹ ತಮ್ಮ ಹಸ್ತಾಕ್ಷರವನ್ನು ತುಳುಲಿಪಿಯಲ್ಲಿಯೇ ಹಾಕುತ್ತಿರುವುದು ಇದಕ್ಕೆ ಸಾಕ್ಷಿ. ಹೀಗಿರುತ್ತಾ ವೇದ, ಧರ್ಮಶಾಸ್ತ್ರ, ಜ್ಯೋತಿಷ್ಯ, ಪುರಾಣಗಳನ್ನು ತುಳು ಲಿಪಿಯ ಮಾಧ್ಯಮದಲ್ಲಿಯೇ ಓಲೆಗರಿ ಗ್ರಂಥಗಳ ಮೂಲಕವೇ ಅಧ್ಯಯನ ಮಾಡಿರುವುದು ಹಿರಿಯಜ್ಜ ಕೃಷ್ಣ ಭಟ್ಟರ ಹೆಗ್ಗಳಿಕೆ.

ತುಳು ಲಿಪಿಗೆ ಸಂಬಂಧಿಸಿದಂತೆ ಈವರೆಗೆ ಹಲವಾರು ಕೈಪಿಡಿ ಪುಸ್ತಕಗಳು ಲಭ್ಯವಿದ್ದರೂ, ತುಳು ಲಿಪಿ ಮತ್ತು ಅದರ ಸರಿಯಾದ ಉಚ್ಛಾರಣ ಕ್ರಮಗಳ ಕುರಿತು ಕೃಷ್ಣ ಭಟ್ಟರಲ್ಲಿ ಇದಮಿತ್ಥಂ ಎನ್ನಬಹುದಾಗಿರುವ ಜ್ಞಾನವಿದೆ. ಹಲವೆಡೆಗಳಲ್ಲಿ ಪ್ರಚಲಿತದಲ್ಲಿರುವ ತುಳು ಲಿಪಿಗಳಲ್ಲಿರುವ ಸಾಮಾನ್ಯ ತಪ್ಪುಗಳನ್ನು ಇವರು ಎತ್ತಿ ತೋರಿಸುತ್ತಾರೆ ಮತ್ತು ನಿಜವಾದ ತುಳು ಲಿಪಿ ಇದು ಎಂಬುದರ ಕುರಿತಾದ ದಾಖಲೆ ಸಹಿತವಾಗಿರುವ ಮಾಹಿತಿ ಇವರಲ್ಲಿದೆ. ಆದರೆ ಇದೀಗ ವಯೋಸಹಜ ತೊಂದರೆಗಳ ಕಾರಣದಿಂದ ಇವರ ಮಾತು ಬೇರೆಯವರಿಗೆ ಸರಿಯಾಗಿ ಅರ್ಥವಾಗುವುದಿಲ್ಲ, ಮತ್ತು ಶ್ರವಣ ಸಮಸ್ಯೆಯೂ ಈ ಹಿರಿಯಜ್ಜನನ್ನು ಕಾಡುತ್ತಿದೆ. ಆದರೂ ಇದ್ಯಾವುದೂ ಇವರ ಜೀವನೋತ್ಸಾಕ್ಕೆ ಅಡ್ಡಿಯಾಗಿಲ್ಲ. ಇನ್ನು ತುಳು ಲಿಪಿಯನ್ನು ಕಂಪ್ಯೂಟಿಕರಣಗೊಳಿಸಿ ಅದನ್ನು ನವತಲೆಮಾರಿಗೆ ಪರಿಚಯಿಸುವ ನಿಟ್ಟಿನಲ್ಲಿ ಖ್ಯಾತ ಭಾಷಾ ತಜ್ಞ ಕೆ.ಪಿ.ರಾವ್ ಅವರಿಂದ ತುಳು ಲಿಪಿ ಸಂಬಂಧಿತ ಕೀ ಬೋರ್ಡ್ ಒಂದನ್ನೂ ಸಹ ಇವರು ರೂಪಿಸಿಕೊಂಡಿದ್ದಾರೆ. ಈ ಎಲ್ಲಾ ಕಾರ್ಯದಲ್ಲಿ ಕೃಷ್ಣ ಭಟ್ ಅವರಿಗೆ ಅವರ ಕಿರಿಯ ಪುತ್ರ ವಿಶ್ವೇಶ್ ಭಟ್ ಅವರು ಸಹಕರಿಸುತ್ತಿದ್ದಾರೆ.

ಕಂಪ್ಯೂಟರ್ ಕಲಿತ ಅಜ್ಜ!

ಲವಲವಿಕೆಗೆ ಇನ್ನೊಂದು ಹೆಸರು ಎಂಬಂತಿರುವ ಕೃಷ್ಣ ಭಟ್ಟರು ಕೆಲವು ಸಮಯಗಳ ಹಿಂದೆ ಕಂಪ್ಯೂಟರ್ ಕಲಿಯುವ ಸಾಹಸಕ್ಕೂ ತಮ್ಮ ಮಗನ ಮಾರ್ಗದರ್ಶನದ ಮೂಲಕ ಕೈ ಹಾಕಿದ್ದರು. ಕೀ ಬೋರ್ಡ್ ನೋಡಿಕೊಂಡು ಅಕ್ಷರಗಳನ್ನು ಟೈಪ್ ಮಾಡುವಷ್ಟರ ಮಟ್ಟಿಗೆ ಈ ಅಜ್ಜ ಕಲಿತಾಗಿತ್ತು. ಆದರೆ ನಂತರದ ದಿನಗಳಲ್ಲಿ ವಯೋಸಹಜ ದೃಷ್ಟಿ ಸಮಸ್ಯೆ ಕಾಣಿಸಿಕೊಂಡ ಕಾರಣ ಕಂಪ್ಯೂಟರ್ ನಂಟು ದೂರವಾಯ್ತು.

ಆದರೆ 97ರ ಇಳಿ ವಯಸ್ಸಿನಲ್ಲೂ ಈಗಲೂ ಸಹ ಸದಾ ಕಾಲ ಏನನ್ನಾದರೂ ಬರೆಯುತ್ತಲೇ ಇರುವ ಕೃಷ್ಣ ಭಟ್ಟರ ಮನೆಗೆ ನೀವು ಹೋದಿರೆಂದಾದರೆ, ಅವರಿಗಾಗಿಯೇ ಮೀಸಲಿಟ್ಟಿರುವ ಮರದ ಕುರ್ಚಿ ಮತ್ತು ಮೇಜು ನಿಮ್ಮನ್ನು ಸ್ವಾಗತಿಸುತ್ತದೆ, ಹಾಗೂ ಆ ಮೇಜಿನ ಮೇಲೆ ಅಜ್ಜನ ಕೈಬರಹದಲ್ಲಿರುವ ಒಂದಷ್ಟು ಕಾಗದಗಳು ಅಲ್ಲಿರುತ್ತವೆ. ದಿನದ ಹೆಚ್ಚಿನ ಸಮಯವನ್ನು ಈ ಅಜ್ಜ ಬರವಣಿಗೆಗೆ ಮೀಸಲಿಡುತ್ತಾರೆ. ತುಳು ಭಾಷೆಗೆ ಸಂಬಂಧಿಸಿದ ವಿಚಾರಗಳು, ವೈದಿಕ ವಿಧಿವಿಧಾನಗಳಿಗೆ ಸಂಬಂಧಿಸಿದ ಬರವಣಿಗೆಗಳು ಇವೆಲ್ಲಾ ಇದರಲ್ಲಿ ಸೇರಿವೆ.


ತುಳುಭಾಷೆಗೆ ಈಗ ಸಾಂವಿಧಾನಿಕ ಮನ್ನಣೆ ಸಿಕ್ಕಿದೆ. ಆದರೆ ಈ ಮನ್ನಣೆ ತುಳು ಲಿಪಿಗೆ ಸಿಕ್ಕಿಲ್ಲ. ತುಳು ಲಿಪಿ ಯಾವುದೆಂಬುದರ ಬಗ್ಗೆ ನಿಶ್ಚಿತ ಜ್ಞಾನವಿಲ್ಲದಿರುವುದೇ ಇದಕ್ಕೆ ಕಾರಣ. ಆದರೆ ನಮ್ಮ ಈ ಹಿರಿಯಜ್ಜ ತುಳು ಲಿಪಿಯ ಕುರಿತು ಕಳೆದ ಹಲವಾರು ವರ್ಷಗಳಿಂದ ಹಗಳಿರುಳು ಚಿಂತನೆ ನಡೆಸಿದ್ದಾರೆ. ಅದರಲ್ಲೇ ಪಂಚಾಂಗ ರಚಿಸಬೇಕು, ಜನಸಾಮಾನ್ಯರಿಗೆ ತುಳು ಲಿಪಿಯ ಕುರಿತು ಒಲವು ಮೂಡಬೇಕು ಎಂಬ ಹಿತದೃಷ್ಟಿಯಿಂದ ತುಳು – ಕನ್ನಡ-ಇಂಗ್ಲಿಷ್ – ಹಿಂದಿ ವರ್ಣಮಾಲಾ ಪುಸ್ತಕವನ್ನು ಬಹುಶ್ರಮವಹಿಸಿ (ಓದುಗರಿಗೆ ಸ್ಪಷ್ಟವಾಗಿ ಅರ್ಥವಾಗಲು ತುಳು ಲಿಪಿ ಅಕ್ಷರಗಳನ್ನು ಕೈಯಿಂದ ಬರೆಯಿಸಿ ಸ್ಕ್ಯಾನ್ ಮಾಡಿ ಈ ಪುಸ್ತಕದಲ್ಲಿ ಅಂಟಿಸಲಾಗಿದೆ) ಪ್ರಕಟಿಸಿದ್ದಾರೆ. ಅಜ್ಜನ ಕಲ್ಪನೆಯಂತೆ ಈ ಪುಸ್ತಕ ಮೂಡಿಬಂದಿದೆ. ಇನ್ನು ತುಳುನಾಡಿನ ಚಿಣ್ಣರಿಗಾಗಿ “ಅಮೃತ ಮದಿಪು” ಎಂಬ ವಿಶಿಷ್ಟ ಭಾಷಾ ಪುಸ್ತಕವೂ ಸಹ ಪ್ರಕಟಗೊಂಡಿದ್ದು, ಅದರಲ್ಲಿ, ತುಳು ವರ್ಣಮಾಲೆ (ಕನ್ನಡ, ಹಿಂದಿ, ಇಂಗ್ಲಿಷ್ ವರ್ಣಮಾಲೆ ಸಹಿತ), ಕುಟುಂಬ ಸಂಬಂಧಗಳ ಪರಿಚಯವು ಚಿತ್ರ ಸಹಿತವಾಗಿ (ಉದಾ., ಅಪ್ಪೆರೇ, ಅಮ್ಮರೇ, ಅಜ್ಜೆರೇ… ಎಂದು ತುಳು ಭಾಷಾ ಉಚ್ಛಾರಕ್ಕೆ ಅನುಗುಣವಾಗಿ) ಮತ್ತು ತುಳು ಲಿಪಿಯಲ್ಲಿ ವಾದಿರಾಜ ಯತಿ ವಿರಚಿತ ಶ್ರೀ ಕೃಷ್ಣಾಷ್ಟಕಂ, ತುಳಸೀ ಸಂಕೀರ್ತನೆಯ ಪದ್ಯಗಳು, ಶಾಲಿಗ್ರಾಮ ಲಕ್ಷಣ ಗ್ರಂಥದ ಮೂಲ ಓಲೆಗರಿಗಳನ್ನು ಸ್ಕ್ಯಾನ್ ಮಾಡಿ ಅವುಗಳಲ್ಲಿ ಇರುವ ವಿಷಯಗಳನ್ನು ಕನ್ನಡ ಅಕ್ಷರದಲ್ಲಿ ಟೈಪ್ ಮಾಡಲಾಗಿದೆ. ಈ ಎರಡು ಪುಸ್ತಕಗಳು ತುಳು ಲಿಪಿಯನ್ನು ಸ್ಥೂಲವಾಗಿ ಹಾಗೂ ಸಮಗ್ರವಾಗಿ ಅಧ್ಯಯನ ಮಾಡಲು ಬಯಸುವವರಿಗೆ ಮಾಹಿತಿ ಗ್ರಂಥವಾಗಿ ಮೂಡಿಬಂದಿರುವುದು ಈ ಹಿರಿಯಜ್ಜನ ಶ್ರಮಕ್ಕೆ ಸಂದ ಗೌರವ ಎನ್ನಬಹುದು.


ಸಮ್ಮಾನ, ಪ್ರಶಸ್ತಿಗಳಿಂದ ದೂರವೇ ಉಳಿದು ತನ್ನ ಜೀವನದ ಬಹು ಆಯಸ್ಸನ್ನು ತುಳು ಭಾಷೆ ಮತ್ತು ಲಿಪಿಯ ಅಧ್ಯಯನ, ಪ್ರಚಾರಕ್ಕಾಗಿಯೇ ಮುಡುಪಾಗಿಟ್ಟು ಕಿನ್ನಿಗೋಳಿ ಸಮೀಪದ ಪಕ್ಷಿಕೆರೆ ಎಂಬಲ್ಲಿ ಸಾರ್ಥಕ ಜೀವನವನ್ನು ನಡೆಸುತ್ತಾ ತಮ್ಮ ಕಿರಿಯ ಪುತ್ರನೊಂದಿಗೆ  ನೆಲೆಸಿರುವ ಈ ಹಿರಿಯಜ್ಜನ ಶ್ರಮವನ್ನು ಎಲ್ಲರಿಗೂ ಪರಿಚಯಿಸುವ ಹಾಗೂ ತುಳು ಲಿಪಿ ಸಂಬಂಧಿತವಾಗಿ ಇವರು ನಡೆಸಿರುವ ಅಧ್ಯನವನ್ನು ಮುಂದಿನ ತಲೆಮಾರಿಗೆ ವರ್ಗಾಯಿಸುವ ಗುರುತರ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ.

– ಹರಿಪ್ರಸಾದ್ ನೆಲ್ಯಾಡಿ

ಟಾಪ್ ನ್ಯೂಸ್

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

web exclusive keer

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.