ಗತವೈಭವದ ಜ್ಞಾನ ಪರಂಪರೆಯ ಕಡೆಗೊಂದು ನೋಟ


ದಿನೇಶ ಎಂ, Aug 14, 2022, 5:50 PM IST

THUMBNAIL UV WEB EX – DINESHA M

ಜ್ಞಾನ ದೇಗುಲಗಳ ವಿಷಯದಲ್ಲಿ ಭಾರತ ತನ್ನದೇ ಆದ ವೈಶಿಷ್ಟ್ಯತೆ ಮತ್ತು ಪ್ರಾಧಾನ್ಯತೆಗಳನ್ನು ಹೊಂದಿದೆ. ಅರಿವೇ ಗುರು ಗುರುವೇ ದೇವರು ಅನ್ನುವ ಹಾಗೆ ಅರಿವಿನ ಇರವು ಮತ್ತು ಅದನ್ನು ನೀಡೋ ಗುರುವಿಗೆ ಹಿಂದಿನ ಅಖಂಡ ಭಾರತ ಜಾತಿ – ಮತ ರಾಜಕೀಯಗಳನ್ನು ಬದಿಗಿಟ್ಟು ಮಾನ್ಯತೆ ನೀಡಿದೆ. ಈ ಕಾರಣಗಳಿಂದ ಅಂದು ಗುರುಕುಲ ಮತ್ತು ವಿಶ್ವ ವಿದ್ಯಾಲಯಗಳ ಪರಿಕಲ್ಪನೆ ಬೇರೆ ಯಾವ ದೇಶಕ್ಕೆ ಹೋಲಿಸಿದರೂ ಸರಿಸಾಟಿಯೇ ಇಲ್ಲದ ಉನ್ನತ ಮಾದರಿ ಭಾರತದಲ್ಲಿತ್ತು.

ಈ ಪರಿಕಲ್ಪನೆಯಳ ಪ್ರಭಾವ ಮತ್ತು ಜ್ಞಾನಾರ್ಜನೆಗೆ ಭಾರತೀಯರು ನೀಡಿದ ಮಹತ್ವದ ಫಲವೇ ಭಾರತ ವಿಶ್ವ ಗುರು ಅನ್ನುವ ಪರಿಕಲ್ಪನೆ ಅಸ್ಥಿತ್ವಕ್ಕೆ ಬಂತು ಮತ್ತು ರಾಜರ ಕಾಲದಲ್ಲೂ ಅತಿ ಹೆಚ್ಚಿನ ಎಲ್ಲಾ ಸಂಸ್ಥಾನಗಳು ಶಿಕ್ಷಣಕ್ಕೆ ಮಹತ್ವ ಕೊಟ್ಟವು. ಆದರೆ ಇತಿಹಾಸ ಎಂದೂ ಸರಿ – ತಪ್ಪು, ಒಳಿತು – ಕೆಡುಕು, ನಾಶ – ಸೃಷ್ಟಿಗಳನ್ನು ಒಳಗೊಂಡಿರುತ್ತವೆ.

ಈ ಪ್ರಕ್ರಿಯೆಯಲ್ಲಿ ಮರಳಿ ಅಸ್ತಿತ್ವಕ್ಕೆ ಬಾರದೆ ಇರುವಂತಹ ಭಾರತದ ಪ್ರಾಚೀನ ವಿಶ್ವವಿದ್ಯಾಲಯಗಳನ್ನು ನಾವು ಮರೆಯುವಂತಿಲ್ಲ, ಅವುಗಳ ಕೊಡುಗೆ ಭಾರತದ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸಿವೆ, ಅನೇಕ ನಿಗೂಢ ಮತ್ತು ಮೌಲ್ಯಯುತ ಜ್ಞಾನ ಮತ್ತು ರಹಸ್ಯ ವಿದ್ಯೆಗಳ ಬೃಹತ್‌ಬಂಡಾರಗಳನ್ನು ಇವು ಒಳಗೊಂಡಿದ್ದವು.

ವೇದಗಳ ಕಾಲಗಳಿಂದಲೂ ಗುರುಕುಲ, ಮತ್ತು ಆಶ್ರಮಗಳು ಕಲಿಕೆಯ ಪ್ರಾಥಮಿಕ ಮೂಲಗಳಾಗಿದ್ದು, ಇಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ವಿಷಯಗಳು ಮತ್ತು ಪ್ರಾಯೋಗಿಕ ಜೀವನಗಳ ಬಗ್ಗೆ ಕಲಿಸಿಕೊಡಲಾಗುತ್ತಿತ್ತು. ಅಂತಹ ಗತವೈಭವದ ಜ್ಞಾನ ಪರಂಪರೆಯನ್ನು ಸಾರುವ ಇಂದು ಅವಶೇಷಗೊಂಡ ವಿಶ್ವವಿದ್ಯಾಲಯಗಳು ಇಂತಿವೆ.

1) ನಳಂದ ವಿಶ್ವವಿದ್ಯಾನಿಲಯ (ಬಿಹಾರ್) :

ವಿಶ್ವದ ಅತ್ಯಂತ ಹಳೆಯ ವಿಶ್ವವಿದ್ಯಾಯಗಳಲ್ಲಿ ಒಂದೆನಿಸಿರುವ ಹಾಗೂ ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳಲ್ಲೊಂದಾಗಿರುವ ನಳಂದ 5ನೇ ಶತಮಾನದಲ್ಲಿ ಶಕ್ರಾದಿತ್ಯರಿಂದ ಸ್ಥಾಪಿತವಾದ ಇದು ಗುಪ್ತಾ ಸಾಮ್ರಾಜ್ಯದ ಅಡಿಯಲ್ಲಿ 700 ವರ್ಷಗಳಿಗೂ ಹೆಚ್ಚು ಹಾಗೂ ನಂತರ ಹರ್ಷ ಸಾಮ್ರಾಜ್ಯದ ಆಳ್ವಿಕೆಯಲ್ಲಿ ಸುಮಾರು 12 ನೇ ಶತಮಾನದ ಅಂತ್ಯದವರೆಗೂ ಅಭಿವೃದ್ಧಿ ಹೊಂದಿತು.

2) ತಕ್ಷಶಿಲಾ ವಿಶ್ವವಿದ್ಯಾಲಯ ( ಪ್ರಸ್ತುತ ಪಾಕಿಸ್ತಾನದಲ್ಲಿದೆ) :

ತಕ್ಷಶಿಲಾ ವಿಶ್ವವಿದ್ಯಾಲಯವೂ ಮಹತ್ತರವಾದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವಗಳ ಕಾರಣದಿಂದಾಗಿ ಇಂದು ಇದು ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳಲ್ಲೊಂದಾಗಿದೆ. 10000ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ, ಈ ದೊಡ್ಡದಾದ ಮತ್ತು ಭಾರತದ ಅತ್ಯಂತ ಪ್ರಾಚೀನ ಕಲಿಕಾ ಕೇಂದ್ರವು ಅಧ್ಯಯನಕ್ಕೆ ನೆಲೆಯಾಗಿತ್ತು.

3) ಸೋಮಪುರ ವಿಶ್ವವಿದ್ಯಾಲಯ (ಪ್ರಸ್ತುತ ಇದು ಬಾಂಗ್ಲಾದೇಶದಲ್ಲಿದೆ) :

ಸ್ಮಾರಕ ರೂಪದಲ್ಲಿರುವ ಬೌದ್ದ ಮಠವಾಗಿರುವ ಸೋಮಪುರ ವಿಶ್ವವಿದ್ಯಾಲಯವು ಪಾಲಾ ರಾಜವಂಶಕ್ಕೂ ಹಿಂದಿನದಾಗಿದ್ದು, ಇದನ್ನು 8 ನೇ ಶತಮಾನದಲ್ಲಿ ಧರ್ಮಪಾಲನು ನಿರ್ಮಿಸಿದನು. ಮಧ್ಯದಲ್ಲಿ ದೈತ್ಯ ಸ್ತೂಪವನ್ನು ಹೊಂದಿದೆ ಮತ್ತು ಸುಮಾರು 27 ಎಕರೆ ಪ್ರದೇಶದಲ್ಲಿ ಹರಡಿಕೊಂಡಿತ್ತು.

4) ವಿಕ್ರಮಶಿಲಾ ವಿಶ್ವವಿದ್ಯಾಲಯ (ಬಿಹಾರ್) :

ನಳಂದ ವಿಶ್ವವಿದ್ಯಾಲಯದ ಕಲಿಸುವ ಗುಣಮಟ್ಟದಲ್ಲಿ ಕುಸಿತ ಕಂಡುಬಂದ ಪರಿಣಾಮವಾಗಿ ವಿಕ್ರಮಶಿಲಾ ಅಸ್ತಿತ್ವಕ್ಕೆ ಬಂತು. ಇದನ್ನೂ ಕೂಡಾ ಪಾಲಾ ಸಾಮ್ರಾಜ್ಯದ ಆಡಳಿತಗಾರ ಧರ್ಮಪಾಲಾನಿಂದ ನಿರ್ಮಿಸಲ್ಪಟ್ಟಿತು. ಈ ಮಠವು ಸುಮಾರು 100 ಕ್ಕೂ ಹೆಚ್ಚು ಶಿಕ್ಷಕರು ಮತ್ತು 1000 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದ್ದು ನಳಂದಾಗೆ ಕಠಿಣ ಸವಾಲನ್ನು ನೀಡುತ್ತಿತ್ತು.

5)ಪುಷ್ಪಗಿರಿ ವಿಶ್ವವಿದ್ಯಾಲಯ(ಒಡಿಶಾ) :

ಪ್ರಾಚೀನ ಭಾರತದ ಇನ್ನೊಂದು ಕಲಿಕೆಯ ಕೇಂದ್ರವೆಂದರೆ ಅದು 3ನೇ ಶತಮಾನದಲ್ಲಿ ನಿರ್ಮಿತವಾದ ಪುಷ್ಪಗಿರಿ ವಿಶ್ವವಿದ್ಯಾಲಯ ಈ ವಿದ್ಯಾಲಯವು 12ನೇ ಶತಮಾನಗಳವರೆಗೆ ಅಭಿವೃದ್ದಿಯನ್ನು ಹೊಂದಿತ್ತು. ಆಯುರ್ವೇದ ಮತ್ತು ಔಷಧದ ಬಗ್ಗೆ ಸಂಶೋಧನೆಗೆ ಹೆಚ್ಚು ಮಹತ್ವವನ್ನು ನೀಡಲಾಗುತ್ತಿದ್ದ ಅನೇಕ ಶಿಕ್ಷಕರು ಮತ್ತು ಅವರ ಶಿಷ್ಯರುಗಳಿಗೆ ನೆಲೆಯಾಗಿತ್ತು.

ಇಂತಹ ಅಮೂಲ್ಯ ರತ್ನಗಳು ದೇವಿ ಭಾರತಿಯ ಮುಕುಟಗಳಿಗೆ ವಜ್ರದ ಹರಳಿನಂತೆ ಶೋಭೆ ನೀಡುತ್ತಿದ್ದವು. ಅಂದು ಗುರು ಸಂಸೃಪ್ತನಾಗುವಂತೆ ವಿದ್ಯಾರ್ಥಿ ಸಕಲ ವಿದ್ಯಾಪಾರಂಗತನಾದರೆ ಸಾಕಿತ್ತು, ಅದರ ಜೊತೆಗೆ ಗುರುದಕ್ಷಿಣೆ ಮತ್ತು ವಿದ್ಯಾರ್ಥಿಯಾಗಿದ್ದಷ್ಟು ಕಾಲ ಅಲ್ಲಿ ತಾನು ದುಡಿಯುವ ದುಡಿಮೆಯೇ ದಕ್ಷಿಣೆಯಾಗಿತ್ತು. ಇಂದಿನ ವ್ಯಾಪಾರಿಕರಣ ನಾಚುವಂತಿದೆ ಅಂದಿನ ಶಿಕ್ಷಣ ಪರಂಪರೆಯ ಇತಿಹಾಸ.

  • ದಿನೇಶ ಎಂ, ಹಳೆನೇರೆಂಕಿ.

ಟಾಪ್ ನ್ಯೂಸ್

ತುಳುನಾಡಿನ ಸಾಂಸ್ಕೃತಿಕ ವೈಭವಕ್ಕೆ ಸಾಕ್ಷಿಯಾದ “ಕುಡ್ಲದ ಪಿಲಿ ಪರ್ಬ’

ತುಳುನಾಡಿನ ಸಾಂಸ್ಕೃತಿಕ ವೈಭವಕ್ಕೆ ಸಾಕ್ಷಿಯಾದ “ಕುಡ್ಲದ ಪಿಲಿ ಪರ್ಬ’

ದುರ್ಗಾ ದೌಡ್‌-ಹಿಂದೂ ಶಕ್ತಿ ಸಂಚಲನ; ಪಿಎಫ್ಐ ಭಾರತಕ್ಕೆ ವಿಷ: ಕಾಜಲ್‌ ಹಿಂದೂಸ್ಥಾನಿ

ದುರ್ಗಾ ದೌಡ್‌-ಹಿಂದೂ ಶಕ್ತಿ ಸಂಚಲನ; ಪಿಎಫ್ಐ ಭಾರತಕ್ಕೆ ವಿಷ: ಕಾಜಲ್‌ ಹಿಂದೂಸ್ಥಾನಿ

ಉಳ್ಳಾಲ: ಪೊಲೀಸ್‌ ಸಿಬಂದಿಗೆೆ ಕಾರು ಢಿಕ್ಕಿ

ಉಳ್ಳಾಲ: ಪೊಲೀಸ್‌ ಸಿಬಂದಿಗೆೆ ಕಾರು ಢಿಕ್ಕಿ

ದನದ ಕೊಟ್ಟಿಗೆಗೆ ಬೆಂಕಿ: ಜಾನುವಾರುಗಳಿಗೆ ಗಾಯ

ದನದ ಕೊಟ್ಟಿಗೆಗೆ ಬೆಂಕಿ: ಜಾನುವಾರುಗಳಿಗೆ ಗಾಯ

ಮಹಾತ್ಮಾ ಗಾಂಧಿ ಸೇವಾ ಪ್ರಶಸ್ತಿ ಪ್ರದಾನ: ವರ್ಷದೊಳಗೆ ಗಾಂಧಿ ಭವನ ಪೂರ್ಣ: ಸಿಎಂ

ಮಹಾತ್ಮಾ ಗಾಂಧಿ ಸೇವಾ ಪ್ರಶಸ್ತಿ ಪ್ರದಾನ: ವರ್ಷದೊಳಗೆ ಗಾಂಧಿ ಭವನ ಪೂರ್ಣ: ಸಿಎಂ

ಆರು ತಿಂಗಳ ಬಳಿಕ ಬದನವಾಳು ಅಭಿವೃದ್ಧಿ: ರಾಹುಲ್‌ ಗಾಂಧಿ

ಆರು ತಿಂಗಳ ಬಳಿಕ ಬದನವಾಳು ಅಭಿವೃದ್ಧಿ: ರಾಹುಲ್‌ ಗಾಂಧಿ

indಗುವಾಹಟಿಯಲ್ಲಿ ಗೆಲುವು; ಟೀಮ್‌ ಇಂಡಿಯಾಕ್ಕೆ ಸರಣಿ

ಗುವಾಹಟಿಯಲ್ಲಿ ಗೆಲುವು; ಟೀಮ್‌ ಇಂಡಿಯಾಕ್ಕೆ ಸರಣಿ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

WEB EXCLUSIVE BOOK DD enstine dinesh copy

ಅಲ್ಬರ್ಟ್ ಐನ್ ಸ್ಟೈನ್ “ದಡ್ಡ” ಎಂದು ಅಧ್ಯಾಪಕರು ತಾಯಿಗೆ ಪತ್ರ ಬರೆದಿದ್ರು…ಆದರೆ

INSPIRATIONAL STORY OF A VILLAGE TEACHER

ಈ ಶಿಕ್ಷಕಿಯದ್ದು ಅವಿರತ ಸೇವೆ…25 ಕಿ.ಮೀ ನಡಿಗೆ…ಮನೆ, ಮನೆಗೆ ತೆರಳಿ ಪಾಠ ಹೇಳ್ತಾರೆ!

thumbnail web exclusive food

ರುಚಿ, ರುಚಿಯಾದ ಸೋಯಾ ಚಿಲ್ಲಿ…ಸರಳ ವಿಧಾನದ ರೆಸಿಪಿ ನಿಮಗಾಗಿ…

web exclusive – cricket story

ಡಿಪ್ರೆಶನ್ ನಲ್ಲಿದ್ದ ದಿನೇಶ್ ಕಾರ್ತಿಕ್ ‘ಮಿಸ್ಟರ್ ಫಿನಿಶರ್’ ಆದ ಕಥೆ; ಇದು ಲವ್ ಸ್ಟೋರಿಯಲ್ಲ

1-sdsdddad

ಬಣ್ಣದ ವೈಭವ-4 : ಮರೆತು ಹೋದ ರಾಕ್ಷಸ ಪಾತ್ರಗಳ ಮೇಕಪ್ ಕಲೆಗಾರಿಕೆ

MUST WATCH

udayavani youtube

ದಿನ7 | ಕಾಳರಾತ್ರಿ ದೇವಿ

udayavani youtube

ಮೂಳೂರಿನಲ್ಲಿ ತೊರಕೆ ಮೀನಿನ ಸುಗ್ಗಿ, ಮೀನುಗಾರರು ಫುಲ್ ಖುಷಿ ಮಾರ್ರೆ

udayavani youtube

ಉಚ್ಚಿಲದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಶತವೀಣಾವಲ್ಲರಿ ಕಾರ್ಯಕ್ರಮ

udayavani youtube

ಭಾಷಣ ಮಾಡದೆ… ಜನರ ಬಳಿ ಕ್ಷಮೆ ಕೇಳಿದ ಪ್ರಧಾನಿ ಮೋದಿ… ಕಾರಣ ಇಲ್ಲಿದೆ…

udayavani youtube

ದಿನ6| ಕಾತ್ಯಾಯಿನಿ ದೇವಿ|ಕಾತ್ಯಾಯಿನಿ ದೇವಿ ಪೂಜೆಯ ಪ್ರಯೋಜನವೇನು ಗೊತ್ತೇ. | Udayavani

ಹೊಸ ಸೇರ್ಪಡೆ

ತುಳುನಾಡಿನ ಸಾಂಸ್ಕೃತಿಕ ವೈಭವಕ್ಕೆ ಸಾಕ್ಷಿಯಾದ “ಕುಡ್ಲದ ಪಿಲಿ ಪರ್ಬ’

ತುಳುನಾಡಿನ ಸಾಂಸ್ಕೃತಿಕ ವೈಭವಕ್ಕೆ ಸಾಕ್ಷಿಯಾದ “ಕುಡ್ಲದ ಪಿಲಿ ಪರ್ಬ’

ದುರ್ಗಾ ದೌಡ್‌-ಹಿಂದೂ ಶಕ್ತಿ ಸಂಚಲನ; ಪಿಎಫ್ಐ ಭಾರತಕ್ಕೆ ವಿಷ: ಕಾಜಲ್‌ ಹಿಂದೂಸ್ಥಾನಿ

ದುರ್ಗಾ ದೌಡ್‌-ಹಿಂದೂ ಶಕ್ತಿ ಸಂಚಲನ; ಪಿಎಫ್ಐ ಭಾರತಕ್ಕೆ ವಿಷ: ಕಾಜಲ್‌ ಹಿಂದೂಸ್ಥಾನಿ

ಉಳ್ಳಾಲ: ಪೊಲೀಸ್‌ ಸಿಬಂದಿಗೆೆ ಕಾರು ಢಿಕ್ಕಿ

ಉಳ್ಳಾಲ: ಪೊಲೀಸ್‌ ಸಿಬಂದಿಗೆೆ ಕಾರು ಢಿಕ್ಕಿ

ದನದ ಕೊಟ್ಟಿಗೆಗೆ ಬೆಂಕಿ: ಜಾನುವಾರುಗಳಿಗೆ ಗಾಯ

ದನದ ಕೊಟ್ಟಿಗೆಗೆ ಬೆಂಕಿ: ಜಾನುವಾರುಗಳಿಗೆ ಗಾಯ

ಮಹಾತ್ಮಾ ಗಾಂಧಿ ಸೇವಾ ಪ್ರಶಸ್ತಿ ಪ್ರದಾನ: ವರ್ಷದೊಳಗೆ ಗಾಂಧಿ ಭವನ ಪೂರ್ಣ: ಸಿಎಂ

ಮಹಾತ್ಮಾ ಗಾಂಧಿ ಸೇವಾ ಪ್ರಶಸ್ತಿ ಪ್ರದಾನ: ವರ್ಷದೊಳಗೆ ಗಾಂಧಿ ಭವನ ಪೂರ್ಣ: ಸಿಎಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.