ಯೋಗಕ್ಕೆ ತಾರತಮ್ಯ ತಿಳಿದಿಲ್ಲ: ಯೋಗದಿಂದ ಆರೋಗ್ಯ


Team Udayavani, Jun 22, 2020, 9:02 PM IST

Yoga

ಯೋಗದಿಂದ ಅರೋಗ್ಯ ಯೋಗವು ಏಕತೆಯ ಶಕ್ತಿಯಾಗಿ ಹೊರಹೊಮ್ಮಿದೆ. ಕೋವಿಡ್ ನ ಸಂಕಷ್ಟದಲ್ಲಿರುವ ಜಗತ್ತು ಯೋಗಕ್ಕೆ ಹಿಂದೆಂದಿಗಿಂತಲೂ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದೆ. ಪ್ರಾಚೀನ ಭಾರತದ ಈ ಅಭ್ಯಾಸದಿಂದ ಜಗತ್ತಿನ ಸಹಸ್ರಾರು ರೋಗಿಗಳು ಕೋವಿಡ್ ಸೋಂಕನ್ನು ಸೋಲಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್. 6ನೇ ಅಂತಾರಾಷ್ಟ್ರೀಯ ಯೋಗ ದಿನ ಪ್ರಯುಕ್ತ ಪ್ರಧಾನಿ “ಯೋಗವು ಜಗತ್ತಿನ ಮಾನವೀಯ ಬಂಧಗಳನ್ನು ಗಾಢವಾಗಿಸುತ್ತಿದೆ. ಯೋಗಕ್ಕೆ ತಾರತಮ್ಯ ತಿಳಿದಿಲ್ಲ. ಯಾವುದೇ ಜನಾಂಗ, ಬಣ್ಣ, ಲಿಂಗ, ನಂಬಿಕೆ ಮತ್ತು ರಾಷ್ಟ್ರದ ಗಡಿಗಳಿಗೆ ಇದು ಸೀಮಿತವಾಗಿಲ್ಲ. ಯಾರೂ ಬೇಕಾದರೂ ಯೋಗವನ್ನು ಸ್ವೀಕರಿಸಬಹುದು’ ಎಂದು ತಿಳಿಸಿದರು.

ಕಾಯಿಲೆ ಹತ್ತಿರ ಸುಳಿಯದಂತೆ ಚೈತನ್ಯ ತುಂಬುವ, ಮನಸ್ಸು ಸದೃಢಗೊಳಿಸಬಲ್ಲ ಶಕ್ತಿ ಯೋಗಕ್ಕಿದೆ. ದೇಹವನ್ನು ಆರೋಗ್ಯವಾಗಿಟ್ಟುಕೊಳ್ಳಲು ಯೋಗ ಉತ್ತಮ ಉಪಾಯ. ಯೋಗ ಮಾಡುವುದರಿಂದ ಮನಸ್ಸು ಮತ್ತು ದೇಹ ಎರಡನ್ನೂ ಆರೋಗ್ಯವಾಗಿ ಇಟ್ಟುಕೊಳ್ಳಬಹುದು. ದೈನಂದಿನ ಜೀವನದಲ್ಲಿ ಪುರುಷರು ಮತ್ತು ಮಹಿಳೆಯರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲಿಕ್ಕೆ, ಮಾನಸಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಯೋಗ ಸೂಕ್ತ ಮಾರ್ಗದರ್ಶಕವಾಗಿದೆ. ಪ್ರತಿ ನಿತ್ಯ ಯೋಗ ಮಾಡುವುದರಿಂದ ಆರೋಗ್ಯದಲ್ಲಿ ಆಗಬಹುದಾದ ಬದಲಾವಣೆ ಅಥವಾ ಉಪಯೋಗಗಳನ್ನು ತಿಳಿದುಕೊಳ್ಳೋಣ.

ಒತ್ತಡ ಕಡಿಮೆ ಮಾಡುತ್ತದೆ
ಜೀವನದಲ್ಲಿ ಸಾಮಾನ್ಯವಾಗಿ ಬರುವಂತಹ ಅನೇಕ ಒತ್ತಡಗಳನ್ನು ಎದುರಿಸಲು ಮಾನಸಿಕ ಬಲ ಅಗತ್ಯ, ಇದನ್ನು ಯೋಗ ತಂದು ಕೊಡುವುದು, ಸಾರ್ಥಕ ಬದುಕಿಗಾಗಿ, ಶಿಸ್ತನ್ನು ಅಳವಡಿಸಿಕೊಳ್ಳಲು ಯೋಗ ಸೂಕ್ತ ಮಾರ್ಗವಾಗಿದೆ.

ಮಾನಸಿಕ ಶಾಂತಿ
ಯೋಗಾಸನಗಳ ಜೊತೆಗೆ ಸೂರ್ಯ ನಮಸ್ಕಾರ, ಪ್ರಾಣಾಯಾಮ, ಧ್ಯಾನ ಕೂಡ ಉತ್ತಮ ಪೂರಕ ಮಾರ್ಗ ಹೌದು. ಇದರಿಂದ ಚಂಚಲತೆ ದೂರವಾಗಿ, ಮಾನಸಿಕವಾಗಿ ಶಾಂತಿ ಲಭಿಸುವದು, ಮನಸ್ಸನ್ನು ನಿಗ್ರಹಿಸುವ ಶಕ್ತಿ ವೃದ್ಧಿಯಾಗುವದು.

ಆರೋಗ್ಯ ಬಲದ ವೃದ್ಧಿಗಾಗಿ
ಒಳ್ಳೆಯ ಆರೋಗ್ಯ ಎಂದರೆ ಕೇವಲ ರೋಗದಿಂದ ದೂರವಿರುವುದು ಮಾತ್ರವಲ್ಲ ಮನಸ್ಸು ಮತ್ತು ಭಾವನೆಗಳನ್ನು ಸಮತೋಲನದಲ್ಲಿ ಇಟ್ಟುಕೊಳ್ಳುವುದು ಮುಖ್ಯ. ಯೋಗ ಮಾಡುವುದರಿಂದ ದೃಢವಾಗಿ ಇರಲು ಜೊತೆಗೆ ಹಲವಾರು ರೋಗಗಳಿಂದ ದೂರವಾಗಿ ಸಂತೋಷ ಉಲ್ಲಾಸದಿಂದ ಇರಲು ಸಹಾಯವಾಗುತ್ತದೆ.

ಉತ್ತಮ ರಕ್ತ ಸಂಚಲನಕ್ಕಾಗಿ
ಉಸಿರಾಟದ ಮತ್ತು ಇತರ ಆಸನಗಳಿಂದ ದೇಹದ ರಕ್ತ ಸಂಚಲನವನ್ನು ಸರಾಗವಾಗಿಸುವಲ್ಲಿ ಯೋಗ ಸಹಕರಿಸುತ್ತದೆ. ಈ ಸರಾಗ ರಕ್ತಸಂಚಲನದಿಂದ ಆಮ್ಲಜನಕ ಮತ್ತು ಜೀವಸತ್ವಗಳು ದೇಹದ ಎಲ್ಲ ಭಾಗಗಳಿಗೂ ಸರಿಯಾಗಿ ಸಂಚಲನವಾಗುವುದರಿಂದ ಆರೋಗ್ಯಯುತ ಅಂಗಗಳು ಮತ್ತು ಕಾಂತಿಯುತವಾದ ಚರ್ಮವನ್ನು ಪಡೆಯಬಹುದು.

ಆರೋಗ್ಯಯುತವಾದ ಹೃದಯಕ್ಕಾಗಿ
ಸ್ವಲ್ಪ ಕಾಲ ಉಸಿರನ್ನು ಬಿಗಿ ಹಿಡಿದು ಮಾಡುವ ಮತ್ತು ಇನ್ನಿತರ ಆಸನಗಳು ಹೃದಯ ಮತ್ತು ಅಪದಮನಿಯ ಆರೋಗ್ಯವನ್ನು ಕಾಪಾಡುತ್ತವೆ. ಯೋಗ ರಕ್ತಸಂಚಲನವನ್ನು ಸರಾಗವಾಗಿಸುವುದರಿಂದ ರಕ್ತ ಹೆಪ್ಪುಗಟ್ಟುವಿಕೆಯಂತಹ ಕ್ರಿಯೆಯಿಂದ ರಕ್ಷಿಸಿ ಹೃದಯವನ್ನು ಆರೋಗ್ಯಯುತವಾಗಿರಿಸಿತ್ತದೆ.

ನೋವುಗಳನ್ನು ತಡೆಯುತ್ತದೆ
ಮನುಷ್ಯರಿಗೆ ಸಾಮಾನ್ಯವಾಗಿ ಕಾಡುವ ಸ್ಥೂಲತ್ವ, ಸೊಂಟ ನೋವು, ಬೆನ್ನು ನೋವು, ಹೊಟ್ಟೆ ನೋವು, ಕೀಲು ನೋವು, ಮುಟ್ಟಿನ ಸಮಸ್ಯೆ, ಮಲಬದ್ಧತೆ, ಉಸಿರಾಟದ ತೊಂದರೆ ಇನ್ನೂ ಹಲವಾರು ಸಮಸ್ಯೆಗಳಿಗೆ ಹಲವು ನಿರ್ಧಿಷ್ಟವಾದ ಆಸನಗಳನ್ನು ಕ್ರಮಬದ್ಧವಾಗಿ, ನಿಯಮಿತ ಆಹಾರ ಸೇವನೆಯಿಂದ ಅಳವಡಿಸಿಕೊಂಡರೆ ಸಮಸ್ಯೆಗಳನ್ನು ನಿವಾರಿಸಿಕೊಂಡು ಪರಿಹಾರ ಕಾಣಲು ಸಾಧ್ಯ.


ಉತ್ತಮ ಉಸಿರಾಟ ಕ್ರಿಯೆ
ಯೋಗದಲ್ಲಿ ಬರುವ ಧೀರ್ಘ ಉಸಿರಾಟ ಮತ್ತು ನಿಧಾನ ಉಸಿರಾಟದ ಆಸನಗಳಿಂದ ಶ್ವಾಸಕೋಶ ಮತ್ತು ಹೊಟ್ಟೆಯ ಸಾಮರ್ಥ್ಯವನ್ನು ಹೆಚ್ಚಿಸಬಹುದು .

ಸಮತೋಲನವನ್ನು ಹೆಚ್ಚಿಸುತ್ತದೆ
ದಿನನಿತ್ಯದ ಜಂಜಾಟದಲ್ಲಿ ಕುಳಿತುಕೊಳ್ಳುವ ಬೇರೆಬೇರೆ ಭಂಗಿಯಿಂದಾಗಿ ವಯಸ್ಸಾಗುತ್ತಿದ್ದಂತೆ ನಾವು ನಮ್ಮ ಸಮತೋಲನವನ್ನು ಕಳೆದುಕೊಳ್ಳುತ್ತೇವೆ.ಈ ಕಾರಣದಿಂದಾಗಿ ಬೆನ್ನು ನೋವು, ಮೂಳೆಯ ಒಡೆತ, ಸೆಳೆತ ಇವುಗಳೆಲ್ಲ ಕಾಣಿಸಿಕೊಳ್ಳುತ್ತವೆ. ಯೋಗ ಮಾಡುವುದರಿಂದ ಈ ನೋವನ್ನು ನಿವಾರಿಸಿ ಸಮತೋಲನವನ್ನು ಕಾಪಾಡಿಕೊಂಡು ಹಿಡಿತದಲ್ಲಿರಬಹುದು.

ಯೋಗಾಸನದ ಸಮಗ್ರ ಅನುಭವವಿರುವ ಗುರುವಿನ ಮೂಲಕ ಕಲಿತರೆ, ಸಂಪೂರ್ಣ ಯಶಸ್ಸು ನಮ್ಮದಾಗುವದು.

ಟಾಪ್ ನ್ಯೂಸ್

Supreme Court

ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗವು ನಿಖರವಾಗಿ ಎಲ್ಲಿ ಕಂಡುಬಂದಿದೆ ?: ವಿವರ ಕೇಳಿದ ಸುಪ್ರೀಂ

ಕಾಂಗ್ರೆಸ್ ಶಾಸಕರಿಗೆ ಟಿಕೆಟ್ ಕೈ ತಪ್ಪುವ ಭೀತಿ; ಚುನಾವಣಾ ಸಿದ್ದತೆ ಆರಂಭಿಸಿದ ಕೈ ಪಡೆ

ಕಾಂಗ್ರೆಸ್ ಶಾಸಕರಿಗೆ ಟಿಕೆಟ್ ಕೈ ತಪ್ಪುವ ಭೀತಿ; ಚುನಾವಣಾ ಸಿದ್ದತೆ ಆರಂಭಿಸಿದ ಕೈ ಪಡೆ

ಜಿ.ಪಂ-ತಾ.ಪಂ ಚುನಾವಣೆ: ವಿಚಾರಣೆ ಮೇ 23ಕ್ಕೆ ಮುಂದೂಡಿಕೆ

ಜಿ.ಪಂ-ತಾ.ಪಂ ಚುನಾವಣೆ: ವಿಚಾರಣೆ ಮೇ 23ಕ್ಕೆ ಮುಂದೂಡಿಕೆ

1-fdsfdsfds

ಕಿರುತೆರೆ ನಟಿ ಚೇತನಾ ಸಾವು!: ಬೊಜ್ಜು ತೆಗೆಯುವ ಶಸ್ತ್ರಚಿಕಿತ್ಸೆ ಮುಳುವಾಯಿತೇ ?

ಸಾಗರ : ಶಾಲೆಗೆ ಹೋಗುವುದಾಗಿ ಹೇಳಿ ಹೋದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ಆತ್ಮಹತ್ಯೆ

ಸಾಗರ: ಶಾಲೆಗೆ ಹೋಗುತ್ತೇನೆಂದು ಹೋದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯ ಶವ ಕೆರೆಯಲ್ಲಿ ಪತ್ತೆ

cm-ibrahim.

ಪರಿಷತ್ ಸ್ಥಾನದ ಮೇಲೆ ಕಣ್ಣಿಟ್ಟ ಸಿ.ಎಂ.ಇಬ್ರಾಹಿಂ; ಜೆಡಿಎಸ್ ನಾಯಕರಿಗೆ ಕಸಿವಿಸಿ

sensex

1,300 ಅಂಕಗಳ ಏರಿಕೆ ಕಂಡ ಸೆನ್ಸೆಕ್ಸ್ ; 16,200 ಮಟ್ಟವನ್ನು ಮರಳಿ ಪಡೆದ ನಿಫ್ಟಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಸಮವಸ್ತ್ರ ಸಮಾಚಾರ: ನಿಮ್ಮ ಮಕ್ಕಳ ಯೂನಿಫಾರಂ ಎಲ್ಲಿಂದ ಬರುತ್ತೆ?

controversy of symonds

ಮಂಕಿಗೇಟ್, ಕುಡಿತದ ಚಟ.. ವಿವಾದಗಳಿಂದಲೇ ಸುದ್ದಿಯಾಗಿದ್ದ ವರ್ಣರಂಜಿತ ಕ್ರಿಕೆಟರ್ ಸೈಮಂಡ್ಸ್

ಹಿಂದೂಗಳು ಅಲ್ಪಸಂಖ್ಯಾಕರೇ? -copy

ಹಿಂದೂಗಳು ಅಲ್ಪಸಂಖ್ಯಾಕರೇ…ವಿವಾದವೇಕೆ?

ಮುಳುಗುವ ಲಂಕೆಗೆ ಆಸರೆಯಾದರೇ ರಾನಿಲ್‌?

ಮುಳುಗುವ ಲಂಕೆಗೆ ಆಸರೆಯಾದರೇ ರಾನಿಲ್‌?

ಇ-ಸೆನ್ಸಸ್‌ ಎಂಬ ಸ್ವಯಂ ಲೆಕ್ಕಾಚಾರ

ಇ-ಸೆನ್ಸಸ್‌ ಎಂಬ ಸ್ವಯಂ ಲೆಕ್ಕಾಚಾರ

MUST WATCH

udayavani youtube

ಉದ್ಘಾಟನೆಗೆ ಶಾಸಕರೇ ಬರಬೇಕಂತೆ; ಕಾಫಿನಾಡಲ್ಲಿ ರಸ್ತೆಗೆ ಬೀಗ ಹಾಕಿದ ಬಿಜೆಪಿ ಸದಸ್ಯರು!

udayavani youtube

ಜ್ಞಾನವಾಪಿ ಮಸೀದಿ ಸರ್ವೇ ಸಂಪೂರ್ಣ; ಬಾವಿಯಲ್ಲಿ ‘ಶಿವಲಿಂಗ’ಪತ್ತೆ

udayavani youtube

ದತ್ತ ಜಯಂತಿ ಸಮಯದಲ್ಲಿ ಹೋಮದ ಹೊಗೆ.. ಬೇರೆ ಸಮಯದಲ್ಲಿ ಮಾಂಸದ ಹೊಗೆ

udayavani youtube

ಶಾಲಾ ಪ್ರಾರಂಭೋತ್ಸವ ಹಿರಿಯಡ್ಕ ಸರಕಾರಿ ಪಬ್ಲಿಕ್ ಸ್ಕೂಲ್ ನಲ್ಲಿ ಮಕ್ಕಳಿಗೆ ಸಂಭ್ರಮದ ಸ್ವಾಗತ

udayavani youtube

ಶಂಕರನಾರಾಯಣ : ಶಾಲಾರಂಭದ ದಿನದಂದೇ ಸರಕಾರಿ ಶಾಲೆಯಲ್ಲಿ ಪ್ರತಿಭಟನೆ ಬಿಸಿ

ಹೊಸ ಸೇರ್ಪಡೆ

ಪ್ರತಿಯೊಂದು ಸಮುದಾಯವನ್ನು ಸಂಘಟನೆ ತಲುಪಬೇಕು: ಶಾಸಕ ಸಿದ್ದು ಸವದಿ

ಪ್ರತಿಯೊಂದು ಸಮುದಾಯವನ್ನು ಸಂಘಟನೆ ತಲುಪಬೇಕು: ಶಾಸಕ ಸಿದ್ದು ಸವದಿ

Supreme Court

ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗವು ನಿಖರವಾಗಿ ಎಲ್ಲಿ ಕಂಡುಬಂದಿದೆ ?: ವಿವರ ಕೇಳಿದ ಸುಪ್ರೀಂ

21school

ದೇವದುರ್ಗ ತಾಲೂಕಲ್ಲಿ 193 ಶಿಥಿಲಗೊಂಡ ಕಟ್ಟಡ: ಮಕ್ಕಳಿಗೆ ಬಯಲಲ್ಲೇ ಪಾಠ

ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇ: ಬಸ್‌ಗೆ ಕಾರು ಢಿಕ್ಕಿ; ಎನ್‌ಸಿಪಿ ಶಾಸಕ ಸಂಗ್ರಾಮ್ ಪಾರು

ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇ: ಬಸ್‌ಗೆ ಕಾರು ಢಿಕ್ಕಿ; ಎನ್‌ಸಿಪಿ ಶಾಸಕ ಸಂಗ್ರಾಮ್ ಪಾರು

20fever

ಜ್ವರ ಇದ್ದಲ್ಲಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.