ಅಬ್ಬಬ್ಬಾ ಏನ್‌ ರುಚಿ ಅಂತಿರಾ “ಮಸಾಲ ಪಡ್ಡು”

ಈ ಖಾದ್ಯವು ಆರೋಗ್ಯಕರವಾಗಿದ್ದು ,ಮಕ್ಕಳಿಗಂತೂ ತುಂಬಾನೇ ಇಷ್ಟ ಪಡುವ ರೆಸಿಪಿಯಾಗಿದೆ.

ಶ್ರೀರಾಮ್ ನಾಯಕ್, Dec 31, 2021, 2:15 PM IST

ಅಬ್ಬಬ್ಬಾ ಏನ್‌ ರುಚಿ ಅಂತಿರಾ “ಮಸಾಲ ಪಡ್ಡು”

ಈ ಖಾದ್ಯವನ್ನು ಹಲವು ಹೆಸರುಗಳಿಂದ ಕರೆಯಲಾಗುತ್ತದೆ.ಇದು ಬುಲೆಟ್‌ ಇಡ್ಲಿ (ಸಣ್ಣ ಗಾತ್ರದ ಇಡ್ಲಿ) ಎಂದು ನೀವು ಬಾವಿಸಬಹುದು ಆದರೆ ಇದು ವಿಭಿನ್ನ ಖಾದ್ಯ. ಪಡ್ಡುವನ್ನು ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ತಯಾರಿಸಲಾಗುತ್ತದೆ. ಹೆಚ್ಚಿನ ಹೋಟೆಲ್‌ ಗಳು ಈ ಸುಂದರವಾದ ಖಾದ್ಯವನ್ನು ತಯಾರಿಸುವುದು ಬಹಳ ವಿರಳ. ಈ ಖಾದ್ಯವನ್ನು ಕೆಲವು ಕಡೆ ನಾನಾ ರೀತಿಯಲ್ಲಿ ಕರೆಯುತ್ತಾರೆ ಉದಾಹರಣೆಗೆ ಗುಳಿಯಪ್ಪ, ಪಡ್ಡು,ಅಪ್ಪ ,ಎರಿಯಪ್ಪ ಹಾಗೂ ತುಳುವಿನಲ್ಲಿ ಅಪ್ಪ ದಡ್ಡೆ ಎಂತಲೂ ಕರೆಯುತ್ತಾರೆ. ಇದನ್ನು ಶೇಂಗಾ ಚಟ್ನಿಯೊಂದಿಗೆ ತಿನ್ನಲು ಬಹಳ ರುಚಿ.

ಈ ಖಾದ್ಯವು ಆರೋಗ್ಯಕರವಾಗಿದ್ದು ,ಮಕ್ಕಳಿಗಂತೂ ತುಂಬಾನೇ ಇಷ್ಟ ಪಡುವ ರೆಸಿಪಿಯಾಗಿದೆ. ಹಾಗಿದ್ದರೆ ಇನ್ನೇಕೆ ತಡ ಮನೆಯಲ್ಲಿ ರುಚಿಕರವಾದ “”ಮಸಾಲ ಪಡ್ಡು ” ಹಾಗೂ “ಶೇಂಗಾ ಚಟ್ನಿ ” ಯನ್ನು ಮಾಡಿ ಸವಿಯಿರಿ.

ಮಸಾಲ ಪಡ್ಡು
ಬೇಕಾಗುವ ಸಾಮಗ್ರಿಗಳು
ಬೆಳ್ತಿ ಗೆ ಅಕ್ಕಿ 2 ಕಪ್‌, ಉದ್ದಿನ ಬೇಳೆ 3/4 ಕಪ್‌ ಕಡ್ಲೆ ಬೇಳೆ 2 ಚಮಚ, ಮೆಂತೆ 1 ಚಮಚ, ಅವಲಕ್ಕಿ 1/4 ಕಪ್‌,ತೆಂಗಿನೆಣ್ಣೆ 2 ಚಮಚ, ಹಸಿಮೆಣಸಿನ ಕಾಯಿ 2, ಕರಿಬೇವು 1 ಗರಿ, ಈರುಳ್ಳಿ 3, ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ
ಮೊದಲಿಗೆ ಒಂದು ಪಾತ್ರೆಗೆ ಅಕ್ಕಿ, ಉದ್ದಿನ ಬೇಳೆ, ಕಡ್ಲೆ ಬೇಳೆ ಹಾಗೂ ಮೆಂತೆಯನ್ನು ಹಾಕಿ ಸುಮಾರು 6 ರಿಂದ 7 ಗಂಟೆಗಳ ವರೆಗೆ ನೆನೆಸಿಟ್ಟುಕೊಳ್ಳಿ. ಅವಲಕ್ಕಿ ಯನ್ನು ಬೇರೆ ಪಾತ್ರೆಯಲ್ಲಿ 10 ನಿಮಿಷಗಳ ಕಾಲ ನೆನೆಸಿರಿ, ತದನಂತರ ಮಿಕ್ಸಿ ಜಾರಿಗೆ ನೆನೆಸಿಟ್ಟ ಅಕ್ಕಿ -ಬೇಳೆ ಹಾಗೂ ಅವಲಕ್ಕಿಯನ್ನು ಹಾಕಿ ನುಣ್ಣಗೆ ರುಬ್ಬಿರಿ. ದೋಸೆ ಹಿಟ್ಟಿಗಿಂತ ಸ್ವಲ್ಪ ಗಟ್ಟಿಯಾಗಿರಬೇಕು.ರುಬ್ಬಿಟ್ಟ ಹಿಟ್ಟಿಗೆ ಉಪ್ಪನ್ನು ಹಾಕಿ ಸುಮಾರು 8 ರಿಂದ 10 ಗಂಟೆಗಳ ಕಾಲದವರೆಗೆ ಬಿಟ್ಟುಬಿಡಿ.
ಒಂದು ಬಾಣಲೆಗೆ ಎಣ್ಣೆ, ಸಣ್ಣಗೆ ಹಚ್ಚಿದ ಹಸಿಮೆಣಸು, ಕರಿಬೇವು ಹಾಗೂ ಈರುಳ್ಳಿಯನ್ನು ಹಾಕಿ ಸ್ವಲ್ಪ ಹೊತ್ತು ಹರಿಯಿರಿ. ತಣ್ಣಗೆ ಆದ ಮೇಲೆ ಕೊತ್ತಂಬರಿ ಸೊಪ್ಪು ಹಾಕಿ ರುಬ್ಬಿಟ್ಟ ಹಿಟ್ಟಿಗೆ ಹಾಕಿ ಕಲಸಿರಿ.

ಓಲೆಯ ಮೇಲೆ ಪಡ್ಡು ಹಂಚನ್ನು ಇಟ್ಟುಕೊಳ್ಳಿ. ಬಿಸಿಯಾದ ನಂತರ ಸ್ವಲ್ಪ ಎಣ್ಣೆ ಹಾಕಿ ಮಾಡಿಟ್ಟ ಹಿಟ್ಟನ್ನು ಎಲ್ಲಾ ರಂಧ್ರದೊಳಗೆ ಮೂಕ್ಕಾಲು ಭಾಗದಷ್ಟು ಹಾಕಿರಿ (ಯಾಕೆಂದರೆ ಅದು ಬೆಂದ ನಂತರ ಅವು ಅರಳುತ್ತದೆ) ಒಂದು ಬದಿ ಬೆಂದ ನಂತರ ಮತ್ತೂಂದು ಬದಿ ಮುಗುಚಿ ಬೇಯಿಸಿರಿ. ಬಿಸಿ-ಬಿಸಿಯಾದ ಮಸಾಲ ಪಡ್ಡು ರೆಡಿಯಾಗಿದೆ.

ಶೇಂಗಾ ಚಟ್ನಿ
ಬೇಕಾಗುವ ಸಾಮಗ್ರಿಗಳು
ಶೇಂಗಾ 1 ಕಪ್‌,ತೆಂಗಿನೆಣ್ಣೆ 1 ಚಮಚ, ಹಸಿಮೆಣಸು 5 ಬೆಳ್ಳುಳ್ಳಿ 4 ಎಸಳು, ಕರಿಬೇವು 1 ಗರಿ, ಕೊತ್ತಂಬರಿ ಸೊಪ್ಪು ಸ್ವಲ್ಪ, ಹುಣಸೇ ಹಣ್ಣು ಸ್ವಲ್ಪ, ರುಚಿಗೆ ತಕ್ಕಷ್ಟು ಉಪ್ಪು.

ಒಗ್ಗರಣೆಗೆ:
ತೆಂಗಿನೆಣ್ಣೆ 1 ಚಮಚ, ಸಾಸಿವೆ 1 ಚಮಚ ,ಉದ್ದಿನ ಬೇಳೆ 1 ಚಮಚ, ಕರಿಬೇವು 1 ಗರಿ ಒಣಮೆಣಸು 2

ತಯಾರಿಸುವ ವಿಧಾನ
ಒಂದು ಬಾಣಲೆಗೆ ಹಸಿ ಶೇಂಗಾವನ್ನು ಹಾಕಿ ಕೆಂಪಾಗುವ ತನಕ ಹುರಿದು ಒಂದು ಪಾತ್ರೆಗೆ ತೆಗೆದಿಟ್ಟುಕೊಳ್ಳಿ (ತಣ್ಣಗಾದಬಳಿಕ ಬೀಜದ ಸಿಪ್ಪೆಯನ್ನು ತೆಗೆದಿಡಿ). ಆ ಮೇಲೆ ಬಾಣಲೆಗೆ ಎಣ್ಣೆ ,ಹಸಿಮೆಣಸು, ಬೆಳ್ಳುಳ್ಳಿ , ಕರಿಬೇವು ಹಾಕಿ ಸ್ವಲ್ಪ ಹೊತ್ತು ಹುರಿಯಿರಿ ನಂತರ ಇದನ್ನು ಹುರಿದಿಟ್ಟ ಶೇಂಗಾ ಬೀಜ ಜೊತೆಗೆ ಮಿಕ್ಸಿ ಜಾರಿಗೆ ಹಾಕಿ ಉಪ್ಪುನ್ನು ಸೇರಿಸಿ ರುಬ್ಬಿರಿ. ನಂತರ ಮೇಲಿರುವ ಒಗ್ಗರಣೆ ಸಾಮಗ್ರಿಯನ್ನು ಹಾಕಿ ಒಗ್ಗರಣೆ ಹಾಕಿರಿ.

ಟಾಪ್ ನ್ಯೂಸ್

Terror Attack On IAF Convoy In poonch

Poonch; ವಾಯುಸೇನೆ ವಾಹನದ ಮೇಲೆ ಉಗ್ರ ದಾಳಿ; ಓರ್ವ ಹುತಾತ್ಮ, ನಾಲ್ವರಿಗೆ ಗಾಯ

2-vitla

Vitla: ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಕಾರು

ಬಿಸಿಲ ಬೇಗೆಯ ಪರಿಣಾಮ; ಜಾನುವಾರುಗಳಲ್ಲಿ ಅನಾರೋಗ್ಯದ ಪ್ರಮಾಣ ಹೆಚ್ಚಳ

ಬಿಸಿಲ ಬೇಗೆಯ ಪರಿಣಾಮ; ಜಾನುವಾರುಗಳಲ್ಲಿ ಅನಾರೋಗ್ಯದ ಪ್ರಮಾಣ ಹೆಚ್ಚಳ

PM ಮೋದಿ ಹೋದಲ್ಲೆಲ್ಲ ಕಾಂಗ್ರೆಸ್‌ ಗೆದ್ದಿದೆ: ಸಿಎಂ ಸಿದ್ದರಾಮಯ್ಯ

PM ಮೋದಿ ಹೋದಲ್ಲೆಲ್ಲ ಕಾಂಗ್ರೆಸ್‌ ಗೆದ್ದಿದೆ: ಸಿಎಂ ಸಿದ್ದರಾಮಯ್ಯ

1-24-sunday

Daily Horoscope: ಕೆಲವರಿಗೆ ಅನಿರೀಕ್ಷಿತ ಧನಾಗಮ ಸಂಭವ, ಅವಿವಾಹಿತರಿಗೆ ವಿವಾಹ ಯೋಗ

ಮತದಾನ ಜಾಗೃತಿಗೆ ಪ್ರತೀ ರಾಜ್ಯಕ್ಕೆ 15 ಕೋ.ರೂ. ವೆಚ್ಚ

ಮತದಾನ ಜಾಗೃತಿಗೆ ಪ್ರತೀ ರಾಜ್ಯಕ್ಕೆ 15 ಕೋ.ರೂ. ವೆಚ್ಚ

Agumbe Ghat; ಘನವಾಹನಗಳ ಸಂಚಾರದಿಂದ ಘಾಟಿ ಬಂದ್‌ ಆಗುವ ಭೀತಿ

Agumbe Ghat; ಘನವಾಹನಗಳ ಸಂಚಾರದಿಂದ ಘಾಟಿ ಬಂದ್‌ ಆಗುವ ಭೀತಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8

ಅಮಿತಾಭ್‌ ಟು ಶಾರುಖ್:‌ ಇಂದು ಕೋಟಿ ಕುಳರಾದ ಈ ನಟರ ಮೊದಲ ಸಂಪಾದನೆ ಎಷ್ಟಾಗಿತ್ತು ಗೊತ್ತಾ?

1-assas-aa

Rae Bareli ರಣಕಣ; ನಾಮಪತ್ರ ಸಲ್ಲಿಸಿದ ರಾಹುಲ್ ಗಾಂಧಿ: ಗೆಲುವು ಸುಲಭವೇ?

10-uv-fusion

Harekala Hajabba: ಕೋಟಿ ಒಡೆಯನಲ್ಲ, ಆದರೂ ಈತ ಕೋಟಿಗೊಬ್ಬ

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Terror Attack On IAF Convoy In poonch

Poonch; ವಾಯುಸೇನೆ ವಾಹನದ ಮೇಲೆ ಉಗ್ರ ದಾಳಿ; ಓರ್ವ ಹುತಾತ್ಮ, ನಾಲ್ವರಿಗೆ ಗಾಯ

2-vitla

Vitla: ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಕಾರು

ಬಿಸಿಲ ಬೇಗೆಯ ಪರಿಣಾಮ; ಜಾನುವಾರುಗಳಲ್ಲಿ ಅನಾರೋಗ್ಯದ ಪ್ರಮಾಣ ಹೆಚ್ಚಳ

ಬಿಸಿಲ ಬೇಗೆಯ ಪರಿಣಾಮ; ಜಾನುವಾರುಗಳಲ್ಲಿ ಅನಾರೋಗ್ಯದ ಪ್ರಮಾಣ ಹೆಚ್ಚಳ

PM ಮೋದಿ ಹೋದಲ್ಲೆಲ್ಲ ಕಾಂಗ್ರೆಸ್‌ ಗೆದ್ದಿದೆ: ಸಿಎಂ ಸಿದ್ದರಾಮಯ್ಯ

PM ಮೋದಿ ಹೋದಲ್ಲೆಲ್ಲ ಕಾಂಗ್ರೆಸ್‌ ಗೆದ್ದಿದೆ: ಸಿಎಂ ಸಿದ್ದರಾಮಯ್ಯ

1-24-sunday

Daily Horoscope: ಕೆಲವರಿಗೆ ಅನಿರೀಕ್ಷಿತ ಧನಾಗಮ ಸಂಭವ, ಅವಿವಾಹಿತರಿಗೆ ವಿವಾಹ ಯೋಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.