ತನ್ನ 93ನೇ ವಯಸ್ಸಿನಲ್ಲಿ ವೃತ್ತಿಯಿಂದ ನಿವೃತ್ತಿ ಪಡೆಯುತ್ತಿರುವ ಮಹಿಳೆ..!

ತಮ್ಮ 93 ನೇ ವಯಸ್ಸಿನ ತನಕ ವೃತ್ತಿಪರರಾಗಿದ್ದು, ಈಗ ವೃತ್ತಿ ಜೀವನಕ್ಕೆ ಬ್ರೇಕ್ ಹಾಕುತ್ತಿದ್ದಾರೆ ಈ ಮಹಿಳೆ

ಶ್ರೀರಾಜ್ ವಕ್ವಾಡಿ, Jan 28, 2021, 7:40 PM IST

Woman, 93, Reveals Her Secret to Career Longevity as She Retires After 69 Years at Same Ad Agency

ನ್ಯೂಯಾರ್ಕ್ :  ನಿವೃತ್ತಿಯ ವಿಷಯಕ್ಕೆ ಬಂದರೆ, ಹೆಚ್ಚಿನವರು ತಮ್ಮ 60, 70 ವರ್ಷಗಳಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸುತ್ತಾರೆ. ಆದರೇ ಇಲ್ಲೊಬ್ಬ ಮಹಿಳೆ ಅದಕ್ಕೂ ಮೀರಿ ಕಾರ್ಯ ನಿರ್ವಹಿಸಿ ಇಡೀ ಜಗತ್ತನ್ನು ತನ್ನತ್ತ ತಿರುಗಿ ನೋಡುವ ಹಾಗೆ ಮಾಡಿದ್ದಾರೆ.

ಹೌದು, ಈ ಮಹಿಳೆ ಎಲ್ಲರಂತಲ್ಲ. ತಮ್ಮ 93 ನೇ ವಯಸ್ಸಿನ ತನಕ ವೃತ್ತಿಪರರಾಗಿದ್ದು ಈಗ ವೃತ್ತಿ ಜೀವನಕ್ಕೆ ಬ್ರೇಕ್ ಹಾಕುತ್ತಿದ್ದಾರೆ ಈ ಮಹಿಳೆ.  ಅವರೇ,  ವರ್ಜೀನಿಯಾದ “ಗಿನ್ನಿ” ಬಹರ್.

ಓದಿ : ಚರಂಡಿ ಸ್ವಚ್ಛತೆ ವೇಳೆ ಇಬ್ಬರು ಕಾರ್ಮಿಕರ ದುರ್ಮರಣ: ಅಧಿಕಾರಿಗಳ ನಿರ್ಲಕ್ಷಕ್ಕೆ ಆಕ್ರೋಶ 

ಡಿಸೆಂಬರ್ 1951 ರಲ್ಲಿ, ಕೇವಲ 24 ವರ್ಷ ವಯಸ್ಸಿನಲ್ಲಿ, ಬಹರ್ ನ್ಯೂಯಾರ್ಕ್ ಮೂಲದ ಜಾಹೀರಾತು ಏಜೆನ್ಸಿಯಾದ ಜೆ. ವಾಲ್ಟರ್ ಥಾಂಪ್ಸನ್ (ಜೆಡಬ್ಲ್ಯೂಟಿ) ನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು.ನಂತರದ ದಿನಗಳಲ್ಲಿ ಅದು ವಂಡರ್ಮನ್ ನೊಂದಿಗೆ ವಿಲೀನವಾಗಿ 2018ರಿಂದ ವಂಡರ್ ಮನ್ ಥಾಂಪ್ಸನ್ ಆಗಿದೆ.

ಈಗ ತಮ್ಮ 93ನೇ ವಯಸ್ಸಿನಲ್ಲಿ, ಮನೆಯವರ ಒತ್ತಾಯದ ಮೇರೆಗೆ ದೀರ್ಘಾವಧಿಯ ಉದ್ಯೋಗದಿಂದ  ಅಂತಿಮವಾಗಿ ನಿವೃತ್ತರಾಗುತ್ತಿದ್ದಾರೆ.

“ನಾನು ಪ್ರತಿದಿನ ಜನರನ್ನು ನೋಡುವ ಎಲ್ಲ ಉತ್ಸಾಹವನ್ನು ಕಳೆದುಕೊಳ್ಳಲಿದ್ದೇನೆ. “ನಾನು ತುಂಬಾ ಅದೃಷ್ಟ ಶಾಲಿಯಾಗಿದ್ದೇನೆ,ನನ್ನ ಕಂಪೆನಿಯೊಂದಿಗಿನ ದೀರ್ಘ ಕಾಲದ ಸೇವೆ ಜೀವನದ ಶ್ರೇಷ್ಠ ದಿನಗಳು”  ಎಂದು ಬಹರ್ ಹೇಳಿಕೊಳ್ಳುತ್ತಾರೆ.

ಬಹರ್,  ಆರಂಭದ ಹಂತದಲ್ಲಿ ಒಂದು ಪ್ರಕಾಶನ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು.  ನನಗೆ ನನ್ನ ಬಗ್ಗೆ ತೃಪ್ತಿ ಇರಲಿಲ್ಲ. ಅಲ್ಲಿ ನನ್ನ ವೃತ್ತಿ ಜೀವನದಲ್ಲಿ ಅನೇಕ ಏಳು ಬೀಳುಗಳಾಗಿವೆ. ಅವೆಲ್ಲವನ್ನೂ ನಾನು ಸಹಿಸಿಕೊಂಡು ಇದುವರೆಗೆ ಬಂದಿದ್ದೇನೆ. ನಾನು ನಡೆದು ಬಂದ ಹಾದಿಯ ಬಗ್ಗೆ ನನಗೆ ಹೆಮ್ಮೆ ಇದೆ ಎನ್ನುತ್ತಾರೆ ಬಹರ್.

ಓದಿ : ಹಳೆಯಂಗಡಿ : ಎರಡು ಬೈಕ್ ಗಳ ನಡುವೆ ಅಪಘಾತ ; ಓರ್ವ ಸಾವು

ಕಂಪೆನಿ,  ಅವರ ನಿವೃತ್ತಿಯ ಗೌರವಾರ್ಥವಾಗಿ,  ಬಹರ್ ಅವರಿಗೆ “ಗೌರವ ಅಧ್ಯಕ್ಷೆ” ಪ್ರಶಸ್ತಿಯನ್ನು ನೀಡಿದೆ. ಏಜೆನ್ಸಿಯ ನ್ಯೂಯಾರ್ಕ್ ಕಚೇರಿಯಲ್ಲಿ ಅವರ ಮ್ಯೂರಲ್ ಅನ್ನು ಸಹ ರಚಿಸಲಾಗುತ್ತಿದೆ. ಮತ್ತು ಕಂಪನಿಯು ಕಚೇರಿಯ ಚೇಂಬರ್ ವೊಂದಕ್ಕೆ “ಗಿನ್ನಿ ಬಹರ್” ಎಂದು ಮರುನಾಮಕರಣ ಮಾಡುತ್ತಿದೆ ಎನ್ನುವುದು ವಿಶೇಷ.

“ಗಿನ್ನಿ, ಜಾಹೀರಾತು ಉದ್ಯಮದಲ್ಲಿ ಒಂದು ಸಂಪೂರ್ಣ ದಂತಕಥೆ. 69 ವರ್ಷಗಳಿಂದ ಅವರು ನಮ್ಮ ಕಂಪನಿಯಲ್ಲಿ ಸಕಾರಾತ್ಮಕ ಶಕ್ತಿಯಾಗಿದ್ದಾರೆ. ಸಂತೋಷ ಮತ್ತು ಗೌರವವನ್ನು ಹಂಚಲು ಮತ್ತು ಜನರನ್ನು ಒಟ್ಟುಗೂಡಿಸುವುದಕ್ಕಾಗಿ ಅವರು ಜೀವನವನ್ನು ಸವೆಸಿದ್ದಾರೆ. “ಅವರ ಉದಾರ ಮನೋಭಾವವು ನಮ್ಮ ನ್ಯೂಯಾರ್ಕ್ ಕಚೇರಿಗೆ ಹೆಮ್ಮೆಯ ವಿಷಯ.” ಎಂದು ವಂಡರ್ಮನ್ ಥಾಂಪ್ಸನ್  ಉತ್ತರ ಅಮೆರಿಕದ ಸಿಇಒ ಶೇನ್ ಅಟ್ಚಿಸನ್  ಹೇಳುತ್ತಾರೆ.

“ನನಗೆ ಗೌರವದ ಬಗ್ಗೆ  ನಿರೀಕ್ಷೆ ಇರಲಿಲ್ಲ. ನಾನು ಮಾಡುತ್ತಿರುವುದು ಪ್ರತಿದಿನದ ಕೆಲಸ, ಮತ್ತು ಅದು ನನ್ನ ಜೀವನದ ಒಂದು ಭಾಗವಾಗಿದೆ. ನಾನು ಅದನ್ನು ಅಲ್ಲಿ ಆನಂದಿಸಿದೆ. ಎಂದು ಬಹರ್ ಮುಜುಗರ ವ್ಯಕ್ತ ಪಡಿಸುತ್ತಾರೆ.

ಒಟ್ಟಿನಲ್ಲಿ, ಸುದೀರ್ಘ ವೃತ್ತಿ ಜೀವನದಿಂದ ಹೊರ ಬರುತ್ತಿರುವ ಬಹರ್ ಅಕ್ಷರಶಃ ಮಾದರಿ ಮಹಿಳೆ ಎನ್ನುವುದರಲ್ಲಿ ಸಂಶಯ ಪಡಬೇಕಾಗಿಲ್ಲ.

–ಶ್ರೀರಾಜ್ ವಕ್ವಾಡಿ 

ಓದಿ : ಕಾಟಿಪಳ್ಳ : ಬೈಕ್ ಸವಾರನಿಗೆ ಚೂರಿ ಇರಿತ ಪ್ರಕರಣ ; ಸುರತ್ಕಲ್ ಪೊಲೀಸರಿಂದ ಮೂವರ ಬಂಧನ

 

ಟಾಪ್ ನ್ಯೂಸ್

1-qeqqew

I.N.D.I.A;ಗಂಡೇ ವಿಧಾನಸಭೆ ಕ್ಷೇತ್ರದಿಂದ ಕಲ್ಪನಾ ಸೊರೇನ್‌ ಕಣಕ್ಕೆ?

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Kharge (2)

Letter; ನ್ಯಾಯಪತ್ರ ಬಗ್ಗೆ ವಿವರಿಸಲು ಪಿಎಂ ಮೋದಿ ಸಮಯ ಕೇಳಿದ ಖರ್ಗೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Food ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

1–qwewqe

Ayodhya: ಸೂರ್ಯ ತಿಲಕ ಸಾಧ್ಯವಾಗಿಸಿದ ವಿಜ್ಞಾನಿಗಳಿಗೆ ತಲೆ ಬಾಗುತ್ತೇನೆ: ಅರುಣ್ ಯೋಗಿರಾಜ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

1-qeqqew

I.N.D.I.A;ಗಂಡೇ ವಿಧಾನಸಭೆ ಕ್ಷೇತ್ರದಿಂದ ಕಲ್ಪನಾ ಸೊರೇನ್‌ ಕಣಕ್ಕೆ?

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

Reservation: ಜನಸಂಖ್ಯೆ ಆಧಾರದಲ್ಲಿ ಮೀಸಲು ನೀಡಲು ಸಿದ್ಧರೇ?

Reservation: ಜನಸಂಖ್ಯೆ ಆಧಾರದಲ್ಲಿ ಮೀಸಲು ನೀಡಲು ಸಿದ್ಧರೇ?

Supreme Court

Supreme Court; ಖಾಸಗಿ ಆಸ್ತಿಯನ್ನು ಸ್ವಾಧೀನ ಮಾಡಬಹುದೇ? 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.