ODI World Cup; ಭಾರತವನ್ನು ಕಾಡುತ್ತಲೇ ಬಂದ ನ್ಯೂಜಿಲ್ಯಾಂಡ್‌

ನಮ್ಮವರು ಚಾಂಪಿಯನ್‌ ಆದ ಎರಡೂ ವಿಶ್ವಕಪ್‌ ವೇಳೆ ನ್ಯೂಜಿಲ್ಯಾಂಡ್‌ ಎದುರಾಗಿರಲಿಲ್ಲ!

Team Udayavani, Oct 22, 2023, 5:55 AM IST

1-cscsas

ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಭಾರತವನ್ನು ಅತಿಯಾಗಿ ಕಾಡಿದ ತಂಡವೆಂದರೆ ನ್ಯೂಜಿಲ್ಯಾಂಡ್‌. ಈ ಪ್ರತಿಷ್ಠಿತ ಕೂಟದಲ್ಲಿ ಭಾರತ-ನ್ಯೂಜಿಲ್ಯಾಂಡ್‌ ನಡುವಿನ ಮುಖಾಮುಖೀ ಯಾವತ್ತೂ ಪೈಪೋಟಿಯಿಂದ ಕೂಡಿರುತ್ತದೆ. ಟೀಮ್‌ ಇಂಡಿಯಾ ತನ್ನ ಬದ್ಧ ಎದುರಾಳಿ ಪಾಕಿಸ್ಥಾನದ ಸವಾಲವನ್ನು ಯಾವುದೇ ಅಳುಕಿಲ್ಲದೆ ಎದುರಿಸಬಲ್ಲದು, ಆದರೆ ಕಿವೀಸ್‌ ವಿರುದ್ಧ ಇದೇ ಪರಾಕ್ರಮ ಸಾಧ್ಯವಾಗಿಲ್ಲ. ಸ್ವಾರಸ್ಯವೆಂದರೆ, ನಮ್ಮವರು ಚಾಂಪಿಯನ್‌ ಆದ ಎರಡೂ ವಿಶ್ವಕಪ್‌ ವೇಳೆ (1983 ಮತ್ತು 2011) ನ್ಯೂಜಿಲ್ಯಾಂಡ್‌ ಎದುರಾಗಿರಲಿಲ್ಲ ಎಂಬುದು!
ಭಾರತ-ನ್ಯೂಜಿಲ್ಯಾಂಡ್‌ 13ನೇ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಎದುರಾಗುವ ಸಮಯ ಬಂದಿದೆ. ರವಿವಾರ ಧರ್ಮಶಾಲಾದಲ್ಲಿ ರೋಹಿತ್‌ ಶರ್ಮ-ಟಾಮ್‌ ಲ್ಯಾಥಂ ತಂಡಗಳು ಮುಖಾಮುಖೀ ಆಗಲಿವೆ. ಇದುವರೆಗೆ ಈ ತಂಡಗಳು ಸೋಲಿನ ಮುಖವನ್ನೇ ಕಂಡಿಲ್ಲ. ಆಡಿದ ನಾಲ್ಕೂ ಪಂದ್ಯಗಳನ್ನು ಜಯಿಸಿವೆ. ಈ ಹಿನ್ನೆಲೆಯಲ್ಲಿ ಭಾರತ-ನ್ಯೂಜಿಲ್ಯಾಂಡ್‌ ತಂಡಗಳ ವಿಶ್ವಕಪ್‌ ಪಂದ್ಯಗಳತ್ತ ಒಂದು ಹಿನ್ನೋಟ.

9ರಲ್ಲಿ ಮೂರೇ ಗೆಲುವು
ವಿಶ್ವಕಪ್‌ನಲ್ಲಿ ಭಾರತ-ನ್ಯೂಜಿಲ್ಯಾಂಡ್‌ ಈವರೆಗೆ 9 ಸಲ ಎದುರಾಗಿವೆ. ನ್ಯೂಜಿಲ್ಯಾಂಡ್‌ ಐದರಲ್ಲಿ, ಭಾರತ ಮೂರರಲ್ಲಿ ಜಯ ಸಾಧಿಸಿದೆ. ಒಂದು ಪಂದ್ಯ ಮಳೆಯಿಂದ ರದ್ದುಗೊಂಡಿದೆ.1975ರ ಚೊಚ್ಚಲ ವಿಶ್ವಕಪ್‌ನಲ್ಲೇ ಭಾರತ-ನ್ಯೂಜಿಲ್ಯಾಂಡ್‌ ಎದುರಾಗಿದ್ದವು. ಮ್ಯಾಂಚೆಸ್ಟರ್‌ನಲ್ಲಿ ನಡೆದ ಈ ಪಂದ್ಯವನ್ನು ನ್ಯೂಜಿಲ್ಯಾಂಡ್‌ 4 ವಿಕೆಟ್‌ಗಳಿಂದ ಗೆದ್ದಿತ್ತು. ಗ್ಲೆನ್‌ ಟರ್ನರ್‌ ಅವರ ಶತಕ (114) ಈ ಪಂದ್ಯದ ಆಕರ್ಷಣೆ ಆಗಿತ್ತು.
1979ರ ದ್ವಿತೀಯ ವಿಶ್ವಕಪ್‌ನಲ್ಲೂ ಇತ್ತಂಡಗಳು ಒಂದೇ ಗುಂಪಿನಲ್ಲಿದ್ದವು. ಲೀಡ್ಸ್‌ನಲ್ಲಿ ನಡೆದ ಈ ಪಂದ್ಯವನ್ನು ನ್ಯೂಜಿಲ್ಯಾಂಡ್‌ 8 ವಿಕೆಟ್‌ಗಳಿಂದ ಭರ್ಜರಿಯಾಗಿ ಗೆದ್ದಿತು.

ಭಾರತದ ಅವಳಿ ಗೆಲುವು
ಮತ್ತೆ ಇತ್ತಂಡಗಳು ಎದುರಾದದ್ದು 1987ರ ಭಾರತದ ಆತಿಥ್ಯದ ಪಂದ್ಯಾವಳಿಯಲ್ಲಿ. ಇಲ್ಲಿ ಭಾರತ-ನ್ಯೂಜಿಲ್ಯಾಂಡ್‌ 2 ಸಲ ಮುಖಾಮುಖಿಯಾದವು. ಭಾರತ ಎರಡನ್ನೂ ಗೆದ್ದು ಸೇಡು ತೀರಿಸಿಕೊಂಡಿತು. ಎರಡೂ “ಎ’ ವಿಭಾಗದ ಲೀಗ್‌ ಪಂದ್ಯಗಳಾಗಿದ್ದವು. ಬೆಂಗಳೂರಿನಲ್ಲಿ ನಡೆದ ಮೊದಲ ಸುತ್ತಿನ ಸ್ಪರ್ಧೆಯಲ್ಲಿ ಭಾರತ 16 ರನ್ನುಗಳ ರೋಚಕ ಜಯ ಸಾಧಿಸಿತು. ಅಜೇಯ 72 ರನ್‌ ಬಾರಿಸಿದ ಕಪಿಲ್‌ದೇವ್‌ ಪಂದ್ಯಶ್ರೇಷ್ಠರೆನಿಸಿದರು.

ದ್ವಿತೀಯ ಸುತ್ತಿನ ಪಂದ್ಯ ನಡೆದದ್ದು ನಾಗಪುರದಲ್ಲಿ. ಇದು ಭಾರತದ ಪಾಲಿನ ಸ್ಮರಣೀಯ ಪಂದ್ಯವಾಗಿತ್ತು. ಸುನೀಲ್‌ ಗಾವಸ್ಕರ್‌ ಏಕದಿನದಲ್ಲಿ ಏಕೈಕ ಶತಕ ಬಾರಿಸಿದ್ದು (ಅಜೇಯ 103), ಚೇತನ್‌ ಶರ್ಮ ವಿಶ್ವಕಪ್‌ನ ಮೊದಲ ಹ್ಯಾಟ್ರಿಕ್‌ ಹೀರೋ ಎನಿಸಿದ್ದೆಲ್ಲ ಇದೇ ಪಂದ್ಯದಲ್ಲಿ. ಭಾರತ ಇಲ್ಲಿ 9 ವಿಕೆಟ್‌ಗಳ ಜಯಭೇರಿ ಮೊಳಗಿಸಿತು.

ಮತ್ತೆ ಹಳಿ ಏರಿದ ಕಿವೀಸ್‌
1992 ಮತ್ತು 1999ರಲ್ಲಿ ಮತ್ತೆ ನ್ಯೂಜಿಲ್ಯಾಂಡ್‌ ಗೆಲುವಿನ ಲಯಕ್ಕೆ ಮರಳಿತು. 1992ರ ಪಂದ್ಯಾವಳಿ ನ್ಯೂಜಿಲ್ಯಾಂಡ್‌ನ‌ ಸಹ ಆತಿಥ್ಯದಲ್ಲಿ ಸಾಗಿತ್ತು. ಡ್ಯುನೆಡಿನ್‌ ಮುಖಾಮುಖೀಯಲ್ಲಿ ಆತಿಥೇಯ ಪಡೆ 4 ವಿಕೆಟ್‌ಗಳಿಂದ ಭಾರತವನ್ನು ಮಣಿಸಿತು. 1999ರ “ಸೂಪರ್‌ ಸಿಕ್ಸ್‌’ ಹಂತದ ನಾಟಿಂಗ್‌ಹ್ಯಾಮ್‌ ಪಂದ್ಯದಲ್ಲಿ ಭಾರತಕ್ಕೆ 5 ವಿಕೆಟ್‌ಗಳ ಸೋಲು ಎದುರಾಯಿತು.

ಕೊನೆಯ ಗೆಲುವು
2003ರಲ್ಲಿ ಭಾರತ ಫೈನಲ್‌ ತನಕ ಪಯಣಿಸಿದಾಗ ಸೂಪರ್‌ ಸಿಕ್ಸ್‌ ಹಂತದಲ್ಲಿ ನ್ಯೂಜಿಲ್ಯಾಂಡ್‌ ಎದುರಾಗಿತ್ತು. ಇಲ್ಲಿ ಸೌರವ್‌ ಗಂಗೂಲಿ ಪಡೆ 7 ವಿಕೆಟ್‌ಗಳಿಂದ ಗೆದ್ದು ಮುನ್ನಡೆಯಿತು. ಇದು ವಿಶ್ವಕಪ್‌ನಲ್ಲಿ ನ್ಯೂಜಿಲ್ಯಾಂಡ್‌ ವಿರುದ್ಧ ಭಾರತಕ್ಕೆ ಒಲಿದ ಕೊನೆಯ ಜಯ. ಅನಂತರದ 3 ವಿಶ್ವಕಪ್‌ಗ್ಳಲ್ಲಿ ಇತ್ತಂಡಗಳಿಗೆ ಎದುರಾಗುವ ಅವಕಾಶ ಲಭಿಸಿರಲಿಲ್ಲ.

ಕಳೆದ 2019ರ ಪಂದ್ಯಾವಳಿಯಲ್ಲಿ ಎರಡು ಸಲ ಮುಖಾಮುಖೀ ಆದವು. ನಾಟಿಂಗ್‌ಹ್ಯಾಮ್‌ನಲ್ಲಿ ನಡೆದ ಲೀಗ್‌ ಮುಖಾಮುಖೀ ಭಾರೀ ಮಳೆಯಿಂದ ಒಂದೂ ಎಸೆತ ಕಾಣದೆ ರದ್ದುಗೊಂಡಿತು. ಮ್ಯಾಂಚೆಸ್ಟರ್‌ ಸೆಮಿಫೈನಲ್‌ನಲ್ಲಿ 18 ರನ್‌ ಜಯ ಸಾಧಿಸಿದ ನ್ಯೂಜಿಲ್ಯಾಂಡ್‌ ಸತತ 2ನೇ ಸಲ ಪ್ರಶಸ್ತಿ ಸುತ್ತು ಪ್ರವೇಶಿಸಿತು. ಭಾರತವೀಗ ಬರೋಬ್ಬರಿ 20 ವರ್ಷಗಳ ಬಳಿಕ ವಿಶ್ವಕಪ್‌ನಲ್ಲಿ ನ್ಯೂಜಿಲ್ಯಾಂಡ್‌ ವಿರುದ್ಧ ಜಯಭೇರಿ ಮೊಳಗಿಸುವ ಕಾತರದಲ್ಲಿದೆ.

ಟಾಪ್ ನ್ಯೂಸ್

Encounter: ಛತ್ತೀಸ್‌ಗಢದಲ್ಲಿ ಎನ್‌ಕೌಂಟರ್‌… 7 ಮಾವೋವಾದಿಗಳ ಹತ್ಯೆ, ಶಸ್ತ್ರಾಸ್ತ್ರ ವಶ

Encounter: ಛತ್ತೀಸ್‌ಗಢದಲ್ಲಿ ಎನ್‌ಕೌಂಟರ್‌… 7 ಮಾವೋವಾದಿಗಳ ಹತ್ಯೆ, ಶಸ್ತ್ರಾಸ್ತ್ರ ವಶ

ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್

ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್

60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ

60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ

Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು

Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು

Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್‌ ಶಾ

Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್‌ ಶಾ

JDS: ಆಶ್ಲೀಲ ವಿಡಿಯೋ ಪ್ರಕರಣ; ಜೆಡಿಎಸ್‌ ಪಕ್ಷದಿಂದ ಪ್ರಜ್ವಲ್‌ ರೇವಣ್ಣ ಅಮಾನತು

JDS: ಆಶ್ಲೀಲ ವಿಡಿಯೋ ಪ್ರಕರಣ; ಜೆಡಿಎಸ್‌ ಪಕ್ಷದಿಂದ ಪ್ರಜ್ವಲ್‌ ರೇವಣ್ಣ ಅಮಾನತು

ಈ ಪೆನ್‌ಡ್ರೈವ್‌ನಲ್ಲಿರುವ ವಿಡಿಯೋ ನಿಜ: ನಾನು, ಹೀರೊಯಿನ್ ಸೇರಿ ಮಾಡಿದ ವಿಡಿಯೋ ಇದು; ಪ್ರಥಮ್

ಈ ಪೆನ್‌ಡ್ರೈವ್‌ನಲ್ಲಿರುವ ವಿಡಿಯೋ ನಿಜ: ನಾನು, ಹೀರೊಯಿನ್ ಸೇರಿ ಮಾಡಿದ ವಿಡಿಯೋ ಇದು; ಪ್ರಥಮ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqeewqe

Mumbai Indians ವಿರುದ್ಧ ತವರಿನ ಅಂಗಳ: ರಾಹುಲ್‌ಗೆ ಮಹತ್ವದ ಪಂದ್ಯ

PCB

Champions Trophy ತಾಣ ಅಂತಿಮ ಲಾಹೋರ್‌, ಕರಾಚಿಯಲ್ಲಿ: ಭಾರತದ ಪಂದ್ಯಗಳೆಲ್ಲಿ?

kejriwal 2

CM ‘ಅಲಂಕಾರಿಕವಲ್ಲ’: ಕೇಜ್ರಿಗೆ ಮತ್ತೆ ಕೋರ್ಟ್‌ ಗುದ್ದು

1-wewqwq-eqw

Amit Shah ನಕಲಿ ವೀಡಿಯೋ :ತೆಲಂಗಾಣ ಸಿಎಂಗೆ ಪೊಲೀಸ್‌ ಸಮನ್ಸ್‌

1-wqqwqwqeqwe

Kodava Hockey: ಚೇಂದಂಡಕ್ಕೆ 3ನೇ ಪ್ರಶಸ್ತಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Encounter: ಛತ್ತೀಸ್‌ಗಢದಲ್ಲಿ ಎನ್‌ಕೌಂಟರ್‌… 7 ಮಾವೋವಾದಿಗಳ ಹತ್ಯೆ, ಶಸ್ತ್ರಾಸ್ತ್ರ ವಶ

Encounter: ಛತ್ತೀಸ್‌ಗಢದಲ್ಲಿ ಎನ್‌ಕೌಂಟರ್‌… 7 ಮಾವೋವಾದಿಗಳ ಹತ್ಯೆ, ಶಸ್ತ್ರಾಸ್ತ್ರ ವಶ

ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್

ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್

Ramana Avatara: ಇದು ಮಾಡರ್ನ್ ರಾಮನ ಕಥೆ: ‘ರಾಮನ ಅವತಾರ’ ಮೇಲೆ ರಿಷಿ ನಿರೀಕ್ಷೆ

Ramana Avatara: ಇದು ಮಾಡರ್ನ್ ರಾಮನ ಕಥೆ: ‘ರಾಮನ ಅವತಾರ’ ಮೇಲೆ ರಿಷಿ ನಿರೀಕ್ಷೆ

60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ

60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ

Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು

Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.