Under pressure ಆಡುವುದು ಹೇಗೆ ಎಂಬುದನ್ನು ವಿಶ್ವಕ್ಕೆ ಸಾರುವ ಸಮಯ: ಹೆನ್ರಿಕ್‌ ಕ್ಲಾಸೆನ್‌

Team Udayavani, Oct 22, 2023, 11:44 PM IST

1-asdsad

ಮುಂಬಯಿ: ವಿಶ್ವಕಪ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತ ಬಂದರೂ ಇನ್ನೂ ಸೆಮಿಫೈನಲ್‌ ಗಡಿಯನ್ನು ದಾಟದ ನತದೃಷ್ಟ ತಂಡವೆಂದರೆ ಅದು ದಕ್ಷಿಣ ಆಫ್ರಿಕಾ. ಹರಿಣಗಳ “ಚೋಕರ್’ ಟ್ಯಾಗ್‌ ಈ ಸಲವಾದರೂ ಬಿದ್ದು ಹೋದೀತೇ ಎಂಬುದು ಬಹುತೇಕ ಮಂದಿಯ ನಿರೀಕ್ಷೆ. ಕಾರಣ, ಅದು ಈ ಕೂಟದಲ್ಲಿ ನೀಡುತ್ತಿರುವ ಪ್ರಚಂಡ ಪ್ರದರ್ಶನ.

ಮೊದಲು ಬ್ಯಾಟಿಂಗ್‌ ನಡೆಸಿದ ಕಳೆದ ಸತತ 6 ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ಮುನ್ನೂರರ ಗಡಿ ದಾಟಿದ್ದು ಸಾಮಾನ್ಯ ಸಂಗತಿ ಅಲ್ಲ. ಶನಿವಾರ ಮುಂಬಯಿಯ “ವಾಂಖೇಡೆ ಸ್ಟೇಡಿಯಂ’ನಲ್ಲಿ ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ ವಿರುದ್ಧ 399 ರನ್‌ ಪೇರಿಸಿದ್ದು ತಾಜಾ ಉದಾಹರಣೆ. ಇದಕ್ಕೆ ಕಾರಣವಾದದ್ದು ಹೆನ್ರಿಕ್‌ ಕ್ಲಾಸೆನ್‌ ಅವರ ಪ್ರಚಂಡ ಶತಕ. ಅವರು 67 ಎಸೆತಗಳಲ್ಲಿ 109 ರನ್‌ ಬಾರಿಸಿ ಅಬ್ಬರಿಸಿದರು.

ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಕ್ಲಾಸೆನ್‌, “ನಾವು ಒತ್ತಡವನ್ನು ಹೇಗೆ ನಿಭಾಯಿಸುತ್ತೇವೆ ಎಂಬುದನ್ನು ವಿಶ್ವಕ್ಕೆ ಸಾರುವ ಸಮಯವಿದು’ ಎಂದಿದ್ದಾರೆ.

ನಮ್ಮ ಆಟ ಅಮೋಘ ಮಟ್ಟದಲ್ಲಿದೆ
“ನಿಜ, ವಿಶ್ವಕಪ್‌ ಮಟ್ಟಿಗೆ ನಾವು ನತದೃಷ್ಟರು. ಚೋಕರ್ ಎಂಬ ಟ್ಯಾಗ್‌ಲೈನ್‌ ನಮಗೆ ಅಂಟಿಕೊಂಡಿದೆ. ಮಹತ್ವದ ಪಂದ್ಯಗಳಲ್ಲಿ ನಾವು ಎಡವುತ್ತ ಬಂದಿದ್ದೇವೆ. ಆದರೆ ವಿಶ್ವಕಪ್‌ ಚರಿತ್ರೆಯನ್ನು ಗಮನಿಸುವಾಗ ನಾವು ಅದೆಷ್ಟೋ ಉತ್ತಮ ಪ್ರದರ್ಶನ ನೀಡಿದ ದೃಷ್ಟಾಂತಗಳಿವೆ. ಈ ಬಾರಿ ನಮ್ಮ ಆಟ ಅಮೋಘ ಮಟ್ಟದಲ್ಲಿದೆ. ಇದೇನೂ ಅಚ್ಚರಿಯಲ್ಲ. ಕಳೆದ 3 ವರ್ಷಗಳಿಂದ ನಾವು ಸ್ಥಿರ ಪ್ರದರ್ಶನ ಕಾಯ್ದುಕೊಂಡು ಬಂದಿದ್ದೇವೆ. ಹಂತ ಹಂತವಾಗಿ ಪ್ರಬುದ್ಧರಾಗುತ್ತಿದ್ದೇವೆ. ಒತ್ತಡದಲ್ಲೂ ದಕ್ಷಿಣ ಆಫ್ರಿಕಾ ಅತ್ಯುತ್ತಮ ಮಟ್ಟದ ಆಟವಾಡುತ್ತಿದೆ ಎಂಬುದನ್ನು ಕ್ರಿಕೆಟ್‌ ಜಗತ್ತಿಗೆ ಸಾರುವ ಸಮಯವಿದು’ ಎಂಬುದಾಗಿ ವಿಕೆಟ್‌ ಕೀಪರ್‌-ಬ್ಯಾಟರ್‌ ಕ್ಲಾಸೆನ್‌ ಹೇಳಿದರು.

“ಇಲ್ಲಿನ ವಾತಾವರಣಕ್ಕೆ ಹೋಲಿಸಿ ದರೆ ಇದು ನನ್ನ ಅತ್ಯುತ್ತಮ ಶತಕಗಳ ಲ್ಲೊಂದು. ಸಿಕ್ಕಾಪಟ್ಟೆ ಬಿಸಿ ಗಾಳಿ ಬೀಸುತ್ತಿತ್ತು. ದೈಹಿಕವಾಗಿ ಇದನ್ನು ಎದುರಿಸಿ ನಿಲ್ಲುವುದು ಕಷ್ಟ. ಆದರೆ ನಾನು ಮಾನಸಿಕವಾಗಿ ಸಜ್ಜುಗೊಂಡೆ. ಆರಂಭಕಾರ ರೀಝ ಹೆಂಡ್ರಿಕ್ಸ್‌ ಮತ್ತು ನನ್ನೊಡನೆ ಇನ್ನಿಂಗ್ಸ್‌ ಬೆಳೆಸಿದ ಮಾರ್ಕೊ ಜಾನ್ಸೆನ್‌ ಅವರ ಬ್ಯಾಟಿಂಗ್‌ ಅಮೋಘ ಮಟ್ಟದಲ್ಲಿತ್ತು. ಟಾಸ್‌ಗೆ ಕೇವಲ 5 ನಿಮಿಷ ಇರುವಾಗ ರೀಝ ತಂಡಕ್ಕೆ ಸೇರ್ಪಡೆಗೊಂಡಿದ್ದರು’ ಎಂದರು.

“ಓಪನರ್‌’ ಜಾನ್ಸೆನ್‌!
ಹೆನ್ರಿಕ್‌ ಕ್ಲಾಸೆನ್‌ಗೆ ಅಮೋಘ ಬೆಂಬಲ ನೀಡಿದ ಮಾರ್ಕೊ ಜಾನ್ಸೆನ್‌ ಮೂಲತಃ ಆರಂಭಿಕ ಆಟಗಾರ. ಅವರ ಈ ಅನುಭವ ಇಲ್ಲಿ ನೆರವಿಗೆ ಬಂತು. ಅವರು ಏಕದಿನದಲ್ಲಿ ಬಾರಿಸಿದ ಮೊದಲ ಅರ್ಧ ಶತಕ ಇದಾಗಿದೆ. ಬಳಿಕ ಈ ಎಡಗೈ ಸೀಮರ್‌ ಡೇವಿಡ್‌ ಮಲಾನ್‌ ಮತ್ತು ಜೋ ರೂಟ್‌ ಅವರನ್ನು ಪೆವಿಲಿಯನ್‌ಗೆ ರವಾನಿಸಿ ದಕ್ಷಿಣ ಆಫ್ರಿಕಾ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.
“ನಾನು ಯಾವತ್ತೂ ಬ್ಯಾಟಿಂಗ್‌ ಇಷ್ಟಪಡುತ್ತೇನೆ. ಮೂಲತಃ ನಾನೋರ್ವ ಓಪನರ್‌ ಆಗಿರುವುದೇ ಇದಕ್ಕೆ ಕಾರಣ. ಆದರೆ ಇಲ್ಲಿ ನಾವು 400ರ ಗಡಿ ಸಮೀಪಿಸಲಿದ್ದೇವೆ ಎಂದು ಭಾವಿಸಲೇ ಇರಲಿಲ್ಲ. 320ರಿಂದ 350 ರನ್‌ ನಮ್ಮ ನಿರೀಕ್ಷೆ ಆಗಿತ್ತು’ ಎಂದು ಜಾನ್ಸೆನ್‌ ಹೇಳಿದರು.

ಟಾಪ್ ನ್ಯೂಸ್

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Sullia ಮನೆಯಿಂದ ನಗ, ನಗದು ಕಳವು

Sullia ಮನೆಯಿಂದ ನಗ, ನಗದು ಕಳವು

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL 2024; ಮುಂಬೈ ವಿರುದ್ಧ ಭರ್ಜರಿ ಗೆಲುವು; ಮೂರಕ್ಕೇರಿದ ರಾಹುಲ್‌ ಪಡೆ

IPL 2024; ಮುಂಬೈ ವಿರುದ್ಧ ಭರ್ಜರಿ ಗೆಲುವು; ಮೂರಕ್ಕೇರಿದ ರಾಹುಲ್‌ ಪಡೆ

uber cup badminton; India lost against china

Uber Cup Badminton: ಚೀನಾ ವಿರುದ್ಧ ಭಾರತಕ್ಕೆ 5-0 ಸೋಲು

diego maradona

Diego Maradona ಹೃದಯಾಘಾತಕ್ಕೆ ಕೊಕೇನ್‌ ಸೇವನೆ ಕಾರಣ?

INDWvsBANW: ಭಾರತಕ್ಕೆ 2-0 ಮುನ್ನಡೆ

INDWvsBANW: ಭಾರತಕ್ಕೆ 2-0 ಮುನ್ನಡೆ

IPL 2024; ಅತಿಯಾದ ಸಂಭ್ರಮಾಚರಣೆ ಮಾಡಿದ ಹರ್ಷಿತ್ ರಾಣಾಗೆ ಭಾರಿ ಶಿಕ್ಷೆ

IPL 2024; ಅತಿಯಾದ ಸಂಭ್ರಮಾಚರಣೆ ಮಾಡಿದ ಹರ್ಷಿತ್ ರಾಣಾಗೆ ಭಾರಿ ಶಿಕ್ಷೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.