ಈ ಶತಮಾನದ ಕೈಟ್‌ ಬ್ರದರ್ಸ್‌!: ಹಳ್ಳಿ ಹುಡುಗರ ಅಡ್ವೆಂಚರಸ್‌ ಡ್ರಾಮ


Team Udayavani, Jun 29, 2017, 4:53 PM IST

11.jpg

ಬಹುತೇಕರಿಗೆ ರೈಟ್‌ ಬ್ರದರ್ಸ್‌ ಗೊತ್ತು. ಆದರೆ, ಕೈಟ್‌ ಬ್ರದರ್ಸ್‌ ಗೊತ್ತಾ? ಆ ರೈಟ್‌ಬ್ರದರ್ಸ್‌ ಆಗಸದಲ್ಲಿ ಹಾರುವ ವಿಮಾನ ಕಂಡು ಹಿಡಿದವರು. ಆದರೆ, ಈ ಕೈಟ್‌ ಬ್ರದರ್ಸ್‌ ಯಾರು? 

“ಕೈಟ್‌ ಬ್ರದರ್ಸ್‌’ ಎಂಬ ಹೊಸ ಸಿನಿಮಾವೊಂದು ಸದ್ದಿಲ್ಲದೆಯೇ ಶುರುವಾಗಿ ಚಿತ್ರೀಕರಣವಾಗುತ್ತಿದೆ. ಈ ಚಿತ್ರದ ಮೂಲಕ ಮಂಜುನಾಥ ಬಗಾಡೆ ನಿರ್ದೇಶಕರಾಗುತ್ತಿದ್ದಾರೆ. ಹಲವು ವರ್ಷಗಳ ಕಾಲ ಕಿರುತೆರೆ, ಹಿರಿತೆರೆಯಲ್ಲೂ ಕೆಲಸ ಮಾಡಿದ್ದ ಮಂಜುನಾಥ ಬಗಾಡೆ, ಇದೀಗ ಕಥೆ-ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶನಕ್ಕಿಳಿದಿದ್ದಾರೆ. ಭಜರಂಗ ಸಿನಿಮಾ ಬ್ಯಾನರ್‌ನಲ್ಲಿ ತಯಾರಾಗುತ್ತಿರುವ ಮೊದಲ ಚಿತ್ರವಿದು. ಶೀರ್ಷಿಕೆಯೇ ಹೇಳುವಂತೆ ಇದೊಂದು “ಗಾಳಿಪಟ’ ಹಿನ್ನೆಲೆಯಲ್ಲಿ ಸಾಗುವ ಕಥೆ. “ನಥಿಂಗ್‌ ಈಸ್‌ ಇಂಪಾಸಿಬಲ್‌’ ಎನ್ನುವ ಮಂತ್ರ ನಂಬಿರುವ 12 ವರ್ಷದ ಇಬ್ಬರು ಹಳ್ಳಿ ಹುಡುಗರ ಕಾಮಿಡಿ ಅಡ್ವೆಂಚರಸ್‌ ಡ್ರಾಮ ಇಲ್ಲಿದೆ. 

“ಮನುಷ್ಯನ ಜೀವನದ ಬಾಲ್ಯ ಎನ್ನುವ ಸುವರ್ಣ ಯುಗ ನೆನಪಿಗೆ ತಂದು ಕೊಡುವ ಕಥೆಯಲ್ಲಿ ಮಹಾತ್ಮ ಗಾಂಧೀಜಿಯೂ ಇಲ್ಲಿ ಪ್ರಮುಖ ಪಾತ್ರವಾಗಿ ಕಾಣಸಿಗುವುದು ಒಂದು ವಿಶೇಷ’ ಎನ್ನುತ್ತಾರೆ ನಿರ್ದೇಶಕ ಮಂಜುನಾಥ ಬಗಾಡೆ. ಇಲ್ಲಿ “ಕೈಟ್‌ ಬ್ರದರ್ಸ್‌’ ಯಾರು, ಅವರಿಗೇಕೆ ಕೈಟ್‌ ಬ್ರದರ್ಸ್‌ ಎಂಬ ಹೆಸರು ಬಂತು, ಎಂಬ ಪ್ರಶ್ನೆಗಳಿಗೆ ಸಿನಿಮಾ ನೋಡಬೇಕು ಎನ್ನುವ ನಿರ್ದೇಶಕರು, ಹಳ್ಳಿಯಿಂದ ಸಿಟಿಗೆ ಬರುವ ಇಬ್ಬರು ವಿದ್ಯಾರ್ಥಿಗಳು ಮಾಡುವ ಸಾಧನೆಯೇ ಚಿತ್ರದ ಹೈಲೈಟ್‌ ಎನ್ನುತ್ತಾರೆ . ಇಲ್ಲಿ ಇನ್ನೊಂದು ಪ್ರಮುಖ ಪಾತ್ರವೂ ಇದೆ. ಆ ಪಾತ್ರವನ್ನು ವಿನೋದ್‌ ಬಗಾಡೆ ಎಂಬುವವರು ಮಾಡುತ್ತಿದ್ದಾರೆ. ಉಳಿದಂತೆ ಚಿತ್ರದಲ್ಲಿ ಬಹುತೇಕ ಹೊಸ ಪ್ರತಿಭೆಗಳೇ ಕಾಣಿಸಿಕೊಳ್ಳುತ್ತಿವೆ. ಮಾ.ಸಮರ್ಥ ಆಶಿ, ಮಾ. ಪ್ರಣೀಲ… ನಾಡಿಗೇರ, ಬೇಬಿ ಶ್ರೇಯಾ ಹರಿಹರ, ಶಿವಕುಮಾರ್‌ ರಾಯನಾಳ, ಅಭಿಷೇಕ್‌ ಮುದರೆಡ್ಡಿ, ಕಿರಣ್‌ ಬಗಾಡೆ, ಅಭಿಷೇಕ್‌ ಕುರಳಿ, ಅನಂತ ದೇಶಪಾಂಡೆ, ಪ್ರಭು ಹಂಚಿನಾಳ, ಅನಸೂಯಾ ಹಂಚಿನಾಳ, ರಾಜೀವ ಸಿಂಗ್‌ ಹಲವಾಯಿ ಎಂಬ ರಂಗಭೂಮಿ ಕಲಾವಿದರಿದ್ದಾರೆ.

ಚಿತ್ರದ ಇನ್ನೊಂದು ವಿಶೇಷವೆಂದರೆ, ಅಶೋಕ್‌ ಕಶ್ಯಪ್‌ ಚಿತ್ರಕ್ಕೆ ಕ್ಯಾಮೆರಾ ಹಿಡಿಯುತ್ತಿದ್ದಾರೆ. ಅನೀಶ್‌ ಚೆರಿಯಾನ್‌ ಸಂಗೀತವಿದೆ. ಸಂತೋಷ್‌ ರಾಧಾಕೃಷ್ಣನ್‌ ಸಂಕಲನ ಮಾಡಿದರೆ, ಯೋಗರಾಜ್‌ಭಟ್‌, ಜಯಂತ್‌ ಕಾಯ್ಕಿಣಿ, ಸಿಂಪಲ್‌ ಸುನಿ, ಮಂಜುನಾಥ ಬಗಾಡೆ ಅವರ ಸಾಹಿತ್ಯ ಚಿತ್ರಕ್ಕಿದೆ. ಬೆಂಗಳೂರು, ಅಹಮದಾಬಾದ್‌, ಧಾರವಾಡ ಸುತ್ತಮುತ್ತಲ ತಾಣಗಳಲ್ಲಿ ಚಿತ್ರೀಕರಣ ನಡೆಯಲಿದೆ. ಆಗಸ್ಟ್‌ ಹೊತ್ತಿಗೆ ಚಿತ್ರೀಕರಣ ಮುಗಿಸಿ, ಪ್ರೇಕ್ಷಕರ ಮುಂದೆ ಚಿತ್ರ ಬರಲಿದೆ.
 

ಟಾಪ್ ನ್ಯೂಸ್

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Kharge (2)

Letter; ನ್ಯಾಯಪತ್ರ ಬಗ್ಗೆ ವಿವರಿಸಲು ಪಿಎಂ ಮೋದಿ ಸಮಯ ಕೇಳಿದ ಖರ್ಗೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

Reservation: ಜನಸಂಖ್ಯೆ ಆಧಾರದಲ್ಲಿ ಮೀಸಲು ನೀಡಲು ಸಿದ್ಧರೇ?

Reservation: ಜನಸಂಖ್ಯೆ ಆಧಾರದಲ್ಲಿ ಮೀಸಲು ನೀಡಲು ಸಿದ್ಧರೇ?

Supreme Court

Supreme Court; ಖಾಸಗಿ ಆಸ್ತಿಯನ್ನು ಸ್ವಾಧೀನ ಮಾಡಬಹುದೇ? 

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.