ಒಂದು ಕೆ.ಜಿ. ಕಸಕ್ಕೆ ಮೊಬೈಲ್!
Team Udayavani, Aug 17, 2017, 6:41 AM IST
ರಸ್ತೆಗೆರಡು ಕಸದ ತೊಟ್ಟಿ ಇರಿಸಿ, “ಕಸವನ್ನು ಕಸದ ತೊಟ್ಟಿಗೇ ಹಾಕಿ’ ಎಂದು ಸರ್ಕಾರ ಎಷ್ಟೇ ಹೇಳಿದರೂ, ಜನರಿಗೆ ಕಸವನ್ನು ಬೀದಿಗೆಸದರೆ ಮಾತ್ರ ತೃಪ್ತಿಯಾಗುವುದು. ಕಸ ಬೀದಿಗೆಸೆಯುವವರಿಗೆ ದಂಡ ವಿಧಿಸಲಾಗುವುದು ಎಂದೆಲ್ಲಾ ಸರ್ಕಾರಗಳು ಜನರನ್ನು ಹೆದರಿಸಲೂ ಪ್ರಯತ್ನಿಸುತ್ತವೆ. ಆದರೂ ನಮ್ಮ ದೇಶದ ಜನರು ಮಾತ್ರ ಯಾವ ಬೆದರಿಕೆಗೂ ತಲೆಕೆಡಿಸಿಕೊಳ್ಳಲ್ಲ. ಬೆದರಿಕೆಗೆಲ್ಲಾ ಜಗ್ಗದ ಜನ ಆಕರ್ಷಕ ಉಡುಗೊರೆಯ ಆಮಿಷಕ್ಕೆ ಜಗ್ಗದೇ ಇರುತ್ತಾರಾ? ಇದೂ ಒಂದು ಪ್ರಯತ್ನ ಮಾಡೇ ಬಿಡುವ ಎಂದು ಉತ್ತರಾಖಂಡದ ಉತ್ತರಕಾಶಿ ಜಿಲ್ಲಾಡಳಿತ ಪ್ರತಿದಿನ 1 ಕೆ.ಜಿ. ಕಸ ಒಟ್ಟು ಮಾಡಿ ತಂದವರಿಗೆ ಮೊಬೈಲ್ ನೀಡುವುದಾಗಿ ಘೋಷಿಸಿದೆ.
ಈ ಸ್ಪರ್ಧೆಯಲ್ಲಿ ಭಾಗವಹಿಸುವವರು ಪ್ರತಿದಿನ ಮನೆಯಿಂದ 1 ಕೆ.ಜಿ. ಕಸವನ್ನು ಕಸದ ತೊಟ್ಟಿಗೆ ತರಬೇಕು. ಅವರಿಗೆ ಕೂಪನ್ ನೀಡಲಾಗುವುದು. ವಾರದ ಕೊನೆಯಲ್ಲಿ ಕೂಪನ್ಗಳನ್ನು ಒಟ್ಟು ಮಾಡಿ ಡ್ರಾ ಮಾಡುವ ಮೂಲಕ ಜಯಶಾಲಿಯನ್ನು ಆಯ್ಕೆ ಮಾಡಲಾಗುವುದು. ಗೆದ್ದವರಿಗೆ ಮೊಬೈಲ್ ಫೋನ್ ಬಹುಮಾನ ನೀಡಲಾಗುವುದು.