CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಕಾದು ನಿಂತ ಅಭಿಮಾನಿಗಳಿಗೆ ಪಿಝಾ ಕೊಡಿಸಿದ ಹಿಲರಿ

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋತರೂ ಅಭ್ಯರ್ಥಿ ಹಿಲರಿ ಕ್ಲಿಂಟನ್‌ ತನ್ನ ಅಭಿಮಾನಿಗಳಿಗೆ ಪಿಝಾ ಕೊಡಿಸಿದ್ದಾರೆ. ಈ ಮೂಲಕ ತನ್ನ ನೂರಾರು ಅಭಿಮಾನಿಗಳಿಗೆ ಖುಷಿ ಕೊಟ್ಟಿದ್ದಾರೆ. ಇದಕ್ಕೆಲ್ಲಾ ಕಾರಣ ಅವರು ಬರೆದಿರುವ ಪುಸ್ತಕದ ಮಾರಾಟ.

ಕಳೆದ ಸೋಮವಾರ ಅಧ್ಯಕ್ಷೀಯ ಚುನಾವಣೆಗೆ ಸಂಬಂಧಿಸಿದಂತೆ ಹಿಲರಿ ಕ್ಲಿಂಟನ್‌ ಬರೆದಿರುವ "ವಾಟ್‌ ಹ್ಯಾಪನ್‌x' ಎಂಬ ಪುಸ್ತಕದ ಬಿಡುಗಡೆ ಇತ್ತು. ಸಾವಿರಾರು ಸಂಖ್ಯೆಯಲ್ಲಿ ಅವರ ಅಭಿಮಾನಿಗಳು ಮತ್ತು ವಿರೋಧಿಗಳು ಪುಸ್ತಕ ಕೊಳ್ಳಲು ಸರತಿಯಲ್ಲಿ ಕಾದು ನಿಂತಿದ್ದರು. ಈ ಉದ್ದದ ಸರತಿ ಸಾಲನ್ನು ನೋಡಿ ಸಂತಸಗೊಂಡ ಅವರು ಪ್ರಸಿದ್ಧ ನ್ಯೂಯಾರ್ಕ್‌ ಪಿಝೇರಿಯಾದಿಂದ ಪಿಝಾ ತರಿಸಿ ಅಭಿಮಾನಿಗಳಿಗೆ ಹಂಚಿದ್ದಾರೆ.

Back to Top