CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ನನ್‌ಗೊಂದು ಮದ್ವೆ ಮಾಡ್ರೀ..! ; ಮರವೇರಿ ಕುಳಿತ ಯುವಕ 

60 ಅಡಿ ಎತ್ತರದಲ್ಲಿ ಯುವಕನ ಪ್ರತಿಭಟನೆ !!

ಬಳ್ಳಾರಿ : ವಯಸ್ಸು 30 ದಾಟಿತು, ಇನ್ನೂ ಕನ್ಯೆ ಸಿಗಲಿಲ್ಲ ಎನ್ನುವ ಕೊರಗು ಹೆಚ್ಚಿನ ಯುವಕರಲ್ಲಿ ಸಾಮಾನ್ಯ. ಆದರೆ ಇಲ್ಲೊಬ್ಬ ಭೂಪ ಕೂಡಲೇ ನನಗೆ ಮದುವೆ ಮಾಡಿಸಲೇ ಬೇಕು ಎಂದು ಪಟ್ಟು ಹಿಡಿದು ಮರವೇರಿ ಕುಳಿತು ಸುದ್ದಿಯಾಗಿದ್ದಾನೆ.  

ಕೂಡ್ಲಿಗಿಯ ಯಂಬಳೆ ವಡ್ಡರ ಹಟ್ಟಿಯಲ್ಲಿ  ಬಸವರಾಜ್‌ ಎಂಬ 32 ವರ್ಷ ಪ್ರಾಯದ ಯುವಕ ಮರವೇರಿ 60 ಅಡಿ ಎತ್ತರದಲ್ಲಿ ಕುಳಿತು ಮೂರು ದಿನಗಳ ಕಾಲ ಮರದಿಂದ ಇಳಿಯಲು ಸುತಾರಾಂ ಒಪ್ಪದೆ ಪ್ರತಿಭಟನೆ ನಡೆಸಿದ್ದಾನೆ. 

ಮುದುವೆ ಮಾಡಿಸುವುದಾಗಿ ಭಾಷೆ ನೀಡಿದರೆ ಮಾತ್ರ ಕೆಳಗಿಳಿಯುತ್ತೇನೆ ಎಂದು ಪಟ್ಟು ಹಿಡಿದು ಕುಳಿತಿದ್ದ. ಗ್ರಾಮಸ್ಥರು ಎಷ್ಟೇ ಮನವೊಲಿಸಲು ಪ್ರಯತ್ನ ಪಟ್ಟರೂ ಕೆಳಗಿಳಿಯಲು ಮುಂದಾಗಲಿಲ್ಲ. ಕೂಡಲೇ ಖಾನಾ ಹೊಸಹಳ್ಳಿ ಪೊಲೀಸರು ಸ್ಥಳಕ್ಕಾಗಮಿಸಿ ಬಸವರಾಜನನ್ನು ಮರದಿಂದ ಕೆಳಗಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ. 

Back to Top