ಕನ್ನಡದ ಮುಗುಳುನಗೆ ನಿಖೀತಾ

Team Udayavani, Jun 25, 2017, 3:45 AM IST

Nikita-Narayan-(1)-(1)a.jpg

ಗೀತಾಂಜಲಿ  ಮುಹೂರ್ತವಾದ ಚಿತ್ರ ಮುಂದುವರೆಯಲಿಲ್ಲ. ಆ ನಂತರ ಪ್ರಾರಂಭವಾದ ಮಡಮಕ್ಕಿ ಬಿಡುಗಡೆಯಾದರೂ, ಯಶಸ್ವಿಯಾಗಲಿಲ್ಲ. ಈ ಮಧ್ಯೆ ಶುರುವಾದ ಜೋಗಿಗುಡ್ಡ ಏನಾಯಿತೋ ಗೊತ್ತಿಲ್ಲ… ಒಟ್ಟಿನಲ್ಲಿ ನಿಖೀತಾ ನಾರಾಯಣ್‌ ಚಿತ್ರರಂಗಕ್ಕೆ ಬಲಗಾಲಿಟ್ಟು ಒಳಗೆ ಬಂದರೂ, ಒಂದು ದೊಡ್ಡ ಯಶಸ್ಸನ್ನು ನೋಡುವುದಕ್ಕೆ ಸಾಧ್ಯವಾಗುತ್ತಿಲ್ಲ. ಹಾಗಂತ ಅವರ ಅದೃಷ್ಟ ಕೈಕೊಟ್ಟಿಲ್ಲ. ನಿಖೀತಾ ಅಭಿನಯದ ಮೂರು ಚಿತ್ರಗಳು ಅವರಿಗೆ ದೊಡ್ಡ ಯಶಸ್ಸು ತಂದುಕೊಡದಿದ್ದರೂ, ಯೋಗರಾಜ್‌ ಭಟ್‌ ನಿರ್ದೇಶನದಲ್ಲಿ ನಟಿಸುವಷ್ಟು ಅದೃಷ್ಟವಂತೂ ಅವರಿಗೆ ಖಂಡಿತ ಇದೆ.

ಯೋಗರಾಜ್‌ ಭಟ್‌ ನಿರ್ದೇಶನದ ಮತ್ತು ಗಣೇಶ್‌ ಅಭಿನಯದ ಮುಗುಳು ನಗೆ ಚಿತ್ರ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಈ ಚಿತ್ರದ ನಾಲ್ವರು ನಾಯಕಿಯರ ಪೈಕಿ, ನಿಖೀತಾ ನಾರಾಯಣ್‌ ಸಹ ಒಬ್ಬರು. ಇದಕ್ಕೂ ಮುನ್ನ ನಿಖೀತಾ, ಭಟ್‌ ನಿರ್ದೇಶಿಸಬೇಕಿದ್ದ ನನ್ನ ಹೆಸರೇ ಅನುರಾಗಿ ಚಿತ್ರದಲ್ಲಿ ಒಬ್ಬ ನಾಯಕಿಯಾಗಿ ಅಭಿನಯಿಸಬೇಕಿತ್ತು. ಆಡಿಷನ್‌ನಲ್ಲಿ ಪಾಸ್‌ ಆಗಿ, ಆಯ್ಕೆಯೂ ಆಗಿದ್ದರು. ಆದರೆ, ಅದ್ಯಾಕೋ ಚಿತ್ರ ತಡವಾಗಿ, ಅದರ ಬದಲು ಮುಗುಳು ನಗೆ  ಶುರುವಾಯಿತು. ನಿಖೀತಾ ಅವರ ಸಾಮರ್ಥ್ಯ ಗೊತ್ತಿದ್ದ ಯೋಗರಾಜ್‌ ಭಟ್‌, ಈ ಚಿತ್ರದ ನಾಲ್ವರು ನಾಯಕಿಯರ ಪೈಕಿ, ನಿಖೀತಾಗೂ ಒಂದು ಛಾನ್ಸ್‌ ಕೊಟ್ಟಿದ್ದಾರೆ.

ಕನ್ನಡದಲ್ಲಿ ಇನ್ನೂ ಸರಿಯಾಗಿ ಖಾತೆ ತೆರೆಯದಿದ್ದರೂ, ತೆಲುಗಿನಲ್ಲಿ ಈಗಾಗಲೇ ನಿಖೀತಾ ಗುರುತಿಸಿಕೊಂಡಿದ್ದಾಗಿದೆ. ಅದಕ್ಕೆ ಕಾರಣ ಅವರು ಹೈದರಾ ಬಾದ್‌ ನಲ್ಲಿ ನೆಲೆಸಿರು ವುದಷ್ಟೇ ಅಲ್ಲ, ಅಲ್ಲೊಂದಿಷ್ಟು ಕೆಲಸ ಮಾಡಿರುವುದು. ನಿಖೀತಾ ಮಾಡೆಲಿಂಗ್‌ ಹಿನ್ನೆಲೆಯಿಂದ ಬಂದವರು. 2009 ರಲ್ಲಿ ಮಿಸ್‌ ಹೈದರಾಬಾದ್‌, 2010 ರಲ್ಲಿ ನಡೆದ ಮಿಸ್‌ ಸೌತ್‌ಇಂಡಿಯಾದ ಸೆಕೆಂಡ್‌ ರನ್ನರ್‌ಅಪ್‌ನ್ನು ಮುಡಿಗೇರಿಸಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆದರು. ಆ ನಂತರ ಇಟ್ಸ್‌ ಮೈ ಲವ್‌ಸ್ಟೋರಿ ಎಂಬ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಿಖೀತಾ, ಆ ಚಿತ್ರಕ್ಕೆ ಸೈಮಾ ಪ್ರಶಸ್ತಿಯನ್ನು ಸಹ ತಮ್ಮದಾಗಿಸಿಕೊಂಡರು. ನಂತರದ ದಿನಗಳಲ್ಲಿ ಮೇಡ್‌ ಇನ್‌ ವೈಜಾಕ್‌, ಪೇಸರತು. ಲೇಡಿಸ್‌ ಅಂಡ್‌ ಜೆಂಟಲ್‌ಮೆನ್‌, ನಳದಮಯಂತಿ ಹಾಗೂ ತನು ನೆನು ವೆಳ್ಳಿಪೊಯಿಂ ಚಿತ್ರಗಳಲ್ಲಿ ನಿಖೀತಾ ನಟಿಸಿದ್ದಾರೆ. ನಿಖೀತಾ ಕನ್ನಡದಲ್ಲಿ ನಟಿಸದಿದ್ದರೂ ಅವರಿಗೆ ಭಾಷೆ ಹೇಗೆ ಬರಬಹುದು ಎಂಬ ಆಶ್ಚರ್ಯ ಉಂಟಾಗುವುದು ಸಹಜವೇ. ಬಹಳಷ್ಟು ವರ್ಷಗಳಿಂದಲೂ ನಿಖೀತಾ ಅವರ ಕುಟುಂಬ ಹೈದರಾಬಾದ್‌ನಲ್ಲಿ ಸೆಟ್ಲ ಆಗಿದ್ದರೂ ಕನ್ನಡದ ಸಂಪರ್ಕ ಬಿಟ್ಟಿರಲಿಲ್ಲ. ಇನ್ನು ನಿಖೀತಾ ಅವರ ಸಂಬಂಧಿಕರು ಕರ್ನಾಟಕದಲ್ಲೇ ಇರುವುದರಿಂದ, ಅವರೆಲ್ಲರ ಜೊತೆಗೆ ಮಾತಾಡಿ ಆಡಿ, ಅವರಿಗೆ ಕನ್ನಡ ಚೆನ್ನಾಗಿಯೇ ಬರುತ್ತದೆ. ಕನ್ನಡ ಬರುವುದರಿಂದಲೇ ಕನ್ನಡ ಚಿತ್ರದಲ್ಲಿ  ನಟಿಸುವ ಆಸೆಯೇನೋ ಈಡೇರಿದೆ. ಇನ್ನು ನೆಲೆಯೂರುವ ಆಸೆಯು ಮುಗುಳು ನಗೆ ಚಿತ್ರದ ಬಿಡುಗಡೆಯ ನಂತರ ಈಡೇರಲಿ ಎಂಬ ಹಾರೈಕೆ ಇರಲಿ.

ಟಾಪ್ ನ್ಯೂಸ್

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

1-ewewqe

IPL; ಕೆಕೆಆರ್‌ ನೀಡಿದ 262 ರನ್ ಗುರಿ ತಲುಪಿ ದಾಖಲೆ ಬರೆದ ಪಂಜಾಬ್

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Chitradurga ಯರೇಹಳ್ಳಿಯಲ್ಲಿ ಹಕ್ಕು ಚಲಾಯಿಸಿದ್ದು ಕೇವಲ 18 ಮಂದಿ!

Chitradurga ಯರೇಹಳ್ಳಿಯಲ್ಲಿ ಹಕ್ಕು ಚಲಾಯಿಸಿದ್ದು ಕೇವಲ 18 ಮಂದಿ!

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು

H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ

H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

1-ewewqe

IPL; ಕೆಕೆಆರ್‌ ನೀಡಿದ 262 ರನ್ ಗುರಿ ತಲುಪಿ ದಾಖಲೆ ಬರೆದ ಪಂಜಾಬ್

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Chitradurga ಯರೇಹಳ್ಳಿಯಲ್ಲಿ ಹಕ್ಕು ಚಲಾಯಿಸಿದ್ದು ಕೇವಲ 18 ಮಂದಿ!

Chitradurga ಯರೇಹಳ್ಳಿಯಲ್ಲಿ ಹಕ್ಕು ಚಲಾಯಿಸಿದ್ದು ಕೇವಲ 18 ಮಂದಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.