ಡಬಲ್ ಗೇಮ್: ಉಗ್ರರನ್ನು ಮಟ್ಟ ಹಾಕುವುದು ಪಾಕಿಗೆ ಅಸಾಧ್ಯ: ಅಮೆರಿಕ
Team Udayavani, Feb 18, 2017, 11:07 AM IST
ವಾಷಿಂಗ್ಟನ್ : ಪಾಕಿಸ್ಥಾನದ ಗುಪ್ತಚರ ಸಂಸ್ಥೆ ಐಎಸ್ಐ ಬಹಳ ದೀರ್ಘಕಾಲದಿಂದ ಕೆಲವು ಉಗ್ರ ಸಂಘಟನೆಗಳನ್ನು ಪೋಷಿಸುತ್ತಾ ಕೆಲವು ಉಗ್ರ ಸಂಘಟನೆಗಳ ವಿರುದ್ಧ ಮಾತ್ರವೇ ಕ್ರಮ ತೆಗೆದುಕೊಳ್ಳುವ ಡಬಲ್ ಗೇಮ್ ನಡೆಸುತ್ತಿರುವುದರಿಂದ ದೇಶದಲ್ಲಿನ ಉಗ್ರರ ಮೇಲೆ ನಿಯಂತ್ರಣ ಸಾಧಿಸುವುದು ಪಾಕಿಸ್ಥಾನಕ್ಕೆ ಅಸಾಧ್ಯವಾಗಿದೆ. ಉಗ್ರರ ವಿರುದ್ಧದ ಈ ಡಬಲ್ ಗೇಮ್ ತಂತ್ರವನ್ನು ಪಾಕಿಸ್ಥಾನ ಕೈಬಿಟ್ಟರೆ ಮಾತ್ರವೇ ಅದಕ್ಕೆ ಭಯೋತ್ಪಾದನೆ ವಿರುದ್ಧದ ಸಮರದಲ್ಲಿ ಜಯ ಸಿಗಬಹುದು ಎಂದು ಅಮೆರಿಕದ ಸಂಸದ ಬ್ರಾಡ್ ಶೇರ್ಮನ್ ಹೇಳಿದ್ದಾರೆ.
ಪಾಕಿಸ್ಥಾನದ ಸಿಂಧ್ ಪ್ರಾಂತ್ಯದಲ್ಲಿನ ಸೂಫಿ ದರ್ಗಾದ ಮೇಲೆ ಐಸಿಸ್ ಉಗ್ರರು ಬಾಂಬ್ ದಾಳಿ ನಡೆಸಿ ಪ್ರಾರ್ಥನೆಯಲ್ಲಿ ನಿರತರಾಗಿದ್ದ 80 ಮಂದಿಯನ್ನು ಬಲಿ ತೆಗೆದುಕೊಂಡ ಉಗ್ರ ಕೃತ್ಯವನ್ನು ಖಂಡಿಸಿ, ಮಡಿದವರಿಗೆ ಶೋಕ ವ್ಯಕ್ತಪಡಿಸಿ, ಮಾತನಾಡಿದ ಶೇರ್ಮನ್ ಅವರು “ಪಾಕಿಸ್ಥಾನ ಉಗ್ರ ಸಂಘಟನೆಗಳ ವಿರುದ್ಧ ತಾರತಮ್ಯ ನಡೆಸಿ ಡಬಲ್ ಗೇಮ್ ಆಡುತ್ತಿರುವುದರಿಂದ ಅದಕ್ಕೆ ತನ್ನ ದೇಶದಲ್ಲಿ ಕಾರ್ಯಾಚರಿಸುತ್ತಿರುವ ಐಸಿಸ್ ಸಹಿತ ಇತರ ಹಲವು ಉಗ್ರ ಸಂಘಟನೆಗಳನ್ನು ಮಟ್ಟ ಹಾಕಲು ಸಾಧ್ಯವಾಗದು’ ಎಂದು ಖಂಡತುಂಡವಾಗಿ ಹೇಳಿದರು.
ಶೇರ್ಮನ್ ಅವರು ಅಮೆರಿಕ ಸಂಸತ್ತಿನಲ್ಲಿ ವಿದೇಶ ವ್ಯವಹಾರಗಳ ಸಮಿತಿಯ ಏಶ್ಯ ಪೆಸಿಫಿಕ್ ಉಪ ಸಮಿತಿಯ ಹಾಗೂ ಸಿಂಧ್ ಕಾಕಸ್ನ ಅಗ್ರ ಶ್ರೇಯಾಂಕದ ಸದಸ್ಯರೂ ಆಗಿದ್ದಾರೆ.
“ಪಾಕಿಸ್ಥಾನದ ಐಎಸ್ಐ ಆಯ್ದ ಕೆಲವು ಉಗ್ರ ಸಂಘಟನೆಗಳನ್ನು ತನ್ನ ಲಾಭಕ್ಕಾಗಿ, ಬೇಳೆ ಬೇಯಿಸಿಕೊಳ್ಳುವುದಕ್ಕಾಗಿ ಬಹಳ ದೀರ್ಘಕಾಲದಿಂದ ಬೆಂಬಲಿಸುತ್ತಿದೆ; ಅದೇ ವೇಳೆ ಇತರ ಉಗ್ರ ಸಂಘಟನೆಗಳ ವಿರುದ್ಧ ಅದು ಕ್ರಮ ತೆಗೆದುಕೊಳ್ಳುತ್ತಿದೆ. ಇಂತಹ ಡಬಲ್ ಗೇಮ್ನಿಂದ ಯಾವುದೇ ಪ್ರಯೋಜನವಿಲ್ಲ; ಹಾಗಾಗಿ ಪಾಕ್ ಸರಕಾರಕ್ಕೆ ಉಗ್ರರನ್ನು ಮಟ್ಟ ಹಾಕಲು ಸಾಧ್ಯವೇ ಇಲ್ಲ’ ಎಂದು ಶೇರ್ಮನ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ