ಪ್ರಗ್ಯಾ ಠಾಕೂರ್ ಆರೋಗ್ಯ ಏರುಪೇರು : ಆಸ್ಪತ್ರೆಗೆ ದಾಖಲು
ಭೋಪಾಲ್ ಬಿಜೆಪಿ ಸಂಸದೆ ಪ್ರಗ್ಯಾ ಠಾಕೂರ್
Team Udayavani, Mar 6, 2021, 5:41 PM IST
ಮುಂಬೈ : ಭೋಪಾಲ್ ಬಿಜೆಪಿ ಸಂಸದೆ ಪ್ರಗ್ಯಾ ಠಾಕೂರ್ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು ವಿಮಾನದ ಮೂಲಕ ಮುಂಬೈನ ಕೋಕಿಲಬೆನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಾದ್ವಿ ಪ್ರಗ್ಯಾ ಕಳೆದ ಫೆ. 19ರಂದು ಇದೇ ತೊಂದೆರೆಯಿಂದ ಬಳಲಿದ್ದು, ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಇದಾದ ಮೇಲೆ ಪ್ರಾಗ್ಯಾ ಅವರ ಆರೋಗ್ಯದ ಮೇಲೆ ನಿಗಾ ವಹಿಸಲಾಗಿತ್ತು.
ಭೋಪಾಲ್ಲ್ಲಿ ನಡೆದ 2019 ರ ಲೋಕಸಭಾ ಚುನಾವಣೆಯಲ್ಲಿ ಪ್ರಗ್ಯಾ, ದಿಗ್ವಿಜಯ ಸಿಂಗ್ ಅವರನ್ನು 3.6 ಲಕ್ಷ ಮತಗಳಿಂದ ಸೋಲಿಸಿ ಗೆಲುವನ್ನು ಸಾಧಿಸಿದ್ದರು.
ಈ ಹಿಂದೆ ಮಲೆಗಾಂಗ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಗಳಲ್ಲೊಬ್ಬರಾಗಿದ್ದ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಅವರಿಗೆ ಬಾಂಬೆ ಹೈಕೋರ್ಟ್ ಜಾಮೀನು ನೀಡಿತ್ತು.