ಆನೆಗೊಂದಿಯ ಅಂಜನಾದ್ರಿಯೇ ಹನುಮಂತನ ಜನ್ಮಸ್ಥಳ


Team Udayavani, May 1, 2021, 7:20 AM IST

ಆನೆಗೊಂದಿಯ ಅಂಜನಾದ್ರಿಯೇ ಹನುಮಂತನ ಜನ್ಮಸ್ಥಳ

Hampi is the birth Place of Hanuman are not true. Hampi is kishkinda while Venkatachalam is Anjanadri. ಅಂದರೆ ಹಂಪಿ ಕಿಷ್ಕಿಂಧೆ ಹೌದು, ಆದರೆ ವೆಂಕಟಾಚಲಂ ಅಂಜನಾದ್ರಿ ಎಂದು ಟಿಟಿಡಿ ಸಮಿತಿ ಹಂಪಿ-ಆನೆಗೊಂದಿ ಪ್ರದೇಶವನ್ನು ಕಿಷ್ಕಿಂಧೆ ಎಂದು ಒಪ್ಪಿಕೊಂಡಿರುವುದು ಸ್ವಾಗತಾರ್ಹ. ಆದರೆ ಅಂಜನಾದ್ರಿ ಕಿಷ್ಕಿಂಧೆಯ ಭಾಗವಲ್ಲ ಎಂದಿರುವುದು ಬಾಲಿಶ ಹಾಗೂ ಅತಾರ್ಕಿಕವೆನಿಸುತ್ತದೆ.

ವಾಲಿ, ಸುಗ್ರೀವ, ಆಂಜನೇಯ ಇವರೆಲ್ಲ ವಾನರ ಸಮುದಾಯದ ವೀರರು, ಕಿಷ್ಕಿಂಧೆ ವಾನರರ ರಾಜ್ಯ. ಕಿಷ್ಕಿಂಧೆಯಲ್ಲದೇ ಬೇರೆಲ್ಲೂ ವಾನರ ಸಮುದಾಯವಿದ್ದಿಲ್ಲ. ಹಾಗಾಗಿ ವಾನರ ವೀರನಾದ ಹನುಮಂತನು ಹುಟ್ಟಿದ್ದು, ಬೆಳೆದದ್ದು ಕಿಷ್ಕಿಂಧೆಯ ಭಾಗವಾದ ಅಂಜನಾದ್ರಿಯಲ್ಲಿ ಮಾತ್ರ. ವೆಂಕಟಾಚಲಂ ಕಿಷ್ಕಿಂಧೆಯ ಭಾಗವಾಗಿರಲಿಲ್ಲ. ಹಾಗಾಗಿ ಅಲ್ಲಿ ಹನುಮನ ಜನನವಾಯಿತೆಂಬುದು ಹಾಸ್ಯಾಸ್ಪದವೆನಿಸುತ್ತದೆ.

1961ರಲ್ಲಿ ಕರ್ನಾಟಕದ ಖ್ಯಾತ ಪುರಾತತ್ವ ಪಂಡಿತರಾದ ಡಾ| ಅ. ಸುಂದರ ಅವರು ಹಂಪಿ-ಆನೆಗೊಂದಿ ಪ್ರದೇಶದಲ್ಲಿ ಅಧ್ಯಯನ ನಡೆಸಿ ಈ ಭಾಗವೇ ರಾಮಾಯಣ ಕಾಲದ ಕಿಷ್ಕಿಂಧೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಹಂಪಾ ಇಂದಿನ ಹಂಪಿ
ಹಂಪಿ-ಆನೆಗೊಂದಿ ಪ್ರದೇಶವು ಬಹಳ ಪ್ರಾಚೀನ ಕಾಲದಿಂದಲೂ ಕಿಷ್ಕಿಂಧೆ ಎಂದೇ ಹೆಸರುವಾಸಿಯಾಗಿದೆ. ಅದರಲ್ಲಿ ಪಂಪಾ ಕ್ಷೇತ್ರವು ಒಂದು ಭಾಗವಾಗಿತ್ತು “ಹಂಪಾ ಇಂದಿನ ಹಂಪಿ’ ಎಂಬ ಹೆಸರು ಕೂಡಾ ಕಿಷ್ಕಿಂಧೆ ಎಂಬ ಹೆಸರಿನಷ್ಟೇ ಪ್ರಾಚೀನ ರಾಮಾಯಣದಲ್ಲಿ ಲಂಕಾಧಿಪತಿ ರಾವಣನು ಸೀತೆಯನ್ನು ಅಪಹರಿಸಿಕೊಂಡು ತನ್ನ ರಾಜಧಾನಿ ಲಂಕೆಗೆ ಹಿಂದಿರುಗುತ್ತಿರುವಾಗ “ಪಂಪಾ’ ಮೂಲಕವೇ ಹೋದನು (ಸಚ ಪಂಪಾಮತಿಕ್ರಮ್ಯ ಲಂಕಾಮಭಿಮುಖಂ ಪುರೀಂ ಜಗಾಮ) ಎಂದಿದೆ. ಇದರಿಂದ “ಪಂಪಾ’ ಅಥವಾ ಇಂದಿನ ಹಂಪಿಯ ಮೂಲಕವೇ ರಾವಣನು ಹೋದದ್ದು ಸ್ಪಷ್ಟವಾಗುತ್ತದೆ. ಸ್ಕಂದ ಪುರಾಣದ ಪಂಪಾ ಮಹಾತ್ಮೆಯ ಉಲ್ಲೇಖದಂತೆ ಪಂಪಾಂಬಿಕೆ ಮತ್ತು ವಿರೂಪಾಕ್ಷರು ಕೃತ ಯುಗದಲ್ಲಿ ಇಲ್ಲಿ ವಿವಾಹವಾಗಿ ನೆಲೆಸಿದರು. ತ್ರೇತಾಯುಗದಲ್ಲಿ ಇದು ಕಿಷ್ಕಿಂಧೆ ಎಂದು ಕರೆಯಲ್ಪಟ್ಟರೂ “ಪಂಪಾ’ ಹೆಸರು ಮರೆಯಾಗಲಿಲ್ಲ.

ರಾಮಾಯಣದ ಕಿಷ್ಕಿಂಧಾಕಾಂಡ (ಸರ್ಗ 25 ಶ್ಲೋಕಗಳು 10ರಿಂದ)ದಲ್ಲಿ ಕಿಷ್ಕಿಂಧೆಯನ್ನು “ಸುಸಮೃದ್ಧಾ ಗುಹಾಂ ದಿವ್ಯಾಂ’ ಎಂದು ವರ್ಣಿಸಲಾಗಿದೆ. ಈ ಗಿರಿಗಂಹ್ವರದಲ್ಲಿ ಕಿಷ್ಕಿಂಧಾ ನಗರವು ರಮ್ಯವಾಗಿತ್ತು. (ಗಿರಿಗಂಹ್ವರೆ ಕಿಷ್ಕಿಂಧಾ ನಗರೀ ರಮ್ಯಾ) ಎಂದಿದೆ. ಈ ವರ್ಣನೆಯು ಗಿರಿ-ಗಹ್ವರಗಳ ನಡುವಿನ ಅಸಂಖ್ಯಾತ ಗವಿಗಳುಳ್ಳ ಗುಡ್ಡ ಬೆಟ್ಟಗಳನ್ನೊಳಗೊಂಡ ಪ್ರಾಚೀನ ಜನವಾಸ್ತವ್ಯದ ನೆಲೆಗಳಿಂದ ಕೂಡಿದ ಆನೆಗೊಂದಿ ಹಂಪಿ ಪ್ರದೇಶಕ್ಕೆ ಸರಿಯಾಗಿ ಒಪ್ಪುತ್ತದೆ ವಿನಾ ಪ್ರಾಚೀನ ಕಾಲದಲ್ಲಿ ನಿರ್ಜನವಾಗಿದ್ದ ಗಿರಿಗವ್ವರಗಳಿಲ್ಲದ ತಿರುಮಲ ಬೆಟ್ಟಕ್ಕೆ ಅಲ್ಲ.

ರಾಮಾಯಣ ಕಾವ್ಯದಲ್ಲಿ ಬರುವ ಕಿಷ್ಕಿಂಧಾ ಕಾಂಡದಲ್ಲಿ ನಡೆಯುವ ಪ್ರಸಂಗಗಳೆಲ್ಲ ಜರಗಿದ್ದು ಹಂಪಿ ಆನೆಗೊಂದಿಯ ಕಿಷ್ಕಿಂಧಾದಲ್ಲಿ. ಇಲ್ಲಿಯ ದುರ್ಗಾದೇವಿ ದೇವಸ್ಥಾನವಿರುವ ಬೆಟ್ಟವೇ ವಾಲಿ ಪರ್ವತ ಅಥವಾ ವಾಲಿ ಖೀಲ್ಲಾ ಕಿಷ್ಕಿಂಧಾದ ಅಧಿಪತಿಯಾಗಿದ್ದ ಇವನು ಆಡಳಿತ ನಡೆಸಿದ್ದು ಇಲ್ಲಿಂದಲೇ. ಇದೇ ಬೆಟ್ಟದ ದಕ್ಷಿಣ ಬದಿಯ ಒಂದು ಭಾಗದ ಗವಿಯೇ ವಾಲಿಭಂಡಾರ. ಇಲ್ಲಿ ವಾಲಿ ತನ್ನ ಅಪಾರ ಸಂಪತ್ತನ್ನು ಹುಡುಗಿಸಿಟ್ಟಿದ್ದಾನೆ ಎಂಬ ನಂಬಿಕೆ ಇದೆ.

ಚಿತ್ರಗಳ ಸಾಕ್ಷ್ಯ
ಹಂಪಿ-ಆನೆಗೊಂದಿ ಪ್ರದೇಶವೇ ಕಿಷ್ಕಿಂಧೆ ಮತ್ತು ಅಂಜನಾದ್ರಿ ಎಂದು ಗುರುತಿಸಲು ಇಲ್ಲಿಯ ಗವಿಗಳಲ್ಲಿ ಕಂಡುಬಂದಿರುವ ಪ್ರಾಕ್ಚಾರಿತ್ರಿಕ ಕಾಲದ ಚಿತ್ರಗಳು ಅಪೂರ್ವವಾಗಿದೆ. ಮೂತಿಯು ಮುಂಚಾಚಿರುವ ಒಬ್ಬ ವೀರ ಪುರುಷನು ಬಲಗೈಯನ್ನು ಮುಂದಕ್ಕೆ ಚಾಚಿ ಏನೋ ಅದೇಶವನ್ನು ನೀಡುತ್ತಿರುವಂತ ಪ್ರಾಯಶಃ ಆಂಜನೇಯನ ಚಿತ್ರಗಳು ಆನೆಗೊಂದಿ, ರಾಂಪುರ ಮತ್ತು ಗೂಗಿಬಂಡಿಯ ಬೆಟ್ಟಗಳಲ್ಲಿವೆ. ಈ ವೀರನಿಗೆ ಬಾಲವಿಲ್ಲ, ಜೈನ ರಾಮಾಯಣದ ಪ್ರಕಾರ ಕಿಷ್ಕಿಂಧೆಯಲ್ಲಿದ್ದವರು ವಾನರರು ಅಲ್ಲ, ವಾನರ ಧ್ವಜವಿದ್ದ ವೀರರು ಎಂಬ ಉಲ್ಲೇಖ ಗಮನಾರ್ಹವಾದದ್ದು, ಈ ಹಿನ್ನೆಲೆಯಲ್ಲಿ ರಾಮಾಯಣದ ಕಥೆಯ ಐತಿಹಾಸಿಕ ವಿಷಯವು ಸುಮಾರು ಕ್ರಿ. ಪೂ. 800ರಲ್ಲಿ ನಡೆದಿರಲೇಬೇಕೆಂಬ ಅಭಿಪ್ರಾಯ ವಿದ್ದು, ಅದಕ್ಕೆ ಪೂರಕವಾಗಿ ಆನೆಗೊಂದಿ ಭಾಗದಲ್ಲಿದ್ದ ಬೃಹತ್‌ ಶಿಲಾ ಯುಗ ಕಾಲದ ಜನರೇ ವಾನರರೆಂದು ನಿರ್ಧರಿಸಬಹುದಾಗಿದೆ.

ಹಂಪಿ -ಆನೆಗೊಂದಿ ಪ್ರದೇಶವೇ ಕಿಷ್ಕಿಂಧೆ- ಅಂಜನಾದ್ರಿ ಎಂಬ ಭಾವನೆ ಮತ್ತು ನಂಬಿಕೆ ಇಂದು ನಿನ್ನೆಯದಲ್ಲ. ಅದಕ್ಕೆ ಸಾವಿರಾರು ವರ್ಷಗಳ ಹಿನ್ನೆಲೆ ಇದೆ ಎಂಬುದನ್ನು ಶಾಸನಗಳು ಉಲ್ಲೇಖೀಸುತ್ತವೆ. ಆನೆಗೊಂದಿಯಿಂದ ಹತ್ತು ಕಿ.ಮೀ. ದೂರದಲ್ಲಿ ತುಂಗಭದ್ರಾ ನದಿಯ ತೀರದಲ್ಲಿರುವ ದೇವಘಾಟ್‌ನ ಅಮೃತೇಶ್ವರ ದೇವಾಲಯದಲ್ಲಿಯ ಕ್ರಿ.ಶ. 1059ರ ಕಾಲದ ಶಿಲಾ ಶಾಸನದಲ್ಲಿ”ತುಂಗಭದ್ರಾ ತಟದ ಬಡಗ ಕಿ: ಕಿನªಮಿ ಪರ್ವನಾಮಿ ದರ ಮೃತಿಗಳೊಳ್‌’ ಎಂದು ಕಿಷ್ಕಿಂಧಾ ಪರ್ವತವನ್ನು ಉಲ್ಲೇಖೀಸುತ್ತದೆ. ಆನೆಗೊಂದಿಯಿಂದ ಪಶ್ಚಿಮಕ್ಕೆ 15 ಕಿ.ಮೀ ದೂರದಲ್ಲಿರುವ ಹುಲಗಿಯ ಕ್ರಿ.ಶ 1088ರ ಕಾಲದ ಶಿಲಾಶಾಸನದಲ್ಲಿ ಹುಲಗಿಯ ಸುತ್ತಮುತ್ತ ರಿಷ್ಯ ಮೂಕಾಚಲ, ಗಂಧಮಾದನ, ಶ್ರೀಕೂಟ, ಕಿಷ್ಕಿಂಧ ಪರ್ವತಗಳಿವೆ ಎಂದು ಉಲ್ಲೇಖೀಸುತ್ತದೆ.

ಬೆಳಗಾವಿ ಜಿಲ್ಲೆಯ ಸೌದತ್ತಿ ತಾಲೂಕಿನ ಶಿರಸಂಗಿ ಕಾಳಮ್ಮ ದೇವಾಲಯದಲ್ಲಿರುವ ಕ್ರಿ.ಶ. 1186ರ ಶಾಸನದಲ್ಲಿ ಪೂರ್ವ ಪಶ್ಚಿಮ ವಿಸ್ತಾರವಾದ ಭೂಮಿಗೆ ಹಿಮವತ್ಪರ್ವತ, ವಿಂದ್ಯ, ಕಿಷ್ಕಿಂಧ ಈ ಮೂರು ಪರ್ವತಗಳು ಉನ್ನತವಾದವು. ಇವುಗಳಲ್ಲಿ ಅತ್ಯಂತ ಶ್ರೇಷ್ಠವಾದುದು ಎಂದರೆ ಕಿಷ್ಕಿಂಧ ಗಿರಿ. ಇದು ಜನನಿಬಿಡವಾದ ಪ್ರದೇಶವಾಗಿತ್ತು. ಅದರಲ್ಲಿ ವಾಲಿ, ಮರುತ್ಸ, ಅಂಗದ, ದಿನೇಶ, ಮತಂಗ, ಹಂಸ, ಕಪಿಲ, ಶಾರ್ಗ, ಅಗಸ್ತ್ಯ, ವಿಭಾಂಡಕನ ಪುತ್ರ ಋಷ್ಯಶೃಂಗ ಮೊದಲಾದ ಋಷಿಗಳಿಗೆ ಆಶ್ರಯಸ್ಥಾನವಾಗಿತ್ತು ಎಂದು ಹೇಳಲಾಗಿದೆ.

ಅಂಜನಾದ್ರಿಯೇ ಆಂಜನೇಯ ಜನ್ಮಸ್ಥಳ
ಪಂಪಾ ಸರೋವರದಿಂದ ಅನತಿ ದೂರದಲ್ಲಿರುವ ಒಂದು ಸ್ವತಂತ್ರ ಬೆಟ್ಟವೇ ಅಂಜನಾದ್ರಿ. ಇದು ಆಂಜನೇಯನ ಜನ್ಮಸ್ಥಳ. ಬೆಟ್ಟದ ಹಿಂಭಾಗದಲ್ಲಿ ಅಂಜನಹಳ್ಳಿ ಎಂಬ ಗ್ರಾಮವಿದೆ. ಅಂಜನಾದೇವಿಯ ಮೂಲನೆಲೆ ಅದು. ಆಕೆ ಗೌತಮ ಮತ್ತು ಅಹಲ್ಯಾದೇವಿಯರ ಮಗಳು. ಅವಳ ಸಾಕು ತಂದೆ-ತಾಯಿಗಳು ಕುಂಜರ ಮತ್ತು ವಿಂದ್ಯಾವಳಿ. ಅರವತ್ತು ಸಾವಿರ ವಾನರರಿಗೆ ರಾಜನಾಗಿದ್ದ ಸುಮೇರುಗಿರಿಯ ಕೇಸರಿಯೇ ಅವಳ ಪತಿ. ಅಂಜನಾದೇವಿಗೆ ಬಹುಕಾಲ ಮಕ್ಕಳಾಗಲಿಲ್ಲ. ಆಗ ಆಕೆ ವಾಯುದೇವನ ಅಪ್ಪಣೆಯಂತೆ ಶಿವನನ್ನು ಕುರಿತು ಉಗ್ರ ತಪಸ್ಸನ್ನಾಚರಿಸಿದಳು. ತಪಸ್ಸಿಗೆ ಒಲಿದ ಶಿವನು ವಾಯುವನ್ನು ಕುರಿತು ಎಲೈ ವಾಯುವೇ, ನಿನ್ನಲ್ಲಿರುವ ಶಿವ ತೇಜಸ್ಸನ್ನು ಅಂಜನಿಗೆ ಅನುಗ್ರಹಿಸು ಎಂದು ಆಜ್ಞೆ ಮಾಡಿದನು. ಶಿವ ನ ಅಪ್ಪಣೆಯಂತೆ ವಾಯುವು ಅಂಜನಿಯ ಕರ್ಣದಲ್ಲಿ ಪ್ರವೇಶಿಸಿ ತನ್ನಲ್ಲಿದ್ದ ಶಿವ ತೇಜಸ್ಸನ್ನು ಅವಳ ಗರ್ಭದಲ್ಲಿ ಸ್ಥಾಪಿಸಿದನು. ಪರಿಣಾಮವಾಗಿ ಅಂಜನಿದೇವಿ ಗರ್ಭಿಣಿಯಾದಳು. ಆಕೆ ಒಮ್ಮೆ ಅಂಜನಾದ್ರಿ ಬೆಟ್ಟದ ಮೇಲಿದ್ದಾಗಲೇ ಪ್ರಸವ ವೇದನೆ ಕಾಣಿಸಿಕೊಂಡು ಆಂಜನೇಯನು ಜನಿಸಿದನು. ಶಿವ ತೇಜಸ್ಸುಳ್ಳ ಶಿಶು ಹನುಮನು ಹುಟ್ಟುತ್ತಲೇ ಪವಾಡ ಮಾಡಿದನು. ತಾಯಿಗೆ ಹೆರಿಗೆಯ ಅನಂತರ ಮೈತೊಳೆಯಲು ನೀರು ಇಲ್ಲದೇ ಆಕೆ ಚಿಂತಿತಳಾದಾಗ ಬಾಲ ಹನುಮಂತ ಬೆಟ್ಟದಿಂದಿಳಿದು ಹರಿಯುವ ಪಂಪಾನದಿಗೆ ಕೈ ಅಡ್ಡಮಾಡಿ ಅಂಜನಾದ್ರಿ ಬೆಟ್ಟದ ಕಡೆ ನೀರು ಹರಿದು ಹೋಗುವಂತೆ ಮಾಡಿದನು. ಅಂದಿನಿಂದ ಹಂಪಿ ಹೊಳೆ ಋಷ್ಯಮೂಕ ಪರ್ವತವನ್ನೂ ಬಳಸಿ ಎರಡು ಭಾಗಗಳಾಗಿ ಹರಿಯಲು ಆರಂಭಿಸಿತು. ನದಿ ಎರಡು ಕವಲುಗಳಾಗಿ ಹರಿಯುವ ಸ್ಥಳಕ್ಕೆ ಈಗಲೂ “ಹನುಮನ ಸೆಳವು’ ಎಂದು ಕರೆಯುತ್ತಾರೆ. ಇಲ್ಲಿಯ ಜಾನಪದ ಹಾಡುಗಳಲ್ಲೂ ಈ ವಿಷಯವಿದೆ.

ಅಡವ್ಯಾಗಂಜನಾದೇವಿ ಹನುಮನ ಹಡೆದಾಳ
ತೊಡೆಯ ತೊಳೆಯೋಕ ನೀರಿಲ್ಲ! ಹನುಮಣ್ಣ
ಸುತ್ತಲ ಹೊಳೆಯ ತಿರುವ್ಯಾನೆ!

ಒಂದು ದಿನ ಬಾಲಕ ಆಂಜನೇಯನು ಅಂಜನಾದ್ರಿಯ ಮೇಲೆ ಇದ್ದಾಗ ಉದಯಿಸುತ್ತಿದ್ದ ಸೂರ್ಯನನ್ನು ಹಣ್ಣೆಂದು ಭ್ರಮಿಸಿ ಗಗನಕ್ಕೆ ಹಾರಿ ಅವನನ್ನು ತಿನ್ನಲು, ಲೋಕವೆಲ್ಲ ಕತ್ತಲಾಯಿತು. ಆಗ ಇಂದ್ರನು ತನ್ನ ಗದೆಯಿಂದ ಆಂಜನೇಯನ ಮುಖಕ್ಕೆ ಹೊಡೆದನು. ಆಂಜನೇಯ ಮೂಛಿìತನಾಗಲು ವಾಯುವು ಆಂಜನೇಯನನ್ನು ಎತ್ತಿಕೊಂಡು ಶಿವನ ಬಳಿಗೆ ಒಯ್ದನು. ಶಿವನ ಸ್ಪರ್ಶದಿಂದ ಎಚ್ಚೆತ್ತ ಆಂಜನೇಯನು ಶಿವನಿಂದ ಚಿರಂಜೀವಿಯಾಗುವ ವರ ಪಡೆದನು. ಅನಂತರ ವಾಯುವು ಆಂಜನೇಯನನ್ನು ಪಂಪಾಕ್ಷೇತ್ರದಲ್ಲಿರುವ ಅಂಜನಾದ್ರಿಗೆ ಕರೆತಂದನು ಎಂದು ಶ್ರೀ ವೀರೇಶ ಷಡ್‌ಲೀಲಾ ದರ್ಶನ ಗ್ರಂಥದಲ್ಲಿ ವಿಕ್ತವಾಗಿದೆ. ಕ್ರಿ.ಶ.16ನೇ ಶತಮಾನದ ಹನುಮನಳ್ಳಿ ಶಿಲಾಶಾಸನದಲ್ಲಿ ಅಂಜನಾದೇವಿ ಮತ್ತು ಹನುಮಂತ ದೇವರ ಅಮೃತಪಡಿಗೆ ದಾನ ಬಿಟ್ಟ ವಿಷಯವಿದೆ.

ಚಿಂಚಲ ಕೋಟೆ
ನವವೃಂದಾವನದ ಎದುರಿಗೆ ಒಂದು ನೈಸರ್ಗಿಕ ಕಲ್ಲು ಗುಂಡುಗಳನ್ನು ಬಳಸಿ ಕಟ್ಟಿದ ಕೋಟೆ ಇದೆ. ಇದಕ್ಕೆ ಚಿಂಚಲ ಕೋಟೆ ಎಂದು ಹೆಸರು. ವಾಲಿಗೆ ಹೆದರಿದ ಸುಗ್ರೀವ ಹನುಮಂತಾದಿಗಳು ಈ ಸ್ಥಳದಲ್ಲಿ ಆತಂಕದಿಂದ ಅಡಗಿಕೊಂಡು ಕಾಲ ಕಳೆಯುತ್ತಿದ್ದರು. ಆ ಸಮಯದಲ್ಲಿಯೇ ರಾಮ ಲಕ್ಷ್ಮಣರು ಸೀತೆಯನ್ನು ಅರಸುತ್ತಾ ಬರುತ್ತಿದ್ದರು. ಇವರನ್ನು ಕಂಡ ಸುಗ್ರೀವಾದಿಗಳಿಗೆ ಇವರು ವಾಲಿಯ ಕಡೆಯವರಿರಬೇಕೆಂದು ಅನುಮಾನದಿಂದ ಮನಸ್ಸು ಚಂಚಲವಾಯಿತು. ಅದಕ್ಕೆ ಈ ಕೋಟೆಗೆ “ಚಿಂಚಲ ಕೋಟೆ’ ಎಂದು ಹೆಸರಾಯಿತು. ನೈಸರ್ಗಿಕ ಶಿಲೆಗಳಿಂದ ರಚಿಸಿರುವ ಈ ಕೋಟೆ ಹಂಪಿ-ಆನೆಗೊಂದಿ ಪ್ರದೇಶದಲ್ಲಿಯೇ ಅತ್ಯಂತ ಪ್ರಾಚೀನ ನಿರ್ಮಿತಿಯಾಗಿದೆ. ಈ ಸ್ಥಳಗಳಲ್ಲದೇ ರಾಮಾಯಣದಲ್ಲಿ ಬರುವ ತಾರಾ ಪರ್ವತ, ಅಂಜನಾದ್ರಿ, ಋಷ್ಯ ಮುಖ ಪರ್ವತಗಳು, ಹಂಪಿಯಲ್ಲಿ ಮತಂಗ ಪರ್ವತ, ಸುಗ್ರೀವ ಗುಹೆ, ಸೀತಾ ಸೆರಗು, ವಾಲಿಯನ್ನು ದಹಿಸಿದ ಸ್ಥಳ ವಾಲಿ ಕಾಷ್ಠ (ವಾಲಿದಿಬ್ಬ)ಗಳಿವೆ. ಇಂಥ ಯಾವ ಸ್ಥಳಗಳು ತಿರುಮಲ ಬೆಟ್ಟದಲ್ಲಿಲ್ಲ.

ಕಾರ್ತಿಕೇಯ ವನ
ರಾಮಲಕ್ಷ್ಮಣರು ಋಷ್ಯಮೂಕಕ್ಕೆ ಬರುವ ಮುಂಚೆ “ಕಾರ್ತಿಕೇಯವನ’ವನ್ನು ಸಂದರ್ಶಿಸಿದ್ದರೆಂಬ ಸಂಗತಿ ರಾಮಾಯಣ ಕಾವ್ಯದ “ಕಿಷ್ಕಿಂಧಾ ಕಾಂಡ’ದಲ್ಲಿ ಹೇಳಿದೆ. ಆ ವನದಲ್ಲಿ ದೇವತೆಗಳ ಮಹಾ ಸೇನಾನಿ ಕಾರ್ತಿಕೇಯ ಸ್ವಾಮಿಯನ್ನು ದರ್ಶನ ಮಾಡಿ, ಆ ಸ್ವಾಮಿಯ ಸೂಚನೆಯಂತೆ ಅಲ್ಲಿ ಶ್ರೇಷ್ಠ ದರ್ಜೆಯ ಶಸ್ತ್ರಗಳನ್ನು ಮಾಡಿಸಿಕೊಂಡರೆಂಬ ವಿಷಯವನ್ನು ರಾಮನು ಅತ್ಯಂತ ಬಲಿಷ್ಠ ವಾಲಿಯನ್ನು ನಿಗ್ರಹಿಸುವ ವಿಷಯದಲ್ಲಿ ಅವಮಾನಿಸಿದ ಸುಗ್ರೀವನಿಗೆ ತನ್ನ ಸಾಮರ್ಥ್ಯದ ಬಗ್ಗೆ ವಿಶ್ವಾಸ ಮೂಡಿಸಲು ಹೇಳಿದನೆಂದಿದೆ. ಇಲ್ಲಿಯ ಕಾರ್ತಿಕೇಯವನ ಬೇರೆಯಾವುದಲ್ಲ, ಹಂಪಿಯಿಂದ ಸುಮಾರು 4 ಕಿ.ಮೀ. ದೂರದಲ್ಲಿರುವ ಸೊಂಡೂರಿನ ಬಳಿಯ ಕಾರ್ತಿಕೇಯ ವನವೇ ಆಗಿದೆ.

ವಿಜಯನಗರ ದಾಸರ ನಂಬಿಕೆ
ವಿಜಯನಗರದ ಸಾಮ್ರಾಟರಿಗೆ ತಮ್ಮ ರಾಜಧಾನಿ, ಕಿಷ್ಕಿಂಧೆಯ ಹಿನ್ನೆಲೆ ಹೊಂದಿದೆ ಎಂಬುದರ ಅರಿವಿತ್ತು. ರಾಮ, ಹನುಮಂತರು ಓಡಾಡಿದ ಸಂಗತಿಯನ್ನು ಬಲ್ಲವರಾಗಿದ್ದರು. ಹಾಗಾಗಿ ಹಂಪಿ -ಆನೆಗೊಂದಿಯಲ್ಲಿ ಹಲವಾರು ರಾಮನ ದೇವಾಲಯಗಳನ್ನು ಆಂಜನೇಯ ದೇವಾಲಯ ಶಿಲ್ಪಗಳನ್ನು ರಾಮಾಯಣದ ದೃಶ್ಯ ಶಿಲ್ಪಗಳನ್ನು ಹಾಕಿಸಿದ್ದಾರೆ. ಹಂಪಿಯ ಹಜಾಮರಾಮ ದೇವಾಲಯ, ಕೋದಂಡ ದೇವಾಲಯ, ಪಟ್ಟಾಭಿರಾಮ ದೇವಾಲಯ, ಮೌಲ್ಯವಂತ ರಘುನಾಥ ದೇವಾಲಯ ಇದಕ್ಕೆ ಸಾಕ್ಷಿಯಾಗಿವೆ. ಇಷ್ಟೊಂದು ರಾಮನ ದೇವಾಲಯಗಳು ಪ್ರಾಯಶಃ ಇತರೆಡೆಗಳಲ್ಲಿ ಒಂದೇ ಕಡೆ ಇಲ್ಲ. ಹಜಾರರಾಮ ದೇವಾಲಯದ ಪ್ರಕಾರದ ಗೋಡೆಯ ರಾಮಾಯಣದ ದೃಶ್ಯಗಳನ್ನು ಹಾಗೂ ದೇವಾಲಯದ ಶಂಬಗಾರ ಆಂಜನೇಯನ ನೂರಾರು ಶಿಲ್ಪಗಳನ್ನು ಹಾಕಿಸಿದ್ದಾರೆ.

ಇನ್ನು ಆನೆಗೊಂದಿಯೇ ಕಿಷ್ಕಿಂಧೆ, ಅಂಜನಾದ್ರಿಯೇ ಹನು ಜನ್ಮಸ್ಥಳ ಎಂಬುದರ ಅರಿವಿದ್ದ ಅರಸರು ಅಂಜನಾದ್ರಿಯಲ್ಲಿ ಆಂಜನೇಯ ದೇವಾಲಯ ನಿರ್ಮಿಸಿದರು. ಆನೆಗೊಂದಿ ಭಾಗದಲ್ಲಿ ಹಲವಾರು ಆಂಜನೇಯ ದೇವಾಲಯ ನೂರಾರು ಶಿಲ್ಪಗಳು ನಿರ್ಮಾಣಗೊಂಡವು. ಕೃಷ್ಣದೇವರಾಯನ ಗುರು ವ್ಯಾಸರಾಯರಿಗೆ ಅಂಜನಾದ್ರಿಯೇ ಹನುಮಂತನ ಮೂಲ ಎನ್ನುವುದು ತಿಳಿದಿತ್ತು. ಆ ಹಿನ್ನೆಲೆಯಲ್ಲಿ ಸಾಮ್ರಾಜ್ಯದಾದ್ಯಂತ 734 ಆಂಜನೇಯನ ವಿಗ್ರಹಗಳನ್ನು ಸ್ಥಾಪಿಸಿದರು.

– ಡಾ| ಶರಣಬಸಪ್ಪ ಕೋಲ್ಕಾರ, ಇತಿಹಾಸ ಸಂಶೋಧಕರು, ಗಂಗಾವತಿ

ಟಾಪ್ ನ್ಯೂಸ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

5-

ಸಮುದಾಯ ಪ್ರಜ್ಞೆ ಬಿತ್ತಲು ಮನೆಯೇ ಪ್ರಶಸ್ತ

1-sadsdsa

Children ಹದಿಹರೆಯ -ತಾಯಿಯ ಕರ್ತವ್ಯ

1-sadsdsad

Emotion-language-life; ಭಾವ-ಭಾಷೆ-ಬದುಕು

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.