ಕೋವಿಡ್ ನಿರ್ವಹಣೆಗೆ ಕರಾವಳಿ ಶಾಸಕರು ಹೇಗೆ ಸಿದ್ಧರಾಗಿದ್ದಾರೆ ?

Team Udayavani, May 14, 2021, 6:40 AM IST

ಕೋವಿಡ್ ನಿರ್ವಹಣೆಗೆ ಕರಾವಳಿ ಶಾಸಕರು ಹೇಗೆ ಸಿದ್ಧರಾಗಿದ್ದಾರೆ ?

ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ವಿಷಮ ಪರಿಸ್ಥಿತಿ ಉದ್ಭವಿಸಿದರೆ ನಿಭಾಯಿಸುವುದು ಹೇಗೆಂಬ ಜನಸಾಮಾನ್ಯರ ಪ್ರಶ್ನೆ ಸಹಜವಾದದ್ದೇ. ಈ ಹಿನ್ನೆಲೆಯಲ್ಲಿ ಉಭಯ ಜಿಲ್ಲೆಗಳ ಶಾಸಕರು ತಾವು ನಡೆಸಿರುವ ಪೂರ್ವ ಸಿದ್ಧತೆಯನ್ನು ಈ ಮಾತುಕತೆಯಲ್ಲಿ ವಿವರಿಸಿದ್ದಾರೆ.

ಡಿ. ವೇದವ್ಯಾಸ್‌ ಕಾಮತ್‌, ಶಾಸಕರು, ಮಂಗಳೂರು ದಕ್ಷಿಣ ವಿ.ಸಭಾ ಕ್ಷೇತ್ರ :

1. ನಿಮ್ಮ ಕ್ಷೇತ್ರದಲ್ಲಿ ಕೋವಿಡ್‌ 19ರ ವಿಷಮ ಪರಿಸ್ಥಿತಿ ನಿಭಾವಣೆಗೆ ಪೂರ್ವಸಿದ್ಧತೆ ಹೇಗೆ ನಡೆದಿದೆ?

– ಮಂಗಳೂರು ವ್ಯಾಪ್ತಿಯಲ್ಲಿಯೇ ಹೆಚ್ಚು ಪ್ರಕರಣ ಇರುವ ಕಾರಣ ಆಸ್ಪತ್ರೆಗಳಲ್ಲಿ ಆಕ್ಸಿಜನ್‌, ವೆಂಟಿಲೇಟರ್‌ ಕೊರತೆ ಆಗದಂತೆ ಎಚ್ಚರ ವಹಿಸ ಲಾಗಿದೆ. ಪಾಲಿಕೆ ವ್ಯಾಪ್ತಿಯ 38 ವಾರ್ಡ್‌ಗಳ ವ್ಯಾಪ್ತಿಯಲ್ಲಿ ನೋಡಲ್‌ ಅಧಿಕಾರಿಗಳನ್ನು ಸೇರಿಸಿ ಟಾಸ್ಕ್ಪೋರ್ಸ್‌ ರಚಿಸಲಾಗಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಸಂಸದರ ವಾರ್‌ರೂಂ ನ ಉಸ್ತುವಾರಿ ನನಗೇ ವಹಿಸ ಲಾಗಿದೆ. ಹೀಗಾಗಿ ಪ್ರತ್ಯೇಕ ವಾರ್‌ರೂಂ ಮಾಡಿಲ್ಲ. ಆಕ್ಸಿಜನ್‌, ಬೆಡ್‌, ಆ್ಯಂಬುಲೆನ್ಸ್‌ ಎಲ್ಲವನ್ನೂ ಸಮಸ್ಯೆಯಾಗದಂತೆ ನಿಭಾಯಿಸಲಾಗುತ್ತಿದೆ.

2. ಜಿಲ್ಲಾಡಳಿತ, ತಾಲೂಕು ಆಡಳಿತ ಹೊರತು ಪಡಿಸಿ ದಂತೆ ಸ್ಥಳೀಯರನ್ನು ಒಗ್ಗೂಡಿಸಿ ಪರ್ಯಾಯ ವ್ಯವಸ್ಥೆ (ಪ್ಲ್ರಾನ್‌ ಬಿ) ರೂಪಿಸಿದ್ದೀರಾ?

ವೆನಾÉಕ್‌ ಆಸ್ಪತ್ರೆಯಲ್ಲಿ ಎಂಆರ್‌ಪಿಎಲ್‌ ವತಿಯಿಂದ ಪ್ರತೀದಿನ 7 ಸಾವಿರ ಲೀ. ಸಾಮರ್ಥಯದ (192 ಜಂಬೋ ಸಿಲಿಂಡರ್‌) ಆಕ್ಸಿಜನ್‌ ಘಟಕ ನಿರ್ಮಾಣ ಆರಂಭಿಸಲಾಗಿದೆ. ಎಂಸಿಎಫ್‌ ವತಿಯಿಂದ ತಲಾ 80 ಲೀಟರ್‌ ಸಾಮರ್ಥಯದ (ತಲಾ 17 ಜಂಬೋ ಸಿಲಿಂಡರ್‌)ಘಟಕ ಇಎಸ್‌ಐ ಆಸ್ಪತ್ರೆಯಲ್ಲಿ ಆರಂಭಿಸಲಾಗುತ್ತಿದೆ.

3. ಸೋಂಕು ಹರಡದಂತೆ ಜನರಲ್ಲಿ ಜಾಗೃತಿ ಮೂಡಿ ಸುವ ಕೆಲಸವನ್ನು ಹೇಗೆ ಮಾಡುತ್ತಿದ್ದೀರಿ? ಖುದ್ದಾಗಿ ವಿಶೇಷ ಕ್ರಮಗಳನ್ನು ಕೈಗೊಂಡಿದ್ದೀರಾ?

ಪ್ರತೀದಿನ ನಾನು ವಾರ್‌ರೂಂನಲ್ಲೇ ಇದ್ದು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದೇನೆ. ಕೊರೊನಾ ಚಿಕಿತ್ಸೆ ನೀಡುತ್ತಿರುವ ವೈದ್ಯರು, ದಾದಿಯ ರಿಗೆ ಪ್ರೇರಣಾದಾಯಕ ಕೌನ್ಸಿಲಿಂಗ್‌ ಅನ್ನು ಕಲ್ಪಿಸಲಾಗುತ್ತಿದೆ. ವಾರ್ಡ್‌ ಮಟ್ಟದ ಪಕ್ಷದ ಕಾರ್ಯಕರ್ತರ ಜತೆಗೆ ವಾರದಲ್ಲಿ ಕನಿಷ್ಠ 1 ಬಾರಿ ಚರ್ಚಿಸಿ ಜನಜಾಗೃತಿಗೆ ಪ್ರಯತ್ನಿಸಲಾಗುತ್ತಿದೆ.

4. ಪ್ರತಿ ಜಿಲ್ಲೆಯಲ್ಲೂ ಸಾಮಾನ್ಯವಾಗಿ ಕೇಳಿ ಬರು ತ್ತಿರುವ ಸಮಸ್ಯೆ ಆಕ್ಸಿಜನ್‌ ಕೊರತೆ, ಹಾಸಿಗೆಗಳ ಕೊರತೆ- ನಿಮ್ಮಲ್ಲಿ ಯಾವ ಕ್ರಮ ಕೈಗೊಂಡಿದ್ದೀರಿ?

ಕ್ಷೇತ್ರ ವ್ಯಾಪ್ತಿಯಲ್ಲಿ ಬಹುಮುಖ್ಯ ಆಸ್ಪತ್ರೆಗಳು ಇರುವ ಕಾರಣದಿಂದ ಜಿಲ್ಲೆ-ಹೊರಜಿಲ್ಲೆಯಿಂದಲೂ ಇಲ್ಲಿಗೆ ರೋಗಿಗಳು ಬರುತ್ತಾರೆ. ಆದರೆ, ಕ್ಷೇತ್ರದ ಜನರಿಗೆ ಸಮಸ್ಯೆ ಆಗದಂತೆ ವಾರ್‌ರೂಂನಲ್ಲಿ ಪ್ರತ್ಯೇಕ ತಂಡ ರಚಿಸಲಾಗಿದೆ. ಬಳ್ಳಾರಿ ಹಾಗೂ ವಿದೇಶದಿಂದ ರೆಡ್‌ಕ್ರಾಸ್‌ ಮುಖೇನ ಆಕ್ಸಿಜನ್‌ ತರಿಸಿದ್ದು, ಸದ್ಯ ಕೊರತೆ ಇಲ್ಲ. ವೆನಾÉಕ್‌ನಲ್ಲಿ 350 ಬೆಡ್‌ಗಳಿದ್ದು, 50 ಹೆಚ್ಚುವರಿ ವೆಂಟಿಲೇಟರ್‌ ಜೋಡಿಸಲಾಗುತ್ತಿದೆ. ನಗರದ 17 ಖಾಸಗಿ ಆಸ್ಪತ್ರೆಯ ಶೇ.50ರಷ್ಟು ಬೆಡ್‌ಗಳನ್ನು ಪಡೆಯಲಾಗುತ್ತಿದೆ. ಡಾ|ಎಂ.ಎನ್‌.ರಾಜೇಂದ್ರ ಕುಮಾರ್‌ ಅವರ ನೇತೃತ್ವದಲ್ಲಿ 50 ಬೆಡ್‌ಗಳ ಕೋವಿಡ್‌ ಸೆಂಟರ್‌ ಆರಂಭಿಸಲಾಗುತ್ತಿದೆ. ಇಎಸ್‌ಐ ಆಸ್ಪತ್ರೆಯಲ್ಲಿ 75 ಹಾಸಿಗೆಗಳ ಕೇರ್‌ ಸೆಂಟರ್‌ ಸಿದ್ಧಗೊಂಡಿದೆ. ಮೊರಾರ್ಜಿ ದೇಸಾಯಿ ಶಾಲೆಯನ್ನೂ ಕೇರ್‌ ಸೆಂಟರ್‌ ಆಗಿ ಬಳಸಲಾಗುತ್ತಿದೆ.

5. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ನಿಮ್ಮ ಕ್ಷೇತ್ರದಲ್ಲಿ ಸಂಕಷ್ಟಕ್ಕೀಡಾಗಿರುವ ಬಡ ಕುಟುಂಬಗಳು/ಕೂಲಿ ಕಾರ್ಮಿಕರ ನೆರವಿಗೆ ಏನು ಮಾಡುತ್ತಿದ್ದೀರಿ?

ಸೇವಾಂಜಲಿ, ಕಾಸ್‌, ವಿ ಆರ್‌ ಯುನೈಟೆಡ್‌, ಬಿರುವೆರ್‌ ಕುಡ್ಲ ಸೇರಿ ದಂತೆ ಹಲವು ಸಂಘಟನೆಯವರು ನಗರದ ನಿರ್ವಸಿತರಿಗೆ, ಬಡ ವರಿಗೆ ಆಹಾರ ನೀಡುತ್ತಿದ್ದಾರೆ. ವಿಹಿಂಪ, ಬಜರಂಗದಳದ ನೆರವೂ ಲಭ್ಯವಿದೆ.

6. ಕ್ಷೇತ್ರದ ಯುವ/ಸಮು ದಾಯ ಸಂಘಟನೆ ಗಳನ್ನು ಕಠಿನ ಪರಿಸ್ಥಿತಿಗೆ ಸಜ್ಜುಗೊಳಿಸಿದ್ದೀರಾ?

ಲಸಿಕೆ ವಿತರಣೆಯನ್ನು ಸುಸೂತ್ರವಾಗಿ ನಡೆಸಲು ನನ್ನ ಕ್ಷೇತ್ರ ವ್ಯಾಪ್ತಿಯ ವಿವಿಧ ಸಂಘ ಸಂಸ್ಥೆಯವರನ್ನು ವಿಶೇಷ ನೆಲೆಯಲ್ಲಿ ಬಳಸಿಕೊಳ್ಳಲು ಉದ್ದೇ ಶಿಸಲಾಗಿದೆ. ಹಾಗೂ ಕೊರೊನಾದಿಂದ ಮೃತಪಟ್ಟವರ ಅಂತ್ಯಸಂಸ್ಕಾರವನ್ನು ಗೌರವಯುತವಾಗಿ ನಡೆಸಲು ಯುವ ಪಡೆಯನ್ನು ಸಿದ್ಧಗೊಳಿಸಲಾಗಿದೆ.

7. ಜನರು ಕೊರೊನಾ ಸಂಕಷ್ಟ ಸಂಬಂಧ ಯಾವು ದೇ ಕ್ಷಣದಲ್ಲಿ ನಿಮ್ಮನ್ನು ಸಂಪರ್ಕಿಸ ಬಹುದೇ?

ಸಂಪರ್ಕ: 8904177609/ 9901925909
***
ಬಿ.ಎಂ. ಸುಕುಮಾರ್‌ ಶೆಟ್ಟಿ, ಬೈಂದೂರು ಶಾಸಕ :

1. ನಿಮ್ಮ ಕ್ಷೇತ್ರದಲ್ಲಿ ಕೋವಿಡ್‌ 19ರ ವಿಷಮ ಪರಿಸ್ಥಿತಿ ನಿಭಾವಣೆಗೆ ಪೂರ್ವಸಿದ್ಧತೆ ಹೇಗೆ ನಡೆದಿದೆ?

ಕ್ಷೇತ್ರ ವ್ಯಾಪ್ತಿಯಲ್ಲಿ ಎಪ್ರಿಲ್‌ನಲ್ಲೇ ಕೋವಿಡ್‌-19 ನಿಯಂತ್ರಣ ಕೇಂದ್ರ ವನ್ನು ಆರಂಭಿಸಲಾಗಿದೆ. ಎಲ್ಲ ತಂಡಗಳು ಬೆಡ್‌ ಅಗತ್ಯ ಇರುವವರಿಗೆ, ತುರ್ತು ಆಕ್ಸಿಜನ್‌ ಬೆಡ್‌ ಬೇಕಾದವರಿಗೆ ವ್ಯವಸ್ಥೆ ಕಲ್ಪಿಸುತ್ತಿವೆ. ಮುಖ್ಯವಾಗಿ ಹೋಮ್‌ ಐಸೋಲೇಷನ್‌ನಲ್ಲಿರುವವರು ಹಾಗೂ ಅವರ ಕುಟುಂಬದ ಬಗ್ಗೆ ಗಮನ ಹರಿಸಲಾಗುತ್ತಿದೆ. ಬೈಂದೂರು ಸಮುದಾಯ ಆರೋಗ್ಯ ಕೇಂದ್ರ ಹಾಗೂ 15 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ, ಅಲ್ಲಿನ ಸೌಕರ್ಯ ಹಾಗೂ ಸಿಬಂದಿ ಸಮಸ್ಯೆಯನ್ನು ಆಲಿಸಿ, ತುರ್ತು ಅಗತ್ಯಗಳನ್ನು ಈಡೇರಿಸಲು ಕ್ರಮಕೈಗೊಂಡಿರುವೆ.

2. ಜಿಲ್ಲಾಡಳಿತ, ತಾಲೂಕು ಆಡಳಿತ ಹೊರತು ಪಡಿಸಿ ದಂತೆ ಸ್ಥಳೀಯರನ್ನು ಒಗ್ಗೂಡಿಸಿ ಪರ್ಯಾಯ ವ್ಯವಸ್ಥೆ (ಪ್ಲ್ರಾನ್‌ ಬಿ) ರೂಪಿಸಿದ್ದೀರಾ?

ಈಗಾಗಲೇ ಕ್ಷೇತ್ರ¨ 41 ಗ್ರಾ.ಪಂ.ಗಳಲ್ಲೂ ಗ್ರಾಮೀಣ ಕಾರ್ಯಪಡೆ ಹಾಗೂ ವಾರ್ಡ್‌ವಾರು ಸಮಿತಿಯನ್ನು ರಚಿಸಲಾಗಿದೆ. ಎಲ್ಲ 41 ಗ್ರಾ.ಪಂ. ಅಧ್ಯಕ್ಷರು ಹಾಗೂ ಪಿಡಿಒಗಳೊಂದಿಗೆ ಸಭೆ ನಡೆಸಿದ್ದೇನೆ. ಈವರೆಗೆ ಸಂಸದರ ನೇತೃತ್ವದಲ್ಲಿ ಒಂದು ಸಭೆ ಹಾಗೂ ನಾನು 3 ಸಭೆಯನ್ನು ಮಾಡಿ ಸೋಂಕು ನಿಯಂತ್ರಣಕ್ಕೆ ಕ್ರಮಗಳನ್ನು ವಿವರಿಸಿದ್ದೇನೆ. ಸಂಘಟನೆಗಳ, ಪಕ್ಷದ ಕಾರ್ಯಕರ್ತರ‌ ಕೆಲ ತಂಡಗಳು ಜನರ ಸಮಸ್ಯೆಗೆ ಸ್ಪಂದಿಸುತ್ತಿವೆ.

3. ಸೋಂಕು ಹರಡದಂತೆ ಜನರಲ್ಲಿ ಜಾಗೃತಿ ಮೂಡಿ ಸುವ ಕೆಲಸವನ್ನು ಹೇಗೆ ಮಾಡುತ್ತಿದ್ದೀರಿ? ಖುದ್ದಾಗಿ ವಿಶೇಷ ಕ್ರಮಗಳನ್ನು ಕೈಗೊಂಡಿದ್ದೀರಾ?

ಮಾಸ್ಕ್ ಧರಿಸುವ ಕುರಿತಂತೆ, ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡುವಂತೆ ಜನತೆಗೆ ಅರಿವು ಮೂಡಿಸಲಾಗಿದೆ. ಸಾಮಾಜಿಕ ಜಾಲತಾಣಗಳ ಮೂಲಕವೂ ಸಂದೇಶಗಳನ್ನು ಬಿತ್ತರಿಸಲಾಗಿದೆ. ಮದುವೆ, ಮತ್ತಿತರ ಕಾರ್ಯಕ್ರಮಗಳನ್ನು ಮುಂದೂಡಲು ಜನರನ್ನು ಕೋರಿರುವೆ. ಹೆಚ್ಚು ಸೋಂಕು ಇರುವೆಡೆ ಹೆಚ್ಚು ನಿಗಾ ವಹಿಸಲಾಗಿದೆ.

4. ಪ್ರತಿ ಜಿಲ್ಲೆಯಲ್ಲೂ ಸಾಮಾನ್ಯವಾಗಿ ಕೇಳಿ ಬರು ತ್ತಿರುವ ಸಮಸ್ಯೆ ಆಕ್ಸಿಜನ್‌ ಕೊರತೆ, ಹಾಸಿಗೆಗಳ ಕೊರತೆ- ನಿಮ್ಮಲ್ಲಿ ಯಾವ ಕ್ರಮ ಕೈಗೊಂಡಿದ್ದೀರಿ?

ಜಿಲ್ಲೆಯಲ್ಲಿ ಅಗತ್ಯವಿರುವಷ್ಟು ಆಕ್ಸಿಜನ್‌ ಲಭ್ಯವಿದೆ. ಸಂಸದ ಬಿ.ವೈ. ರಾಘವೇಂದ್ರ ಅವರ ಸಹಕಾರದಿಂದ ಬೈಂದೂರಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ 390 ಎಲ್‌ಪಿಎಂ ಸಾಮರ್ಥ್ಯದ ಆನ್‌ಸೈಟ್‌ ಆಕ್ಸಿಜನ್‌ ಪ್ಲಾÂಂಟ್‌ ಮಂಜೂರಾಗಿದ್ದು, ತಿಂಗಳೊಳಗೆ ಕಾರ್ಯಾರಂಭ ಮಾಡಲಿದೆ. ಪ್ರತಿ ನಿತ್ಯ 80 ಸಿಲಿಂಡರ್‌ ಮೆಡಿಕಲ್‌ ಆಕ್ಸಿಜನ್‌ ಉತ್ಪಾದನೆಯಾಗಲಿದೆ. ಸಮುದಾಯ ಆರೋಗ್ಯ ಕೇಂದ್ರದಲ್ಲಿ 30 ಬೆಡ್‌ಗಳಿದ್ದು, ಇದರಲ್ಲಿ 15 ಬೆಡ್‌ ಮೀಸಲಿರಿಸಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ತಲಾ 6 ಬೆಡ್‌ಗಳಿವೆ. ಯಾರೂ ಸಹ ಆತಂಕ ಪಟ್ಟುಕೊಳ್ಳುವ ಅಗತ್ಯವಿಲ್ಲ.

5. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ನಿಮ್ಮ ಕ್ಷೇತ್ರದಲ್ಲಿ ಸಂಕಷ್ಟಕ್ಕೀಡಾಗಿರುವ ಬಡ ಕುಟುಂಬಗಳು/ಕೂಲಿ ಕಾರ್ಮಿಕರ ನೆರವಿಗೆ ಏನು ಮಾಡುತ್ತಿದ್ದೀರಿ?

ನಮ್ಮ ಕ್ಷೇತ್ರದ ಬಹುತೇಕ ಜನ ಕೃಷಿಕರಾಗಿದ್ದು, ಹಾಗಾಗಿ ಯಾರಿಗೂ ಈ ಬಾರಿ ಕಿಟ್‌ ವಿತರಿಸುತ್ತಿಲ್ಲ. ಆದರೆ ಪಡಿತರವನ್ನು ತ್ವರಿತಗತಿಯಲ್ಲಿ ವಿತರಿಸಲು ಸಂಬಂಧಪಟ್ಟ ಎಲ್ಲ ಅಧಿಕಾರಿಗಳಿಗೂ ಸೂಚಿಸಲಾಗಿದೆ.

6. ಕ್ಷೇತ್ರದ ಯುವ/ಸಮು ದಾಯ ಸಂಘಟನೆ ಗಳನ್ನು ಕಠಿನ ಪರಿಸ್ಥಿತಿಗೆ ಸಜ್ಜುಗೊಳಿಸಿದ್ದೀರಾ?

ಈಗಾಗಲೇ ಸಾಕಷ್ಟು ಯುವ ಸಂಘಟನೆಗಳು ಹಾಗೂ ನಮ್ಮ ಪಕ್ಷದ ವಿವಿಧ ಮೋರ್ಚಾಗಳ ವತಿಯಿಂದ ರಕ್ತದಾನ ಶಿಬಿರಗಳೂ ನಡೆದಿವೆ. ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರವನ್ನೂ ಹಲವು ಸಂಘಟ ನೆಗಳು ಮಾಡುತ್ತಿದ್ದು,ಉಚಿತವಾಗಿ ಆಂಬುಲೆನ್ಸ್‌ಗಳು ಲಭ್ಯವಾಗಿವೆ.\

7. ಜನರು ಕೊರೊನಾ ಸಂಕಷ್ಟ ಸಂಬಂಧ ಯಾವುದೇ ಕ್ಷಣದಲ್ಲಿ ನಿಮ್ಮನ್ನು ಸಂಪರ್ಕಿಸ ಬಹುದೇ?

ಸಹಾಯವಾಣಿ – 9448824119 ಆಸ್ಪತ್ರೆ ಮತ್ತು ಆಂಬುಲೆನ್ಸ್‌- 9445816707, ವೆಂಟಿಲೇಟರ್‌,ರೆಮಿxಸಿವರ್‌ – 998609987
ಆಯುಷ್ಮಾನ್‌ ಭಾರತ್‌ (ಕಾರ್ಡ್‌) – 7975887506
ಅಂತ್ಯ ಸಂಸ್ಕಾರ- 8296029677

ಟಾಪ್ ನ್ಯೂಸ್

Delhi police Station: ಪೊಲೀಸ್‌ ಠಾಣೆ ಬಾತ್‌ ರೂಂ ಕಿಟಕಿ ಹಾರಿ ಕೊಲೆ ಆರೋಪಿ ಪರಾರಿ!

Delhi police Station: ಪೊಲೀಸ್‌ ಠಾಣೆ ಬಾತ್‌ ರೂಂ ಕಿಟಕಿ ಹಾರಿ ಕೊಲೆ ಆರೋಪಿ ಪರಾರಿ!

1-qweqwqwe

Kerala ಕರಾವಳಿಯಲ್ಲಿ 6 ಮೀನುಗಾರರ ಸಹಿತ ಇರಾನ್ ಹಡಗು ಕೋಸ್ಟ್ ಗಾರ್ಡ್ ವಶಕ್ಕೆ

Bantwala; ಬಾವಿಗೆ ಬಿದ್ದ ನಾಯಿಯನ್ನು ರಕ್ಷಿಸಿದ ಅಗ್ನಿಶಾಮಕ ತಂಡ

Bantwala; ಬಾವಿಗೆ ಬಿದ್ದ ನಾಯಿಯನ್ನು ರಕ್ಷಿಸಿದ ಅಗ್ನಿಶಾಮಕ ತಂಡ

foeticide

Mandya: ಮತ್ತೆ ಹೆಣ್ಣುಭ್ರೂಣ ಹತ್ಯೆ ಜಾಲ ಪತ್ತೆ; ನಾಲ್ವರ ಬಂಧನ

Kanniyakumari: ಮದುವೆಗೆಂದು ಆಗಮಿಸಿ ಸಮುದ್ರ ಪಾಲಾದ ಐವರು ವೈದ್ಯಕೀಯ ವಿದ್ಯಾರ್ಥಿಗಳು

Kanniyakumari: ಮದುವೆಗೆಂದು ಆಗಮಿಸಿ ಸಮುದ್ರ ಪಾಲಾದ ಐವರು ವೈದ್ಯಕೀಯ ವಿದ್ಯಾರ್ಥಿಗಳು

1-qweewqe

Prajwal Case; ತಮ್ಮ ಹೆಸರು ಬಳಸದಂತೆ ಕೋರ್ಟ್ ತಡೆ ತಂದ ಎಚ್ ಡಿಡಿ, ಎಚ್ ಡಿಕೆ

ಕೊರಗಜ್ಜ, ಕಲ್ಲುರ್ಟಿ ದೈವಗಳಿಗೆ ‘ಫಸ್ಟ್ ಲುಕ್’ ತೋರಿಸಿ ಅನುಮತಿ ಪಡೆದ ‘ಕೊರಗಜ್ಜ’ ಚಿತ್ರತಂಡ

ಕೊರಗಜ್ಜ, ಕಲ್ಲುರ್ಟಿ ದೈವಗಳಿಗೆ ‘ಫಸ್ಟ್ ಲುಕ್’ ತೋರಿಸಿ ಅನುಮತಿ ಪಡೆದ ‘ಕೊರಗಜ್ಜ’ ಚಿತ್ರತಂಡ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Agumbe ಘಾಟಿಯಲ್ಲಿ ಸುರಂಗ ಮಾರ್ಗ ಯೋಜನೆ ಮುನ್ನೆಲೆಗೆ; ಕರಾವಳಿ-ಮಲೆನಾಡು ಬೆಸೆಯಲು ಸುರಂಗ

Agumbe ಘಾಟಿಯಲ್ಲಿ ಸುರಂಗ ಮಾರ್ಗ ಯೋಜನೆ ಮುನ್ನೆಲೆಗೆ; ಕರಾವಳಿ-ಮಲೆನಾಡು ಬೆಸೆಯಲು ಸುರಂಗ

Bailur ಉಮಿಕ್ಕಳ ಬೆಟ್ಟದಲ್ಲಿ ಬೆಂಕಿ ಅವಘಡ; ಪರಶುರಾಮ ಥೀಮ್‌ಪಾರ್ಕ್‌ ಸುರಕ್ಷಿತ

Bailur ಉಮಿಕ್ಕಳ ಬೆಟ್ಟದಲ್ಲಿ ಬೆಂಕಿ ಅವಘಡ; ಪರಶುರಾಮ ಥೀಮ್‌ಪಾರ್ಕ್‌ ಸುರಕ್ಷಿತ

Fraud Case ಷೇರು ಮಾರುಕಟ್ಟೆ ಹೆಸರಿನಲ್ಲಿ ಮಹಿಳೆಗೆ ವಂಚನೆ

Fraud Case ಷೇರು ಮಾರುಕಟ್ಟೆ ಹೆಸರಿನಲ್ಲಿ ಮಹಿಳೆಗೆ ವಂಚನೆ

Udupi; ಬ್ಯಾಂಕ್‌ ಅಧಿಕಾರಿ ಖಾತೆಯಿಂದ ಲಕ್ಷಾಂತರ ರೂ.ವರ್ಗಾವಣೆ

Udupi; ಬ್ಯಾಂಕ್‌ ಅಧಿಕಾರಿ ಖಾತೆಯಿಂದ ಲಕ್ಷಾಂತರ ರೂ.ವರ್ಗಾವಣೆ

Agumbe Ghat; ಘನವಾಹನಗಳ ಸಂಚಾರದಿಂದ ಘಾಟಿ ಬಂದ್‌ ಆಗುವ ಭೀತಿ

Agumbe Ghat; ಘನವಾಹನಗಳ ಸಂಚಾರದಿಂದ ಘಾಟಿ ಬಂದ್‌ ಆಗುವ ಭೀತಿ

MUST WATCH

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

ಹೊಸ ಸೇರ್ಪಡೆ

65 ವರ್ಷದಿಂದ ದೇಶಕ್ಕೆ ಚೊಂಬು ಹಿಡಿಸಿದ್ದೆ ಕಾಂಗ್ರೆಸ್‌ ಸಾಧನೆ: ಹರಿಪ್ರಕಾಶ ಕೋಣೆಮನೆ

65 ವರ್ಷದಿಂದ ದೇಶಕ್ಕೆ ಚೊಂಬು ಹಿಡಿಸಿದ್ದೆ ಕಾಂಗ್ರೆಸ್‌ ಸಾಧನೆ: ಹರಿಪ್ರಕಾಶ ಕೋಣೆಮನೆ

Delhi police Station: ಪೊಲೀಸ್‌ ಠಾಣೆ ಬಾತ್‌ ರೂಂ ಕಿಟಕಿ ಹಾರಿ ಕೊಲೆ ಆರೋಪಿ ಪರಾರಿ!

Delhi police Station: ಪೊಲೀಸ್‌ ಠಾಣೆ ಬಾತ್‌ ರೂಂ ಕಿಟಕಿ ಹಾರಿ ಕೊಲೆ ಆರೋಪಿ ಪರಾರಿ!

1-qweqwqwe

Kerala ಕರಾವಳಿಯಲ್ಲಿ 6 ಮೀನುಗಾರರ ಸಹಿತ ಇರಾನ್ ಹಡಗು ಕೋಸ್ಟ್ ಗಾರ್ಡ್ ವಶಕ್ಕೆ

Bantwala; ಬಾವಿಗೆ ಬಿದ್ದ ನಾಯಿಯನ್ನು ರಕ್ಷಿಸಿದ ಅಗ್ನಿಶಾಮಕ ತಂಡ

Bantwala; ಬಾವಿಗೆ ಬಿದ್ದ ನಾಯಿಯನ್ನು ರಕ್ಷಿಸಿದ ಅಗ್ನಿಶಾಮಕ ತಂಡ

ಬಿಜೆಪಿ ಸೇರಿದಾಕ್ಷಣ ಶುದ್ಧರಾಗಲು ಆ ಪಕ್ಷ ವಾಷಿಂಗ್‌ ಮಶೀನಾ: ರಮಾನಾಥ ರೈ

ಬಿಜೆಪಿ ಸೇರಿದಾಕ್ಷಣ ಶುದ್ಧರಾಗಲು ಆ ಪಕ್ಷ ವಾಷಿಂಗ್‌ ಮಶೀನಾ: ರಮಾನಾಥ ರೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.