1251 ಮಂದಿಗೆ ಸೋಂಕು ದೃಢ
Team Udayavani, Jun 14, 2021, 8:20 PM IST
ಮೈಸೂರು: ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ಭಾನುವಾರಮತ್ತೆ ಏರಿಕೆಯಾಗಿದ್ದು, 1251 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.
ಜತೆಗೆ 25 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.ಹೊಸ 1251 ಪ್ರಕರಣಗಳಿಂದ ಜಿಲ್ಲೆಯಲ್ಲಿ ಒಟ್ಟು ಸೋಂಕಿತರಸಂಖ್ಯೆ 157796ಕ್ಕೆಏರಿಕೆಯಾಗಿದ್ದು, ಸದ್ಯಕ್ಕೆ12519 ಮಂದಿ ಸಕ್ರಿಯಸೋಂಕಿತರು ಆಸ್ಪತ್ರೆಹಾಗೂ ಮನೆಗಳಲ್ಲಿ ಚಿಕಿತ್ಸೆಪಡುತ್ತಿದ್ದಾರೆ .
ಜಿಲ್ಲೆಯಲ್ಲಿ ಭಾನುವಾರ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ ಏರಿಕೆಯಾಗಿದ್ದು, ವಿವಿಧ ಆಸ್ಪತ್ರೆ ಹಾಗೂ ಹೋಂ ಐಸೋಲೇಷನ್ನಲ್ಲಿದ್ದ 2118 ಮಂದಿ ಗುಣಮುಖರಾಗಿದ್ದಾರೆ.ಈ ಮೂಲಕ ಒಟ್ಟು ಕೊರೊನಾ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 143418ಕ್ಕೆ ಏರಿಕೆಯಾಗಿದೆ.
ಹಾಗೆಯೇಕೋವಿಡ್ ಮರಣ ಪ್ರಮಾಣ ಮತ್ತೆ ಏರಿಕೆಯಾಗಿದೆ. ಸೋಂಕಿಗೆ ಭಾನುವಾರ 25 ಮಂದಿ ಮೃತಪಟ್ಟಿದ್ದು, ಈಮೂಲಕ ಸಾವಿನ ಸಂಖ್ಯೆ 1859ಕ್ಕೆ ಏರಿಕೆಯಾಗಿದೆ