ಸಂಸ್ಕೃತ ಭಾಷಾಭಿಮಾನ ಬೆಳೆಸಿದ  ಮೈಸೂರಿನ ರಾಮಚಂದ್ರ ಅಗ್ರಹಾರ


Team Udayavani, Jul 17, 2021, 7:49 PM IST

desiswara

 ಮೈಸೂರು ಅಂದರೆ ಒಂದು ರೋಮಾಂಚನ ಅದರಲ್ಲೂ ಅಗ್ರಹಾರ ಅಂದ್ರೆ ಪಂಚಪ್ರಾಣ. ನನ್ನ ಬಾಲ್ಯವೆಲ್ಲ ಮೈಸೂರಿನ ರಾಮಚಂದ್ರ ಅಗ್ರಹಾರದಲ್ಲಿ ಕಳೆದಿದ್ದೇನೆ. 80- 90ರ  ದಶಕಗಳು ನನ್ನ ಜೀವನದ ಅತ್ಯುತ್ತಮ ಕ್ಷಣಗಳು.

ರಾಮಚಂದ್ರ ಅಗ್ರಹಾರ ಅಂದರೆ ಸಾಮಾನ್ಯವೆಂದು ಅನ್ಕೋಬೇಡಿ. ಬಹುಶಃ  ಪ್ರಪಂಚದÇÉೇ ಈ 2ನೇ ಕ್ರಾಸ್‌ ಬೀದಿಯಲ್ಲಿ ಒಂದಲ್ಲ ಎರಡಲ್ಲ 3 ಮುದ್ರಣಾಲಯಗಳು ಇದ್ದವು. ಇದು ಬಹಳ ಅಪರೂಪವೇ ಸರಿ. ಅದರಲ್ಲೂ ಪ್ರಪಂಚದ  ಏಕಮಾತ್ರ ಸಂಸ್ಕೃತ ದಿನ ಪತ್ರಿಕೆ “ಸುಧರ್ಮ’ ಇದ್ದ ಬೀದಿ. ಸುಧರ್ಮ ಪತ್ರಿಕೆಯ ಸಂಪಾದಕ  ಪದ್ಮಶ್ರೀ ಕೆ.ವಿ. ಸಂಪತ್‌ ಕುಮಾರ್‌ ಅವರ ನಿಧನದ ಸುದ್ದಿ ಕೇಳಿ ಬಹಳಷ್ಟು ಬಾಲ್ಯದ ನೆನಪುಗಳ ಮಹಾಪೂರವೇ ಹರಿದು ಬಂದಿದೆ.

ಅವರು ತಮ್ಮ ತಂದೆ ಆದ್ಯ ಪ್ರವರ್ತಕರಾದ ಗಿರ್ವಾನ ವಾನಿ ಭೂಷನಂ, ವಿದ್ಯಾನಿಧಿಪಂಡಿತ್‌ ವಿದ್ವಾನ್‌ ವಾದಿರಾಜ್‌ ಐಯ್ಯಂಗಾರ್‌ ಅವರ ಕನಸಿನ ಕನ್ನಡಿಯ ಪ್ರತಿಬಿಂಬವೇ ಈ “ಸುಧರ್ಮ’ ಪತ್ರಿಕೆ. “ಸುಧರ್ಮ’  1970ರ ದಶಕದ ಅಂತ್ಯದಲ್ಲಿ ಅಕ್ಷರ ಮುದ್ರಣದೊಂದಿಗೆ ಪ್ರಾರಂಭವಾಯಿತು. ಮುದ್ರಣ ತಂತ್ರಜ್ಞಾನ ಆಧುನೀಕರಣಗೊಂಡಂತೆ ಪ್ರಸ್ತುತ ಸುಧರ್ಮವನ್ನು ಗಣಕೀಕೃತ ಆಫ್ಸೆಟ್‌ ಮುದ್ರಣದಿಂದ ಮುದ್ರಿಸಲಾಗುತ್ತಿದೆ. ಅವರ ವಿದ್ವತ್ತು ಪಾಂಡಿತ್ಯ ಕೇವಲ ಸಂಸ್ಕೃತ ಭಾಷಾ ಉಳಿಯುವಿಕೆಗಲ್ಲದೆ ಹೆಣ್ಣು ಮಕ್ಕಳ ಶಿಕ್ಷಣ ಕೊರತೆ ಎದ್ದು ತೋರುತ್ತಿದ ದಿನಗಳಲ್ಲಿ  ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಮಾತ್ರ ಮೀಸಲಾಗಿರುವ ಶ್ರೀಕಾಂತ ಶಿಕ್ಷಣ ಸಮಾಜವನ್ನು ಸ್ಥಾಪಿಸಿದರು. ಅದೇ ಶ್ರೀಕಾಂತ ಶಾಲೆಯಲ್ಲಿ ನಾನು ಕೂಡ ಅಂಗನವಾಡಿ ವಿದ್ಯಾಭ್ಯಾಸ ಮಾಡಿದ್ದಲ್ಲದೆ, ಅವರ ಮುದ್ರಣಾಲಯಕ್ಕೆ  ಆಡುವ ನೆಪದಲ್ಲಿ ಪದೇ ಪದೇ ಭೇಟಿ ಕೊಟ್ಟಿದ್ದೇನೆ.

ಎಷ್ಟು ನಮ್ರ ಸ್ವಭಾವ, ಎಷ್ಟು ಉತ್ಸುಕತೆಯಿಂದ ನಾವು ಕೇಳಿದಕ್ಕೆಲ್ಲ ಉತ್ತರ ನೀಡುವ ಪರಿ ಇನ್ನು ನನ್ನ ಮನಸಿನಲ್ಲಿ ಹಸುರಾಗಿದೆ. ಸಂಸ್ಕೃತ ಪಠ್ಯ ಮಾಡಿದ್ದೇನೆ, ಸುಧರ್ಮ ಪ್ರಸ್‌ನ ಮಗ್ಗುಲÇÉೇ ಬೆಳೆದಿದ್ದೇನೆ ಅಂತ ಜಂಬ ಕೊಚ್ಚಿಕೊಳ್ಳೋದು ಬಿಟ್ರೆ ನನ್ನಲ್ಲಿ ಸಂಸ್ಕೃತದ ಜ್ಞಾನ ಶಾಲೆಗಷ್ಟೇ ಸೀಮಿತವಿತ್ತು ಎನ್ನುವ ಅಳುಕು ಈಗಲೂ ಇದೆ.

ಕಾಲೇಜಿನ ದಿನಗಳು… ಕಾಳಿದಾಸ, ಬಾಣ, ಭಾಸ ಹಾಗೂ ಮತ್ತಿತರರು ಮಹಾಕವಿಗಳೆಲ್ಲರ ಒಂದು ತುಣುಕು ನಮ್ಮ ಪಠ್ಯದಲ್ಲಿ. ಎಷ್ಟು ವೈಭವಯುತ ಭಾಷೆ, ಅಷ್ಟೇ ಸೊಗಸಾದ ಬರಹಗಳು.  ಸಂಸ್ಕೃತದಲ್ಲಿರುವ ಎಲ್ಲ ಸಾಹಿತ್ಯ ದಾಖಲೆಗಳನ್ನು ಹಾಗೂ  ಮಹಾ ಗ್ರಂಥಗಳನ್ನು  ಓದಿ ಅರಿತುಕೊಳ್ಳಲು ಒಂದು ಜನುಮದಲ್ಲಿ ಬಹುಶಃ  ಸಾಧ್ಯವಾಗುವುದಿಲ್ಲ. ಹಿಂದೂ ಧರ್ಮದ ತಣ್ತೀಜ್ಞಾನ, ಶಾಸ್ತ್ರಗಳು, ಕಲೆಗಳು, ವಿದ್ಯೆ, ಅರ್ಥಶಾಸ್ತ್ರ  ಹೀಗೆ 13ನೇ ಶತಕದ ತನಕ ಎಲ್ಲ ವಿಷಯಗಳ ಬಗ್ಗೆ ದೀರ್ಘ‌ವಾದ ಉಲ್ಲೇಖವಿರುವ  ಸಾಹಿತ್ಯ ಸಂಸ್ಕೃತ ಭಾಷೆಯಲ್ಲಿದೆ.

ನಮ್ಮ ಪಠ್ಯಕ್ರಮದಲ್ಲಿ ಭಾಷೆಯನ್ನು ಒಂದು ವಿಷಯವನ್ನಾಗಿ ಕಲಿಸುತ್ತಾರೆ. ಹೀಗಾಗಿ ನಮಗೆ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳು ಬರುವುದರ ಬಗ್ಗೆ ಗಮನವಿರುತ್ತದೆ ಹೊರತು ಭಾಷೆಯನ್ನು ಕಲಿಯುವುದರಲ್ಲಿ ಅಲ್ಲ. ನಮ್ಮ ಕಲಿಕೆ ಕೇವಲ ಬರವಣಿಗೆಗೆ ಸೀಮಿತವಾಗಿ ಸಂಭಾಷಣೆಯ ಸ್ವರೂಪಕ್ಕೆ ಬರುವುದೇ ಇಲ್ಲ. ನಮ್ಮ ಪಠ್ಯಕ್ರಮದಲ್ಲಿ ಕೆಲವು ಬದಲಾವಣೆಗಳು ಆದರೆ 7- 8 ವರ್ಷಗಳ ಕಾಲ ನಿರಂತರವಾಗಿ ಸಂಸ್ಕೃತ ಕಲಿತು ನಾನು ಸ್ವಲ್ಪ ಮಟ್ಟಿಗೆ ಮಾತಾಡಬಹುದಿತ್ತೇನೋ  ಅನ್ನಿಸುತ್ತದೆ.

ಭಾರತೀಯಳಾದ ನನಗೆ ಸಂಸ್ಕೃತ ಭಾಷೆಯ  ಮೇಲೆ ಹೆಚ್ಚು ಗೌರವ  ಹಾಗೂ ಅಭಿಮಾನ. ಶಾಲೆಯಲ್ಲಿ ಸಂಸ್ಕೃತ ಭಾಷೆಯನ್ನು ಸುಮಾರು 5 ವರ್ಷಗಳ ಕಾಲ ಕಲಿತು, ಅನಂತರ ಕಾಲೇಜಿನಲ್ಲೂ 3 ವರ್ಷಗಳು  ಸಂಸ್ಕೃತ ವಿದ್ಯಾಭ್ಯಾಸವನ್ನು ಮುಂದುವರಿಸಿದೆ. ಅಂದು ವಿಶ್ವ ಸಂಸ್ಕೃತ ದಿನ. ನಮ್ಮ ಅಧ್ಯಾಪಕರು ನನ್ನ ಆಸಕ್ತಿಯನ್ನು ಮೆಚ್ಚಿ ನನಗೆ ಸಂಸ್ಕೃತ ಭಾಷೆಯಲ್ಲಿ ಸ್ವಾಗತ  ಭಾಷಣವನ್ನು ಮಾಡುವಂತೆ ಹೇಳಿದ್ದೇ ತಡ, ನಾನು ಎಲ್ಲಿಲ್ಲದ ಉತ್ಸಾಹದಿಂದ ತಯಾರಿ ಮಾಡಿ ಅತಿಥಿಗಳ ಮುಂದೆ ಭಾಷಣ ಮಾಡಿದೆ. ಆಗ ನಮ್ಮಲ್ಲಿ ಮೊಬೈಲ್‌ ಫೋನ್‌ ಇರಲಿಲ್ಲ. ಹೀಗಾಗಿ ನನ್ನ ಮನಸಿನಲ್ಲಿ ಮಾತ್ರ ಒಂದು ಸ್ಪಷ್ಟ ಹಾಗೂ ಬಲವಾದ ಚಿತ್ರ ಉಳಿದಿದೆ. ಉನ್ನತ ವಿದ್ಯಾಭ್ಯಾಸದಲ್ಲಿ ತೊಡಗಿ ಸಂಸ್ಕೃತದ  ಮೇಲೆ ಗಮನ ಕಡಿಮೆಯಾಗಿದ್ದೇನೋ ನಿಜ, ಆದರೆ ಅಭಿಮಾನ ಮಾತ್ರ ಸದಾ ಕಾಲ ಉನ್ನತ ಮಟ್ಟದÇÉೇ ಇದೆ.

ಶಾಲೆಯಲ್ಲಿ ನಿಷ್ಠೆಯಿಂದ ಕಲಿತ ಒಂದು ಸುಂದರ ಹಾಗೂ ಶ್ರೇಷ್ಠ ಭಾಷೆಯನ್ನು ಮುಂದುವರಿಸದಿರುವ ಬಗ್ಗೆ ನನಗೆ ಬಹಳ ಬೇಸರ ಮಾಡಿದೆ. ಈಜು, ಸೈಕಲ್‌ ಹೇಗೆ ಒಮ್ಮೆ ಕಲಿತರೆ ಜೀವನ ಪರ್ಯಂತ ಮರೆಯಲು ಸಾಧ್ಯವಿಲ್ಲವೋ ಸಂಸ್ಕೃತವು ಹಾಗೆ ಇದ್ದಿದರೆ ಎಷ್ಟು ಚಂದ.. ಈಗ ಎಲ್ಲ ಮರೆತಂತಾಗಿದೆ. ಸಂಸ್ಕೃತ ಎಂದೊಡನೆ ನಮ್ಮ ಸ್ವತ್ತು ಎನ್ನುವ ಭಾವ. ಆದರೆ ಕಲಿಕೆ ಬಂದಾಗ ಭೀತಿ. ಶಾಸ್ತ್ರ, ಪುರಾಣಗಳ ಪ್ರಸ್ತಾವವಾದರೆ ನಾವು ಸಂಸ್ಕೃತ ಭಾಷೆಯಲ್ಲಿರುವ ಗ್ರಂಥಗಳನ್ನು ನಮ್ಮ ಸ್ಥಳೀಯ ಭಾಷೆಗೆ ಅನುವಾದಿಸಿದ ಗ್ರಂಥದ ಕೆಲವೇ ಪಂಕ್ತಿಯನ್ನು ತ್ವರಿತ ಪರಿಹಾರಕ್ಕಾಗಿ   ಓದಿ ತಿಳಿದುಕೊಳ್ಳಲು ಪ್ರಯತ್ನಿಸುತ್ತೇವೆ. ಇಲ್ಲವೇ ಪಂಡಿತರ ಮೊರೆ ಹೋಗುತ್ತೇವೆ. ಸಂಸ್ಕೃತ ಅಧ್ಯಯನ ಮಾಡುವುದು ಸುಲಭವಲ್ಲ. ಆದರೆ ಆಸಕ್ತಿಯಿದ್ದರೆ ಅಸಾಧ್ಯವೇನಲ್ಲ.

ಸಂಸ್ಕೃತದಲ್ಲಿ ವ್ಯವಹರಿಸುವುದು ಕಷ್ಟ ಸಾಧ್ಯವಾದ ಈಗಿನ ಸಮಾಜದಲ್ಲಿ ಒಂದು ದೈನಿಕ ವಾರ್ತಾ ಪತ್ರಿಕೆ ಶುರುಮಾಡಿ ಅದನ್ನು ಇಲ್ಲಿಯ ವರೆಗೆ ಇಷ್ಟರ ಮಟ್ಟಿಗೆ ಬೆಳಸಿ ಉಳಿಸಿದ್ದೇ ಸಂಪತ್‌ ಕುಮಾರ್‌ ಅವರ ಬಹುದೊಡ್ಡ ಸಾಧನೆ. ಮೂಲತಃ ಸಂಸ್ಕೃತ ಪದವಾದ ಸನಾತನ ಎಂದರೆ ಆದಿ ಮತ್ತು ಅಂತ್ಯವಿಲ್ಲದ, ನಿರಂತರ ನಡೆಯುತ್ತಿರುವ ಎಂಬ ಅರ್ಥ. ಸುಧರ್ಮ ಒಂದು ಪ್ರತಿಷ್ಠಾನ. ಇದು ಬರುವ ಶತ ಶತಮಾನಗಳ ಕಾಲ ಉಳಿಯಲಿ, ಬೆಳೆಯಲಿ.

ರಾಧಿಕಾ ಜೋಶಿ,   ಲಂಡನ್‌

ಟಾಪ್ ನ್ಯೂಸ್

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

1-24-sunday

Daily Horoscope: ವಸ್ತ್ರಾಭರಣ ಖರೀದಿಗೆ ಧನವ್ಯಯ, ಅವಿವಾಹಿತರಿಗೆ ಶೀಘ್ರ ವಿವಾಹ ಯೋಗ

Madhavi Latha

BJP ‘ನಾನು ಮಹಿಳೆಯಲ್ಲ’ ಎಂಬ ಮಾಧವಿ ವೈರಲ್‌ ವೀಡಿಯೋ ತಿರುಚಿದ್ದು!

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

ಗ್ಯಾರಂಟಿಗಳಿಂದ ಜನ ಭ್ರಷ್ಟರಾಗುತ್ತಾರೆ ಎನ್ನಲಾಗದು: ಹೈಕೋರ್ಟ್‌ ತೀರ್ಪು

ಗ್ಯಾರಂಟಿಗಳಿಂದ ಜನ ಭ್ರಷ್ಟರಾಗುತ್ತಾರೆ ಎನ್ನಲಾಗದು: ಹೈಕೋರ್ಟ್‌ ತೀರ್ಪು

Lok Sabha Elections: ರಾಜ್ಯಕ್ಕೆ ಮೋದಿ ಆಗಮನ: ಇಂದು ನಾಲ್ಕು ಕಡೆ ಪ್ರಚಾರ

Lok Sabha Elections: ರಾಜ್ಯಕ್ಕೆ ಮೋದಿ ಆಗಮನ: ಇಂದು ನಾಲ್ಕು ಕಡೆ ಪ್ರಚಾರ

1-wewewqe

Beauty; ಈ 60ರ ಚೆಲುವೆ ಬ್ಯೂನಸ್‌ ಐರಿಸ್‌ ಮಿಸ್‌ ಯುನಿವರ್ಸ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-24-sunday

Daily Horoscope: ವಸ್ತ್ರಾಭರಣ ಖರೀದಿಗೆ ಧನವ್ಯಯ, ಅವಿವಾಹಿತರಿಗೆ ಶೀಘ್ರ ವಿವಾಹ ಯೋಗ

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

Madhavi Latha

BJP ‘ನಾನು ಮಹಿಳೆಯಲ್ಲ’ ಎಂಬ ಮಾಧವಿ ವೈರಲ್‌ ವೀಡಿಯೋ ತಿರುಚಿದ್ದು!

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

ಗ್ಯಾರಂಟಿಗಳಿಂದ ಜನ ಭ್ರಷ್ಟರಾಗುತ್ತಾರೆ ಎನ್ನಲಾಗದು: ಹೈಕೋರ್ಟ್‌ ತೀರ್ಪು

ಗ್ಯಾರಂಟಿಗಳಿಂದ ಜನ ಭ್ರಷ್ಟರಾಗುತ್ತಾರೆ ಎನ್ನಲಾಗದು: ಹೈಕೋರ್ಟ್‌ ತೀರ್ಪು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.