ಕಾರ್ಕಳ: ರಸ್ತೆ ಗುಂಡಿ ದಾಟಲು ಇರಬೇಕು ಗಟ್ಟಿ  ಗುಂಡಿಗೆ


Team Udayavani, Sep 15, 2021, 3:00 AM IST

ಕಾರ್ಕಳ: ರಸ್ತೆ ಗುಂಡಿ ದಾಟಲು ಇರಬೇಕು ಗಟ್ಟಿ  ಗುಂಡಿಗೆ

ಕಾರ್ಕಳ:  ಪೇಟೆಗೆ  ಬರುವುದೆಂದರೆ  ವಾಹನ ಸವಾರರಲ್ಲಿ ಒಂದು ರೀತಿಯ ಭಯ. ಕಾರಣ ಪೇಟೆ ತಲುಪುವ ದಾರಿ ಮಧ್ಯೆ ಭೀತಿ ಹುಟ್ಟಿಸುವ ರೀತಿಯಲ್ಲಿರುವ ಬೃಹತ್‌ ಗಾತ್ರದ  ಗುಂಡಿಗಳು. ಇದನ್ನು ತಪ್ಪಿಸಿ ಪೇಟೆ ತಲುಪಲು  ಎದೆಯಲ್ಲಿ ಗಟ್ಟಿ ಗುಂಡಿಗೆ ಇರಲೇಬೇಕು.

ಉಡುಪಿ ಕಡೆಯ ಮಾರ್ಗವಾಗಿ ಕಾರ್ಕಳ ನಗರ ತಲುಪುವ ಮುಂಚಿತ ಪುರಸಭೆ ವ್ಯಾಪ್ತಿಯ ಬಂಡಿಮಠ, ಸಾಲ್ಮರ ಪರಿಸರ ತಲುಪುತ್ತಿದ್ದಂತೆ  ಗುಂಡಿಗಳ  ದರ್ಶನವಾಗುತ್ತವೆ. ಸಾಲ್ಮರದ ಅಷ್ಟೂ  ದೂರದವರೆಗೆ ಮುಖ್ಯ ರಸ್ತೆಯ ಡಾಮರು ಕಿತ್ತು ಹೋಗಿ ದೊಡ್ಡ ಗುಂಡಿಗಳು ನಿರ್ಮಾಣಗೊಂಡಿವೆ. ರಸ್ತೆಯ ಅಲ್ಲಲ್ಲಿ   ಚಿಕ್ಕದಾಗಿದ್ದ ಹೊಂಡಗಳ ಗಾತ್ರ ಮಳೆಗೆ ಬೃಹದಾಕಾರವಾಗಿ ಮಾರ್ಪಟ್ಟಿವೆ.

ನಿತ್ಯ ಸರ್ಕಸ್‌:

ನಗರಕ್ಕೆ ಬರುವ ವಾಹನ ಸವಾರರು ಇಲ್ಲಿ ಹೊಂಡಗುಂಡಿಗಳನ್ನು ತಪ್ಪಿಸಲು ಸರ್ಕಸ್‌ ಮಾಡಿ ಕೊಂಡು ಪ್ರಯಾಣಿಸುವಾಗ ಆಯತಪ್ಪಿ  ಸವಾರರು ಬೀಳುವ ಸಾಧ್ಯತೆ ಹೆಚ್ಚಿದೆ. ಲಾಕ್‌ಡೌನ್‌ ನಿರ್ಬಂಧ ತೆರವುಗೊಳಿಸಿದ್ದರಿಂದ ವಾಹನ ಸಂಚಾರವೂ ಹೆಚ್ಚಾಗಿದೆ. ಮೊದಲೇ  ಹದಗೆಟ್ಟ  ರಸ್ತೆ  ಇನ್ನಷ್ಟು  ಕೆಟ್ಟಿವೆ. ದ್ವಿಚಕ್ರ ವಾಹನ ಸವಾರರಂತೂ ಜೀವವನ್ನೇ ಕೈಯಲ್ಲಿ ಹಿಡಿದುಕೊಂಡು ಇಲ್ಲಿ  ತೆರಳಬೇಕು.  ಒಳಚರಂಡಿ ಅವ್ಯವಸ್ಥೆ  ಕೂಡ ರಸ್ತೆ  ಹೆಚ್ಚು  ಹದಗೆಡಲು ಕಾರಣಗಳಲ್ಲಿ  ಸೇರಿದೆ.

ಅಂದೇ ಎಚ್ಚರಿಸಿದ್ದರು:

ಲೊಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಕಾರ್ಕಳ ಉಪ ವಿಭಾಗ ವತಿಯಿಂದ ಕಾರ್ಕಳ ಪುರಸಭೆ ವ್ಯಾಪ್ತಿಯ ಸಾಲ್ಮರದಿಂದ ಜಯಭಾರತಿ ಡ್ರೈವಿಂಗ್‌  ಸ್ಕೂಲ್‌ ವರೆಗೆ  ಚತುಷ್ಪಥ ರಸ್ತೆ ನಿರ್ಮಾಣವನ್ನು ಮಹಾಮಸ್ತಕಾಭಿಷೇಕ ವಿಶೇಷ ಅನುದಾನದಲ್ಲಿ ಮಾಡಲಾಗಿತ್ತು. ಅಂದು ಗುತ್ತಿಗೆದಾರರು ಕಾಮಗಾರಿ  ನಡೆಸುವಾಗಲೇ  ಸಾರ್ವಜನಿಕರು ಕಾಮಗಾರಿ ಕಳಪೆ ಎಂದು ದೂರಿದ್ದರು.

ದಾಟಿ ಹೋದರೂ ಕಣ್ಣಿಗೆ ಬಿದ್ದಿಲ್ಲ!:

ಅಧಿಕಾರಿಗಳು, ಜನಪ್ರತಿನಿಧಿಗಳು ಇದೇ ರಸ್ತೆಯ ಹೊಂಡ ದಾಟಿಯೇ   ಹತ್ತಾರು ಕಾರ್ಯಕ್ರಮಗಳಿಗೆ ತೆರಳುತ್ತಾರೆ. ಆದರೆ ಅವರ್ಯಾರ ಕಣ್ಣಿಗೂ ಈ ಗುಂಡಿಗಳು ಬೀಳದಿರುವುದು ವಿಶೇಷ. ಇನ್ನು ಶಾಲಾ ಕಾಲೇಜುಗಳಿಗೆ ತೆರಳುವ ಮಕ್ಕಳು,  ಸರಕಾರಿ, ಖಾಸಗಿ ಸಂಸ್ಥೆಗಳ ಉದ್ಯೋಗಸ್ಥರು, ಮಹಿಳೆಯರು ವಾಹನದಲ್ಲಿ ಓಡಾಡುವಾಗ  ಭಯ ಪಡುತ್ತಿದ್ದಾರೆ. ಮಳೆಗೆ ರಸ್ತೆಯ ಹೊಂಡಗಳಲ್ಲಿ ನೀರು ನಿಂತು  ಗುಂಡಿಗಳ ಅರಿವಿಲ್ಲದೆ ಬಿದ್ದು  ಗಾಯಗೊಳ್ಳುತ್ತಿದ್ದಾರೆ.

ಅಪಘಾತ ತಡೆಗೆ ಬ್ಯಾರಿಕೇಡ್‌? :

ಪುರಸಭೆ ವ್ಯಾಪ್ತಿಯ ಸಾಲ್ಮರ ಬಳಿ ರಸ್ತೆ ಹದಗೆಟ್ಟು ಹೊಂಡ ನಿರ್ಮಾಣವಾದ ಸ್ಥಳಕ್ಕೆ ಪುರಸಭೆ ಮುಖ್ಯಾಧಿಕಾರಿ ರೂಪಾ ಶೆಟ್ಟಿ ನೇತೃತ್ವದಲ್ಲಿ  ಅಧಿಕಾರಿಗಳು ದಿಢೀರ್‌ ಭೇಟಿ ನೀಡಿದರು.  ಪೊಲೀಸರು ಕೂಡಲೆ ಆ ಸ್ಥಳದಲ್ಲಿ ಬ್ಯಾರಿಕೇಡ್‌ ಇರಿಸಿ ಅಪಘಾತ ತಡೆ ಪ್ರಯತ್ನವನ್ನು  ಮಂಗಳವಾರ ನಡೆಸಿದ್ದಾರೆ.

ಮಳೆ ಬಂದರೆ ನಡು ಪೇಟೆ ಹೊಳೆಯಾಗುತ್ತದೆ! :

ಮೂರುಮಾರ್ಗ ಜಂಕ್ಷನ್‌ನಿಂದ ಬಸ್‌ನಿಲ್ದಾಣಕ್ಕೆ ತೆರಳುವ ಮಾರ್ಗ ಮಧ್ಯೆ ಮುಖ್ಯ ಪೇಟೆಯ ನಡು ರಸ್ತೆಯಲ್ಲಿ  ದೊಡ್ಡ  ಹೊಂಡವಿದ್ದು, ಅಪಘಾತಕ್ಕೆ ಆಹ್ವಾನ ನೀಡುತ್ತಿದೆ. ಒಂದು ಬಾರಿ ಹೊಂಡ ಮುಚ್ಚಿದ್ದರೂ ಮತ್ತೆ ತೆರೆದಿದೆ. ಸೂಕ್ತ ಚರಂಡಿಯಿಲ್ಲದೆ  ಮಳೆ ಬಂದಾಗ ರಸ್ತೆ ಮೇಲೆ ನೀರು ನಿಂತು ಹೊಂಡ ಕಾಣದಂತಾಗುತ್ತದೆ.

ನಿರಂತರ ಮಳೆ ಸುರಿಯುತ್ತಿರುವುದರಿಂದ ಈಗ ಕಾಮಗಾರಿ ನಡೆಸಲು  ಅಡಚಣೆಯಾಗಿದೆ. ಮಳೆ ಸ್ವಲ್ಪ ಕಡಿಮೆಯಾದಲ್ಲಿ ತತ್‌ಕ್ಷಣವೇ ದುರಸ್ತಿ ಪಡಿಸಲಾಗುವುದು. ಮೂರು ಮಾರ್ಗ ರಸ್ತೆಯಲ್ಲಿ  ತಾನೇ ನಿಂತು ಕೆಲಸ ಮಾಡಿಸಿದ್ದೆ. ಸತತ ಮಳೆಯಿಂದ ಮತ್ತೆ ಹೊಂಡ ಬಿದ್ದಿದೆ. ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡುವೆ. ಸುಮಾಕೇಶವ್‌, ಅಧ್ಯಕ್ಷೆ ಪುರಸಭೆ ಕಾರ್ಕಳ

 

-ಬಾಲಕೃಷ್ಣ ಭೀಮಗುಳಿ‌

ಟಾಪ್ ನ್ಯೂಸ್

RBI

RBI; 2 ವರ್ಷದಲ್ಲಿ ಗೃಹ ಸಾಲ ಬಾಕಿ 10 ಲಕ್ಷ‌ ಕೋಟಿ ರೂ.ಗೆ ಏರಿಕೆ

1-wqeqwe

Congress; ಖರ್ಗೆ, ರಾಹುಲ್‌, ಸಿಎಂ ಸಿದ್ದು ಚಿಟ್‌ ಚಾಟ್‌ ವೀಡಿಯೋ ವೈರಲ್‌

kaadaane

Chikkamagaluru: ವನ್ಯಜೀವಿ ದಾಳಿಗೆ 5 ವರ್ಷದಲ್ಲಿ 16 ಜನರ ಸಾವು

Lok Sabha Elections; ಊರಿನತ್ತ ಹೊರಟ ಉತ್ತರ ಕರ್ನಾಟಕ ಮಂದಿ

Lok Sabha Elections; ಊರಿನತ್ತ ಹೊರಟ ಉತ್ತರ ಕರ್ನಾಟಕ ಮಂದಿ

1-anna

BJP; ಅಸಮರ್ಥ ಅಣ್ಣಾಮಲೈ ರಾಜ್ಯ ಬಿಟ್ಟಿದ್ದು ಒಳ್ಳೆಯದಾಯಿತು: ಪ್ರಿಯಾಂಕ್‌ ಖರ್ಗೆ

Panamburu ಮಂಗಳೂರಿಗೆ ಬಂತು 8ನೇ ಬೃಹತ್‌ ಪ್ರವಾಸಿ ಹಡಗು

Panamburu ಮಂಗಳೂರಿಗೆ ಬಂತು 8ನೇ ಬೃಹತ್‌ ಪ್ರವಾಸಿ ಹಡಗು

Ramalinga reddy 2

BJP ಒಂದಂಕಿಗೆ ಕುಸಿತ: ಸಚಿವ ರಾಮಲಿಂಗಾ ರೆಡ್ಡಿ ಭವಿಷ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bailur ಉಮಿಕ್ಕಳ ಬೆಟ್ಟದಲ್ಲಿ ಬೆಂಕಿ ಅವಘಡ; ಪರಶುರಾಮ ಥೀಮ್‌ಪಾರ್ಕ್‌ ಸುರಕ್ಷಿತ

Bailur ಉಮಿಕ್ಕಳ ಬೆಟ್ಟದಲ್ಲಿ ಬೆಂಕಿ ಅವಘಡ; ಪರಶುರಾಮ ಥೀಮ್‌ಪಾರ್ಕ್‌ ಸುರಕ್ಷಿತ

Fraud Case ಷೇರು ಮಾರುಕಟ್ಟೆ ಹೆಸರಿನಲ್ಲಿ ಮಹಿಳೆಗೆ ವಂಚನೆ

Fraud Case ಷೇರು ಮಾರುಕಟ್ಟೆ ಹೆಸರಿನಲ್ಲಿ ಮಹಿಳೆಗೆ ವಂಚನೆ

Udupi; ಬ್ಯಾಂಕ್‌ ಅಧಿಕಾರಿ ಖಾತೆಯಿಂದ ಲಕ್ಷಾಂತರ ರೂ.ವರ್ಗಾವಣೆ

Udupi; ಬ್ಯಾಂಕ್‌ ಅಧಿಕಾರಿ ಖಾತೆಯಿಂದ ಲಕ್ಷಾಂತರ ರೂ.ವರ್ಗಾವಣೆ

Agumbe Ghat; ಘನವಾಹನಗಳ ಸಂಚಾರದಿಂದ ಘಾಟಿ ಬಂದ್‌ ಆಗುವ ಭೀತಿ

Agumbe Ghat; ಘನವಾಹನಗಳ ಸಂಚಾರದಿಂದ ಘಾಟಿ ಬಂದ್‌ ಆಗುವ ಭೀತಿ

State Government School; ದಸರಾ ರಜೆ ಕ್ರಿಸ್ಮಸ್‌ಗೆ ಹೊಂದಿಸಲು ಅವಕಾಶ

State Government School; ದಸರಾ ರಜೆ ಕ್ರಿಸ್ಮಸ್‌ಗೆ ಹೊಂದಿಸಲು ಅವಕಾಶ

MUST WATCH

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

ಹೊಸ ಸೇರ್ಪಡೆ

BJP Symbol

Madhya Pradesh: ಮತ್ತೊಬ್ಬ ಕಾಂಗ್ರೆಸ್‌ ಎಂಎಲ್‌ಎ ಬಿಜೆಪಿಗೆ

arrested

ನೂಪುರ್‌ ಶರ್ಮಾ, ಬಿಜೆಪಿ ಶಾಸಕನ ಹತ್ಯೆ ಸಂಚು: ಮೌಲ್ವಿ ಬಂಧನ

RBI

RBI; 2 ವರ್ಷದಲ್ಲಿ ಗೃಹ ಸಾಲ ಬಾಕಿ 10 ಲಕ್ಷ‌ ಕೋಟಿ ರೂ.ಗೆ ಏರಿಕೆ

1-wqeqwe

Congress; ಖರ್ಗೆ, ರಾಹುಲ್‌, ಸಿಎಂ ಸಿದ್ದು ಚಿಟ್‌ ಚಾಟ್‌ ವೀಡಿಯೋ ವೈರಲ್‌

kaadaane

Chikkamagaluru: ವನ್ಯಜೀವಿ ದಾಳಿಗೆ 5 ವರ್ಷದಲ್ಲಿ 16 ಜನರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.