‘ಕಬ್ಜ’ ಸೆಟ್‌ಗೆ ಸುದೀಪ್‌ ಎಂಟ್ರಿ: ಖಡಕ್‌ ಲುಕ್‌ ನಲ್ಲಿ ಭಾರ್ಗವ್‌ ಭಕ್ಷಿ


Team Udayavani, Dec 18, 2021, 11:23 AM IST

kabzaa

ಆರ್‌.ಚಂದ್ರು ನಿರ್ದೇಶನದ “ಕಬ್ಜ’ ಚಿತ್ರದ ನಿರೀಕ್ಷೆ ಮತ್ತಷ್ಟು ಹೆಚ್ಚಿದೆ. ಕನ್ನಡ ಚಿತ್ರರಂಗದಿಂದ ತಯಾರಾಗುತ್ತಿರುವ ಮತ್ತೂಂದು ಬಿಗ್‌ ಬಜೆಟ್‌ ಪ್ಯಾನ್‌ ಇಂಡಿಯಾ ಸಿನಿಮಾವಾಗಿ ದಿನದಿಂದ ದಿನಕ್ಕೆ ಸಿನಿಮಾ ಪ್ರೇಮಿಗಳ ಗಮನ ಸೆಳೆಯುತ್ತಿದ್ದ “ಕಬ್ಜ’ಗೆ ಮತ್ತೂಬ್ಬ ಸ್ಟಾರ್‌ ನಟನ ಎಂಟ್ರಿಯಾಗಿರೋದು ನಿಮಗೆ ಗೊತ್ತೇ ಇದೆ. ಅದು ಸುದೀಪ್‌. ಈ ಮೂಲಕ ಸಿನಿಮಾದ ಕ್ರೇಜ್‌ ಕೂಡಾ ದುಪ್ಪಟ್ಟಾಗಿದೆ.

ಸುದೀಪ್‌ “ಕಬ್ಜ’ ಚಿತ್ರಕ್ಕೆ ಎಂಟ್ರಿಕೊಡುತ್ತಿದ್ದಂತೆ ಅವರ ಅಭಿಮಾನಿಗಳಲ್ಲಿ ಎದ್ದ ಪ್ರಶ್ನೆ ಎಂದರೆ, ಸುದೀಪ್‌ ಅವರ ಗೆಟಪ್‌ ಹೇಗಿರಬಹುದು ಎಂದು. ಈಗ ಸ್ವತಃ ಸುದೀಪ್‌ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದು, ಫೋಟೋವೊಂದನ್ನು ಟ್ವೀಟ್‌ ಮಾಡಿ, ಚಿತ್ರತಂಡಕ್ಕೆ ಶುಭಕೋರಿದ್ದಾರೆ. ಈ ಮೂಲಕ ಮತ್ತೆ ಅಭಿಮಾನಿಗಳ ಕುತೂಹಲ ಹೆಚ್ಚಾಗಿದೆ.

ಚಿತ್ರದಲ್ಲಿ ಸುದೀಪ್‌ ಅವರ ಹೇರ್‌ ಸ್ಟೈಲ್‌ನಿಂದ ಹಿಡಿದು ಸಂಪೂರ್ಣ ಲುಕ್‌ ಬದಲಾಗಲಿದೆ. ಚಿತ್ರದಲ್ಲಿ ಸುದೀಪ್‌ ಭಾರ್ಗವ್‌ ಭಕ್ಷಿ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು,1947ರಿಂದ1986ರ ಕಾಲಘಟ್ಟದ ಪಾತ್ರವಾಗಿದ್ದು, ಮಾಫಿಯಾ ಕೊನೆಗೊಳಿಸಲು ಭಕ್ಷಿ ಹೊರಡುತ್ತಾನೆ ಎಂಬ ಕ್ಯಾಪ್ಶನ್‌ ಅನ್ನು “ಕಬ್ಜ’ ಚಿತ್ರದ ಪೋಸ್ಟರ್‌ನಲ್ಲಿ ನೀಡಲಾಗಿದೆ.

ಈಗಾಗಲೇ ಸುದೀಪ್‌ ಹಾಗೂ ಉಪೇಂದ್ರ “ಮುಕುಂದ ಮುರಾರಿ’ ಚಿತ್ರದಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದರು. ಈಗ “ಕಬ್ಜ’ದಲ್ಲಿ ಮತ್ತೂಮ್ಮೆ ನಟಿಸುತ್ತಿದ್ದಾರೆ. “ಕಬ್ಜ’ ಚಿತ್ರದಲ್ಲಿ ನಟಿಸುತ್ತಿರುವ ಬಗ್ಗೆ ಸ್ವತಃ ಸುದೀಪ್‌ ಟ್ವೀಟ್‌ ಮಾಡಿ ಸಂತಸ ಹಂಚಿಕೊಂಡಿದ್ದಾರೆ.

ಈ ಚಿತ್ರವನ್ನು ಏಳು ಭಾಷೆಗಳಲ್ಲಿ ಬಿಡುಗಡೆ ಮಾಡಬೇಕು ಎಂಬುದು ಚಂದ್ರು ಆಸೆ. ಚಿತ್ರಕ್ಕಾಗಿ ಬೆಂಗಳೂರು ಮತ್ತು ಹೈದರಾಬಾದ್‌ನಲ್ಲಿ ವಿಶೇಷ ಸೆಟ್‌ಗಳನ್ನು ನಿರ್ಮಿಸಿ ಅದರಲ್ಲಿ ಚಿತ್ರೀಕರಣ ಮಾಡುತ್ತಿದ್ದಾರೆ. ಚಿತ್ರವನ್ನು ಆರ್‌ ಚಂದ್ರ, ಶ್ರೀಸಿದ್ಧೇಶ್ವರ ಎಂಟರ್‌ಪ್ರೈಸಸ್‌ ಬ್ಯಾನನರ್‌ಡಿ ನಿರ್ಮಿಸುತ್ತಿದ್ದು, ಉಪೇಂದ್ರ ಮತ್ತು ಸುದೀಪ್‌ ಅವರ ಜೊತೆಗೆ ರಾಹುಲ್‌, ಅನೂಪ್‌ ರೇವಣ್ಣ, ಜಾನ್‌ಕೊಕ್ಕಿನ್‌, ರಾಹುಲ್‌ ದೇವ್‌ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. ರವಿ ಬಸ್ರೂರು ಸಂಗೀತ ಈ ಚಿತ್ರಕ್ಕಿದೆ.

ಇದನ್ನೂ ಓದಿ:ಕನ್ನಡ ಭಾಷೆಯನ್ನು ನಾವು ಬಿಟ್ಟು ಕೊಡಬಾರದು… ರಚ್ಚು ಮಾತು

ಇನ್ನು ಸುದೀಪ್‌ ಅವರ “ವಿಕ್ರಾಂತ್‌ ರೋಣ’ ಫೆ.24ರಂದು ಚಿತ್ರ ಬಿಡುಗಡೆಯಾಗಲಿದೆ. “ವಿಕ್ರಾಂತ್‌ ರೋಣ’ ಆ್ಯಕ್ಷನ್‌ ಅಡ್ವೆಂಚರ್‌ ಶೈಲಿಯ ಚಿತ್ರವಾಗಿದ್ದು,55 ದೇಶಗಳಲ್ಲಿ,14 ಭಾಷೆಗಳಲ್ಲಿ3ಡಿ ಬಿಡುಗಡೆಯನ್ನುಕಾಣಲಿದೆ. ಅನೂಪ್‌ ಭಂಡಾರಿಯವರ ನಿರ್ದೇಶನ, ಜಾಕ್‌ ಮಂಜುನಾಥ್‌ ಹಾಗೂ ಶಾಲಿನಿ ಮಂಜುನಾಥ್‌ ರವರ ನಿರ್ಮಾಣ, ಅಲಂಕಾರ್‌ ಪಾಂಡಿಯನ್‌ ಅವರ ಸಹ-ನಿರ್ಮಾಣ ಈ ಚಿತ್ರಕ್ಕಿದೆ. ಚಿತ್ರಕ್ಕೆ ಬಿ.ಅಜನೀಶ್‌ ಲೋಕನಾಥ್‌ ಹಿನ್ನಲೆ ಸಂಗೀತ ಚಿತ್ರಕ್ಕಿದೆ. ಚಿತ್ರದಲ್ಲಿಕಿಚ್ಚ ಸುದೀಪ್‌ ಜೊತೆಗೆ ನಿರೂಪ್‌ ಭಂಡಾರಿ, ನೀತಾ ಅಶೋಕ್‌ ಹಾಗೂ ಜಾಕ್ವೆಲಿನ್‌ ಫ‌ರ್ನಾಂಡೀಸ್‌ ನಟಿಸಿದ್ದಾರೆ. ಜಾಕ್ವೆಲಿನ್‌ ಕೇವಲ ಹಾಡಿನಲ್ಲಷ್ಟೇಕಾಣಿಸಿಕೊಂಡಿಲ್ಲ. ಚಿತ್ರದ ಕೆಲವು ಪ್ರಮುಖ ದೃಶ್ಯಗಳಲ್ಲೂ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಜಾಕ್ವೆಲಿನ್‌ “ವಿಕ್ರಾಂತ್‌ ರೋಣ’ದಲ್ಲಿ ಒಂದು ಪಾತ್ರವಾಗಿದ್ದಾರೆ ಎನ್ನಬಹುದು. ಜಾಕ್ವೆಲಿನ್‌ಕಾಣಿಸಿಕೊಂಡಿರುವ ಹಾಡಿಗಾಗಿ ಸಖತ್‌ ಕಲರ್‌ಫ‌ುಲ್‌ ಸೆಟ್‌ ಹಾಕಿದ್ದು, ಬೆಂಗಳೂರು ಹೊರವಲಯದಲ್ಲಿ ಚಿತ್ರೀಕರಣ ನಡೆಸಲಾಗಿದೆ .

ಟಾಪ್ ನ್ಯೂಸ್

1-eweweq

Gadag: ರಥೋತ್ಸವ ವೇಳೆ ರಥದ ಗಾಲಿಗೆ ಸಿಲುಕಿ ಇಬ್ಬರು ಭಕ್ತರು ಮೃತ್ಯು

1-wewqewq

RCB vs CSK ರೋಚಕ ಪಂದ್ಯಕ್ಕೆ ಮಳೆ ಅಡ್ಡಿ: ಬೌಲಿಂಗ್ ಆಯ್ಕೆ ಮಾಡಿಕೊಂಡ ಚೆನ್ನೈ

1-ew-eqw-e

BJP ಕಚೇರಿಗೆ ಬರುತ್ತಿದ್ದೇವೆ.. ಎಲ್ಲರನ್ನೂ ಬಂಧಿಸಿ: ಪ್ರಧಾನಿಗೆ ಕೇಜ್ರಿವಾಲ್ ಸವಾಲು

yogi-2

Congress ಪಕ್ಷದಲ್ಲಿ ಔರಂಗಜೇಬನ ಆತ್ಮ ಸೇರಿಕೊಂಡಿದೆ: ಸಿಎಂ ಯೋಗಿ ವಾಗ್ದಾಳಿ

1-qewwqeqqw

RSS ಕೂಡ ನಕಲಿ ಎಂದು ನಾಳೆ ಮೋದಿ ಹೇಳಬಹುದು : ಉದ್ಧವ್ ಠಾಕ್ರೆ ಕಿಡಿ

Gangavathi ಸಾಣಾಪೂರ ಕೆರೆಯಲ್ಲಿ ಮುಳುಗಿ ಯುವಕ ಮೃತ್ಯು

Gangavathi ಸಾಣಾಪೂರ ಕೆರೆಯಲ್ಲಿ ಮುಳುಗಿ ಯುವಕ ಮೃತ್ಯು

drowned

Vedganga ನದಿಯಲ್ಲಿ ಮುಳುಗಿ ನಾಲ್ವರು ಮೃತ್ಯು:ಇಬ್ಬರು ಬೆಳಗಾವಿಯವರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vikasa parva Kannada movie

Kannada Movie; ಸೆನ್ಸಾರ್ ಪಾಸಾದ ‘ವಿಕಾಸ ಪರ್ವ’

Biography of Mother Teresa in web series

Mother Teresa; ವೆಬ್‌ ಸೀರೀಸ್‌ನಲ್ಲಿ ಮದರ್‌ ತೆರೇಸಾ ಜೀವನ ಚರಿತ್ರೆ

Re Release; ಭರ್ಜರಿ ಓಪನಿಂಗ್‌ ಪಡೆದ ಉಪ್ಪಿ ‘ಎ’

Re Release; ಭರ್ಜರಿ ಓಪನಿಂಗ್‌ ಪಡೆದ ಉಪ್ಪಿ ‘ಎ’

20

Sandalwood: ದರ್ಶನ್‌ ʼಡೆವಿಲ್‌ʼಗೆ ಕರಾವಳಿ ಬೆಡಗಿ ರಚನಾ ರೈ ನಾಯಕಿ; ಫಸ್ಟ್‌ ಪೋಸ್ಟರ್‌ ಔಟ್

vijay raghavendra’s swapna mantapa movie

Kannada Cinema; ‘ಸ್ವಪ್ನ ಮಂಟಪ’ದಲ್ಲಿ ವಿಜಯ ರಾಘವೇಂದ್ರ-ರಂಜನಿ; ಬರಗೂರು ನಿರ್ದೇಶನ

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

1-qwqeewqe

Vijayapura;ದಲಿತರ ಭವನ ನಿರ್ಮಾಣಕ್ಕೆ ಮುಸ್ಲಿಮರ ವಿರೋಧ:ಪೊಲೀಸರ ಮಧ್ಯಸ್ಥಿಕೆ

Minchu

Banavasi ; ಕ್ರಿಕೆಟ್ ಆಡುತ್ತಿದ್ದ ಬಾಲಕ ಸಿಡಿಲಿಗೆ ಬಲಿ

1-eweweq

Gadag: ರಥೋತ್ಸವ ವೇಳೆ ರಥದ ಗಾಲಿಗೆ ಸಿಲುಕಿ ಇಬ್ಬರು ಭಕ್ತರು ಮೃತ್ಯು

1-wewqewq

RCB vs CSK ರೋಚಕ ಪಂದ್ಯಕ್ಕೆ ಮಳೆ ಅಡ್ಡಿ: ಬೌಲಿಂಗ್ ಆಯ್ಕೆ ಮಾಡಿಕೊಂಡ ಚೆನ್ನೈ

1-ew-eqw-e

BJP ಕಚೇರಿಗೆ ಬರುತ್ತಿದ್ದೇವೆ.. ಎಲ್ಲರನ್ನೂ ಬಂಧಿಸಿ: ಪ್ರಧಾನಿಗೆ ಕೇಜ್ರಿವಾಲ್ ಸವಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.