ಗೋವಾ: ಬಿಜೆಪಿ ಸೇರಿದ ಎಂಜಿಪಿಯ ಪ್ರವೀಣ್ ಅರ್ಲೆಕರ್
Team Udayavani, Jan 4, 2022, 3:06 PM IST
ಪಣಜಿ: ಗೋವಾ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳು ಭರ್ಜರಿ ತಯಾರಿ ಆರಂಭಿಸಿವೆ. ಈ ನಡುವೆ ಮತ್ತೊಬ್ಬ ಎಂಜಿಪಿ ಅಭ್ಯರ್ಥಿ ಪ್ರವೀಣ್ ಅರ್ಲೆಕರ್ ಬಿಜೆಪಿಎ ಪಕ್ಷಕ್ಕೆ ಸೇರ್ಪಡೆಯಾದರು.
ಪೆಡ್ನೆಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಬಿಜೆಪಿ ಬಹಿರಂಗ ಸಭೆಯಲ್ಲಿ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದ ತಾನಾವಡೆ ರವರು ಪ್ರವೀಣ ಅರ್ಲೆಕರ್ ರವರನ್ನು ಬಿಜೆಪಿಗೆ ಸ್ವಾಗತಿಸಿದರು. ಕಳೆದ ಕೆಲ ದಿನಗಳಿಂದ ಪ್ರವೀಣ ಅರ್ಲೆಕರ್ ಬಿಜೆಪಿ ಸೇರುವ ಬಗ್ಗೆ ಚರ್ಚೆ ನಡೆಯುತ್ತಿತ್ತು. ಆದರೆ ಇಂದು ಈ ಚರ್ಚೆಗೆ ತೆರೆ ಬಿದ್ದಂತಾಗಿದೆ.
ಪ್ರವೀಣ ಅರ್ಲೆಕರ್ ಬಿಜೆಪಿ ಸೇರಿರುವ ಕುರಿತಂತೆ ಉಪಮುಖ್ಯಮಂತ್ರಿ ಬಾಬು ಆಜಗಾಂವಕರ್ ಪ್ರತಿಕ್ರಿಯೆ ನೀಡಿ, ಪ್ರವೀಣ ಅರ್ಲೆಕರ್ ಇಂದು ಬಿಜೆಪಿ ಸೇರಿದ್ದಕ್ಕೆ ಸಂಪೂರ್ಣ ಸ್ವಚ್ಛವಾಗಿದ್ದಾರೆ. ಪ್ರವೀಣ ಅರ್ಲೆಕರ್ ರವರು ಡ್ರಗ್ಸ್ ಡೀಲರ್ ಆಗಿದ್ದರು. ಈಗ ಬಿಜೆಪಿ ಅವರನ್ನು ಸ್ವಚ್ಛಗೊಳಿಸಿದೆ. ಅವರು ಇದಕ್ಕು ಮೊದಲು ಡ್ರಗ್ಸ್ ಮಾರಾಟ ಮಾಡುವ ವ್ಯವಹಾರ ನಡೆಸುತ್ತಿದ್ದರು ಎಂದು ನೇರವಾಗಿ ಠೀಕಾ ಪ್ರಹಾರ ನಡೆಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.