ಭಾರತದಲ್ಲಿ ಗರ್ಭಕಂಠದ ಕ್ಯಾನ್ಸರ್‌ ಪಿಡುಗು ಮತ್ತು ಅದನ್ನು ತಡೆಯುವ ಅವಕಾಶಗಳು

ಗರ್ಭಕಂಠದ ಕ್ಯಾನ್ಸರ್‌ ಜಾಗೃತಿ ಮಾಸ: ಜನವರಿ

Team Udayavani, Jan 23, 2022, 5:52 PM IST

ಭಾರತದಲ್ಲಿ ಗರ್ಭಕಂಠದ ಕ್ಯಾನ್ಸರ್‌ ಪಿಡುಗು ಮತ್ತು ಅದನ್ನು ತಡೆಯುವ ಅವಕಾಶಗಳು

ಪ್ರತೀ ವರ್ಷ ಜನವರಿ ತಿಂಗಳನ್ನು ಗರ್ಭಕಂಠದ ಕ್ಯಾನ್ಸರ್‌, ಎಚ್‌ಪಿವಿ ಮತ್ತು ಅವುಗಳನ್ನು ಬೇಗನೆ ಪತ್ತೆಹಚ್ಚುವುದರ ಪ್ರಾಮುಖ್ಯಗಳ ಬಗ್ಗೆ ಜನಸಮುದಾಯದಲ್ಲಿ ಜಾಗೃತಿಯನ್ನು ಮೂಡಿಸುವುದಕ್ಕಾಗಿ “ಗರ್ಭಕಂಠದ ಕ್ಯಾನ್ಸರ್‌ ಜಾಗೃತಿ ಮಾಸ’ವನ್ನಾಗಿ ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಇಲ್ಲಿ ಎರಡು ಲೇಖನಗಳಿವೆ.

ದೇಹದ ಕೆಲವು ಅಂಗಾಂಶಗಳು ಅನಿಯಂತ್ರಿತವಾಗಿ ಬೆಳವಣಿಗೆ ಹೊಂದಿ ಇತರ ಅಂಗಗಳಿಗೂ ವ್ಯಾಪಿಸುವುದನ್ನು ಕ್ಯಾನ್ಸರ್‌ ಕಾಯಿಲೆ ಎಂದು ಕರೆಯಲಾಗುತ್ತದೆ. ಪುರುಷರು ಮತ್ತು ಮಹಿಳೆಯರನ್ನು ಬಾಧಿಸುವ ನೂರಾರು ವಿಧದ ಕ್ಯಾನ್ಸರ್‌ಗಳಿವೆ. ಗರ್ಭಕಂಠದ ಕ್ಯಾನ್ಸರ್‌ ಅವುಗಳಲ್ಲಿ ಒಂದು. ಗ್ಲೊಬೊಕ್ಯಾನ್‌ 2020ರ ಪ್ರಕಾರ, ಪತ್ತೆಯಾಗುವ ಒಟ್ಟು ಕ್ಯಾನ್ಸರ್‌ ಪ್ರಕರಣಗಳಲ್ಲಿ ಗರ್ಭಕಂಠದ ಕ್ಯಾನ್ಸರ್‌ ನಾಲ್ಕನೆಯ ಸ್ಥಾನದಲ್ಲಿದೆ ಮತ್ತು ಮಹಿಳೆಯರಲ್ಲಿ ಕ್ಯಾನ್ಸರ್‌ನಿಂದ ಉಂಟಾಗುವ ಮೃತ್ಯುಗಳಲ್ಲಿ ಕೂಡ ನಾಲ್ಕನೇ ಸ್ಥಾನದಲ್ಲಿದೆ. 2020ರಲ್ಲಿ ಜಾಗತಿಕವಾಗಿ 6,04,000 ಹೊಸ ಗರ್ಭಕಂಠದ ಕ್ಯಾನ್ಸರ್‌ ಪ್ರಕರಣಗಳು ಪತ್ತೆಯಾಗಿದ್ದರೆ 3,42,000 ಮರಣ ಹೊಂದಿದ್ದಾರೆ. ಆದರೆ ಭಾರತದಲ್ಲಿ ಗರ್ಭಕಂಠದ ಕ್ಯಾನ್ಸರ್‌ ಉಪಟಳ ಸ್ವಲ್ಪ ಹೆಚ್ಚು ಪ್ರಮಾಣದಲ್ಲಿಯೇ ಇದೆ. ಪ್ರತೀ ವರ್ಷ ಇಲ್ಲಿ 1,23,907 ಹೊಸ ಗರ್ಭಕಂಠ ಕ್ಯಾನ್ಸರ್‌ ಪ್ರಕರಣಗಳು ಪತ್ತೆಯಾದರೆ 77,348 ಮಂದಿ ಸಾವನ್ನಪ್ಪುತ್ತಿದ್ದಾರೆ. ಪ್ರಸ್ತುತ ಹೊಸ ಪ್ರಕರಣಗಳು ಪತ್ತೆಯಾಗುತ್ತಿರುವ ದರವನ್ನು ಗಮನಿಸಿದರೆ, 2025ರ ವೇಳೆಗೆ ದೇಶದಲ್ಲಿ ಒಟ್ಟು ಗರ್ಭಕಂಠದ ಕ್ಯಾನ್ಸರ್‌ ಪ್ರಕರಣಗಳು 2,25,000ಗಳಿಗೆ ಏರುವ ನಿರೀಕ್ಷೆಯಿದೆ.

ಗರ್ಭಕಂಠದ ಕ್ಯಾನ್ಸರ್‌ ಬೆಳವಣಿಗೆ ಹೊಂದುವುದು ಬಹಳ ನಿಧಾನವಾಗಿ. ಆದ್ದರಿಂದ ಕ್ಯಾನ್ಸರ್‌ಪೂರ್ವ ಹಂತಗಳಲ್ಲಿ ಉಂಟಾಗುವ ಬದಲಾವಣೆಗಳಿಂದಾಗಿ ಅದನ್ನು ಬೇಗನೆ ಪತ್ತೆ ಹಚ್ಚಲು, ತಡೆಯಲು ಮತ್ತು ಚಿಕಿತ್ಸು ನೀಡಲು ಸಾಕಷ್ಟು ಅವಕಾಶಗಳು ಇರುತ್ತವೆ. ಆದ್ದರಿಂದಲೇ 2018ರ ಮೇ ತಿಂಗಳಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕರು ಗರ್ಭಕಂಠದ ಕ್ಯಾನ್ಸರನ್ನು ನಿರ್ಮೂಲನಗೊಳಿಸುವುದಕ್ಕಾಗಿ ಎಲ್ಲರೂ ಜತೆಯಾಗಿ ಕೆಲಸ ಮಾಡಬೇಕು ಎಂಬ ಕರೆಯನ್ನು ನೀಡಿದರು. ಈ ಸಮಾನ ಗುರಿಗಾಗಿ ವಿವಿಧ ಕಾರ್ಯಕಾರಿ ಗುಂಪುಗಳು ಒಗ್ಗೂಡಿ ಕೆಲಸ ಮಾಡಬೇಕು ಎಂಬುದಾಗಿ ಸಾರಿದರು. ಗರ್ಭಕಂಠದ ಕ್ಯಾನ್ಸರನ್ನು ನಿರ್ಮೂಲನೆಗೊಳಿಸಲು ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕರ ಕರೆಗೆ ಓಗೊಡುವ ಉದ್ದೇಶದಿಂದ 2020ರ ಮೇ ತಿಂಗಳಿನಲ್ಲಿ ವಿಶ್ವ ಆರೋಗ್ಯ ಸಮಾವೇಶವು “ಗರ್ಭಕಂಠದ ಕ್ಯಾನ್ಸರ್‌ ನಿರ್ಮೂಲನೆಗೆ ಜಾಗತಿಕ ಕಾರ್ಯತಂತ್ರ’ವನ್ನು ಅಳವಡಿಸಿಕೊಂಡಿತು.

ಗರ್ಭಕಂಠದ ಕ್ಯಾನ್ಸರ್‌
ನಿರ್ಮೂಲನೆ/ ಗರ್ಭಕಂಠದ
ಕ್ಯಾನ್ಸರ್‌ ನಿರ್ಮೂಲನೆಗೆ
ಜಾಗತಿಕ ಕಾರ್ಯತಂತ್ರ
ಗರ್ಭಕಂಠದ ಕ್ಯಾನ್ಸರ್‌ ನಿರ್ಮೂಲನೆಗೆ ಎಲ್ಲ ದೇಶಗಳೂ ಗರ್ಭಕಂಠದ ಕ್ಯಾನ್ಸರ್‌ ಪತ್ತೆಯಾಗುವ ದರವನ್ನು ಪ್ರತೀ 1 ಲಕ್ಷ ಮಹಿಳೆರಲ್ಲಿ ನಾಲ್ಕಕ್ಕೆ ಇಳಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಈ ಗುರಿಯನ್ನು ಸಾಧಿಸುವುದಕ್ಕೆ ಮೂರು ಪ್ರಧಾನ ಸ್ತಂಭಗಳು ಮತ್ತು ಅವುಗಳ ಅನುಕ್ರಮ ಗುರಿಗಳನ್ನು ಸಾಧಿಸುವುದು ಮುಖ್ಯವಾಗಿದೆ:
ಲಸಿಕೆ ವಿತರಣೆ: ಶೇ. 90ರಷ್ಟು ಬಾಲಕಿಯರಿಗೆ ಅವರು 15 ವರ್ಷ ವಯಸ್ಸಿಗೆ ಮುಟ್ಟುವ ಹೊತ್ತಿಗೆ ಎಚ್‌ಪಿವಿ ಲಸಿಕೆ ಹಾಕಿಸಬೇಕು.
– ತಪಾಸಣೆ: ಶೇ. 70 ಮಹಿಳೆಯರಿಗೆ 35 ವರ್ಷ ವಯಸ್ಸಿಗೆ ಮುನ್ನ ಮತ್ತು 45 ವರ್ಷ ವಯಸ್ಸಿಗೆ ಮುನ್ನ ಮತ್ತೂಮ್ಮೆ ಅತ್ಯುಚ್ಚ ಮಟ್ಟದ ದಕ್ಷತೆಯ ಫ‌ಲಿತಾಂಶ ಒದಗಿಸಬಲ್ಲ ತಪಾಸಣೆಯನ್ನು ಮಾಡಿಸುವುದು.
– ಚಿಕಿತ್ಸೆ: ಕ್ಯಾನ್ಸರ್‌ಪೂರ್ವ ಹಂತದಲ್ಲಿರುವ ಶೇ. 90 ಮಹಿಳೆಯರಿಗೆ ಚಿಕಿತ್ಸೆ ಒದಗಿಸುವುದು ಮತ್ತು ಕ್ಯಾನ್ಸರ್‌ ಪತ್ತೆಯಾ ಗಿರುವ ಮಹಿಳೆಯರಲ್ಲಿ ಶೇ. 90 ಮಂದಿಗೆ ಚಿಕಿತ್ಸೆ ಒದಗಿಸುವುದು.
ಮುಂದಿನ ಶತ ಮಾನದ ಒಳಗೆ ಗರ್ಭ ಕಂಠದ ಕ್ಯಾನ್ಸರನ್ನು ನಿರ್ಮೂಲನಗೊಳಿಸುವು ದಕ್ಕಾಗಿ ಪ್ರತೀ ದೇಶವೂ ಈ 90-70-90 ಗುರಿಗಳನ್ನು 2030ರ ಒಳಗೆ ಸಾಧಿಸಬೇಕು.

ಗರ್ಭಕಂಠದ ಕ್ಯಾನ್ಸರ್‌ ಎಂದರೇನು?
ಗರ್ಭಕಂಠವು ಗರ್ಭಕೋಶದ ಅತ್ಯಂತ ಕೆಳಗಿನ ಅಂಗ, ಇದು ಗರ್ಭಕೋಶವನ್ನು ಸ್ತ್ರೀಜನನಾಂಗದ ಜತೆಗೆ ಸಂಪರ್ಕಿಸುತ್ತದೆ/ ಗರ್ಭಕಂಠದಲ್ಲಿ ಉಂಟಾಗುವ ಕ್ಯಾನ್ಸರನ್ನು ಗರ್ಭಕಂಠದ ಕ್ಯಾನ್ಸರ್‌ ಎಂದು ಕರೆಯಲಾಗುತ್ತದೆ.

ಯಾರಿಗೆ ಗರ್ಭಕಂಠದ ಕ್ಯಾನ್ಸರ್‌ ಉಂಟಾಗಬಹುದು?
30 ಮತ್ತು 65 ವರ್ಷ ವಯೋಮಾನದ ಒಳಗಿನ ಪ್ರತೀ ಮಹಿಳೆಯೂ ಗರ್ಭಕಂಠದ ಕ್ಯಾನ್ಸರ್‌ ತಪಾಸಣೆಗೆ ಒಳಗಾಗಬೇಕು, ಈ ವಯಸ್ಸಿನಲ್ಲಿ ಪ್ರತೀ ಐದು ವರ್ಷಗಳಿಗೆ ಒಮ್ಮೆ ತಪಾಸಣೆ ಮಾಡಿಸಿಕೊಳ್ಳಬೇಕು.

ಅಪಾಯಾಂಶಗಳು
ಹ್ಯೂಮನ್‌ ಪ್ಯಾಪಿಲೊಮಾವೈರಸ್‌ (ಎಚ್‌ಪಿಸಿ) ಸೋಂಕು ಎಚ್‌ಪಿಸಿ ಸೋಂಕು ಗರ್ಭಕಂಠದ ಕ್ಯಾನ್ಸರ್‌ ತಲೆದೋರಲು ಒಂದು ಪ್ರಧಾನವಾದ ಅಪಾಯಾಂಶ. ಈ ವೈರಸ್‌ನ ನೂರಕ್ಕೂ ಹೆಚ್ಚು ರೂಪಾಂತರಿಗಳಿವೆಯಾದರೂ 16 ಮತ್ತು 18 ಎಂಬ ಎರಡು ರೂಪಾಂತರಿಗಳು ಗರ್ಭಕಂಠದ ಕ್ಯಾನ್ಸರ್‌ ಉಂಟಾಗುವಲ್ಲಿ ಪ್ರಧಾನ ಕಾರಣಗಳಾಗಿರುತ್ತವೆ. ಚರ್ಮ-ಚರ್ಮದ ಸಂಪರ್ಕ; ಅದರಲ್ಲೂ ಲೈಂಗಿಕ ಕ್ರಿಯೆ ಈ ವೈರಸ್‌ ಪ್ರಸರಣವಾಗಲು ಪ್ರಮುಖ ಕಾರಣವಾಗಿರುತ್ತದೆ.
ಇತರ ಕಾರಣಗಳು
– ಸಣ್ಣ ವಯಸ್ಸಿನಲ್ಲಿಯೇ ಲೈಂಗಿಕ ಜೀವನ ಪ್ರಾರಂಭವಾಗುವುದು.
– ಒಬ್ಬರಿಗಿಂತ ಹೆಚ್ಚು ಲೈಂಗಿಕ ಸಂಗಾತಿಗಳು ಇರುವುದು.
– ರೋಗ ನಿರೋಧಕ ಶಕ್ತಿ ದುರ್ಬಲವಾಗಿರುವುದು (ಉದಾಹರಣೆಗೆ, ಎಚ್‌ಐವಿ ಸೋಂಕುಪೀಡಿತರಿಗೆ ಎಚ್‌ಪಿವಿ ಸೋಂಕು ಉಂಟಾಗುವ ಸಾಧ್ಯತೆ ಹೆಚ್ಚು ಇರುತ್ತದೆ).
– ಹಾರ್ಮೋನ್‌ಯುಕ್ತ ಗರ್ಭನಿರೋಧಕಗಳನ್ನು ದೀರ್ಘ‌ಕಾಲ ಬಳಸುವುದು.
– ಧೂಮಪಾನದ ಚಟ.
– ವೈಯಕ್ತಿಕ ನೈರ್ಮಲ್ಯ ಚೆನ್ನಾಗಿಟ್ಟುಕೊಳ್ಳದ ಮಹಿಳೆಯರು.
– ಹಣ್ಣುಹಂಪಲು ಮತ್ತು ತರಕಾರಿಗಳಂತಹ ಆ್ಯಂಟಿಓಕ್ಸಿಡೆಂಟ್‌ಯುಕ್ತ ಆಹಾರಗಳನ್ನು ಹೆಚ್ಚು ಸೇವಿಸದವರು.
– ಕ್ಲಾಮಿಡಿಯಾ ಟ್ರಾಕೊಮ್ಯಾಟಿಸ್‌ನ ಸೋಂಕು

ಗರ್ಭಕಂಠದ ಕ್ಯಾನ್ಸರ್‌ನ ಲಕ್ಷಣಗಳೇನು?
ಗರ್ಭಕಂಠದ ಕ್ಯಾನ್ಸರ್‌ನಿಂದ ಬಳಲುತ್ತಿರುವ
ಮಹಿಳೆಯರನ್ನು ಪತ್ತೆ ಮಾಡುವುದು ಹೇಗೆ?
ಎಚ್‌ಪಿವಿ ಸೋಂಕಿಗೆ ತುತ್ತಾದ ಬಳಿಕ ಅದು ಯಾವುದೇ ಚಿಕಿತ್ಸೆಯ ಅಗತ್ಯವಿಲ್ಲದೆ ಕೆಲವು ತಿಂಗಳುಗಳ ಬಳಿಕ ವಾಸಿಯಾಗುತ್ತದೆ. ಶೇ. 90ರಷ್ಟು ಸೋಂಕುಗಳು ಎರಡು ವರ್ಷಗಳ ಒಳಗೆ ಸಂಪೂರ್ಣವಾಗಿ ಮಾಯವಾಗುತ್ತವೆ. ಕೆಲವರಲ್ಲಿ ಎಚ್‌ಪಿವಿ ಸೋಂಕು ಹಾಗೆಯೇ ಉಳಿದುಕೊಂಡಲ್ಲಿ ಅದು ಗರ್ಭಕಂಠದ ಕ್ಯಾನ್ಸರ್‌ ಬೆಳೆಯಲು ಅನುವು ಮಾಡಿಕೊಡುತ್ತದೆ.

ಸೋಂಕಿನ ಆರಂಭಿಕ ಅವಧಿಯಲ್ಲಿ ಈ ಮಹಿಳೆಯರು ಗರ್ಭಕಂಠದ ಕ್ಯಾನ್ಸರ್‌ನ ಯಾವುದೇ ಲಕ್ಷಣಗಳನ್ನು ಪ್ರದರ್ಶಿಸುವುದಿಲ್ಲ. ಗರ್ಭಕಂಠದ ಕ್ಯಾನ್ಸರ್‌ ಚಿಕಿತ್ಸೆಗೊಳಪಡದೆ ದೀರ್ಘ‌ಕಾಲ ಇದ್ದಷ್ಟು ಅದರ ಲಕ್ಷಣಗಳು ಪ್ರಕಟಗೊಳ್ಳುವ ಸಾಧ್ಯತೆ ಹೆಚ್ಚು. ಮುಂದುವರಿದ ಗರ್ಭಕಂಠದ ಕ್ಯಾನ್ಸರ್‌ನ ಕೆಲವು ಲಕ್ಷಣಗಳು ಎಂದರೆ:
– ಜನನಾಂಗದಲ್ಲಿ ಅಸಹಜ ರಕ್ತಸ್ರಾವ
– ಜನನಾಂಗದಲ್ಲಿ ಅಸಾಧಾರಣ ಪ್ರಮಾಣದಲ್ಲಿ ಸ್ರಾವ
– ಲೈಂಗಿಕ ಸಂಪರ್ಕದ ವೇಳೆ ನೋವು
– ಮೂತ್ರವಿಸರ್ಜನೆಯ ಸಂದರ್ಭದಲ್ಲಿ ನೋವು
– ಲೈಂಗಿಕ ಸಂಪರ್ಕದ ಬಳಿಕ ರಕ್ತಸ್ರಾವ, ಋತುಚಕ್ರದ ನಡುವಣ ಅವಧಿಯಲ್ಲೂ ಮತ್ತು ಪೆಲ್ವಿಕ್‌ ತಪಾಸಣೆಯ ಬಳಿಕ ರಕ್ತಸ್ರಾವ ಈ ಲಕ್ಷಣಗಳಲ್ಲಿ ಯಾವುದಾದರೂ ನಿಮಗಿದ್ದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು.

ಗರ್ಭಕಂಠದ ಕ್ಯಾನ್ಸರ್‌ತಡೆಯುವುದು ಹೇಗೆ?/ಗರ್ಭಕಂಠದ ಕ್ಯಾನ್ಸರ್‌
ತಡೆಗಟ್ಟಲು ಸಾಧ್ಯವೇ?

ವಿವಿಧ ಕ್ಯಾನ್ಸರ್‌ಗಳ ಪೈಕಿ ಗರ್ಭ ಕಂಠದ ಕ್ಯಾನ್ಸರ್‌ ತಡೆಗಟ್ಟಬಹುದಾದ ಮತ್ತು ಯಶಸ್ವಿಯಾಗಿ ಚಿಕಿತ್ಸೆ ನೀಡಬಹುದಾದದ್ದಾಗಿದೆ. ಆದರೆ ಇದಕ್ಕೆ ಗರ್ಭಕಂಠದ ಕ್ಯಾನ್ಸರನ್ನು ಆದಷ್ಟು ಬೇಗನೆ ಪತ್ತೆಹಚ್ಚುವುದು ಮತ್ತು ಚಿಕಿತ್ಸೆ ನೀಡುವುದು ಅತ್ಯವಶ್ಯಕ.

ಗರ್ಭಕಂಠದ ಕ್ಯಾನ್ಸರ್‌ ತಡೆ ಗಟ್ಟಲು ಮೊತ್ತಮೊದಲ ಹೆಜ್ಜೆ ಎಂದರೆ ಕ್ಯಾನ್ಸರ್‌ ಉಂಟುಮಾಡುವ ಹ್ಯೂಮನ್‌ ಪ್ಯಾಪಿಲೊಮಾ ವೈರಸ್‌ನ ತಳಿಗಳ ವಿರುದ್ಧ ಲಸಿಕೆ ಹಾಕಿಸಿಕೊಳ್ಳುವುದು. ಅಭಿವೃದ್ಧಿ ಹೊಂದಿರುವ ದೇಶಗಳಲ್ಲಿ ಎಚ್‌ಪಿವಿ ಲಸಿಕೆಯನ್ನು ಅವರ ರಾಷ್ಟ್ರೀಯ ಲಸಿಕೆಕಾರ್ಯಕ್ರಮದಲ್ಲಿಯೇ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಆದರೆ ಭಾರತದಲ್ಲಿ ಪ್ರಸ್ತುತ ಈ ಲಸಿಕೆಯು ಶಿಫಾರಸಿನ ಮೇಲೆ ಲಭ್ಯವಿದ್ದು, ದೇಶಾದ್ಯಂತ ಜಾರಿಯಾಗಿಲ್ಲ. ಅಲ್ಲದೆ ಲಸಿಕೆಯ ದರವೂ ಅದನ್ನು ರಾಷ್ಟ್ರೀಯ ಕಾರ್ಯಕ್ರಮಕ್ಕೆ ಸೇರಿಸಿಕೊಳ್ಳುವುದಕ್ಕೆ ತಡೆಯಾಗಿದೆ.

ಸಾಧ್ಯತೆಯುಳ್ಳ ಪ್ರತಿಯೊಬ್ಬ ಹೆತ್ತವರೂ ತಮ್ಮ ಮಗುವಿಗೆ ಈ ತಡೆಯಬಹುದಾದ ಮತ್ತು ಗುಣಪಡಿಸಬಹುದಾದ ಕ್ಯಾನ್ಸರ್‌ ವಿರುದ್ಧ ಲಸಿಕೆ ಹಾಕಿಸುವುದಕ್ಕೆ ಮುಂದಾಗಬೇಕು.

ಎಚ್‌ಪಿವಿ ಲಸಿಕೆ: ಹೆತ್ತವರಿಗೆ ಮಾಹಿತಿ
ಪ್ರಸ್ತುತ ಬಳಕೆಯಲ್ಲಿರುವ ಎಚ್‌ಪಿವಿ ಲಸಿಕೆಗಳು ವೈರಸ್‌-ತದ್ರೂಪಿ ಅಂಶ (ವೈರಸ್‌-ಲೈಕ್‌ ಪಾರ್ಟಿಕಲ್ಸ್‌ – ವಿಎಲ್‌ಪಿ)ಗಳನ್ನು ಆಧರಿಸಿದವು. ಈ ಅಂಶಗಳು ದೇಹದಲ್ಲಿ ಭಾರೀ ಪ್ರಮಾಣದಲ್ಲಿ ಪ್ರತಿಕಾಯಗಳು ಉತ್ಪಾದನೆಯಾಗುವುದಕ್ಕೆ ಪ್ರಚೋದನೆ ಒದಗಿಸುತ್ತವೆ. ಆದರೆ ಈ ವೈರಸ್‌-ತದ್ರೂಪಿಗಳಲ್ಲಿ ಎಚ್‌ಪಿವಿ ಡಿಎನ್‌ಎ ಇರುವುದಿಲ್ಲವಾದ್ದರಿಂದ ಅವು ಸೋಂಕನ್ನು ಉಂಟುಮಾಡುವುದಿಲ್ಲ.

ಭಾರತದಲ್ಲಿ ಲಭ್ಯವಿರುವ
ಲಸಿಕೆಯ ವಿಧಗಳು
ಪ್ರಸ್ತುತ ಸಿಡಿಸಿಯಿಂದ ಪರವಾನಿಗೆ ಪಡೆದು ಶಿಫಾರಸುಗೊಂಡಿರುವ ಎರಡು ಲಸಿಕೆಗಳು ಭಾರತದಲ್ಲಿ ಲಭ್ಯವಿವೆ.
 ಗರ್ಡಾಸಿಲ್‌: ಇದು ಕ್ವಾಡ್ರಾ ವೇಲೆಂಟ್‌ ಲಸಿಕೆಯಾಗಿದೆ. ಅಂದರೆ, ಸಿŒ ಜನನಾಂಗದಲ್ಲಿ ಗಂಟುಗಳನ್ನು ಉಂಟುಮಾಡುವ ಎಚ್‌ಪಿವಿ 16 ಮತ್ತು ಎಚ್‌ಪಿವಿ 18 ಹಾಗೂ ಎಚ್‌ಪಿವಿ 6 ಮತ್ತು ಎಚ್‌ಪಿವಿ 11 ವಿಧದ ವೈರಸ್‌ಗಳ ವಿರುದ್ಧ ರಕ್ಷಣೆ ಒದಗಿಸುತ್ತದೆ.
 ಸರ್ವಾರಿಕ್ಸ್‌: ಇದು ಬೈವೇಲೆಂಟ್‌ ಲಸಿಕೆಯಾಗಿದ್ದು, ಎಚ್‌ಪಿವಿ 16 ಮತ್ತು 18ರ ವಿರುದ್ಧ ರಕ್ಷಣೆ ಒದಗಿಸುತ್ತದೆ.

ರಾಷ್ಟ್ರೀಯ ಲಸಿಕೆ ಕಾರ್ಯಕ್ರಮದಡಿ ಶಿಫಾರಸುಗಳು
– 9ರಿಂದ 14 ವರ್ಷಗಳ ಹದಿ ಹರಯದ/ ಹದಿಹರಯ ಪೂರ್ವ ವಯಸ್ಸಿನ ಬಾಲಕಿಯರಿಗೆ ಮೇಲೆ ಹೇಳಲಾದ ಎರಡು ವಿಧದ ಲಸಿಕೆ
ಗಳ ಪೈಕಿ ಯಾವುದಾದರೂ ಒಂದರ ಕೇವಲ 2ಡೋಸ್‌ ನೀಡುವುದನ್ನು ಶಿಫಾರಸು ಮಾಡಲಾಗಿದೆ.
– ಆದರೆ, 15 ವರ್ಷ ಮತ್ತು ಅದ ಕ್ಕಿಂತ ಹೆಚ್ಚು ವಯಸ್ಸಿನ ಹಾಗೂ ರೋಗನಿರೋಧಕ ಶಕ್ತಿಗುಂದಿಸಲ್ಪಟ್ಟ ಸ್ಥಿತಿಯ ಯುವತಿಯರಿಗೆ ಮೂರು ಡೋಸ್‌ಗಳನ್ನು ಶಿಫಾರಸು ಮಾಡಲಾಗಿದೆ.
– ಎರಡು ಡೋಸ್‌ಗಳ ವೇಳಾಪಟ್ಟಿ ಯಲ್ಲಿ, ಪ್ರತೀ ಡೋಸ್‌ ನಡುವಣ ಅಂತರ 6 ತಿಂಗಳು ಇರಬೇಕು.
– 3 ಡೋಸ್‌ಗಳ ವೇಳಾಪಟ್ಟಿಯಲ್ಲಿ, ಡೋಸ್‌ಗಳನ್ನು 0, 1-2 ತಿಂಗಳು (ಬ್ರ್ಯಾಂಡ್‌ ಆಧರಿಸಿ) ಮತ್ತು 6 ತಿಂಗಳುಗಳಲ್ಲಿ ನೀಡಬೇಕು.

ಯುವ ವಯೋಮಾನ
ದಲ್ಲಿಯೇ ಲಸಿಕೆಯನ್ನು ಯಾಕೆ
ಶಿಫಾರಸು ಮಾಡಲಾಗುತ್ತದೆ?
ಮುಂದುವರಿದ ವಯಸ್ಸಿನ ಹದಿ ಹರಯದವರಿಗಿಂತ ಯುವ ಹದಿಹರಯದವರು ಲಸಿಕೆ ಪಡೆದುಕೊಂಡ ಬಳಿಕ ಉತ್ತಮ ರೋಗನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳುತ್ತಾರೆ. ಬಹಳ ಮುಖ್ಯವಾಗಿ ಲಸಿಕೆಯನ್ನು ಎಚ್‌ಪಿವಿ ಸೋಂಕಿಗೆ ತುತ್ತಾಗುವುದಕ್ಕಿಂತ ಮುನ್ನವೇ ನೀಡಿದರೆ, ಅಂದರೆ, ಲೈಂಗಿಕ ಜೀವನ ಆರಂಭವಾಗುವುದಕ್ಕಿಂತ ಮುನ್ನವೇ ಒದಗಿಸಿದರೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಅಲ್ಲದೆ, ಈಗಾಗಲೇ ಎಚ್‌ಪಿವಿ ಸೋಂಕಿಗೆ ತುತ್ತಾಗಿದ್ದರೆ ಅದರಿಂದ ಲಸಿಕೆ ರಕ್ಷಣೆ ಒದಗಿಸುವುದಿಲ್ಲ. ಈ ಎಲ್ಲ ಕಾರಣಗಳಿಂದಾಗಿ ಹದಿಹರಯ ಪೂರ್ವ ವಯಸ್ಸಿನಲ್ಲಿಯೇ ಬಾಲಕಿಯರಿಗೆ ಲಸಿಕೆ ನೀಡುವುದನ್ನು ಶಿಫಾರಸು ಮಾಡಲಾಗುತ್ತದೆ.

ಲಸಿಕೆಗಳು ಸುರಕ್ಷಿತವೇ?
ಸಾವಿರಾರು ಹದಿಹರಯದವರಲ್ಲಿ ಪ್ರಯೋಗ ನಡೆಸಿದ ಬಳಿಕ ಮತ್ತು ಲಕ್ಷಾಂತರ ಡೋಸ್‌ಗಳನ್ನು ಜಗತ್ತಿನಾದ್ಯಂತ ವಿತರಣೆ ಮಾಡಿರುವ ಆಧಾರದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಎಚ್‌ಪಿವಿ ಲಸಿಕೆಯು ಸುರಕ್ಷಿತ ಎಂಬುದಾಗಿ ಶಿಫಾರಸು ಮಾಡಿದೆ. ಜತೆಗೆ ಇಂಜೆಕ್ಷನ್‌ ನೀಡಿದ ಸ್ಥಳದಲ್ಲಿ ನೋವು ಮತ್ತು ಕೆಂಪಗಾಗುವಿಕೆ, ಜ್ವರ, ತಲೆತಿರುಗುವಿಕೆ ಮತ್ತು ಹೊಟ್ಟೆ ತೊಳೆಸುವಿಕೆಯಂತಹ ಸಾಮಾನ್ಯ, ಲಘುವಾದ ಹಾಗೂ ಅಲ್ಪ ಅವಧಿಯಲ್ಲಿ ಉಪಶಮನ ಕಾಣುವ ಅಡ್ಡ ಪರಿಣಾಮಗಳಿಗೆ ಮಾತ್ರ ಕಾರಣವಾಗುತ್ತವೆ ಎಂದು ಹೇಳಿದೆ.

ಈ ಬಗ್ಗೆ ಹೆಚ್ಚುವರಿ ಮಾಹಿತಿಗಾಗಿ ನೀವು ವೈದ್ಯರನ್ನು ಅಥವಾ ಆರೋಗ್ಯ ಸೇವಾ ಪೂರೈಕೆದಾರರನ್ನು ಸಂಪರ್ಕಿಸಬಹುದು.

ದ್ವಿತೀಯ ಮತ್ತು ಹೆಚ್ಚು ಪರಿಣಾಮಕಾರಿಯಾದ ಕಾರ್ಯತಂತ್ರ ಎಂದರೆ, ನಿಯಮಿತವಾಗಿ ಗರ್ಭಕಂಠದ ಕ್ಯಾನ್ಸರ್‌ ತಪಾಸಣೆಗೆ ಒಳಗಾಗುವುದು.

ತಪಾಸಣೆ ಎಂದರೆ, ವ್ಯಕ್ತಿಯಲ್ಲಿ ಲಕ್ಷಣಗಳು ಪ್ರಕಟಗೊಳ್ಳುವುದಕ್ಕೆ ಮುನ್ನವೇ ಕ್ಯಾನ್ಸರ್‌ ಇದೆಯೇ ಎಂದು ಪರೀಕ್ಷಿಸುವುದು. ಇದರಿಂದ ಕ್ಯಾನ್ಸರನ್ನು ಅದರ ಆರಂಭಿಕ ಹಂತಗಳಲ್ಲಿಯೇ ಪತ್ತೆ ಮಾಡುವುದಕ್ಕೆ ಸಾಧ್ಯವಾಗುತ್ತದೆ. ಅಲ್ಲದೆ, ಗರ್ಭಕಂಠದ ಕ್ಯಾನ್ಸರ್‌ ಬಹಳ ನಿಧಾನವಾಗಿ ಕ್ಯಾನ್ಸರ್‌ ಹಂತಕ್ಕೆ ಬೆಳವಣಿಗೆ ಹೊಂದುತ್ತದೆ. ಆದ್ದರಿಂದ ನಿಯಮಿತವಾಗಿ ತಪಾಸಣೆ ಮಾಡಿಸಿಕೊಂಡರೆ ರೋಗ ಪ್ರಗತಿ ಹೊಂದುವುದಕ್ಕೆ ತಡೆ ಹಾಕಬಹುದು.

ಗರ್ಭಕಂಠದ ಕ್ಯಾನ್ಸರ್‌: ಮಹಿಳೆಯರು ಯಾವ ವಯಸ್ಸಿನಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು?
ವಿಶ್ವ ಆರೋಗ್ಯ ಸಂಸ್ಥೆಯ ಶಿಫಾರಸುಗಳ ಪ್ರಕಾರ 30ರಿಂದ 65 ವರ್ಷವಯೋಮಾನದ ಮಹಿಳೆಯರು ಸ್ವಯಂ ಇಚ್ಛೆಯಿಂದ ಗರ್ಭಕಂಠದ ಕ್ಯಾನ್ಸರ್‌ ತಪಾಸಣೆ ಮಾಡಿಸಿಕೊಳ್ಳಬೇಕು. ಇದಾದ ಬಳಿಕ ನಿಯಮಿತ ಅವಧಿಗೊಮ್ಮೆ ತಪಾಸಣೆಗೆ ಒಳಗಾಗಬೇಕು.ತಪಾಸಣೆಯಲ್ಲಿ ಕ್ಯಾನ್ಸರ್‌ ಇರುವುದು ಪತ್ತೆಯಾದರೆ ಅಥವಾ ಅಸಮರ್ಪಕ ಫ‌ಲಿತಾಂಶ ಬಂದರೆ ಕೊಲೊ³ಸ್ಕೊಪಿ /ಬಯಾಪ್ಸಿ ನಿರ್ದೇಶಿತ ವಿಐಎಯನ್ನು ಮಾಡಿಸಿಕೊಳ್ಳಬೇಕು.ಗರ್ಭಕಂಠದ ಕ್ಯಾನ್ಸರ್‌ ತಡೆಯಲ್ಲಿ ಕೊಟ್ಟಕೊನೆಯ ಮಾರ್ಗ ಎಂದರೆ, ಕ್ಯಾನ್ಸರ್‌ಪೂರ್ವ ಬೆಳವಣಿಗೆಯನ್ನು ಅದು ಆಕ್ರಮಣಕಾರಿ ಕ್ಯಾನ್ಸರ್‌ ಆಗಿ ಪರಿವರ್ತನೆ ಹೊಂದುವುದಕ್ಕೆ ಮುನ್ನ ಚಿಕಿತ್ಸೆಯ ಮೂಲಕ ನಿರ್ವಹಿಸುವುದು ಮತ್ತು ಬೆಳವಣಿಗೆಯಾದ ಗರ್ಭಕಂಠದ ಕ್ಯಾನ್ಸರನ್ನು ಚಿಕಿತ್ಸೆಯ ಮೂಲಕ ನಿರ್ವಹಿಸುವುದು.

ಕ್ಯಾನ್ಸರ್‌ಪೂರ್ವ ಬೆಳವಣಿಗೆ
ವಿಐಎ ಅಥವಾ ಕೊಲೊ³ಸ್ಕೊಪಿಯ ಬಳಿಕ, ಗುರುತಿಸಲ್ಪಟ್ಟ ಕ್ಯಾನ್ಸರ್‌ಪೂರ್ವ ಬೆಳವಣಿಗೆಯನ್ನು ಕ್ರಯೊಥೆರಪಿ ಮತ್ತು ಥರ್ಮಲ್‌ ಕೊಆಗ್ಯುಲೇಶನ್‌ ಚಿಕಿತ್ಸೆಯ ಮೂಲಕ ತೆಗೆದುಹಾಕಬೇಕು.

ಆಕ್ರಮಣಕಾರಿ ಗರ್ಭಕಂಠದ ಕ್ಯಾನ್ಸರ್‌ ಬೆಳವಣಿಗೆ ಗರ್ಭಕಂಠದ ಕ್ಯಾನ್ಸರ್‌ ಯಾವ ಹಂತದಲ್ಲಿದೆ ಎಂಬುದನ್ನು ಆಧರಿಸಿ ಚಿಕಿತ್ಸೆಯನ್ನು ಯೋಜಿಸಲಾಗುತ್ತದೆ. ಲಭ್ಯವಿರುವ ಚಿಕಿತ್ಸೆಯ ಆಯ್ಕೆಗಳು ಎಂದರೆ:
1. ಶಸ್ತ್ರಚಿಕಿತ್ಸೆ
2. ರೇಡಿಯೋಥೆರಪಿ
3. ಕಿಮೊಥೆರಪಿ
ಗರ್ಭಕಂಠದ ಕ್ಯಾನ್ಸರನ್ನು ನಿರ್ಮೂಲನೆಗೊಳಿಸಲು ಇದು ಸಕಾಲ. ಈ ಕಾರಣಕ್ಕಾಗಿ ಮಣಿಪಾಲ ಅಕಾಡೆಮಿ ಆಫ್ ಹೈಯರ್‌ ಎಜುಕೇಶನ್‌ (ಮಾಹೆ) ಸರಕಾರಿ ಪ್ರಾಯೋಜಿತ “ಪ್ರಿಸ್ಕ್ರಿಪ್‌-ಟೆಕ್‌’: ಪ್ರಿವೆನ್ಶನ್‌ ಆ್ಯಂಡ್‌ ಸ್ಕ್ರೀನಿಂಗ್‌ ಇನೋವೇಶನ್‌ ಪ್ರೊಜೆಕ್ಟ್ ಟುವರ್ಡ್ಸ್‌ ಎಲಿಮಿನೇಶನ್‌ ಆಫ್ ಸರ್ವಿಕಲ್‌ ಕ್ಯಾನ್ಸರ್‌’ ಯೋಜನೆಯ ಭಾರತೀಯ ತಂಡವನ್ನು ಮುನ್ನಡೆಸುವ ಬೃಹತ್‌ ಹೆಜ್ಜೆಯೊಂದನ್ನು ಇರಿಸಿದೆ. ಈ ಉಪಕ್ರಮವು ಗರ್ಭಕಂಠದ ಕ್ಯಾನ್ಸರ್‌ ಬಗ್ಗೆ ಸಮುದಾಯದಲ್ಲಿ ಜಾಗೃತಿ ಹೆಚ್ಚಿಸುವುದು, ಹೊಸ ತಪಾಸಣೆ ಅವಕಾಶಗಳನ್ನು ಮಹಿಳೆಯರಿಗೆ ಒದಗಿಸುವುದು ಮತ್ತು ಆರೋಗ್ಯ ಸೇವಾ ಪೂರೈಕೆದಾರರ ಸಾಮರ್ಥ್ಯ ವೃದ್ಧಿಯ ಮೂಲಕ ಪ್ರಸ್ತುತ ಜಾರಿಯ ಲ್ಲಿರುವ ರಾಷ್ಟ್ರೀಯ ಗರ್ಭಕಂಠದ ಕ್ಯಾನ್ಸರ್‌ ತಪಾಸಣೆ ಯೋಜನೆಯನ್ನು ಬಲಪಡಿಸುವ ಗುರಿ ಹೊಂದಿದೆ.

-ಜೋಸ್‌ಲಿನ್‌ ಅರವಿಂದ್‌
ರಿಸರ್ಚ್‌ ಅಸೋಸಿಯೇಟ್‌, ಒಬಿಜಿ ವಿಭಾಗ
ಡಾ| ಶ್ಯಾಮಲಾ ಜಿ.
ಪ್ರೊಫೆಸರ್‌ ಮತ್ತು ಕೊಆರ್ಡಿನೇಟರ್‌, ಗೈನಕಾಲಾಜಿಕ್‌ ಓಂಕಾಲಜಿ ಫೆಲೋಶಿಪ್‌ ಪ್ರೋಗ್ರಾಮ್‌, ಕೆಎಂಸಿ, ಮಾಹೆ, ಮಣಿಪಾಲ

ಟಾಪ್ ನ್ಯೂಸ್

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?

2

Bengaluru: ಬಿಸಿಲು; ಹೋಟೆಲ್‌ ವ್ಯಾಪಾರ ಶೇ.30 ಕುಸಿತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.