11 ಪಾಕಿಸ್ತಾನ ಮೀನುಗಾರಿಕಾ ಬೋಟ್ಗಳನ್ನು ವಶಕ್ಕೆ ಪಡೆದ ಬಿಎಸ್ಎಫ್
Team Udayavani, Feb 11, 2022, 10:00 PM IST
ಅಹಮದಾಬಾದ್: ಗುಜರಾತ್ನ ಕಛ್ ಜಿಲ್ಲೆ ಬಳಿಯ ಸಮುದ್ರದಲ್ಲಿ ಪಾಕ್ ಗಡಿ ದಾಟಿ ಭಾರತದ ಸಮುದ್ರ ಪ್ರದೇಶಕ್ಕೆ ನುಸುಳಿದ್ದ ಒಟ್ಟು 11 ಪಾಕ್ ಮೀನುಗಾರಿಕೆ ದೋಣಿಗಳನ್ನು ಗಡಿ ಭದ್ರತಾ ಪಡೆಯ ಯೋಧರು ವಶಕ್ಕೆ ಪಡೆದಿದ್ದಾರೆ ಎಂದು ಬಿಎಸ್ಎಫ್ ಶುಕ್ರವಾರ ತಿಳಿಸಿದೆ.
ಬುಧವಾರ ರಾತ್ರಿ ದೈನಂದಿನ ಪರಿಶೀಲನೆ ನಡೆಸುವಾಗ ಅದರಲ್ಲಿ 9 ದೋಣಿಗಳು ಭಾರತದ ಭಾಗಕ್ಕೆ ಬಂದಿದ್ದು ತಿಳಿದುಬಂದಿದ್ದು, ಅದನ್ನು ವಶಕ್ಕೆ ಪಡೆಯಲಾಗಿತ್ತು. ಅದರಲ್ಲಿ 11 ಮೀನುಗಾರರು ಇದ್ದರು.
ಇದನ್ನೂ ಓದಿ:ಗಮನಿಸುತ್ತಿದ್ದೇವೆ, ಕೆಲ ಮಕ್ಕಳ ಪೋಷಕರು ಮತೀಯ ಸಂಘಟನೆಯಲ್ಲಿದ್ದಾರೆ : ಆರಗ ಜ್ಞಾನೇಂದ್ರ
ಅದಾದ ನಂತರ ಹೆಚ್ಚುವರಿಯಾಗಿ ರಾತ್ರಿಯಿಡೀ ಗಸ್ತು ತಿರುಗಿದಾಗ, 3 ದೋಣಿ ಮತ್ತೆ ಸಿಕ್ಕಿದೆ ಎಂದು ಬಿಎಸ್ಎಫ್ ತಿಳಿಸಿದೆ. ಪರಿಶೀಲನೆಗೆಂದು ವಾಯುಪಡೆಯಿಂದ 3 ಕಾಪ್ಟರ್ಗಳನ್ನೂ ನಿಯೋಜಿಸಿದ್ದಾಗಿ ಅಧಿಕಾರಿಗಳು ಮಾಹಿತಿ ಕೊಟ್ಟಿದ್ದಾರೆ.