ಸ್ಥಳೀಯ ಚುನಾವಣೆ: ಡಿಎಂಕೆ ಭರ್ಜರಿ ಸಾಧನೆ
Team Udayavani, Feb 23, 2022, 5:45 AM IST
ಚೆನ್ನೈ: ತಮಿಳುನಾಡಿನ ನಗರಸಭೆಗಳಿಗೆ ಇತ್ತೀಚೆಗೆ ನಡೆದಿದ್ದ ಚುನಾವಣೆಗಳಲ್ಲಿ ಆಡಳಿತಾರೂಢ ಡಿಎಂಕೆ ಪಕ್ಷ ಅತ್ಯುತ್ತಮ ಸಾಧನೆ ಮಾಡಿದೆ.
ಮಂಗಳವಾರ ಸಂಜೆಯವರೆಗೆ ಬಂದ ಫಲಿತಾಂಶ ಕುರಿತ ನಾನಾ ವರದಿಗಳ ಪ್ರಕಾರ, ಚೆನ್ನೈ ಸೇರಿದಂತೆ ವಿವಿಧ ಮಹಾನಗರ ಪಾಲಿಕೆಯ ಲ್ಲಿನ ಒಟ್ಟು 1,374 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಡಿಎಂಕೆ 425 ಸ್ಥಾನ ಗೆದ್ದಿದ್ದರೆ, ಎಐಎಡಿಎಂಕೆ 75ರಲ್ಲಿ ಜಯ ಸಾಧಿಸಿತ್ತು. ನಗರಸಭೆ ಗಳಲ್ಲಿನ ಒಟ್ಟು 3,843 ಸ್ಥಾನಗಳಲ್ಲಿ ಡಿಎಂಕೆ 1,832 ಹಾಗೂ ಎಐಡಿಎಂಕೆ 494ರಲ್ಲಿ ಜಯ ಸಾಧಿಸಿದ್ದವು.
ಇನ್ನು, ಪಟ್ಟಣ ಪಂಚಾಯತ್ನ 4,261 ಸ್ಥಾನಗಳಲ್ಲಿ ಡಿಎಂಕೆ 7,621, ಎಐಎಡಿಎಂಕೆ 1,178 ಸ್ಥಾನ ಗೆದ್ದಿತ್ತು.
ಬಿಜೆಪಿ ಅಚ್ಚರಿಯ ಸಾಧನೆ!: ಚುನಾವಣೆಯಲ್ಲಿ ಬಿಜೆಪಿ ಅಚ್ಚರಿಯ ಫಲಿತಾಂಶ ದಾಖಲಿಸಿದೆ. ಚೆನ್ನೈ ಪಾಲಿಕೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆದ್ದ 2ನೇ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದೆ.
ಇದನ್ನೂ ಓದಿ:ಮುಂಬಡ್ತಿ ಅನುಪಾತ ಮಾರ್ಪಡಿಸುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ: ಆರಗ ಜ್ಞಾನೇಂದ್ರ
ಎಐಎಡಿಎಂಕೆ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ನಾಗರ್ಕೋಯಿಲ್ ಮಹಾನಗರ ಪಾಲಿಕೆಯಲ್ಲಿ ನಾಲ್ಕು ಸ್ಥಾನ ಗೆದ್ದಿರುವ ಅದು, ಭವಾನಿಸಾಗರ್ ಹಾಗೂ ಸತ್ಯಮಂಗಳಂ ಸ್ಥಳೀಯ ಸಂಸ್ಥೆಗಳಲ್ಲಿ ಕೆಲವು ವಾರ್ಡ್ಗಳಲ್ಲಿ ಜಯ ಸಾಧಿಸಿದೆ.