ಮಂಗಳೂರು: ಪೊಲೀಸರಿಗೆ ನಿಂದಿಸಿದ ಆರೋಪಿಗಳು ಸೇರಿ 9 ಜನರ ಬಂಧನ;ವಿಚಾರಣೆ ವೇಳೆ ಸ್ಪೋಟಕ ಮಾಹಿತಿ

Team Udayavani, May 31, 2022, 2:56 PM IST

11arrest

ಮಂಗಳೂರು: ಎಸ್ ಡಿಪಿಐ ಸಮಾವೇಶದ ವೇಳೆ ನಗರದ ಕೊಡೆಕ್ಕಲ್ ಚೆಕ್ ಪೋಸ್ಟ್ ಬಳಿ ಪೊಲೀಸ್ ಸಿಬ್ಬಂದಿಗಳಿಗೆ ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳು ಸೇರಿ ಒಟ್ಟು 9 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮಂಗಳೂರಿನ ಇನೋಳಿ ನಿವಾಸಿಗಳಾದ ನೌಷಾದ್‌ (28), ಹೈದರಾಲಿ (27) ಬಂಧಿತ ಆರೋಪಿಗಳು. ಆರೋಪಿಗಳಿಗೆ ಆಶ್ರಯ ನೀಡಿದ ಮಂಗಳೂರು ಪಾಂಡೇಶ್ವರ ನಿವಾಸಿ ಮೊಹಮ್ಮದ್‌ ಸಯ್ಯದ್‌ ಅಫ್ರೀದ್‌ (23),‌ ಕೋಣಾಜೆ ನಿವಾಸಿ ಬಶೀರ್ (40), ಮಂಗಳೂರು ಇನೋಳಿ ನಿವಾಸಿ ಬುಬೇರ್ (32), ಪುತ್ತೂರಿನ ಜಲೀಲ್‌ (25) ಹಾಗೂ ಪೊಲೀಸರ ತನಿಖೆಗೆ ಅಡ್ಡಿ ಪಡಿಸಿದ್ದ ವಿಟ್ಲ ನಿವಾಸಿ ಮೊಹಮ್ಮದ್‌ ಯಾಸೀನ್‌ (25), ಅಫ್ರೀದ್‌ ಸಾಗ್ (19), ಮಂಗಳೂರಿನ ಶಿವಭಾಗ್‌ ನಿವಾಸಿ ಮೊಹಮ್ಮದ್‌ ತುಫೇಲ್‌ ಸೇರಿದಂತೆ 9 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಆಗಿದ್ದೇನು?: ಎಸ್‌ಡಿಪಿಐ ಸಮಾವೇಶದ ವೇಳೆ ನಗರದ ಕೊಡೆಕ್ಕಲ್ ಚೆಕ್ ಪೋಸ್ಟ್ ಬಳಿ ಪೊಲೀಸ್ ಸಿಬ್ಬಂದಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ವಿಡಿಯೋ ಮಾಡಿದ್ದ, ಆರೋಪಿಗಳ ವಿರುದ್ಧ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಮಂಗಳವಾರ ಆರೋಪಿಗಳನ್ನು ಮತ್ತು ಅವರಿಗೆ ಆಶ್ರಯ ನೀಡಿದವರನ್ನು ಬೆಂಗಳೂರು ಮತ್ತು ಮೈಸೂರಿನಲ್ಲಿ ವಶಕ್ಕೆ ಪಡೆದು ವಿಚಾರಿಸಿದಾಗ, ಪ್ರಮುಖ ಆರೋಪಿತರಾದ ನೌಷಾದ್ ಮತ್ತು ಹೈದರಾಲಿ, ಇತ್ತೀಚೆಗೆ ಕೇರಳದ ಅಲಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೊಲೀಸರಿಗೆ ಬೈಯ್ಯುವ ವಾಟ್ಸಾಪ್‌ ವೈರಲ್‌ ವೀಡಿಯೋಗಳನ್ನು ನೋಡಿ  ಪ್ರಭಾವಿತರಾಗಿದ್ದರು. ಮಂಗಳೂರಿನ ಕಾರ್ಯಕ್ರಮದ ಸಂದರ್ಭದಲ್ಲಿ ಸ್ಥಳೀಯ ಎಸ್.ಡಿ.ಪಿ.ಐ. ನಾಯಕರು ಮತ್ತು ಕಾರ್ಯಕ್ರಮದ ಆಯೋಜಕರು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಮತ್ತು ಅದಕ್ಕಾಗಿ ದಾರಿಯುದ್ದಕ್ಕೂ ತಮ್ಮ ವಿರೋಧಿ ಸಂಘಟನೆಗಳ ವಿರುದ್ಧ ಹಾಗೂ ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಬೇಕು ಎಂದು ಹೇಳಿದ್ದರು ಎನ್ನುವುದು ವಿಚಾರಣೆ ವೇಳೆ ತಿಳಿದು ಬಂದಿದೆ. ಅಲ್ಲದೇ ನಿಮಗೆ  ಏನಾದರೂ ತೊಂದರೆಯಾದಲ್ಲಿ ಎಲ್ಲಾ ರೀತಿಯ ಬೆಂಬಲವನ್ನು ನೀಡಿ, ನಿಮ್ಮನ್ನು ರಕ್ಷಿಸುವ ಜವಾಬ್ದಾರಿ ನಮ್ಮದು ಎಂದು ತಮ್ಮನ್ನು ಹುರಿದುಂಬಿಸಿರುವುದಾಗಿ ಪೊಲೀಸರ ಎದುರು ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾರೆ.

ಇದನ್ನೂ ಓದಿ:ಮುಂಬಯಿ: ಕೌಟುಂಬಿಕ ಕಲಹ-ಆರು ಮಕ್ಕಳನ್ನು ಬಾವಿಗೆ ಎಸೆದು ಹತ್ಯೆಗೈದ ತಾಯಿ

ಅಲ್ಲದೇ ತಾವು ಕಾರ್ಯಕ್ರಮ ಮುಗಿದ ಕೂಡಲೇ ಮೈಸೂರು ಮತ್ತು ಬೆಂಗಳೂರಿಗೆ ಹೋಗಿ ಪೊಲೀಸರ ಕಣ್ತಪ್ಪಿಸಿ ಅಡಗಿ ಕುಳಿತು ಅಲ್ಲಿಂದ ಮುಂದೆ ಕೇರಳ, ಕಾಸರಗೋಡು ಪರಿಸರದಲ್ಲಿ ಆಶ್ರಯ ಪಡೆದು ಪೊಲೀಸರಿಗೆ ಸಿಗದಂತೆ ಯೋಜನೆ ರೂಪಿಸಿದ್ದಾಗಿ ವಿಚಾರಣೆ ವೇಳೆ ತಿಳಿಸಿದ್ದಾರೆ.

ಆರೋಪಿಗಳಿಗೆ ಆಶ್ರಯ ನೀಡಿದ 4 ಜನರನ್ನು ಹಾಗೂ ತನಿಖೆಗೆ ಅಡ್ಡಿ ಪಡಿಸಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಟಾಪ್ ನ್ಯೂಸ್

Shimoga; ಕಾಂಗ್ರೆಸ್ ತುಷ್ಟೀಕರಣದಿಂದ ಪೊಲೀಸರ ಮಾನಸಿಕ ಸ್ಥಿತಿ ಹಾಳಾಗಿದೆ: ಆರಗ ಜ್ಞಾನೇಂದ್ರ

Shimoga; ಕಾಂಗ್ರೆಸ್ ತುಷ್ಟೀಕರಣದಿಂದ ಪೊಲೀಸರ ಮಾನಸಿಕ ಸ್ಥಿತಿ ಹಾಳಾಗಿದೆ: ಆರಗ ಜ್ಞಾನೇಂದ್ರ

14-uv-fusion

UV Fusion: ಶಾಂಭವಿಯ ಮಡಿಲಲ್ಲಿ

ಮಹಿಳಾ ಸಿಬ್ಬಂದಿಗೆ ಲೈಂಗಿಕ ದೌರ್ಜನ್ಯದ ಆರೋಪ.. ರಾಜ್ಯಪಾಲರಿಂದ ರಾಜಭವನದ CCTV ದೃಶ್ಯ ಬಹಿರಂಗ

ಲೈಂಗಿಕ ದೌರ್ಜನ್ಯ ಎಸಗಿದ ಆರೋಪ.. ರಾಜ್ಯಪಾಲರಿಂದ ರಾಜಭವನದ CCTV ದೃಶ್ಯ ಬಹಿರಂಗ

Jyothi Rai: ನಟಿ ಜ್ಯೋತಿ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ವೈರಲ್; ಮೌನ ಮುರಿದ ನಟಿ

Jyothi Rai: ನಟಿ ಜ್ಯೋತಿ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ವೈರಲ್; ಮೌನ ಮುರಿದ ನಟಿ

Two Sandeshkhali women withdraw complaint

Sandeshkhali; ಖಾಲಿ ಪತ್ರಕ್ಕೆ ಸಹಿ ಹಾಕಿಸಿದ್ದರು…: ಅತ್ಯಾಚಾರ ದೂರು ಹಿಂಪಡೆದ 2 ಮಹಿಳೆಯರು

13

UV Fusion: ಅರಿತು ಬಾಳಲು… ಬದುಕು ಬಂಗಾರ…

12-uv-fusion

Water: ನೀರನ್ನು ಮಿತವಾಗಿ ಬಳಸೋಣ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shimoga; ಕಾಂಗ್ರೆಸ್ ತುಷ್ಟೀಕರಣದಿಂದ ಪೊಲೀಸರ ಮಾನಸಿಕ ಸ್ಥಿತಿ ಹಾಳಾಗಿದೆ: ಆರಗ ಜ್ಞಾನೇಂದ್ರ

Shimoga; ಕಾಂಗ್ರೆಸ್ ತುಷ್ಟೀಕರಣದಿಂದ ಪೊಲೀಸರ ಮಾನಸಿಕ ಸ್ಥಿತಿ ಹಾಳಾಗಿದೆ: ಆರಗ ಜ್ಞಾನೇಂದ್ರ

yadagiri

SSLC Exam Result; ಮತ್ತೆ ಕೊನೆಯ ಸ್ಥಾನ ಪಡೆದ ಯಾದಗಿರಿ..; ಕಾರಣವೇನು?

ಶಾಸಕ ಇಕ್ಬಾಲ್ ಹುಸೇನ್ ವಿಡಿಯೋ ವೈರಲ್ ಕೇಸ್: ಇಬ್ಬರ ಬಂಧನ

Ramanagara ಶಾಸಕ ಇಕ್ಬಾಲ್ ಹುಸೇನ್ ವಿಡಿಯೋ ವೈರಲ್ ಕೇಸ್: ಇಬ್ಬರ ಬಂಧನ

SSLC Exam Result; ರೈತ ಕುಟುಂಬದ ಅಂಕಿತಾ ರಾಜ್ಯಕ್ಕೆ ಪ್ರಥಮ

SSLC Exam Result; ರೈತ ಕುಟುಂಬದ ಅಂಕಿತಾ ರಾಜ್ಯಕ್ಕೆ ಪ್ರಥಮ

ತಲೆಗೆ ಬೀಯರ್ ಬಾಟಲಿಯಿಂದ ಹೊಡೆದು ಯುವಕನ ಹತ್ಯೆ… ಗೆಳೆಯರ ಜೊತೆ ಪಾರ್ಟಿ ಮಾಡಿದ್ದ ಯುವಕ

ತಲೆಗೆ ಬೀಯರ್ ಬಾಟಲಿಯಿಂದ ಹೊಡೆದು ಯುವಕನ ಹತ್ಯೆ… ಗೆಳೆಯರ ಜೊತೆ ಪಾರ್ಟಿ ಮಾಡಿದ್ದ ಯುವಕ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

Prajwal Case; ಬೆಳಗಾವಿಯಲ್ಲಿ ಡಿಕೆ ಶಿವಕುಮಾರ್ ವಿರುದ್ಧ ಜೆಡಿಎಸ್ ಕಾರ್ಯಕರ್ತರ ಪ್ರತಿಭಟನೆ

Prajwal Case; ಬೆಳಗಾವಿಯಲ್ಲಿ ಡಿಕೆ ಶಿವಕುಮಾರ್ ವಿರುದ್ಧ ಜೆಡಿಎಸ್ ಕಾರ್ಯಕರ್ತರ ಪ್ರತಿಭಟನೆ

Shimoga; ಕಾಂಗ್ರೆಸ್ ತುಷ್ಟೀಕರಣದಿಂದ ಪೊಲೀಸರ ಮಾನಸಿಕ ಸ್ಥಿತಿ ಹಾಳಾಗಿದೆ: ಆರಗ ಜ್ಞಾನೇಂದ್ರ

Shimoga; ಕಾಂಗ್ರೆಸ್ ತುಷ್ಟೀಕರಣದಿಂದ ಪೊಲೀಸರ ಮಾನಸಿಕ ಸ್ಥಿತಿ ಹಾಳಾಗಿದೆ: ಆರಗ ಜ್ಞಾನೇಂದ್ರ

14-uv-fusion

UV Fusion: ಶಾಂಭವಿಯ ಮಡಿಲಲ್ಲಿ

ಮಹಿಳಾ ಸಿಬ್ಬಂದಿಗೆ ಲೈಂಗಿಕ ದೌರ್ಜನ್ಯದ ಆರೋಪ.. ರಾಜ್ಯಪಾಲರಿಂದ ರಾಜಭವನದ CCTV ದೃಶ್ಯ ಬಹಿರಂಗ

ಲೈಂಗಿಕ ದೌರ್ಜನ್ಯ ಎಸಗಿದ ಆರೋಪ.. ರಾಜ್ಯಪಾಲರಿಂದ ರಾಜಭವನದ CCTV ದೃಶ್ಯ ಬಹಿರಂಗ

Jyothi Rai: ನಟಿ ಜ್ಯೋತಿ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ವೈರಲ್; ಮೌನ ಮುರಿದ ನಟಿ

Jyothi Rai: ನಟಿ ಜ್ಯೋತಿ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ವೈರಲ್; ಮೌನ ಮುರಿದ ನಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.