ಮರ ಮಟ್ಟುಗಳು ಮೀನಿಗೆ ಉತ್ತಮ ಆಹಾರ

ಕಡಲಬ್ಬರದ ಅಲೆಗೆ ಮಲ್ಪೆ ಸಮುದ್ರ ತೀರದಲ್ಲಿ ರಾಶಿ ಕಸ

Team Udayavani, Jul 14, 2022, 2:37 PM IST

12

ಮಲ್ಪೆ: ನದಿ ಹೊಳೆಗಳ ಮೂಲಕ ಸಮುದ್ರ ಸೇರಿದ್ದ ಕಸಕಡ್ಡಿಗಳು, ಪ್ಲಾಸ್ಟಿಕ್‌ ಇನ್ನಿತರ ಮರಮಟ್ಟುಗಳು ಸಮುದ್ರದ ಅಲೆಗಳೊಂದಿಗೆ ಮಲ್ಪೆ ಕಡಲತೀರದಲ್ಲಿ ಹೇರಳ ಪ್ರಮಾಣದಲ್ಲಿ ಬಿದ್ದಿವೆ.

ಕಳೆದ 10ದಿನಗಳಿಂದ ಬಿದ್ದ ಭಾರೀ ಪ್ರಮಾಣದ ಮಳೆಗಾಳಿಯಿಂದಾಗಿ ನದಿ ಹೊಳೆಗಳಲ್ಲಿ ಪ್ರವಾಹ ಉಂಟಾಗಿ ಸಮುದ್ರ ಸೇರಿತ್ತು. ಸಮುದ್ರದ ಆಲೆಗಳೊಂದಿಗೆ ಬಂದ ಕಸಕಡ್ಡಿಗಳು ಕಡಲತೀರದಲ್ಲಿ ರಾಶಿ ಕಂಡು ಬಂದಿವೆ. ಇದರಲ್ಲಿ ಕೊಳೆತ ಮರಗಿಡಗಳ ಎಲೆಗಳು, ಪ್ಲಾಸಿಕ್‌ ಬಾಟಲುಗಳು, ಚಪ್ಪಲಿಗಳು ಸೇರಿವೆ.

ಇದೊಂದು ನೈಸರ್ಗಿಕ ಪ್ರಕ್ರಿಯೆ ಆಗಿದ್ದು ಮಳೆಗಾಲದಲ್ಲಿ ಮಾತ್ರ ಸಂಭವಿಸುತ್ತದೆ. ಕಡಲ ಅಬ್ಬರ ಹೆಚ್ಚಿದಾಗ ಆದರ ಆಲೆಯೊಂದಿಗೆ ಕಸಕಡ್ಡಿಗಳು ಮೇಲೆ ಬರುತ್ತವೆ. ಕಳೆದ ಕೆಲವು ವರ್ಷಗಳಿಂದ ತೀರಕ್ಕೆ ಬಂದು ಬೀಳುವ ಕಸದಲ್ಲಿ ಕಿಲೋಗಟ್ಟಲೆ ಪ್ಲಾಸ್ಟಿಕ್‌ ಇರುತ್ತದೆ. ಈ ಹಿಂದೆ ಉರುವಲುಗಳನ್ನು ಕರಾವಳಿ ತೀರದ ಜನರು ಬೆಂಕಿ ಕಾಯಿಸಲು ಕಾದು ಕುಳಿತು ಮನೆಗೆ ಒಯ್ಯುತ್ತಿದ್ದರು. ಈಗ ಪ್ರತೀ ಮನೆಯಲ್ಲಿ ಗ್ಯಾಸ್‌ ಇರುವುದರಿಂದ ಇದು ಕಡಲತೀರದಲ್ಲಿಯೇ ಉಳಿಯುತ್ತದೆ.

ಔಷಧೀಯ ಗುಣ

ಈ ಹಿಂದೆ ಮಳೆಗಾಲದಲ್ಲಿ ಪಶ್ಚಿಮ ಘಟ್ಟದ ತಪ್ಪಲಲ್ಲಿರುವ ಕೆಲವೊಂದು ಔಷಧೀಯ ಗುಣಗಳಿರುವ ಮರ, ಗೆಲ್ಲು, ಎಲೆಗಳು, ಕಾಯಿಗಳು ನದಿ ನೀರಿ ನೊಂದಿಗೆ ತೇಲಿ ಬಂದು ಸಮುದ್ರ ಸೇರುತ್ತಿತ್ತು. ಇದು ಸಂತಾನೋತ್ಪತ್ತಿಯಲ್ಲಿರುವ ಮೀನುಗಳಿಗೆ ಉತ್ತಮ ಆಹಾರವಾಗುತ್ತಿತ್ತು.

ಇತ್ತೀಚಿನ ವರ್ಷಗಳಲ್ಲಿ ನದಿಗಳೊಂದಿಗೆ ಬಂದ ಈ ಮರಮಟ್ಟುಗಳು ನಗರ ಪ್ರದೇಶದಲ್ಲಿ ನದಿಗಳಿಗೆ ಎಸೆಲಾಗುವುವ ಪ್ಲಾಸಿಕ್‌ ಹಾಗೂ ಇನ್ನಿತರ ವಿಷಯುಕ್ತ ಪದಾರ್ಥಗಳೊಂದಿಗೆ ಸೇರಿ ಸಮುದ್ರ ಸೇರುವುದರಿಂದ ಮೀನುಗಳಿಗೆ ಹಾನಿಕಾರಕ ವಾಗುತ್ತಿದೆ. ಕಣ್ಣಿಗೆ ಕಾಣದ ಕೆಲವೊಂದು ಸಣ್ಣಗಾತ್ರದ ಪ್ಲಾಸ್ಟಿಕ್‌ಗಳು ಮೀನಿನ ಹೊಟ್ಟೆ ಸೇರಿ ಮೀನು ನಾಶವಾಗುತ್ತಿದೆ ಎನ್ನಲಾಗಿದೆ.

ಕಡಲ ಅಬ್ಬರದ ಸಮಯದಲ್ಲಿ ಸಮುದ್ರವು ಕಸದ ರಾಶಿಯನ್ನೆ ತೀರಕ್ಕೆ ತಂದು ಹಾಕುತ್ತದೆ. ಇದಕ್ಕೆ ಮಡಿ ಬೀಳುವುದು ಎಂದು ಹೇಳಲಾಗುತ್ತದೆ. ಈ ವೇಳೆ ಸಮುದ್ರವು ಶಾಂತ ಸ್ವರೂಪವನ್ನು ಪಡೆದುಕೊಳ್ಳುವುರಿಂದ ಮೀನುಗಾರಿಕೆಗೂ ಇದು ಪೂರಕ. ಕಸಗಳು ಕೊಳೆತು ಮತ್ತೆ ಸಮುದ್ರ ಸೇರುವುದರಿಂದ ಮೀನುಗಳಿಗೆ ಆಹಾರವೂ ಆಗುತ್ತದೆ ಎಂದು ಮಲ್ಪೆ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಸುಂದರ ಪಿ. ಸಾಲ್ಯಾನ್‌ ತಿಳಿಸುತ್ತಾರೆ.

ಪ್ಲಾಸ್ಟಿಕ್‌ ತ್ಯಾಜ್ಯ ಎಸೆಯದಿರಿ: ಹೇರಳ ಪ್ರಮಾಣದಲ್ಲಿ ಮಡಿ ಕಸ ಬೀಳುತ್ತಿದೆ. ಕಡಲತೀರದಲ್ಲಿರುವ ಮಡಿ ಕಸವನ್ನು ಬಿಟ್ಟು ಪ್ಲಾಸ್ಟಿಕ್‌ ಬಾಟಲಿ, ಬಲೆ ತುಂಡುಗಳನ್ನುಅಲ್ಲಿಂದ ತೆರವು ಮಾಡುತ್ತಿದ್ದೇವೆ. ಹೊಳೆ ನದಿಗಳಿಗೆ ಪ್ಲಾಸ್ಟಿಕ್‌, ಇನ್ನಿತರ ಜಲಚರಗಳಿಗೆ ಹಾನಿಕಾರಕವಾಗುವ ವಸ್ತುಗಳನ್ನು ಎಸೆಯುವವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತಾಗಬೇಕು.- ಸುದೇಶ್‌ ಶೆಟ್ಟಿ, ಬೀಚ್‌ ನಿರ್ವಹಕರು,ಮಲ್ಪೆ ಬೀಚ್‌ ಅಭಿವೃದ್ಧಿ ಸಮಿತಿ

ಟಾಪ್ ನ್ಯೂಸ್

Breach Of Privacy….; ಐಪಿಎಲ್ ಪ್ರಸಾರಕರ ವಿರುದ್ಧ ರೇಗಾಡಿದ ರೋಹಿತ್ ಶರ್ಮಾ

Breach Of Privacy….; ಐಪಿಎಲ್ ಪ್ರಸಾರಕರ ವಿರುದ್ಧ ರೇಗಾಡಿದ ರೋಹಿತ್ ಶರ್ಮಾ

13-doctor

Health: ಸದಾ ಎಚ್ಚರದಿಂದಿರಿ: ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ

Basavakalyana; ಬ್ಯಾಂಕ್ ಗೆ ಜಮೆ ಮಾಡಲು ತಂದಿದ್ದ 1.37 ಲಕ್ಷ ರೂ‌ ಎಗರಿಸಿದ ಖದೀಮ

Basavakalyana; ಬ್ಯಾಂಕ್ ಗೆ ಜಮೆ ಮಾಡಲು ತಂದಿದ್ದ 1.37 ಲಕ್ಷ ರೂ‌ ಎಗರಿಸಿದ ಖದೀಮ

12-

Heat Weather: ಹಬೆಯಾಡುತ್ತಿರುವ ವಸುಂಧರೆ

11-candle

UV Fusion: ಆಯಸ್ಸು ಅಳಿಯುವ ಮುನ್ನ

10-ಉವ-ಉಸಿಒನ

Madhur Temple: ಏಕದಂತನ ಚಿತ್ರವೇ ಮೂರ್ತಿ ಆದ ಪರಿ

CSKvsRCB; ಹಲವು ದಾಖಲೆಗಳಿಗೆ ಸಾಕ್ಷಿಯಾದ ಬೆಂಗಳೂರು – ಚೆನ್ನೈ ಪಂದ್ಯ

CSKvsRCB; ಹಲವು ದಾಖಲೆಗಳಿಗೆ ಸಾಕ್ಷಿಯಾದ ಬೆಂಗಳೂರು – ಚೆನ್ನೈ ಪಂದ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೆರೆ ಅಭಿವೃದ್ಧಿಗೆ ಒಮ್ಮೆಯೂ ತಲೆ ಎತ್ತಿ ನೋಡದ ಇಲಾಖೆ; ಆಟದ ಮೈದಾನದಂತಾದ ಬಾವದಕೆರೆ

ಕೆರೆ ಅಭಿವೃದ್ಧಿಗೆ ಒಮ್ಮೆಯೂ ತಲೆ ಎತ್ತಿ ನೋಡದ ಇಲಾಖೆ; ಆಟದ ಮೈದಾನದಂತಾದ ಬಾವದಕೆರೆ

ಉಭಯ ಜಿಲ್ಲೆಯಲ್ಲೂ ಶಾಲಾರಂಭಕ್ಕೆ ಭರದ ಸಿದ್ಧತೆ

ಉಭಯ ಜಿಲ್ಲೆಯಲ್ಲೂ ಶಾಲಾರಂಭಕ್ಕೆ ಭರದ ಸಿದ್ಧತೆ

ದೋಣಿಗಳು ಢಿಕ್ಕಿಯಾಗಿ ಮುಳುಗಡೆ; ಐವರು ಮೀನುಗಾರರ‌ ರಕ್ಷಣೆ

Malpe ದೋಣಿಗಳು ಢಿಕ್ಕಿಯಾಗಿ ಮುಳುಗಡೆ; ಐವರು ಮೀನುಗಾರರ‌ ರಕ್ಷಣೆ

Udupi District ನಾನ್‌ ಸಿಆರ್‌ಝಡ್‌ ಮರಳು ಆಸರೆ; 2.45 ಲಕ್ಷ ಮೆ. ಟನ್‌ ಮರಳು ತೆರವು

Udupi District ನಾನ್‌ ಸಿಆರ್‌ಝಡ್‌ ಮರಳು ಆಸರೆ; 2.45 ಲಕ್ಷ ಮೆ. ಟನ್‌ ಮರಳು ತೆರವು

Kapu ಟಿಪ್ಪರ್‌ಗೆ ಪಿಕಪ್‌ ಢಿಕ್ಕಿ: ಚಾಲಕ ಗಂಭೀರ

Kapu ಟಿಪ್ಪರ್‌ಗೆ ಪಿಕಪ್‌ ಢಿಕ್ಕಿ: ಚಾಲಕ ಗಂಭೀರ

MUST WATCH

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

ಹೊಸ ಸೇರ್ಪಡೆ

Davanagere; ಭಾರೀ ಮಳೆಗೆ ನೆಲಕಚ್ಚಿದ ಭತ್ತದ ಬೆಳೆ

Davanagere; ಭಾರೀ ಮಳೆಗೆ ನೆಲಕಚ್ಚಿದ ಭತ್ತದ ಬೆಳೆ

Breach Of Privacy….; ಐಪಿಎಲ್ ಪ್ರಸಾರಕರ ವಿರುದ್ಧ ರೇಗಾಡಿದ ರೋಹಿತ್ ಶರ್ಮಾ

Breach Of Privacy….; ಐಪಿಎಲ್ ಪ್ರಸಾರಕರ ವಿರುದ್ಧ ರೇಗಾಡಿದ ರೋಹಿತ್ ಶರ್ಮಾ

15-rain

Rain: ಕಳಸ ತಾಲೂಕಿನಾದ್ಯಂತ ಭಾರೀ ಗಾಳಿ-ಮಳೆ; ಜನಜೀವನ ಅಸ್ತವ್ಯಸ್ತ, ವಿದ್ಯುತ್ ಸಂಪರ್ಕ ಕಡಿತ

ರಾಜ್ಯ ಯಾವ ದಿಕ್ಕಿನತ್ತ ಸಾಗುತ್ತಿದೆ…: ಪ್ರದೀಪ ಶೆಟ್ಟರ

Hubli; ರಾಜ್ಯ ಯಾವ ದಿಕ್ಕಿನತ್ತ ಸಾಗುತ್ತಿದೆ…: ಪ್ರದೀಪ ಶೆಟ್ಟರ

14-panaji

Panaji: ಅಪಾಯಕಾರಿ ಮರ ಕಡಿಯಲು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಸೂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.