ಅಮೆರಿಕದಲ್ಲಿ ಅಪಹರಣಕ್ಕೊಳಗಾಗಿದ್ದ ನಾಲ್ವರು ಭಾರತೀಯರ ಶವಗಳು ಪತ್ತೆ
Team Udayavani, Oct 6, 2022, 2:17 PM IST
ಲಾಸ್ ಏಂಜಲೀಸ್: ಈ ವಾರದ ಆರಂಭದಲ್ಲಿ ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ ಅಪಹರಣಕ್ಕೊಳಗಾದ ಎಂಟು ತಿಂಗಳ ಹೆಣ್ಣು ಮಗು ಸೇರಿದಂತೆ ಸಿಖ್ ಕುಟುಂಬದ ಎಲ್ಲಾ ನಾಲ್ವರು ಶವವಾಗಿ ಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಪಂಜಾಬ್ನ ಹೋಶಿಯಾರ್ಪುರದ ಹರ್ಸಿ ಪಿಂಡ್ ಮೂಲದ ಕುಟುಂಬವನ್ನು ಸೋಮವಾರ ಕ್ಯಾಲಿಫೋರ್ನಿಯಾದ ಮರ್ಸಿಡ್ ಕೌಂಟಿಯಲ್ಲಿ ಅಪಹರಿಸಲಾಗಿತ್ತು.
ಇದನ್ನೂ ಓದಿ: ತಾಯಿ ಹತ್ಯೆಗೆ ಯತ್ನಿಸಿದ ನಿವೃತ್ತ ಸೇನಾಧಿಕಾರಿ
36 ವರ್ಷದ ಜಸ್ದೀಪ್ ಸಿಂಗ್, 27 ವರ್ಷದ ಜಸ್ಲೀನ್ ಕೌರ್, ಅವರ ಎಂಟು ತಿಂಗಳ ಮಗು ಅರೂಹಿ ಧೇರಿ ಮತ್ತು ಮಗುವಿನ ಚಿಕ್ಕಪ್ಪ, 39 ವರ್ಷದ ಅಮನ್ದೀಪ್ ಸಿಂಗ್ ಅವರ ಶವಗಳು ಬುಧವಾರ ಪತ್ತೆಯಾಗಿವೆ ಎಂದು ಮರ್ಸಿಡ್ ಕೌಂಟಿ ಶೆರಿಫ್ ವೆರ್ನ್ ವಾರ್ನ್ಕೆ ತಿಳಿಸಿದ್ದಾರೆ.
ಇಂಡಿಯಾನಾ ರಸ್ತೆ ಮತ್ತು ಹಚಿನ್ಸನ್ ರಸ್ತೆ ಬಳಿಯ ಹಣ್ಣಿನ ತೋಟದಲ್ಲಿ ಕೃಷಿ ಕಾರ್ಮಿಕರೊಬ್ಬರು ಶವಗಳನ್ನು ಕಂಡು ತಕ್ಷಣ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ ಎಂದು ವಾರ್ನ್ಕೆ ಹೇಳಿದರು.
ಮಂಗಳವಾರ, ಅಪಹರಣದಲ್ಲಿ ಪಾತ್ರ ಹೊಂದಿರುವ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದ್ದು, ಮರ್ಸೆಡ್ ಕೌಂಟಿ ನಗರದ ಅಟ್ವಾಟರ್ನಲ್ಲಿರುವ ಎಟಿಎಂನಲ್ಲಿ, ಹತ್ಯೆಗೀಡಾದವರಲ್ಲಿ ಒಬ್ಬರಿಗೆ ಸೇರಿದ ಕ್ರೆಡಿಟ್ ಕಾರ್ಡ್ ಅನ್ನು ಮಂಗಳವಾರ ಬೆಳಗ್ಗೆ ಬಳಸಿದ ನಂತರ 48 ವರ್ಷದ ಜೀಸಸ್ ಮ್ಯಾನುಯೆಲ್ ಸಲ್ಗಾಡೊ ಎಂಬಾತನನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಲ್ಗಾಡೊ ಬಂಧನಕ್ಕೂ ಮುನ್ನ ಆತ್ಮಹತ್ಯೆಗೆ ಯತ್ನಿಸಿದ್ದ ಎಂದು ಪೊಲೀಸರು ತಿಳಿಸಿದ್ದು, ಚಿಂತಾಜನಕ ಸ್ಥಿತಿಯಲ್ಲಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಜನ ಮೋದಿ ಮೋದಿ ಎಂದರೆ ಕಾಂಗ್ರೆಸ್ ಗೆ ಭೇದಿ ಜಾಸ್ತಿಯಾಗುತ್ತೆ ಅದಕ್ಕೆ ಚೆಂಬು ಬಿಡುತ್ತಿಲ್ಲ
Sandalwood: ಬಿಸಿಲ ಧಗೆ ಎಫೆಕ್ಟ್; ಔಟ್ಡೋರ್ ಶೂಟಿಂಗ್ನಿಂದ ಸಿನಿಮಂದಿ ದೂರ
ವಿಧಾನಸಭಾ ಚುನಾವಣೆಯಲ್ಲಿ ಸಿದ್ದು,ಡಿಕೆಶಿ ನನ್ನ ಜತೆ ಕೈ ಜೋಡಿಸಿದ್ದರು:ಗಾಲಿ ಜನಾರ್ದನ ರೆಡ್ಡಿ
Bengaluru water crisis: ನೀರು ಯಾವಾಗ ಬರುತ್ತೆ?: ಮೊಬೈಲಲ್ಲೇ ಮಾಹಿತಿ
Bengaluru: ಫ್ಲೈಓವರ್ಗಳಲ್ಲೂ ಕಸ ಸುರಿಯುವ ವಾಹನ ಸವಾರರು