ತಾಯಿ ಹತ್ಯೆಗೆ ಯತ್ನಿಸಿದ ನಿವೃತ್ತ ಸೇನಾಧಿಕಾರಿ

ಮೂರು ವರ್ಷದ ಹಿಂದೆಯೂ ಕೊಲೆಗೆ ಯತ್ನಿಸಿ ಜೈಲು ಸೇರಿದ್ದ ಆರೋಪಿ

Team Udayavani, Oct 6, 2022, 12:53 PM IST

14

ಬೆಂಗಳೂರು: ಕೋಟ್ಯಂತರ ರೂ. ಆಸ್ತಿಗಾಗಿ ಹೆತ್ತ ತಾಯಿಯ ʼಕೃತಕ ಉಸಿರಾಟ’ ನಿಲ್ಲಿಸಿ ಕೊಲ್ಲಲು ಯತ್ನಿಸಿದ ನಿವೃತ್ತ ಸೇನಾಧಿಕಾರಿಯೊಬ್ಬ ಜೈಲು ಸೇರಿದ್ದಾನೆ.

ಆರ್‌.ಟಿ.ನಗರ ನಿವಾಸಿ ಜಾನ್‌ ಡಿ ಕ್ರೂಸ್‌ (64) ಜೈಲು ಸೇರಿದ ಸೇನಾಧಿಕಾರಿ.

ಈತ ತನ್ನ ತಾಯಿ ಕ್ಯಾಥರಿನ್‌ ಡಿ ಕ್ರೂಸ್‌(88) ಎಂಬುವರನ್ನು ಕೊಲೆಗೈಯಲು ಯತ್ನಿಸಿದ್ದ. ಈ ಸಂಬಂಧ ವೃದ್ಧೆಯ ಕೇರ್‌ ಟೇಕರ್‌ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಕ್ಯಾಥರಿನ್‌ ಡಿ ಕ್ರೂಸ್‌ಗೆ ಮೂವರು ಪುತ್ರರು ಮತ್ತು ಓರ್ವ ಪುತ್ರಿ ಸೇರಿ ದಂತೆ ನಾಲ್ವರು ಮಕ್ಕಳಿದ್ದು, ಇಬ್ಬರು ಅಮೆರಿಕದಲ್ಲಿದ್ದಾರೆ. ತಾಯಿ ಜತೆ ಆರೋಪಿ ನಿವೃತ್ತ ಸೇನಾಧಿಕಾರಿ ಇಲ್ಲಿಯೇ ವಾಸವಾಗಿದ್ದಾನೆ. ಇನ್ನು ಪುತ್ರಿ ಅವಿವಾಹಿತೆಯಾಗಿದ್ದು, ಅನಾಥಶ್ರಮದಲ್ಲಿ ವಾಸವಾಗಿದ್ದಾರೆ. ಆರೋಪಿ ಜಾನ್‌ ಪುತ್ರ ಕೂಡ ಅಮೆರಿಕದಲ್ಲಿ ವಾಸವಾಗಿದ್ದಾನೆ. ಆದರೂ ಈತನಿಗೆ ಆಸ್ತಿ ಮಹಾದಾಸೆ. ಈತನ ವರ್ತನೆಗೆ ಪತ್ನಿ, ಪುತ್ರ ಕೂಡ ಆಕ್ಷೇಪ ವ್ಯಕ್ತಪಡಿಸುತ್ತಿದ್ದು, ತಾಯಿ ಮೇಲೆ ದೌರ್ಜನ್ಯ ಎಸಗದಂತೆ ಬುದ್ಧಿವಾದ ಹೇಳಿದ್ದರು. ಆದರೂ ಈತನ ತಾಯಿಯನ್ನು ಕೊಲೆಗೈಯಲು ಯತ್ನಿಸಿದ್ದಾನೆ ಎಂದು ಪೊಲೀಸರು ಹೇಳಿದರು.

ನಾಲ್ಕು ವರ್ಷಗಳ ಹಿಂದೆಯೇ ಅನಾರೋಗ್ಯಕ್ಕೆ ತುತ್ತಾತ ಕ್ಯಾಥರಿನ್‌ಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಬಳಿಕ ಮನೆಗೆ ಬಂದಾಗ ಆಕೆಯ ನೋಡಿಕೊಳ್ಳಲು ಅಮೆರಿಕದಲ್ಲಿರುವ ಪುತ್ರ ಕೇರ್‌ ಟೇಕರ್‌ವೊಬ್ಬರನ್ನು ನೇಮಿಸಿದ್ದರು. ನಿತ್ಯ ಕೇರ್‌ ಟೇಕರ್‌ ಬಂದು ನೋಡಿಕೊಳ್ಳುತ್ತಿದ್ದರು. ಆದರೆ, ಆರೋಪಿ ತಾಯಿಗೆ ಅಳವಡಿಸಿದ್ದ ಕೃತಕ ಉಸಿರಾಟ ಆಕ್ಸಿಜನ್‌ ಮಾಸ್ಕ್ ತೆಗೆದು ಹತ್ಯೆಗೆ ಯತ್ನಿಸಿದ್ದಾನೆ. ಅದನ್ನು ಗಮನಿಸಿದ ಕೇರ್‌ ಟೇಕರ್‌, ಪ್ರಶ್ನಿಸಿದ್ದಾರೆ. ಆಗ ಆರೋಪಿ ಆಕೆ ಸಾಯಲಿ ಎಂದು ಆಕ್ಸಿಜನ್‌ ಮಾಸ್ಕ್ ತೆಗೆದರೆ, ನೀವು ಹಾಕುತ್ತಿದ್ದಿರಾ ಎಂದೆಲ್ಲ ಪ್ರಶ್ನಿಸಿದ್ದಾನೆ.

ಹೀಗಾಗಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಆದರಿಂದ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ 2019 ಡಿಸೆಂಬರ್‌ನಲ್ಲಿಯೂ ಇದೇ ರೀತಿ ತಾಯಿಯ ಕೊಲೆಗೆ ಯತ್ನಿಸಿದ್ದ. ಆಗ ಕೊಲೆ ಯತ್ನ ಪ್ರಕರಣದಲ್ಲಿ ಜೈಲು ಸೇರಿದ್ದ. ಇದೀಗ ಜಾಮೀನು ಪಡೆದು ಬಿಡುಗಡೆಯಾಗಿದ್ದು, ಮತ್ತೆ ಅದೇ ಕೃತ್ಯದಲ್ಲಿ ತೊಡಗಿದ್ದಾನೆ ಎಂದು ಪೊಲೀಸರು ಹೇಳಿದರು.

ಟಾಪ್ ನ್ಯೂಸ್

ಸಿಗದ ಚಿರತೆ; ತಪ್ಪದ ಆತಂಕ

ಸಿಗದ ಚಿರತೆ; ತಪ್ಪದ ಆತಂಕ

1

ಸೋಮವಾರದ ರಾಶಿ ಫಲ; ವಿದ್ಯಾರ್ಥಿಗಳಿಗೆ, ಉದ್ಯೋಗಸ್ತರಿಗೆ ಉತ್ತಮ ಫ‌ಲಿತಾಂಶ ಸಿಗುವ ಸಮಯ

Kharge

ಕೆಲಸ ಮಾಡಿ; ಇಲ್ಲವೇ ಹುದ್ದೆ ತೊರೆಯಿರಿ: ಮುಖಂಡರಿಗೆ ಕಾಂಗ್ರೆಸ್‌ ಅಧ್ಯಕ್ಷ ಖರ್ಗೆ ಸ್ಪಷ್ಟ ಮಾತು

ಎಂಟು ವರ್ಷಗಳಲ್ಲಿ ದೇಗುಲಕ್ಕೆ 400 ಮೆಟ್ಟಿಲು ನಿರ್ಮಿಸಿದ ಸಾಹಸಿ.!

ಎಂಟು ವರ್ಷಗಳಲ್ಲಿ ದೇಗುಲಕ್ಕೆ 400 ಮೆಟ್ಟಿಲು ನಿರ್ಮಿಸಿದ ಸಾಹಸಿ.!

ಮೆಟ್ಟಿಲಿನಿಂದ ಜಾರಿ ಬಿದ್ದು ಅನಿಯಂತ್ರಿತ ಮಲವಿಸರ್ಜನೆ ಮಾಡಿಕೊಂಡ ಪುಟಿನ್‌.!

ಮೆಟ್ಟಿಲಿನಿಂದ ಜಾರಿ ಬಿದ್ದು ಅನಿಯಂತ್ರಿತ ಮಲವಿಸರ್ಜನೆ ಮಾಡಿಕೊಂಡ ಪುಟಿನ್‌.!

ಇರಾನ್‌ನಲ್ಲಿ ನೈತಿಕ ಪೊಲೀಸ್‌ಗಿರಿ ಅಂತ್ಯ

ಇರಾನ್‌ನಲ್ಲಿ ನೈತಿಕ ಪೊಲೀಸ್‌ಗಿರಿ ಅಂತ್ಯ

ಹಿಂದೂಗಳೇ ಕಾಶ್ಮೀರ ಬಿಟ್ಟು ತೊಲಗಿ: ಟಿಆರ್‌ಎಫ್ ಬೆದರಿಕೆ

ಹಿಂದೂಗಳೇ ಕಾಶ್ಮೀರ ಬಿಟ್ಟು ತೊಲಗಿ: ಟಿಆರ್‌ಎಫ್ ಬೆದರಿಕೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಂಧ್ಯಾ ಪೈ ಅವರ ಬರವಣಿಗೆ ಶೈಲಿಯಲ್ಲಿ ಬುದ್ಧನ ಪ್ರಭಾವ: ಸಾಹಿತಿ ಎಚ್‌.ಎಸ್‌. ವೆಂಕಟೇಶಮೂರ್ತಿ

ಸಂಧ್ಯಾ ಪೈ ಅವರ ಬರವಣಿಗೆ ಶೈಲಿಯಲ್ಲಿ ಬುದ್ಧನ ಪ್ರಭಾವ: ಸಾಹಿತಿ ಎಚ್‌.ಎಸ್‌. ವೆಂಕಟೇಶಮೂರ್ತಿ

12

ಟ್ಯಾಕ್ಸಿ ಚಾಲಕರ ನೇಮಕಾತಿಗೆ ಎನ್‌ಒಸಿ ಕಡ್ಡಾಯ

11

ಮೋಜಿಗಾಗಿ ವಾಹನಗಳ ಕಳ್ಳತನ

10

ವಾಹನ ಕಳ್ಳ ಸೆರೆ: 11 ಬೈಕ್‌, 2 ಆಟೋ ಜಪ್ತಿ

9

ಡ್ರಗ್ಸ್ ದೊರೆ ಕನಸು ಕಂಡಿದ್ದ ಪ್ರೇಮಿಗಳು! ‌

MUST WATCH

udayavani youtube

ನಾಯಿ ಮರಿ ತರುತ್ತಿದ್ದೀರಾ ? ಈ ಅಂಶವನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಿ | ಬೀಗಲ್ ನಾಯಿ

udayavani youtube

ಫ್ಲಿಪ್ ಮಾಡಲು ಏನೆಲ್ಲಾ ತಯಾರಿ ಮಾಡಿಕೊಳ್ಳಬೇಕು

udayavani youtube

ಬಂಡೂರು ಕುರಿ ತಳಿ ಖರೀದಿಸುವ ಮುನ್ನ ಈ ವಿಷಯಗಳ ಬಗ್ಗೆ ನಿಮಗೆ ತಿಳಿದಿರಲಿ

udayavani youtube

ಆರೋಗ್ಯಕ್ಕೂ ರುಚಿಕ್ಕೂ ಉತ್ತಮ ಸಿದ್ದು ಹಲಸು

udayavani youtube

Oxygen Cylinder ಇಲ್ಲದಿದ್ದರೂ ಉಪಯೋಗಕ್ಕೆ ಬರುತ್ತದೆ ಈ machine ! | Girija Surgicals

ಹೊಸ ಸೇರ್ಪಡೆ

ಸಿಗದ ಚಿರತೆ; ತಪ್ಪದ ಆತಂಕ

ಸಿಗದ ಚಿರತೆ; ತಪ್ಪದ ಆತಂಕ

1

ಸೋಮವಾರದ ರಾಶಿ ಫಲ; ವಿದ್ಯಾರ್ಥಿಗಳಿಗೆ, ಉದ್ಯೋಗಸ್ತರಿಗೆ ಉತ್ತಮ ಫ‌ಲಿತಾಂಶ ಸಿಗುವ ಸಮಯ

Kharge

ಕೆಲಸ ಮಾಡಿ; ಇಲ್ಲವೇ ಹುದ್ದೆ ತೊರೆಯಿರಿ: ಮುಖಂಡರಿಗೆ ಕಾಂಗ್ರೆಸ್‌ ಅಧ್ಯಕ್ಷ ಖರ್ಗೆ ಸ್ಪಷ್ಟ ಮಾತು

ಎಂಟು ವರ್ಷಗಳಲ್ಲಿ ದೇಗುಲಕ್ಕೆ 400 ಮೆಟ್ಟಿಲು ನಿರ್ಮಿಸಿದ ಸಾಹಸಿ.!

ಎಂಟು ವರ್ಷಗಳಲ್ಲಿ ದೇಗುಲಕ್ಕೆ 400 ಮೆಟ್ಟಿಲು ನಿರ್ಮಿಸಿದ ಸಾಹಸಿ.!

ಮೆಟ್ಟಿಲಿನಿಂದ ಜಾರಿ ಬಿದ್ದು ಅನಿಯಂತ್ರಿತ ಮಲವಿಸರ್ಜನೆ ಮಾಡಿಕೊಂಡ ಪುಟಿನ್‌.!

ಮೆಟ್ಟಿಲಿನಿಂದ ಜಾರಿ ಬಿದ್ದು ಅನಿಯಂತ್ರಿತ ಮಲವಿಸರ್ಜನೆ ಮಾಡಿಕೊಂಡ ಪುಟಿನ್‌.!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.