ಬೆಂಡೆಕಾಯಿ ಬಾಯಿಗಷ್ಟೇ ರುಚಿಯಲ್ಲ …ಆರೋಗ್ಯಕ್ಕೂ ಒಳ್ಳೆಯದು…

ಬೆಂಡೆಕಾಯಿ ಉಪಯೋಗ ಕೇಳಿದ್ರೆ ಇಂದಿನಿಂದಲೇ ತಿನ್ನಲು ಶುರು ಮಾಡ್ತೀರಾ!

ಶ್ರೀರಾಮ್ ನಾಯಕ್, Nov 11, 2022, 5:50 PM IST

bende kai news health

ಬೆಂಡೆಕಾಯಿ ಬಾಯಿಗಷ್ಟೇ ರುಚಿಯಲ್ಲ .ಆರೋಗ್ಯಕ್ಕೂ ಒಳ್ಳೆಯದು . ಇದರ ಸೇವನೆಯಿಂದ ದೊಡ್ಡ ಕರುಳಿನ ಕ್ಯಾನ್ಸರ್‌, ಮಲಬದ್ಧತೆ ದೂರವಾಗುತ್ತದೆ ಹಾಗೂ ಜೀರ್ಣಕ್ರಿಯೆ ಸುಲಭವಾಗುತ್ತದೆ. ಅಲ್ಲದೆ ಹಿಮೋಗ್ಲೋಬಿನ್‌ ಅಂಶ ಹೆಚ್ಚಾಗಿ ರಕ್ತಹೀನತೆ ದೂರವಾಗುತ್ತದೆ. ಮಾತ್ರವಲ್ಲದೇ ಹೃದಯ ಸಂಬಂಧಿ ಕಾಯಿಲೆ ಇರುವವರಿಗೆ ಬೆಂಡೆಕಾಯಿ ಹೇಳಿ ಮಾಡಿಸಿದ ತರಕಾರಿಯಾಗಿದೆ.

ಬೆಂಡೆಕಾಯಿಂದ ಪಲ್ಯ, ಫ್ರೈ , ಕರಿ, ಸಾಂಬಾರು, ಬೆಂಡೆಕಾಯಿ ಹುಳಿ,ಗೊಜ್ಜು ಹೀಗೆ ನಾನಾ ರೀತಿಯ ಅಡುಗೆಯನ್ನು ಮಾಡಬಹುದು.ಆದರೆ ನಾವು ಇಂದು ನಿಮಗಾಗಿ ಬೆಂಡೆಕಾಯಿ ಮಸಾಲ ಫ್ರೈ ಮತ್ತು ಬೆಂಡೆ ಪಲ್ಯವನ್ನು ಮಾಡುವ ವಿಧಾನವನ್ನು ತಿಳಿಸುತ್ತಿದ್ದೇವೆ.

ಬೆಂಡೆಕಾಯಿ ಮಸಾಲ ಫ್ರೈ

ಬೇಕಾಗುವ ಸಾಮಗ್ರಿಗಳು
ಬೆಂಡೆಕಾಯಿ-10ರಿಂದ 15, ಕೊತ್ತಂಬರಿ ಪುಡಿ-1ಚಮಚ, ಜೀರಿಗೆ ಪುಡಿ-ಅರ್ಧ ಚಮಚ, ಖಾರದ ಪುಡಿ-1ಚಮಚ, ಜೀರಿಗೆ ಪುಡಿ-ಸ್ವಲ್ಪ, ಕರಿಯಲು ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ
ಮೊದಲಿಗೆ ಬೆಂಡೆಕಾಯಿಯನ್ನು ಚೆನ್ನಾಗಿ ನೀರಿನಲ್ಲಿ ತೊಳೆದು ,ಒರೆಸಿ ಅದರಲ್ಲಿ ನೀರಿನಂಶ ಇದ್ದರೆ ತೆಗೆಯಿರಿ. ತದನಂತರ ಅದನ್ನು ಉದ್ದವಾಗಿ ಎರಡು ಭಾಗವಾಗಿ ಕಟ್‌ ಮಾಡಿ ಒಂದು ಬೌಲ್‌ ಗೆ ಹಾಕಿರಿ. ಆಮೇಲೆ ಇದಕ್ಕೆ ಜೀರಿಗೆ ಪುಡಿ, ಖಾರದ ಪುಡಿ, ಕೊತ್ತಂಬರಿ ಪುಡಿ, ಒಂದು ಚಮಚ ಎಣ್ಣೆ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ನಂತರ ಒಂದು ಬಾಣಲೆಗೆ ಎಣ್ಣೆ ಹಾಕಿ, ಕಾದನಂತರ ಮಿಶ್ರಣಮಾಡಿಟ್ಟ ಬೆಂಡೆಕಾಯಿಯನ್ನು ಹಾಕಿ ಎಣ್ಣೆಯಲ್ಲಿ ಕರಿಯಿರಿ.ಚಿಪ್ಸ್‌ ತರ ಗರಿಗರಿಯಾಗಿ ಕರಿದರೆ ರುಚಿಕರವಾದ ಬೆಂಡೆ ಮಸಾಲ ಫ್ರೈ ಸವಿಯಲು ಸಿದ್ಧ.

ಬೆಂಡೆಕಾಯಿ ಪಲ್ಯ

ಬೇಕಾಗುವ ಸಾಮಗ್ರಿಗಳು
ಬೆಂಡೆಕಾಯಿ-20ರಿಂದ 25, ಸಾಸಿವೆ-1ಚಮಚ, ಜೀರಿಗೆ-ಅರ್ಧ ಚಮಚ, ಟೊಮೆಟೋ -1, ಅರಿಶಿನ ಪುಡಿ-ಸ್ವಲ್ಪ, ಗರಂ ಮಸಾಲ-ಅರ್ಧ ಚಮಚ, ಖಾರದ ಪುಡಿ-2ಚಮಚ, ಈರುಳ್ಳಿ -1, ಶುಂಠಿ-ಬೆಳ್ಳುಳ್ಳಿ ಪೇಸ್ಟ್‌-1ಚಮಚ, ಎಣ್ಣೆ-3 ಚಮಚ, ಕಸೂರಿ ಮೇಥಿ-ಸ್ವಲ್ಪ ಮತ್ತು ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ
ಮೊದಲಿಗೆ ಬೆಂಡೆಕಾಯಿಯನ್ನು ತೊಳೆದು ಸಣ್ಣದಾಗಿ ಹೆಚ್ಚಿರಿ. ನಂತರ ಒಂದು ಬಾಣಲೆಗೆ 2ಚಮಚ ಎಣ್ಣೆಯನ್ನು ಹಾಕಿ ಕಟ್‌ ಮಾಡಿಟ್ಟ ಬೆಂಡೆಕಾಯಿಯನ್ನು ಹಾಕಿ 2ರಿಂದ 3 ನಿಮಿಷಗಳ ಕಾಲ ಹುರಿದಿಟ್ಟುಕೊಳ್ಳಿ. ತದನಂತರ ಒಂದು ಪಾತ್ರೆಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಸಾಸಿವೆ,ಈರುಳ್ಳಿ,ಟೊಮೆಟೋ,ಶುಂಠಿ-ಬೆಳ್ಳುಳ್ಳಿ ಪೇಸ್ಟ್‌ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಬೇಯಿಸಿರಿ.ನಂತರ ಅರಿಶಿನ ಪುಡಿ,ಖಾರದ ಪುಡಿ,ಕಸೂರಿ ಮೇಥಿ,ಗರಂ ಮಸಾಲ ಪುಡಿ ಹಾಗೂ ಹುರಿದಿಟ್ಟ ಬೆಂಡೆಕಾಯಿ ಹಾಕಿ ಸರಿಯಾಗಿ ಮಿಶ್ರಣ ಮಾಡಿ ಬೇಯಿಸಿದರೆ ಬೆಂಡೆಕಾಯಿ ಪಲ್ಯ ಸವಿಯಲು ಸಿದ್ಧ. ಇದು ಚಪಾತಿ ಹಾಗೂ ಅನ್ನದ ಜೊತೆಗೆ ಚೆನ್ನಾಗಿ ಹೊಂದುತ್ತದೆ.

ಟಾಪ್ ನ್ಯೂಸ್

BJP will get a big win in South India: Amit Shah

Election; ದಕ್ಷಿಣ ಭಾರತದಲ್ಲಿ ಬಿಜೆಪಿಗೆ ದೊಡ್ಡ ಗೆಲುವು ಸಿಗಲಿದೆ: ಅಮಿತ್ ಶಾ ವಿಶ್ವಾಸ

CM ಹುದ್ದೆಯಿಂದ ಕೇಜ್ರಿವಾಲ್‌ ವಜಾಗೊಳಿಸಿ: ಪಿಐಎಲ್‌ ವಜಾಗೊಳಿಸಿದ ಸುಪ್ರೀಂಕೋರ್ಟ್

CM ಹುದ್ದೆಯಿಂದ ಕೇಜ್ರಿವಾಲ್‌ ವಜಾಗೊಳಿಸಿ: ಪಿಐಎಲ್‌ ವಜಾಗೊಳಿಸಿದ ಸುಪ್ರೀಂಕೋರ್ಟ್

Video: ಮತದಾನ ಮಾಡಲು ಸರತಿ ಸಾಲಿನಲ್ಲಿ ನಿಂತಿದ್ದ ಮತದಾರನಿಗೆ ಶಾಸಕನಿಂದ ಕಪಾಳಮೋಕ್ಷ

Video: ಮತದಾನ ಮಾಡಲು ಸರತಿ ಸಾಲಿನಲ್ಲಿ ನಿಂತಿದ್ದ ಮತದಾರನಿಗೆ ಶಾಸಕನಿಂದ ಕಪಾಳಮೋಕ್ಷ

8

Marathi TV actor: ವೇದಿಕೆಯಲ್ಲೇ ಕುಸಿದು ಬಿದ್ದು ಮೃತಪಟ್ಟ ಖ್ಯಾತ ಹಿರಿಯ ನಟ

BOULT BassBox X120

Smart Home Audio; ಸೌಂಡ್ ಬಾರ್ ಕ್ಷೇತ್ರಕ್ಕೆ ಕಾಲಿಟ್ಟ BOULT: ಎರಡು ಸೌಂಡ್ ಬಾರ್ ಬಿಡುಗಡೆ

7

Bigg Boss OTT 3: ಈ ಬಾರಿ ಸಲ್ಮಾನ್‌ ಖಾನ್ ಅನುಮಾನ; ಬೇರೆ ನಿರೂಪಕರತ್ತ ಆಯೋಜಕರ ಚಿತ್ತ

Old Is Gold; ರೀ ರಿಲೀಸ್‌ನತ್ತ ಸ್ಟಾರ್‌ ಸಿನಿಮಾಗಳು

Old Is Gold; ರೀ ರಿಲೀಸ್‌ನತ್ತ ಸ್ಟಾರ್‌ ಸಿನಿಮಾಗಳು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World Mother’s Day 2024: ಅಮ್ಮನಾಗಿ ಅಮ್ಮನನ್ನು ಅರಿತಾಗ….

World Mother’s Day 2024: ಅಮ್ಮನಾಗಿ ಅಮ್ಮನನ್ನು ಅರಿತಾಗ….

Bado Badi Hoye Hoye.. ಎಲ್ಲಿ ನೋಡಿದರೂ ಈ ಹಾಡಿನದ್ದೇ ಹವಾ.. ಇದನ್ನು ಹಾಡಿದವರು ಯಾರು?

Bado Badi Hoye Hoye.. ಎಲ್ಲಿ ನೋಡಿದರೂ ಈ ಹಾಡಿನದ್ದೇ ಹವಾ.. ಇದನ್ನು ಹಾಡಿದವರು ಯಾರು?

Mount Rushmore National Memorial: ಮೌಂಟ್‌ ರಶ್ಮೋರ್‌ನ ಸಿಕ್ಸ್‌ ಗ್ರಾಂಡ್‌ ಫಾದರ್ಸ್‌

Mount Rushmore National Memorial: ಮೌಂಟ್‌ ರಶ್ಮೋರ್‌ನ ಸಿಕ್ಸ್‌ ಗ್ರಾಂಡ್‌ ಫಾದರ್ಸ್‌

8

ಅಮಿತಾಭ್‌ ಟು ಶಾರುಖ್:‌ ಇಂದು ಕೋಟಿ ಕುಳರಾದ ಈ ನಟರ ಮೊದಲ ಸಂಪಾದನೆ ಎಷ್ಟಾಗಿತ್ತು ಗೊತ್ತಾ?

1-assas-aa

Rae Bareli ರಣಕಣ; ನಾಮಪತ್ರ ಸಲ್ಲಿಸಿದ ರಾಹುಲ್ ಗಾಂಧಿ: ಗೆಲುವು ಸುಲಭವೇ?

MUST WATCH

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

ಹೊಸ ಸೇರ್ಪಡೆ

BJP will get a big win in South India: Amit Shah

Election; ದಕ್ಷಿಣ ಭಾರತದಲ್ಲಿ ಬಿಜೆಪಿಗೆ ದೊಡ್ಡ ಗೆಲುವು ಸಿಗಲಿದೆ: ಅಮಿತ್ ಶಾ ವಿಶ್ವಾಸ

Bomb threat: ನಗರದ ಪ್ರತಿಷ್ಠಿತ 6 ಆಸ್ಪತ್ರೆಗಳಿಗೆ ಇ-ಮೇಲ್‌ ಬಾಂಬ್‌ ಬೆದರಿಕೆ

Bomb threat: ನಗರದ ಪ್ರತಿಷ್ಠಿತ 6 ಆಸ್ಪತ್ರೆಗಳಿಗೆ ಇ-ಮೇಲ್‌ ಬಾಂಬ್‌ ಬೆದರಿಕೆ

Harassment: ಸಹೋದ್ಯೋಗಿ ಯುವತಿ ಮೇಲೆ ಲೈಂಗಿಕ ಕಿರುಕುಳ ಆರೋಪ; ಕೇಸ್‌

Harassment: ಸಹೋದ್ಯೋಗಿ ಯುವತಿ ಮೇಲೆ ಲೈಂಗಿಕ ಕಿರುಕುಳ ಆರೋಪ; ಕೇಸ್‌

9

ನೂರಾರು ರೋಗಿಗಳ ಹಸಿವು ನೀಗಿಸುವ ಸೈಯ್ಯದ್‌

CM ಹುದ್ದೆಯಿಂದ ಕೇಜ್ರಿವಾಲ್‌ ವಜಾಗೊಳಿಸಿ: ಪಿಐಎಲ್‌ ವಜಾಗೊಳಿಸಿದ ಸುಪ್ರೀಂಕೋರ್ಟ್

CM ಹುದ್ದೆಯಿಂದ ಕೇಜ್ರಿವಾಲ್‌ ವಜಾಗೊಳಿಸಿ: ಪಿಐಎಲ್‌ ವಜಾಗೊಳಿಸಿದ ಸುಪ್ರೀಂಕೋರ್ಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.