ಕೋಳಿ ಅಂಗಡಿ ಬೇಡ ಎಂದ ಮಾಲೀಕನ ಹತ್ಯೆ

Team Udayavani, Jul 18, 2023, 1:40 PM IST

ಕೋಳಿ ಅಂಗಡಿ ಬೇಡ ಎಂದ ಮಾಲೀಕನ ಹತ್ಯೆ

ಬೆಂಗಳೂರು: ಮನೆ ಮುಂದೆ ಚಿಕನ್‌ ಅಂಗಡಿ ತೆರೆಯಬೇಡ ಎಂದ ಐಟಿಐ ನಿವೃತ್ತ ಎಂಜಿನಿಯರ್‌ ರನ್ನು ಕೋಳಿ ವ್ಯಾಪಾರಿ ಮತ್ತು ಆತನ ಪುತ್ರ ಹತ್ಯೆಗೈದಿರುವ ಘಟನೆ ಜೆ.ಪಿ.ನಗರ 30ನೇ ಮುಖ್ಯ ರಸ್ತೆಯಲ್ಲಿ ಸೋಮವಾರ ನಡೆದಿದೆ.

ಜೆ.ಪಿ.ನಗರ ನಿವಾಸಿ ಕೆ.ವೆಂಕಟೇಶಪ್ಪ(75) ಕೊಲೆ ಯಾದವರು. ಕೃತ್ಯ ಎಸಗಿದ ಬಳಿಕ ಬಸವೇಶ್ವರನಗರ ನಿವಾಸಿ ನಾಗರಾಜು (51) ಮತ್ತು ಆತನ ಪುತ್ರ ಅಭಿಷೇಕ್‌(26) ಪೊಲೀಸ್‌ ಠಾಣೆಗೆ ಬಂದು ಶರಣಾಗಿದ್ದಾರೆ.

ವೆಂಕಟೇಶಪ್ಪ ಐಟಿಐ ನಿವೃತ್ತ ಎಂಜಿನಿಯರ್‌ ಆಗಿದ್ದು, ಜೆ.ಪಿ.ನಗರದಲ್ಲಿ ಪತ್ನಿ ಮಂಜುಳಾ ಜತೆ ವಾಸವಾಗಿದ್ದಾರೆ. ಬಸವೇಶ್ವರನಗರದಲ್ಲಿ ಮತ್ತೂಂದು ಮನೆಯಿದ್ದು, ಬಾಡಿಗೆ ನೀಡಿದ್ದಾರೆ. ಈ ಮನೆ ಮುಂಭಾಗ ಹೊಸದಾಗಿ ಆರೋಪಿಗಳು ಕೋಳಿ ಅಂಗಡಿ ತೆರೆದಿದ್ದರು. ಆದರೆ, ಬಾಡಿಗೆದಾರರು ಹಾಗೂ ಸ್ಥಳೀಯರು ಈ ಅಂಗಡಿಯಿಂದ ದುರ್ವಾಸನೆ ಬರುತ್ತದೆ ಖಾಲಿ ಮಾಡಿಸುವಂತೆ ವೆಂಕಟೇಶಪ್ಪನಿಗೆ ಹೇಳಿದ್ದರು. ಒಂದು ವೇಳೆ ಖಾಲಿ ಮಾಡಿಸದಿದ್ದರೆ ಮನೆ ಖಾಲಿ ಮಾಡುವುದಾಗಿ ಹೇಳಿದ್ದರು. ಹೀಗಾಗಿ ವೆಂಕಟೇಶಪ್ಪ ಆರೋಪಿಗಳಿಗೆ ಅಂಗಡಿ ಖಾಲಿ ಮಾಡುವಂತೆ ತಾಕೀತು ಮಾಡಿದ್ದರು. ಆದರೆ, ಆರೋಪಿಗಳು ಲಕ್ಷಾಂತರ ರೂ. ಹೂಡಿಕೆ ಮಾಡಿದ್ದೇವೆ. ಖಾಲಿ ಮಾಡಲು ಸಾಧ್ಯವಿಲ್ಲ ಎಂದಿದ್ದರು. ಆದರೆ, ವೆಂಕಟೇಶಪ್ಪ ಖಾಲಿ ಮಾಡಿದಿದ್ದರೆ ಬಿಬಿಎಂಪಿ ಹಾಗೂ ಸಂಬಂಧಿಸಿದ ಇಲಾಖೆಗೆ ಮಾಹಿತಿ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು. ಬಿಬಿಎಂಪಿ ಅಧಿಕಾರಿಗಳು ಕೋಳಿ ಅಂಗಡಿ ಬಳಿ ಬಂದು ಎಚ್ಚರಿಕೆ ನೀಡಿದ್ದರು.

ಡ್ರ್ಯಾಗರ್‌ನಿಂದ ಇರಿದು ಕೊಲೆ: ಅದರಿಂದ ಕೋಪಗೊಂಡು ಆರೋಪಿಗಳು ಸೋಮವಾರ ಮಧ್ಯಾಹ್ನ ಜೆ.ಪಿ.ನಗರದಲ್ಲಿರುವ ವೆಂಕಟೇಶಪ್ಪನ ಮನೆಗೆ ಬಂದಿದ್ದು, ಪರಿಚಯಸ್ಥರಾಗಿದ್ದರಿಂದ ಬಾಗಿಲು ತೆರೆದು ವೆಂಕಟೇಶಪ್ಪ ಒಳಗೆ ಬರುವಂತೆ ಹೇಳಿದ್ದಾರೆ. ಆಗ ಮಂಜುಳಾ ಅವರು ಕಾಫಿ ತರಲು ಅಡುಗೆ ಮನೆಗೆ ಹೋಗಿದ್ದಾರೆ. ಈ ವೇಳೆ ಆರೋಪಿಗಳು, ಕೋಳಿ ಅಂಗಡಿ ವಿಚಾರವಾಗಿ ವೆಂಕಟೇಶಪ್ಪ ಜತೆ ಜಗಳ ತೆಗೆದು ಏಕಾಏಕಿ ಡ್ರ್ಯಾಗರ್‌ ನಿಂದ ಇರಿದು ಕೊಲೆಗೈದು ಪರಾರಿಯಾಗಿದ್ದರು. ಮಂಜುಳಾ ಅವರ ಕೂಗಾಟದ ಸದ್ದು ಕೇಳಿ ಸ್ಥಳೀಯರು ಬಂದು ಗಾಯಾಳುನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ತೀವ್ರ ರಕ್ತಸ್ರಾವವಾಗಿದ್ದರಿಂದ ವೆಂಕಟೇಶಪ್ಪ ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲಿಸಿ ಆರೋಪಿಗಳ ಪತ್ತೆ ಕಾರ್ಯದಲ್ಲಿ ತೊಡಗಿದ್ದರು. ಅಷ್ಟರಲ್ಲಿ ಆರೋಪಿಗಳೇ ಪೊಲೀಸ್‌ ಠಾಣೆಗೆ ಬಂದು ಶರಣಾಗಿದ್ದಾರೆ ಎಂಬುದು ಪೊಲೀಸರು ಮಾಹಿತಿ ನೀಡಿದರು.

ಟಾಪ್ ನ್ಯೂಸ್

Gundmi Toll Plaza ಸ್ಥಳೀಯರಿಗೆ ಟೋಲ್‌ ಬರೆ; ಟೋಲ್‌ಗೆ ಮುತ್ತಿಗೆ; ರಸ್ತೆ ತಡೆ ಪ್ರತಿಭಟನೆ

Gundmi Toll Plaza ಸ್ಥಳೀಯರಿಗೆ ಟೋಲ್‌ ಬರೆ; ಟೋಲ್‌ಗೆ ಮುತ್ತಿಗೆ; ರಸ್ತೆ ತಡೆ ಪ್ರತಿಭಟನೆ

D.K. ಜಿಲ್ಲೆಯಲ್ಲಿ ಗುಡುಗು ಸಹಿತ ಉತ್ತಮ ಮಳೆ;  ಇನ್ನೂ ನಾಲ್ಕು ದಿನ “ಎಲ್ಲೋ ಅಲರ್ಟ್‌’D.K. ಜಿಲ್ಲೆಯಲ್ಲಿ ಗುಡುಗು ಸಹಿತ ಉತ್ತಮ ಮಳೆ;  ಇನ್ನೂ ನಾಲ್ಕು ದಿನ “ಎಲ್ಲೋ ಅಲರ್ಟ್‌’

D.K. ಜಿಲ್ಲೆಯಲ್ಲಿ ಗುಡುಗು ಸಹಿತ ಉತ್ತಮ ಮಳೆ;  ಇನ್ನೂ ನಾಲ್ಕು ದಿನ “ಎಲ್ಲೋ ಅಲರ್ಟ್‌’

ದೋಣಿಗಳು ಢಿಕ್ಕಿಯಾಗಿ ಮುಳುಗಡೆ; ಐವರು ಮೀನುಗಾರರ‌ ರಕ್ಷಣೆ

Malpe ದೋಣಿಗಳು ಢಿಕ್ಕಿಯಾಗಿ ಮುಳುಗಡೆ; ಐವರು ಮೀನುಗಾರರ‌ ರಕ್ಷಣೆ

naksal (2)

Chhattisgarh; ನಿಲ್ಲದ ನಕ್ಸಲ್‌ ಬೇಟೆ: ಓರ್ವನ ಹತ್ಯೆ

prahlad-joshi

Congress ಪಕ್ಷದಿಂದ ಅಂಬೇಡ್ಕರ್‌ಗೆ ಅಗೌರವ: ಸಚಿವ ಜೋಶಿ ಆರೋಪ

Naturals Ice Cream; ಬಾಲ್ಯದ ಹಣ್ಣಿನ ಸಖ್ಯ ಬದುಕಿನ ಗುರಿಯ ಗಿರಿಯ ಮುಟ್ಟಿಸಿತು

Naturals Ice Cream; ಬಾಲ್ಯದ ಹಣ್ಣಿನ ಸಖ್ಯ ಬದುಕಿನ ಗುರಿಯ ಗಿರಿಯ ಮುಟ್ಟಿಸಿತು

Naturals Ice Cream; ರಘುನಂದನ ಕಾಮತ್‌ ಪಂಚಭೂತಗಳಲ್ಲಿ ಲೀನ

Naturals Ice Cream; ರಘುನಂದನ ಕಾಮತ್‌ ಪಂಚಭೂತಗಳಲ್ಲಿ ಲೀನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Crime: ಜಗಳ ವೇಳೆ ತಳ್ಳಿದಾಗ ವಿದ್ಯುತ್‌ ತಂತಿ ಮೇಲೆ ಬಿದ್ದ ಯುವಕ ಸಾವು: 2 ಆರೋಪಿಗಳ ಬಂಧನ

Crime: ಜಗಳ ವೇಳೆ ತಳ್ಳಿದಾಗ ವಿದ್ಯುತ್‌ ತಂತಿ ಮೇಲೆ ಬಿದ್ದ ಯುವಕ ಸಾವು: 2 ಆರೋಪಿಗಳ ಬಂಧನ

7

ಇನ್‌ಸ್ಪೆಕ್ಟರ್‌ ಹೆಸರಲ್ಲಿ ಸುಲಿಗೆ: ಬೆಸ್ಕಾಂ ಎಂಜಿನಿಯರ್‌ ಸೆರೆ

Bengaluru: 14 ಲಕ್ಷ ರೂ. ಒಡವೆ ಕದಿದ್ದ ಬಾಲಕ ವಶಕ್ಕೆ

Bengaluru: 14 ಲಕ್ಷ ರೂ. ಒಡವೆ ಕದಿದ್ದ ಬಾಲಕ ವಶಕ್ಕೆ

Bengaluru: ಬೆದರಿಸಲು ನೇಣಿಗೆ ಕೊರಳೊಡ್ಡಿದ ಪತಿ ದಿಢೀರ್‌ ಕುಣಿಕೆ ಬಿಗಿದು ಸಾವು

Bengaluru: ಬೆದರಿಸಲು ನೇಣಿಗೆ ಕೊರಳೊಡ್ಡಿದ ಪತಿ ದಿಢೀರ್‌ ಕುಣಿಕೆ ಬಿಗಿದು ಸಾವು

Fraud: ಗೃಹ ಸಚಿವರ ಆಪ್ತ ಎಂದು ನಂಬಿಸಿ ಹಲವರಿಗೆ ವಂಚನೆ

Fraud: ಗೃಹ ಸಚಿವರ ಆಪ್ತ ಎಂದು ನಂಬಿಸಿ ಹಲವರಿಗೆ ವಂಚನೆ

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

Gundmi Toll Plaza ಸ್ಥಳೀಯರಿಗೆ ಟೋಲ್‌ ಬರೆ; ಟೋಲ್‌ಗೆ ಮುತ್ತಿಗೆ; ರಸ್ತೆ ತಡೆ ಪ್ರತಿಭಟನೆ

Gundmi Toll Plaza ಸ್ಥಳೀಯರಿಗೆ ಟೋಲ್‌ ಬರೆ; ಟೋಲ್‌ಗೆ ಮುತ್ತಿಗೆ; ರಸ್ತೆ ತಡೆ ಪ್ರತಿಭಟನೆ

ec-aa

Election data ಏರಿಕೆ ಬಗ್ಗೆ ಪ್ರತಿಕ್ರಿಯಿಸಿ: ಇಸಿಗೆ ಸುಪ್ರೀಂ

D.K. ಜಿಲ್ಲೆಯಲ್ಲಿ ಗುಡುಗು ಸಹಿತ ಉತ್ತಮ ಮಳೆ;  ಇನ್ನೂ ನಾಲ್ಕು ದಿನ “ಎಲ್ಲೋ ಅಲರ್ಟ್‌’D.K. ಜಿಲ್ಲೆಯಲ್ಲಿ ಗುಡುಗು ಸಹಿತ ಉತ್ತಮ ಮಳೆ;  ಇನ್ನೂ ನಾಲ್ಕು ದಿನ “ಎಲ್ಲೋ ಅಲರ್ಟ್‌’

D.K. ಜಿಲ್ಲೆಯಲ್ಲಿ ಗುಡುಗು ಸಹಿತ ಉತ್ತಮ ಮಳೆ;  ಇನ್ನೂ ನಾಲ್ಕು ದಿನ “ಎಲ್ಲೋ ಅಲರ್ಟ್‌’

ದೋಣಿಗಳು ಢಿಕ್ಕಿಯಾಗಿ ಮುಳುಗಡೆ; ಐವರು ಮೀನುಗಾರರ‌ ರಕ್ಷಣೆ

Malpe ದೋಣಿಗಳು ಢಿಕ್ಕಿಯಾಗಿ ಮುಳುಗಡೆ; ಐವರು ಮೀನುಗಾರರ‌ ರಕ್ಷಣೆ

naksal (2)

Chhattisgarh; ನಿಲ್ಲದ ನಕ್ಸಲ್‌ ಬೇಟೆ: ಓರ್ವನ ಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.