Mahatma Gandhi; ಕರಾವಳಿಯಲ್ಲಿ ಸ್ವಚ್ಛ ನಗರ-ಗ್ರಾಮದ ಮಹಾ ಸಂಕಲ್ಪ

ಗಾಂಧೀಜಿ ಜನ್ಮದಿನದ ಸ್ಮರಣಾರ್ಥ; ಅ. 2ರ ವರೆಗೆ ಸ್ವಚ್ಛತಾ ಆಂದೋಲನ

Team Udayavani, Sep 19, 2023, 7:15 AM IST

Mahatma Gandhi; ಕರಾವಳಿಯಲ್ಲಿ ಸ್ವಚ್ಛ ನಗರ-ಗ್ರಾಮದ ಮಹಾ ಸಂಕಲ್ಪ

ಮಂಗಳೂರು: ಮಹಾತ್ಮಾ ಗಾಂಧೀಜಿಯವರ ಜನ್ಮದಿನದ ಸ್ಮರಣಾರ್ಥವಾಗಿ ಕರಾವಳಿಯ ಗ್ರಾಮೀಣ ಹಾಗೂ ನಗರ ಭಾಗದಲ್ಲಿ ಸ್ವಚ್ಛತ ಆಂದೋಲನ ಸದ್ದಿಲ್ಲದೆ ನಡೆಯುತ್ತಿದ್ದು,ಅ. 2ರ ವರೆಗೆ ಜಾರಿಯಲ್ಲಿ ಇರಲಿದೆ.

ಕೇಂದ್ರ ಸರಕಾರದ ಜಲಶಕ್ತಿ ಮಂತ್ರಾಲಯದ ನಿರ್ದೇಶನದ ಮೇರೆಗೆ ಜಿಲ್ಲೆಯ ಎಲ್ಲ ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಪಂಚಾಯತ್‌ ಮಟ್ಟದಲ್ಲಿ ಸ್ವಚ್ಛತ ಆಂದೋಲನ ಕೈಗೆತ್ತಿಕೊಳ್ಳಲಾಗಿದೆ. ಸೆ. 15ರಿಂದ ಅ. 2ರ ವರೆಗೆ ಪ್ರತೀ ಜಿಲ್ಲೆಯಲ್ಲಿ “ಸ್ವಚ್ಛತೆಯೇ ಸೇವೆ’ ಎಂಬ ಹೆಸರಿನ ವಿಶೇಷ ಆಂದೋಲನವಿದು.

“ಕಸಮುಕ್ತ, ತ್ಯಾಜ್ಯಮುಕ್ತ ಭಾರತ’ ಎಂಬ ಘೋಷವಾಕ್ಯ ಇದ್ದು ಎಲ್ಲೆಡೆ ಸ್ವಚ್ಛತೆ ಸಾಧಿಸಿ ಸ್ವಚ್ಛ ಸುಂದರ, ಸದೃಢ ಗ್ರಾಮ-ನಗರವನ್ನು ರೂಪಿಸಲು ಪ್ರಯತ್ನ ನಡೆಯುತ್ತಿದೆಎಲ್ಲ ಕಡೆಗಳಲ್ಲಿ ಹೆಚ್ಚು ಜನಜಂಗುಳಿ ಇರುವ ಸ್ಥಳ ಗಳಾದ ಬಸ್‌ ನಿಲ್ದಾಣ, ರೈಲು ನಿಲ್ದಾಣ, ಸಮುದ್ರ ತೀರ ಪ್ರದೇಶ, ನದಿ ತೀರ, ಸಾಂಸ್ಥಿಕ-ಸಮುದಾಯ ಭವನ, ಪ್ರವಾಸಿ ತಾಣಗಳು, ಐತಿಹಾಸಿಕ ಸ್ಮಾರಕಗಳು ಮುಂತಾದ ಸ್ಥಳಗಳಲ್ಲಿ ಸ್ವಚ್ಛತೆಯ ಕುರಿತು ಜಾಗೃತಿ-ಶ್ರಮದಾನ ಹಾಗೂ ವಿವಿಧ ಚಟುವಟಿಕೆಗಳನ್ನು ಆಯೋಜಿಸಲಾಗುತ್ತದೆ. ಕಸ ಬೀಳುವ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡಲು ಆದ್ಯತೆ ನೀಡಲಾಗುತ್ತದೆ.

ವಿವಿಧೆಡೆ ಶ್ರಮದಾನ
ಸ್ಥಳೀಯ ಸಂಸ್ಥೆ- ಪಂಚಾಯತ್‌ ವ್ಯಾಪ್ತಿಯಲ್ಲಿ ಶ್ರಮದಾನ ಮಾಡುವ ಮೂಲಕ ಸ್ವಚ್ಛನಗರ-ಗ್ರಾಮದ ಸಂಕಲ್ಪ ತೊಡಲಾಗಿದೆ.

“ಅಂಗನವಾಡಿ, ಆಸ್ಪತ್ರೆ, ಅಂಗಡಿ ಪ್ರದೇಶಗಳು, ಸರಕಾರಿ, ಸಮುದಾಯಾಧಾರಿತ ಕಟ್ಟಡಗಳಲ್ಲಿ ಪ್ಲಾಸ್ಟಿಕ್‌ ಬಳಕೆಗೆ ಕಡಿವಾಣ, ಎಲ್ಲೆಂದರಲ್ಲಿ ಉಗುಳುವುದು ಕಡಿಮೆ ಮಾಡಲು ಸ್ವಚ್ಛತಾ ಪ್ರತಿಜ್ಞೆ, ಬಟ್ಟೆ ಚೀಲ ಬಳಸಲು ಪ್ರೇರಣೆ ನೀಡುವುದು. ಶಾಲಾ ಕಾಲೇಜುಗಳಲ್ಲಿ ನೈರ್ಮಲ್ಯ ಗುಂಪು ರಚನೆ, ಮನೆಗಳಲ್ಲಿ ಹೆಚ್ಚು ಪ್ಲಾಸ್ಟಿಕ್‌ ವಸ್ತು ಸಂಗ್ರಹ ಮಾಡುವವರಿಗೆ ವಿಶೇಷ ಪ್ರೋತ್ಸಾಹ, ನೈರ್ಮಲ್ಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವವರನ್ನು ಗೌರವಿಸುವುದು ಸಹಿತ ಹಲವು ಕ್ರಮಗಳ ಮೂಲಕ ಸ್ವಚ್ಛತ ಆಂದೋಲನ ನಡೆಸಲಾಗುತ್ತಿದೆ’ ಎಂದು ಜಿ.ಪಂ.ಸಿಇಒ ಡಾ| ಆನಂದ್‌ ಕೆ. ತಿಳಿಸಿದ್ದಾರೆ.

“ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿದೆ. ಮೊದಲಿಗೆ ಸೊಳ್ಳೆ ನಿಯಂತ್ರಣಕ್ಕಾಗಿ ವಿಶೇಷ ಆಂದೋಲನ ಶುರು ಮಾಡಲಾಗಿದೆ. ಎಲ್ಲ ಕಡೆಗಳಲ್ಲಿಯೂ ಫಾಗಿಂಗ್‌ ನಡೆಸಲಾಗುತ್ತಿದೆ’ ಎನ್ನುತ್ತಾರೆ ಮಂಗಳೂರು ಪಾಲಿಕೆ ಆಯುಕ್ತ ಆನಂದ್‌ ಸಿ.ಎಲ್‌.

ಆಂದೋಲನ ಸ್ವರೂಪ
-ಸ್ವಚ್ಛತೆಗಾಗಿ ಪ್ರತ್ಯೇಕ ಶ್ರಮದಾನ
-ಕಸ ಎಸೆಯುವ ಸ್ಥಳಗಳ ಸ್ವಚ್ಛತೆ-ಅರಿವು ಮೂಡಿಸುವುದು
-ನದಿ-ಸಮುದ್ರ ಸಹಿತ ಜಲಮೂಲದ ಸಮೀಪದ ಪ್ರದೇಶ ಸ್ವಚ್ಛತೆ
-ಏಕಬಳಕೆ ಪ್ಲಾಸ್ಟಿಕ್‌ ಬಳಕೆ ನಿಷೇಧ ಕುರಿತು ಜಾಗೃತಿ
-ರಸ್ತೆ ಬದಿ ತ್ಯಾಜ್ಯ ಎಸೆಯುವವರಿಗೆ ದಂಡ ಹಾಗೂ ಜಾಗೃತಿ
-ಅ. 2ರಂದು ವಿಶೇಷ ಗ್ರಾಮ ಸಭೆ
-ಸ್ವಚ್ಛ ಪರಿಸರಕ್ಕಾಗಿ ಶಾಲಾ ಮಕ್ಕಳ ಜಾಥಾ, ಜಾಗೃತಿ ಕಾರ್ಯಕ್ರಮ

ನಗರ ಸ್ಥಳೀಯ ಸಂಸ್ಥೆ ಹಾಗೂ ಗ್ರಾಮೀಣ ಭಾಗದಲ್ಲಿ ಸ್ವಚ್ಛತ ಅಭಿಯಾನ ಕೈಗೊಳ್ಳುವಂತೆ ಸರಕಾರದಿಂದ ಬಂದ ನಿರ್ದೇಶನದ ಪ್ರಕಾರ ಅ. 2ರ ವರೆಗೆ ಸ್ವತ್ಛತ ಆಂದೋಲನ ಆಯೋಜಿಸಲಾಗಿದೆ. ಸ್ವಚ್ಛತೆಯೇ ಸೇವೆ ಎಂಬ ಆಶಯದಂತೆ ಎಲ್ಲ ಕಡೆಗಳಲ್ಲಿ ಈ ಆಂದೋಲನ ವಿವಿಧ ಸ್ತರದಲ್ಲಿ ಆಯೋಜನೆಗೊಂಡಿದೆ.
-ಮುಲ್ಲೈ ಮುಗಿಲನ್‌, ಜಿಲ್ಲಾಧಿಕಾರಿ, ದ.ಕ.

ಟಾಪ್ ನ್ಯೂಸ್

Politics: ರಾಜ್ಯ ಸರ್ಕಾರ ಎಲ್ಲ ರಂಗಗಳಲ್ಲಿ ವಿಫಲ; ವರ್ಷದ ಸಾಧನೆ ಶೂನ್ಯ; ಬೊಮ್ಮಾಯಿ ಟೀಕೆ

Politics: ರಾಜ್ಯ ಸರ್ಕಾರ ಎಲ್ಲ ರಂಗಗಳಲ್ಲಿ ವಿಫಲ; ವರ್ಷದ ಸಾಧನೆ ಶೂನ್ಯ; ಬೊಮ್ಮಾಯಿ ಟೀಕೆ

11

ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಸರ್ಕಾರದ ಪರ ಮೃದು ಧೋರಣೆ ಇಲ್ಲ: ಮೃತ್ಯುಂಜಯ ಸ್ವಾಮೀಜಿ

Hasan: ಲೈಂಗಿಕ ದೌರ್ಜನ್ಯ ಪ್ರಕರಣ; 20 ದಿನಗಳ ನಂತರ ತವರಿಗೆ ಆಗಮಿಸಿದ ಎಚ್.ಡಿ.ರೇವಣ್ಣ

Hasan: ಲೈಂಗಿಕ ದೌರ್ಜನ್ಯ ಪ್ರಕರಣ; 20 ದಿನಗಳ ನಂತರ ತವರಿಗೆ ಆಗಮಿಸಿದ ಎಚ್.ಡಿ.ರೇವಣ್ಣ

9

ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿದ್ದ ಪತ್ನಿ ಮೇಲೆ ಬ್ಲೇಡ್‌ನಿಂದ ಹಲ್ಲೆ ಮಾಡಿ ಪರಾರಿಯಾದ ಪತಿ

8

ಪತಿಯಿಂದಲೇ ಭೀಕರವಾಗಿ ಹತ್ಯೆಗೀಡಾದ ಸ್ಯಾಂಡಲ್‌ ವುಡ್‌ ನಟಿ, ಕಾಂಗ್ರೆಸ್‌ ಮುಖಂಡೆ

7

ಬಿಜೆಪಿಯವರು ಬಜೆಟ್ ಓದುವುದಿಲ್ಲ,ಅವರಿಗೆ ಎಕನಾಮಿಕ್ಸ್ ಗೊತ್ತಾಗುವುದಿಲ್ಲ: ಸಿಎಂ ಸಿದ್ದರಾಮಯ್ಯ

ಅಪಘಾತದಿಂದ ತೀವ್ರ ಗಾಯ: ಆಂಬ್ಯುಲೆನ್ಸ್ ಬರುವವರೆಗೆ ಸೆಲ್ಫಿಗೆ ಪೋಸ್‌ ಕೊಟ್ಟ ಯುವತಿಯರು.!

ಅಪಘಾತದಿಂದ ತೀವ್ರ ಗಾಯ: ಆಂಬ್ಯುಲೆನ್ಸ್ ಬರುವವರೆಗೆ ಸೆಲ್ಫಿಗೆ ಪೋಸ್‌ ಕೊಟ್ಟ ಯುವತಿಯರು.!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7

ಬಿಜೆಪಿಯವರು ಬಜೆಟ್ ಓದುವುದಿಲ್ಲ,ಅವರಿಗೆ ಎಕನಾಮಿಕ್ಸ್ ಗೊತ್ತಾಗುವುದಿಲ್ಲ: ಸಿಎಂ ಸಿದ್ದರಾಮಯ್ಯ

Heavy Rain ಮಳೆಗಾಲದ ವಾತಾವರಣ; ಪೂರ್ವ ಮುಂಗಾರು ಚುರುಕು

Heavy Rain ಮಳೆಗಾಲದ ವಾತಾವರಣ; ಪೂರ್ವ ಮುಂಗಾರು ಚುರುಕು

ನೇತ್ರಾವತಿಯಲ್ಲಿ ಹರಿವು ಏರಿಕೆ; ತುಂಬೆಗೆ ಎಎಂಆರ್‌ ನೀರು

Mangaluru ನೇತ್ರಾವತಿಯಲ್ಲಿ ಹರಿವು ಏರಿಕೆ; ತುಂಬೆಗೆ ಎಎಂಆರ್‌ ನೀರು

Kambala ಕ್ಷೇತ್ರದವರಿಗೆ ಉಚಿತ ವಿಮೆ ಸೌಲಭ್ಯ

Kambala ಕ್ಷೇತ್ರದವರಿಗೆ ಉಚಿತ ವಿಮೆ ಸೌಲಭ್ಯ

1-wewewe

Mangaluru CCB  ಕಾರ್ಯಾಚರಣೆ: ಅಕ್ರಮ ಪಿಸ್ತೂಲ್ ಹೊಂದಿದ್ದ ಇಬ್ಬರ ಸೆರೆ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

Politics: ರಾಜ್ಯ ಸರ್ಕಾರ ಎಲ್ಲ ರಂಗಗಳಲ್ಲಿ ವಿಫಲ; ವರ್ಷದ ಸಾಧನೆ ಶೂನ್ಯ; ಬೊಮ್ಮಾಯಿ ಟೀಕೆ

Politics: ರಾಜ್ಯ ಸರ್ಕಾರ ಎಲ್ಲ ರಂಗಗಳಲ್ಲಿ ವಿಫಲ; ವರ್ಷದ ಸಾಧನೆ ಶೂನ್ಯ; ಬೊಮ್ಮಾಯಿ ಟೀಕೆ

11

ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಸರ್ಕಾರದ ಪರ ಮೃದು ಧೋರಣೆ ಇಲ್ಲ: ಮೃತ್ಯುಂಜಯ ಸ್ವಾಮೀಜಿ

Hasan: ಲೈಂಗಿಕ ದೌರ್ಜನ್ಯ ಪ್ರಕರಣ; 20 ದಿನಗಳ ನಂತರ ತವರಿಗೆ ಆಗಮಿಸಿದ ಎಚ್.ಡಿ.ರೇವಣ್ಣ

Hasan: ಲೈಂಗಿಕ ದೌರ್ಜನ್ಯ ಪ್ರಕರಣ; 20 ದಿನಗಳ ನಂತರ ತವರಿಗೆ ಆಗಮಿಸಿದ ಎಚ್.ಡಿ.ರೇವಣ್ಣ

9

ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿದ್ದ ಪತ್ನಿ ಮೇಲೆ ಬ್ಲೇಡ್‌ನಿಂದ ಹಲ್ಲೆ ಮಾಡಿ ಪರಾರಿಯಾದ ಪತಿ

8

ಪತಿಯಿಂದಲೇ ಭೀಕರವಾಗಿ ಹತ್ಯೆಗೀಡಾದ ಸ್ಯಾಂಡಲ್‌ ವುಡ್‌ ನಟಿ, ಕಾಂಗ್ರೆಸ್‌ ಮುಖಂಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.