Politics: ನಾನು ಜಾತಿ ನಂಬಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಳಗಾವಿಯಲ್ಲಿ ಕುರುಬರ ಶಕ್ತಿ ಪ್ರದರ್ಶನ

Team Udayavani, Oct 3, 2023, 11:25 PM IST

SIDDARAMAYYA 1

ಬೆಳಗಾವಿ: ನಾನು ಜಾತಿ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟಿಲ್ಲ. ನಾನು ಎಂದಿಗೂ ಜಾತಿ ರಾಜಕಾರಣ ಮಾಡಿಲ್ಲ. ನನ್ನ ಅ ಧಿಕಾರವಧಿ ಯಲ್ಲಿ ಒಂದೇ ಜಾತಿ, ಧರ್ಮದವರಿಗಾಗಿ ಯೋಜನೆಗಳನ್ನು ರೂಪಿಸಿಲ್ಲ. ನಾನು ಬದುಕುವವರೆಗೂ ಜಾತಿ ರಾಜಕಾರಣ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಶೆಫರ್ಡ್ಸ್‌ ಇಂಡಿಯಾ ಇಂಟರ್‌ನ್ಯಾಶನಲ್‌ನ 9ನೇ ವಾರ್ಷಿಕ ರಾಷ್ಟ್ರೀಯ ಮಹಾ ಅಧಿವೇಶನದಲ್ಲಿ ಬೆಳ್ಳಿ ಖಡ್ಗ, ಬೆಳ್ಳಿ ಕಿರೀಟ ಹಾಗೂ ಕುರಿ ಮರಿಯ ಆತ್ಮೀಯ ಸಮ್ಮಾನ ಸ್ವೀಕರಿಸಿ ಮಾತನಾಡಿದ ಅವರು, ರಾಜ್ಯದ ಬಡವರಿಗೆ ನ್ಯಾಯ ನೀಡಲು ಯೋಜನೆಗಳನ್ನು ರೂಪಿಸಿದ್ದೇನೆ. ಇದರಲ್ಲಿ ನಾವು ಜಾತಿ ಮಾಡುತ್ತಿದ್ದೇವಾ? ಆದರೆ ನನ್ನ ವಿರೋಧಿ ಗಳು ಸಿದ್ದರಾಮಯ್ಯ ಜಾತಿವಾದಿ ಎಂದು ಟೀಕೆ ಮಾಡುತ್ತಾರೆ. ನನ್ನ ರಾಜಕೀಯ ಜೀವನದಲ್ಲಿ, ನಾನು ಬದುಕಿರುವವರೆಗೂ ಜಾತಿ ಮಾಡುವುದಿಲ್ಲ.

ಜಾತಿ ಮಾಡುವ ಮಠಗಳನ್ನು ಬೆಂಬಲಿಸುವುದಿಲ್ಲ. ಮಠಗಳು ಜಾತ್ಯತೀತವಾಗಿರಬೇಕು. ಮನುಷ್ಯನನ್ನು ನೋಡುವ ಪ್ರವೃತ್ತಿ ಇದ್ದರೆ ಜಾತ್ಯತೀತ ಸಮಾಜ, ರಾಷ್ಟ್ರ ನಿರ್ಮಾಣ ಸಾಧ್ಯ ಎಂದರು. ಪ್ರೀತಿ ಬೆಳೆದಾಗ ಮಾತ್ರ ನಾಯಕತ್ವ ಬೆಳೆಯುತ್ತದೆ. ಅನೇಕ ರಾಜ್ಯಗಳಲ್ಲಿ ಸಂಘಟನೆ ಕೊರತೆ ಇದೆ. ಸಂಘಟನಾ ಶಕ್ತಿಯಿಂದ ಮಾತ್ರ ನಾಯಕತ್ವ ರೂಪಿಸಲು ಸಾಧ್ಯ. ಸಂಘಟನೆ ಇಲ್ಲದಿದ್ದರೆ ಕರ್ನಾಟಕದಲ್ಲಿ ಕನಕಪೀಠ ಸ್ಥಾಪಿಸಲು ಸಾಧ್ಯವಾಗುತ್ತಿರಲಿಲ್ಲ. ಅನ್ಯಾಯಕ್ಕೆ, ತುಳಿತಕ್ಕೆ ಒಳಗಾದವರಿಗೆ ಕನಕಪೀಠ ಆಧಾರಸ್ತಂಭವಿದೆ. ರಾಜಕೀಯ ಶಕ್ತಿ ಬೇಕು. ಸಂಘಟನೆ, ನಾಯಕತ್ವ ಬೆಳೆಸಿಕೊಳ್ಳಬೇಕು ಎಂದರು.

ಸಮಾವೇಶ ಉದ್ಘಾಟಿಸಿದ ಹರಿಯಾಣ ರಾಜ್ಯಪಾಲ ಭಂಡಾರು ದತ್ತಾತ್ರೇಯ ಮಾತನಾಡಿ, ಕುರುಬ ಸಮಾಜದಲ್ಲಿ ಜನಿಸಿದ್ದು ನನ್ನ ಸೌಭಾಗ್ಯ. ರಾಜಕಾರಣದಲ್ಲಿ ಇಷ್ಟು ಬೆಳೆಯುತ್ತೇನೆಂದು ನಿರೀಕ್ಷಿಸಿರಲಿಲ್ಲ. ಇಡೀ ದೇಶದ ಕುರುಬ ಸಮಾಜವನ್ನು ಒಗ್ಗೂಡಿಸುವ ಕಾರ್ಯ ಮಾಡಿದ್ದು ಶ್ಲಾಘನೀಯ. ಇನ್ನೂ ಹೆಚ್ಚೆಚ್ಚು ಸಚಿವರು, ಶಾಸಕರು ಆಯ್ಕೆ ಆಗಲಿ ಎಂದರು.
ಶೆಫರ್ಡ್ಸ್‌ ಇಂಡಿಯಾ ಇಂಟರನ್ಯಾಶನಲ್‌ ಸಂಸ್ಥಾಪಕ ಅಧ್ಯಕ್ಷ ಎಚ್‌. ವಿಶ್ವನಾಥ ಮತ್ತು ಸಚಿವರು, ಶಾಸಕರು, ಮುಖಂಡರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Gundmi Toll Plaza ಸ್ಥಳೀಯರಿಗೆ ಟೋಲ್‌ ಬರೆ; ಟೋಲ್‌ಗೆ ಮುತ್ತಿಗೆ; ರಸ್ತೆ ತಡೆ ಪ್ರತಿಭಟನೆ

Gundmi Toll Plaza ಸ್ಥಳೀಯರಿಗೆ ಟೋಲ್‌ ಬರೆ; ಟೋಲ್‌ಗೆ ಮುತ್ತಿಗೆ; ರಸ್ತೆ ತಡೆ ಪ್ರತಿಭಟನೆ

D.K. ಜಿಲ್ಲೆಯಲ್ಲಿ ಗುಡುಗು ಸಹಿತ ಉತ್ತಮ ಮಳೆ;  ಇನ್ನೂ ನಾಲ್ಕು ದಿನ “ಎಲ್ಲೋ ಅಲರ್ಟ್‌’D.K. ಜಿಲ್ಲೆಯಲ್ಲಿ ಗುಡುಗು ಸಹಿತ ಉತ್ತಮ ಮಳೆ;  ಇನ್ನೂ ನಾಲ್ಕು ದಿನ “ಎಲ್ಲೋ ಅಲರ್ಟ್‌’

D.K. ಜಿಲ್ಲೆಯಲ್ಲಿ ಗುಡುಗು ಸಹಿತ ಉತ್ತಮ ಮಳೆ;  ಇನ್ನೂ ನಾಲ್ಕು ದಿನ “ಎಲ್ಲೋ ಅಲರ್ಟ್‌’

ದೋಣಿಗಳು ಢಿಕ್ಕಿಯಾಗಿ ಮುಳುಗಡೆ; ಐವರು ಮೀನುಗಾರರ‌ ರಕ್ಷಣೆ

Malpe ದೋಣಿಗಳು ಢಿಕ್ಕಿಯಾಗಿ ಮುಳುಗಡೆ; ಐವರು ಮೀನುಗಾರರ‌ ರಕ್ಷಣೆ

naksal (2)

Chhattisgarh; ನಿಲ್ಲದ ನಕ್ಸಲ್‌ ಬೇಟೆ: ಓರ್ವನ ಹತ್ಯೆ

prahlad-joshi

Congress ಪಕ್ಷದಿಂದ ಅಂಬೇಡ್ಕರ್‌ಗೆ ಅಗೌರವ: ಸಚಿವ ಜೋಶಿ ಆರೋಪ

Naturals Ice Cream; ಬಾಲ್ಯದ ಹಣ್ಣಿನ ಸಖ್ಯ ಬದುಕಿನ ಗುರಿಯ ಗಿರಿಯ ಮುಟ್ಟಿಸಿತು

Naturals Ice Cream; ಬಾಲ್ಯದ ಹಣ್ಣಿನ ಸಖ್ಯ ಬದುಕಿನ ಗುರಿಯ ಗಿರಿಯ ಮುಟ್ಟಿಸಿತು

Naturals Ice Cream; ರಘುನಂದನ ಕಾಮತ್‌ ಪಂಚಭೂತಗಳಲ್ಲಿ ಲೀನ

Naturals Ice Cream; ರಘುನಂದನ ಕಾಮತ್‌ ಪಂಚಭೂತಗಳಲ್ಲಿ ಲೀನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Eshwara Khandre 5 ಕೋಟಿ ಸಸಿಗಳ ಪೈಕಿ ಎಷ್ಟು ಬದುಕಿವೆ? ವರದಿ ಕೊಡಿ

Eshwara Khandre 5 ಕೋಟಿ ಸಸಿಗಳ ಪೈಕಿ ಎಷ್ಟು ಬದುಕಿವೆ? ವರದಿ ಕೊಡಿ

ರಾಜ್ಯದ 2,207 ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆ

ರಾಜ್ಯದ 2,207 ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆ

Election Commission ರಾಜ್ಯದಲ್ಲಿ ನೀತಿ ಸಂಹಿತೆ ಷರತ್ತು ಬದ್ಧ ಸಡಿಲಿಕೆ

Election Commission ರಾಜ್ಯದಲ್ಲಿ ನೀತಿ ಸಂಹಿತೆ ಷರತ್ತು ಬದ್ಧ ಸಡಿಲಿಕೆ

Chaluvaraya Swamy ಇಷ್ಟು ವರ್ಷ ಪೆನ್‌ಡ್ರೈವ್‌ ಇಟ್ಟುಕೊಂಡಿದ್ದೇಕೆ?

Chaluvaraya Swamy ಇಷ್ಟು ವರ್ಷ ಪೆನ್‌ಡ್ರೈವ್‌ ಇಟ್ಟುಕೊಂಡಿದ್ದೇಕೆ?

Prajwal Revanna ವಿರುದ್ಧ ಕ್ರಮಕ್ಕೆ ತಕರಾರಿಲ್ಲ: ಎಚ್‌.ಡಿ. ದೇವೇಗೌಡ

Prajwal Revanna ವಿರುದ್ಧ ಕ್ರಮಕ್ಕೆ ತಕರಾರಿಲ್ಲ: ಎಚ್‌.ಡಿ. ದೇವೇಗೌಡ

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

Gundmi Toll Plaza ಸ್ಥಳೀಯರಿಗೆ ಟೋಲ್‌ ಬರೆ; ಟೋಲ್‌ಗೆ ಮುತ್ತಿಗೆ; ರಸ್ತೆ ತಡೆ ಪ್ರತಿಭಟನೆ

Gundmi Toll Plaza ಸ್ಥಳೀಯರಿಗೆ ಟೋಲ್‌ ಬರೆ; ಟೋಲ್‌ಗೆ ಮುತ್ತಿಗೆ; ರಸ್ತೆ ತಡೆ ಪ್ರತಿಭಟನೆ

ec-aa

Election data ಏರಿಕೆ ಬಗ್ಗೆ ಪ್ರತಿಕ್ರಿಯಿಸಿ: ಇಸಿಗೆ ಸುಪ್ರೀಂ

D.K. ಜಿಲ್ಲೆಯಲ್ಲಿ ಗುಡುಗು ಸಹಿತ ಉತ್ತಮ ಮಳೆ;  ಇನ್ನೂ ನಾಲ್ಕು ದಿನ “ಎಲ್ಲೋ ಅಲರ್ಟ್‌’D.K. ಜಿಲ್ಲೆಯಲ್ಲಿ ಗುಡುಗು ಸಹಿತ ಉತ್ತಮ ಮಳೆ;  ಇನ್ನೂ ನಾಲ್ಕು ದಿನ “ಎಲ್ಲೋ ಅಲರ್ಟ್‌’

D.K. ಜಿಲ್ಲೆಯಲ್ಲಿ ಗುಡುಗು ಸಹಿತ ಉತ್ತಮ ಮಳೆ;  ಇನ್ನೂ ನಾಲ್ಕು ದಿನ “ಎಲ್ಲೋ ಅಲರ್ಟ್‌’

ದೋಣಿಗಳು ಢಿಕ್ಕಿಯಾಗಿ ಮುಳುಗಡೆ; ಐವರು ಮೀನುಗಾರರ‌ ರಕ್ಷಣೆ

Malpe ದೋಣಿಗಳು ಢಿಕ್ಕಿಯಾಗಿ ಮುಳುಗಡೆ; ಐವರು ಮೀನುಗಾರರ‌ ರಕ್ಷಣೆ

naksal (2)

Chhattisgarh; ನಿಲ್ಲದ ನಕ್ಸಲ್‌ ಬೇಟೆ: ಓರ್ವನ ಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.