UV Fusion Tour Circle: ಕಡಮ ಗುಂಡಿ ಜಲಪಾತ


Team Udayavani, Oct 11, 2023, 7:00 AM IST

12-kadama-gundi-falls

ಪ್ರತಿ ವರ್ಷ ಪಿಯುಸಿ ಮಕ್ಕಳಿಗೆ ಕಾಲೇಜಿನಿಂದ ಟ್ರಿಪ್‌ ನಡೆಸಲಾಗುತ್ತಿತ್ತು. ಒಂದು ವರ್ಷ ನಮ್ಮ ಸರದಿಯೂ ಬಂತು. ನನ್ನ ಸಹಪಾಠಿಗಳೆಲ್ಲರೂ ಬೆಂಗಳೂರು, ಮಂಗಳೂರು, ಮೈಸೂರು ಮುಂತಾದ ದೂರದೂರುಗಳಿಗೆ  ಹೋಗುವ ಪ್ಲಾನ್‌ ಮಾಡಿದ್ದೆ ಮಾಡಿದ್ದು.

ಆದರೆ ಅದಕ್ಕೆ ತಣ್ಣೀರು ಎರಚುವಂತೆ ನಮ್ಮ ಸರ್‌ ಬಂದು – ನಮ್ಮ ಊರಿನಲ್ಲಿ ಅನೇಕ ಪ್ರೇಕ್ಷಣೀಯ ಸ್ಥಳಗಳಿವೆ. ನಮ್ಮ ಊರಿನಲ್ಲಿ ನಮಗೆ ಗೊತ್ತಿರದ ಅನೇಕ ಸ್ಥಳಗಳು ಇರುತ್ತವೆ, ಅಲ್ಲಿಗೆ ಹೋಗೋಣ ಎಂದು ಹೇಳಿದರು.

ಬೇಸರವಾದರೂ ಒಪ್ಪಿಕೊಳ್ಳುವುದು ಅನಿವಾರ್ಯವಾಯಿತು. ಆ ಮೇಲೆ ಫ್ರೆಂಡ್ಸ್‌ ಎಲ್ಲ ಕುಳಿತು ಚರ್ಚಿಸಿ ಕೊನೆಗೂ ಒಂದು ಸ್ಥಳ ಹುಡುಕಿದ್ದೆವು. ಅದುವೇ ನಮ್ಮ ದಿಡುಪೆಯ ಕಡಮ ಗುಂಡಿ ಫಾಲ್ಸ್! ಕೆಲವರಿಗೆ  ಇದರ ಬಗ್ಗೆ ಗೊತ್ತೇ ಇರಲಿಲ್ಲ.

ಕಾಲೇಜಿನ ಬಸ್ಸಿನಲ್ಲಿ ಫಾಲ್ಸ್ ಗೆ ಹೊರಟೆವು. ಆದರೆ ಫಾಲ್ಸ್ ತನಕ  ಬಸ್ಸು ಹೋಗುವುದಿಲ್ಲ. ದಾರಿಹೋಕರಲ್ಲಿ  ದಾರಿ ಕೇಳಿಕೊಂಡು ಕಾಲ್ನಡಿಗೆಯಲ್ಲಿ 2 ಕಿ.ಮೀ. ನಡೆದುಕೊಂಡು ಹೋದೆವು. ಅದು ಕೂಡ ಮಳೆಗಾಲದ ಸಮಯದಲ್ಲಿ.  ಬಂಡೆಗಳೆಲ್ಲ ಪಾಚಿ ಕಟ್ಟಿದ್ದವು. ರಕ್ತ ಹೀರುವ ತಿಗಣೆ ಕಾಟ ಬೇರೆ. ಜತೆಗೆ ಸಣ್ಣಪುಟ್ಟ  ತೊರೆಗಳನ್ನು ದಾಟಿ ಫಾಲ್ಸ್ ನ ಹತ್ತಿರ ಬಂದೆವು. ಆದರೆ ಅಲ್ಲಿಗೆ ಬಂದ ಮೇಲೆ ಅತ್ಯಂತ ಖುಷಿಯಾಯಿತು. ನಾವೆಲ್ಲರೂ  ಮಂತ್ರಮುಗ್ಧರಾದೆವು. ಅಂಥ ನಿಸರ್ಗ ಸೌಂದರ್ಯ ಅಲ್ಲಿ ರಾಶಿಬಿದ್ದಿತ್ತು.

ಜೀವ ಸಂಕುಲವನ್ನು ತನ್ನ ಮಡಿಲಲ್ಲಿ ಮಲಗಿಸಿ ಜೋಗುಳವಾಡುತ್ತಿರುವ ಆ ಭೂತಾಯಿಯ ಸೌಂದರ್ಯವನ್ನು ವರ್ಣಿಸಲು ಅಸಾಧ್ಯ. ಆ ಸೊಬಗನ್ನು ಅನುಭವಿಸಿಯೇ ತಿಳಿಯಬೇಕಷ್ಟೆ.

ದಿಡುಪೆಯ ಕಡಮಗುಂಡಿಯಲ್ಲಿರುವ ಈ ಜಲಪಾತ ತಂಪಾದ ವಾತಾವರಣ, ಹಚ್ಚಹಸಿರಿನಿಂದ ಕಂಗೊಳಿಸುವ ವನಸಿರಿ, ವಿವಿಧ ಹಕ್ಕಿಗಳ ಚಿಲಿಪಿಲಿಗಳ ನಡುವೆ ಕಲ್ಲು ಬಂಡೆ ಹಾಗೂ ದಟ್ಟ ಕಾಡಿನಿಂದ ಸುತ್ತುವರಿಯಲ್ಪಟ್ಟಿದೆ. ‌

ಈ ಜಲಪಾತವು ಸರಿ ಸುಮಾರು ಉಜಿರೆಯಿಂದ 30 ಕಿ.ಮೀ. ದೂರದಲ್ಲಿದ್ದು, ಪ್ರಕೃತಿ ಪ್ರಿಯರಿಗೆ  ಹೇಳಿ ಮಾಡಿಸಿದ ಸ್ಥಳವಾಗಿದೆ.  ಒಂದು ವೇಳೆ ಬೇರೆ ಕಡೆ ಹೋಗಿದ್ದರೆ ಇಲ್ಲಿ ಸಿಕ್ಕಿದಂಥ ಸಂತೋಷ ಸಿಗುತ್ತಿತ್ತೋ ಗೊತ್ತಿಲ್ಲ. ಆದರೆ ನಾವು ಈ ಫಾಲ್ಸ್ ನಲ್ಲಿ ತುಂಬಾ ಎಂಜಾಯ್‌ ಮಾಡಿದ್ದೆವು.

-ನೀಕ್ಷಿತಾ

ಎಸ್‌.ಡಿ.ಎಂ., ಉಜಿರೆ

ಟಾಪ್ ನ್ಯೂಸ್

4-yadagiri

Eknath Shindeಗೆ ತಾಕತ್ ಇದ್ದರೆ ನಮ್ಮ ರಾಜ್ಯಕ್ಕೆ ಬರಲಿ: ಸಚಿವ ದರ್ಶನಾಪುರ ಸವಾಲ್

Cinema: ಸಿಂಗಲ್‌ ಸ್ಕ್ರೀನ್‌ಗೆ ಪ್ರೇಕ್ಷಕರ ಬರ: ಇದೇ ಶುಕ್ರವಾರದಿಂದ 10 ದಿನ ಥಿಯೇಟರ್‌ ಬಂದ್

Cinema: ಸಿಂಗಲ್‌ ಸ್ಕ್ರೀನ್‌ಗೆ ಪ್ರೇಕ್ಷಕರ ಬರ: ಇದೇ ಶುಕ್ರವಾರದಿಂದ 10 ದಿನ ಥಿಯೇಟರ್‌ ಬಂದ್

1-wqeqeqwe

AAP ಸ್ವಾತಿ ಮಲಿವಾಲ್ ಸುರಕ್ಷಿತವೇ? :ಕೇಜ್ರಿವಾಲ್ ಜನತೆಗೆ ಸತ್ಯ ತಿಳಿಸಬೇಕು: ಬಿಜೆಪಿ

ನಾಯಕನ ಜೊತೆ ಜಗಳ: ರಿಲೀಸ್‌ಗೂ ಮುನ್ನ ಸಿನಿಮಾವನ್ನು ಆನ್‌ಲೈನ್‌ನಲ್ಲಿ ಲೀಕ್‌ ಮಾಡಿದ ನಿರ್ದೇಶಕ

ನಾಯಕನ ಜೊತೆ ಜಗಳ: ರಿಲೀಸ್‌ಗೂ ಮುನ್ನ ಸಿನಿಮಾವನ್ನು ಆನ್‌ಲೈನ್‌ನಲ್ಲಿ ಲೀಕ್‌ ಮಾಡಿದ ನಿರ್ದೇಶಕ

Union Minister ಜ್ಯೋತಿರಾದಿತ್ಯ ಸಿಂದಿಯಾ ತಾಯಿ ಮಾಧವಿ ರಾಜೇ ವಿಧಿವಶ

Union Minister ಜ್ಯೋತಿರಾದಿತ್ಯ ಸಿಂದಿಯಾ ತಾಯಿ ಮಾಧವಿ ರಾಜೇ ವಿಧಿವಶ

manish sisodia

Excise scam: ಸಿಸೋಡಿಯಾ ನ್ಯಾಯಾಂಗ ಬಂಧನ ಮೇ 30 ರವರೆಗೆ ವಿಸ್ತರಣೆ

rahul-gandhi-(2)

BJP ಮತ್ತೆ ಅಧಿಕಾರಕ್ಕೆ ಬಂದರೆ ದೇಶವನ್ನು 22 ಬಿಲಿಯನೇರ್‌ಗಳು ನಡೆಸುತ್ತಾರೆ: ರಾಹುಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-uv-fusion

Dance: ಬಸಣ್ಣನ ಡ್ಯಾನ್ಸು

12-uv-fusion

Smile: ಕಷ್ಟ – ಸುಖದ ಜೀವನ… ನಗು ನಗುತಾ ಸಾಗಿ

11-uv-fusion

UV Fusion: ಕಡಲ ಕುವರರೇ, ನಿಮಗೊಂದು ಸಲಾಂ!

10-uv-fusion

Festival: ಊರ ಹಬ್ಬ

9-uv-fusion

Goal: ಬದಲಾವಣೆ ನಮ್ಮ ಗುರಿಯತ್ತ ಸಾಗುವಂತಿರಲಿ

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

15

Vidhyarthi Vidyarthiniyare Trailer: ಟ್ರೇಲರ್‌ನಲ್ಲಿ ಟೀನೇಜ್‌ ಸ್ಟೋರಿ

Vamanjoor : ಎಂಡಿಎಂಎ ಡ್ರಗ್ಸ್‌ ಸಹಿತ ಓರ್ವನ ಬಂಧನ

Vamanjoor : ಎಂಡಿಎಂಎ ಡ್ರಗ್ಸ್‌ ಸಹಿತ ಓರ್ವನ ಬಂಧನ

4-yadagiri

Eknath Shindeಗೆ ತಾಕತ್ ಇದ್ದರೆ ನಮ್ಮ ರಾಜ್ಯಕ್ಕೆ ಬರಲಿ: ಸಚಿವ ದರ್ಶನಾಪುರ ಸವಾಲ್

ಕೊಲ್ಲೂರು: ದಿನೇ ದಿನೆ ಹೆಚ್ಚುತ್ತಿದೆ‌ ಟ್ರಾಫಿಕ್‌ ಜಾಮ್‌ ಕಿರಿಕಿರಿ…

ಕೊಲ್ಲೂರು: ದಿನೇ ದಿನೆ ಹೆಚ್ಚುತ್ತಿದೆ‌ ಟ್ರಾಫಿಕ್‌ ಜಾಮ್‌ ಕಿರಿಕಿರಿ…

3-mundaragi

Mundargi: ದುರಸ್ತಿ ಸಂದರ್ಭ ವಿದ್ಯುತ್‌ ಶಾಕ್‌ ; ಕೂಲಿಕಾರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.